ಸಂಖ್ಯಾಶಾಸ್ತ್ರ ಎನ್ನುವುದು ನಾವು ಹುಟ್ಟಿದ ದಿನಾಂಕ ತಿಂಗಳು ವರ್ಷದ ಆಧಾರದ ಮೇಲೆ ನಮ್ಮ ಭವಿಷ್ಯವನ್ನು ತಿಳಿಸುವಂತಹ ಒಂದು ಶಾಸ್ತ್ರ. ಇದನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ನಂಬುತ್ತಾರೆ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಎಲ್ಲಾ ವ್ಯಾಪಾರ, ವ್ಯವಹಾರ, ದಿನನಿತ್ಯದ ಚಟುವಟಿಕೆ ಎಲ್ಲವೂ ಕೂಡ ಸಂಖ್ಯೆಗಳನ್ನು ಹೆಚ್ಚು ಆಧರಿಸುವುದರಿಂದ ಈ ಸಂಖ್ಯಾಶಾಸ್ತ್ರದ ಪ್ರಭಾವ ನಮ್ಮ ಮೇಲೆ ಈ ದಿನಗಳಲ್ಲಿ ಹೆಚ್ಚಾಗಿದೆ.
ಆದ್ದರಿಂದ ಈ ಸಂಖ್ಯಾ ಶಾಸ್ತ್ರದ ಪ್ರಕಾರವಾಗಿ ನಡೆದುಕೊಂಡರೆ ನಮ್ಮ ಲಾಭ ನಷ್ಟವನ್ನು ನಾವೇ ಲೆಕ್ಕಾಚಾರ ಹಾಕಿ ಉನ್ನತಿ ಕಂಡುಕೊಳ್ಳಬಹುದು. ಎನ್ನುವುದು ಸಂಖ್ಯಾಶಾಸ್ತ್ರಜ್ಞರ ಅಭಿಪ್ರಾಯ. ಸಂಖ್ಯಾಶಾಸ್ತ್ರ ಮೂಲಕ ಇದುವರೆಗೆ ಭವಿಷ್ಯದ ಹಲವು ವಿಷಯಗಳ ಬಗ್ಗೆ ಹೇಳಲಾಗಿದೆ. ಇದೇ ಸಂಖ್ಯಾಶಾಸ್ತ್ರದ ಅನುಸಾರದಿಂದ ನಮ್ಮ ಮದುವೆ ಆಗುವ ವರ್ಷವನ್ನು ಕೂಡ ಕಂಡುಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಒಂದು ದೊಡ್ಡ ಜವಾಬ್ದಾರಿ ಆಗಿದೆ. ಹಾಗೆ ಮದುವೆ ಕಾರ್ಯ ಶುರು ಮಾಡಿದ ಕಡಿಮೆ ಅವಧಿಗೆ ಮದುವೆ ಆಗುವುದಂತೂ ಅಸಾಧ್ಯದ ಮಾತು. ಮದುವೆ ಆಗಲು ತಯಾರಾದ ವರ್ಷದಿಂದ ಐದು, ಹತ್ತು ವರ್ಷ ಕಳೆದ ಮೇಲೆ ಮದುವೆ ಆಗಿರುವ ಉದಾಹರಣೆಗಳು ಇವೆ ಹಾಗಾಗಿ ಯಾವ ವರ್ಷದಲ್ಲಿ ನಮ್ಮ ಮದುವೆ ನಡೆಯುತ್ತದೆ ಎನ್ನುವುದು ಸರಿಯಾಗಿ ಗೊತ್ತಾಗಿ ಬಿಟ್ಟರೆ ನಾವು ಇನ್ನೂ ಹೆಚ್ಚಿನ ಪ್ರಯತ್ನವನ್ನು ಪಡೆಯಬಹುದು ಅಥವಾ ಆ ವರ್ಷದಲ್ಲಿಯೇ ಬರುವ ಸಂಬಂಧವನ್ನು ಒಪ್ಪಿಕೊಂಡು ನೆಮ್ಮದಿಯಾಗಿ ದಾಂಪತ್ಯ ಜೀವನ ಶುರು ಮಾಡಬಹುದು.
ಆದ್ದರಿಂದ ಇದನ್ನು ಸಂಖ್ಯಾಶಾಸ್ತ್ರ ಕಂಡುಹಿಡಿಯುವುದು ಹೇಗೆ ಎಂದು ತಿಳಿಸಲಾಗಿದೆ. ಈ ರೀತಿ ಕಂಕಣ ಭಾಗ್ಯ ಕೂಡಿ ಬರುವ ವರ್ಷವನ್ನು ಕಂಡುಹಿಡಿಯಲು ಈ ವಿಧಾನ ಬಳಸಿ. ಸಂಖ್ಯಾಶಾಸ್ತ್ರದಲ್ಲಿ ಒರಿಜಿನಲ್ ನಂಬರ್ ಎಂದು ಹುಟ್ಟಿದ ದಿನಾಂಕವನ್ನು ಕರೆಯುತ್ತಾರೆ ಮತ್ತು ಪರ್ಸನಲ್ ಇಯರ್ ಎಂದು ಹುಟ್ಟಿದ ವರ್ಷವನ್ನು ಕರೆಯುತ್ತಾರೆ. ಆದರೆ ಸಂಖ್ಯಾಶಾಸ್ತ್ರದಲ್ಲಿ ಎಲ್ಲಾ ಲೆಕ್ಕಚಾರವು ಸಿಂಗಲ್ ಡಿಜಿಟ್ ಅಲ್ಲಿ ಇರುವುದರಿಂದ ಯಾವುದೇ ಸಂಖ್ಯೆ ಆದರೂ ಅದನ್ನು ಸಿಂಗಲ್ ಡಿಜಿಟ್ ಮಾಡಿಕೊಳ್ಳಬೇಕು.
ಉದಾಹರಣೆಗೆ 14 ಎಂದು ಇದ್ದರೆ 1+4=5 ಇದನ್ನು ಐದು ಎಂದುಕೊಳ್ಳಬೇಕು, ಹಾಗೆ ವರ್ಷದ ಲೆಕ್ಕಾಚಾರ ಬಂದಾಗ 1992 ಇದ್ದರೆ ಇದನ್ನು 1+9+9+2=3 ಎಂದುಕೊಳ್ಳಬೇಕು. ಇದೇ ರೀತಿಯಾಗಿ ಒರಿಜಿನಲ್ ನಂಬರ್ ಮತ್ತು ಪರ್ಸನಲ್ ಇಯರ್ ಕಂಡುಹಿಡಿದು ನಿಮ್ಮ ಮದುವೆ ವರ್ಷವನ್ನು ತಿಳಿದುಕೊಳ್ಳಬಹುದು.
ನಿಮ್ಮ ಹುಟ್ಟಿದ ದಿನಾಂಕ 14.02.1992 ಇದ್ದರೆ 2023ರಲ್ಲಿ ಮದುವೆ ಆಗುತ್ತದೆಯಾ ಎಂದು ಯೋಚಿಸುತ್ತಿದ್ದರೆ ಅದನ್ನು ಹೀಗೆ ಲೆಕ್ಕ ಹಾಕಿ.
ನಿಮ್ಮ ಹುಟ್ಟಿದ ವರ್ಷ ತೆಗೆದು ಈ ವರ್ಷವನ್ನು ಹಾಕಿ ಮತ್ತು ಎಲ್ಲವನ್ನು ಕೂಡಿಸಿ 1+4+2+2+0+2+3=5 ಈಗ ನಿಮ್ಮ ಒರಿಜಿನಲ್ ನಂಬರ್ 5 ಹಾಗೂ ಪರ್ಸನಲ್ ಇಯರ್ ಕೂಡ 5 ಬಂತು. ಈ ರೀತಿ ಕಾಂಬಿನೇಷನ್ ಇದ್ದಾಗ ಆ ವರ್ಷ ಮದುವೆ ಆಗುತ್ತದೆಯಾ ಎಂದು ತಿಳಿದುಕೊಳ್ಳಲು ಒಂದು ಚಾರ್ಟ್ ಇದೆ. ಇದರಲ್ಲಿ ವರ್ಷಗಳ ಸಂಖ್ಯೆಯನ್ನು ಒರಿಜಿನಲ್ ಸಂಖ್ಯೆ ಜೊತೆ ಜೋಡಿಸಲಾಗಿದೆ. ಇದರಲ್ಲಿ ಚೆಕ್ ಮಾಡಿಕೊಳ್ಳಿ ನಿಮ್ಮ ಒರಿಜಿನಲ್ ನಂಬರ್ ಪರ್ಸನಲ್ ಜೊತೆ ಮ್ಯಾಚ್ ಆದರೆ ಆ ವರ್ಷವೇ ನಿಮಗೆ ಮದುವೆ ಆಗುತ್ತದೆ.
ಒರಿಜಿನಲ್ ನಂಬರ್. ಪರ್ಸನಲ್ ಇಯರ್.
1 – 1,4,5,7,9
2 – 1,2,5,6,8
3 – 3,6,7,9
4 – 1,2,4,7,8
5 – 2,3,5,7,9
6 – 1,2,3,5,6,8
7 – 1,2,4,8
8 – 1,2,4,6,8
9 – 1,2,3,6,7