“ಇಷ್ಟು ವರ್ಷದಲ್ಲಿ ಏನ್ ಕಡ್ಡು ಗುಡ್ಡೆ ಹಾಕಿದಿಯಾ..?? ನೆಟ್ಟಗೆ ಒಂದು ಸ್ವಂತ ಮನೆ ಇಲ್ಲ. ಬಾಯಿಗೆ ರುಚಿ ಎನಿಸಿದ್ದು ತಿನ್ನುವ ಯೋಗ ಇಲ್ಲ ಗೆಳತಿಯರ ಹಾಗೆ ದಿನಕ್ಕೊಂದು ಬಗೆಯ ಉಡುಗೆ ತೊಡುವ ಭಾಗ್ಯವಂತು ಇಲ್ಲವೇ ಇಲ್ಲ. ಬೇಕೆಂದಲ್ಲಿ ಓಡಾಡಲು ಕನಿಷ್ಠ ಒಂದು ಸ್ಕೂಟಿ? ಕೇಳುವುದೇ ಬೇಡಾ ಇನ್ನು ನಿನಗಂತು ಒಬ್ಬಳು ಇದ್ದಾಳೆ ಅವಳ ಜೀವನಕ್ಕೆ ಏನಾದರೂ ಒಂದು ದಾರಿ ಮಾಡಬೇಕು ಅನ್ನೊ ಪರಿಜ್ಞಾನ ಇಲ್ಲ.
ನಾನೇ ಹೇಗೊ ನನ್ನ ಮನಸ್ಸಿಗೆ ಇಷ್ಟ ಆಗೊ ಹುಡುಗನನ್ನ ಹುಡುಕಿ ಕರೆದುಕೊಂಡು ಬಂದರೆ ಅವನನ್ನ ಕಳ್ಳನ ತರ ನೋಡಿ, ದೊಡ್ಡ ಸಿಬಿಐ ಆಫೀಸರ್ ತರ ಪ್ರಶ್ನೆಗಳನ್ನ ಕೇಳಿ ಅವನಿಗೂ ಅವಮಾನ ಮಾಡಿ ಕಳುಹಿಸಿದೆ ಒಬ್ಬ ಅಪ್ಪನಾಗಿ ನಿನಗೆ ನಿನ್ನ ಕರ್ತವ್ಯ ಮಾಡುವಷ್ಟು ಶಕ್ತಿ ಇಲ್ಲ ಅಂದ ಮೇಲೆ ನನಗಾದರೂ ನನ್ನ ಜೀವನ ರೂಪಿಸಿಕೊಳ್ಳಲು ಬಿಡು.
ದಿನ ಬೆಳಿಗ್ಗೆ ಹೋಗ್ತಿಯಾ, ಸಂಜೆ ಸೂರ್ಯ ಮುಳುಗಿದ ಮೇಲೆ ಬರ್ತಿಯಾ ಅದೇನು ಮಾಡಿ ದಬ್ಬಾಕೋಕೆ ಅಂತಾ ಹೋಗೊದು ಬರೋದು ನೀನು! ಏನಾದರೂ ಕೇಳಿದರೆ ಕೈ ಕಟ್ಟಬಾಯಿ ಮುಚ್ ಅನ್ನೋ ಹಾಗೆ ನಿಲ್ಲುವುದು ಬೇರೆ. ಎಷೋ ದಿನಗಳಿಂದ ಹೊಟ್ಟೆಯಲ್ಲಿ ಜ್ವಾಲೆಯಾಗಿ ಸುಡುತ್ತಿದ್ದ ವಿಚಾರಗಳನ್ನು ಇಂದು ಸ್ವಲ್ಪ ತಡವಾಗಿ ಮನೆಗೆ ಬಂದ ಅಪ್ಪನ ಮೇಲೆ ಬೀಸಿದಳು ಮಗಳು.
ಮಗಳ ಮೋನಚಾದ ಮಾತು ಅಪ್ಪನಿಗೆ ಹೊಸದಲ್ಲ. ತನ್ನ ಮಗಳು ತನಗೆ ಅಪ್ಪನ ಸ್ಥಾನ ತಂದು ಕೊಟ್ಟ ದೇವತೆ. ತನ್ನ ತಾಯಿಯ ಪ್ರತಿರೂಪ ಅವಳು ಎಂದು ಅವಳೆ ಪ್ರತಿ ಮಾತಿನಲ್ಲಿ ಅರ್ಥವಿದೆ ಎಂಬಂತೆ ಎದೆ ಮುಂದೆ ಕೈಕಟ್ಟಿ ತಲೆ ತಗ್ಗಿಸಿ ಕೇಳುತಿದ್ದ. ಇಂದೇಕೋ ಮನಸ್ಸಿಗೆ ತುಂಬಾ ಘಾಸಿಯಾಯಿತು. ಕಣ್ಣಿಂದ ನೀರು ಜಾರಿತು. ಮಗಳಿಗೆ ಕಾಣದ ಹಾಗೆ ತೋರುಬೇರಳಿನಿಂದ ಹಾರಿಸಿದ.
ಆದರೆ ಮಗಳ ಹರಿತವಾದ ಮಾತು ನಿಲ್ಲಲಿಲ್ಲ. ಬೈಗುಳಗಳ ಮದ್ಯೆದಲ್ಲಿ ಬರುವ ಕೆಮ್ಮು ಲೆಕ್ಕಿಸದೆ ನಾಲಿಗೆ ಹರಿಬಿಟ್ಟಿದ್ದಳು. ಕೊನೆಗೂ ಕೆಮ್ಮು ತಾನೇ ಮುಂದೆ ಹೋಗುವೆ ಎಂಬಂತೆ ಅವಳ ಮಾತು ನಿಲ್ಲಿಸಿತು. ಕೆಮ್ಮಿ ಸುಸ್ತಾದ ಹುಡುಗಿ ನೆಲಕ್ಕೆ ಉರುಳಿದಳು ಕಣ್ಣು ಬಿಟ್ಟಾಗ ಆಸ್ಪತ್ರೆಯ ಬೆಡ್ ಮೇಲೆ ತಿರುಗಿ ಮಲಗಿದ್ದಳು. ಇನ್ನೊಂದು ಕಡೆ ತಿರುಗಿ ಮಲಗಲು ಪ್ರಯತ್ನಿಸಿದಾಗ ಯಾಕೋ ಬೆನ್ನಿನ ಕೆಳಗೆ ನೋವಾದಂತೆ ಎನಿಸಿತು.
ನರ್ಸ್ ಒಬ್ಬರು ಬಂದು ಕೂರಲು ಸಹಾಯ ಮಾಡಿದರು. ಹಾಗೆ ನೀರು ಕೊಟ್ಟು “ಈಗ ಹೇಗಿದಿಯಮ್ಮ??”ಎಂದರು. “ಪರವಾಗಿಲ್ಲ ಇಲ್ಲಿ ಯಾಕೆ ಬೆಂಡೇಜ್ ಮಾಡಿದ್ದಾರೆ ನನಗ್ಯಾಕೆ ಬೆನ್ನಿನ ಕೆಳಭಾಗದಲ್ಲಿ ನೋವಾಗ್ತಾ ಇದೆ?” ತನ್ನಪ್ಪನ್ನನ್ನ ಅಪ್ಪ ಎಂದು ಕರೆಯಲು ನಾಚಿಕೆ ಪಡುವ ಮಗಳು “ನಮ್ಮ ಕಡೆಯವರು ಎಲ್ಲಿದ್ದಾರೆ??” ಎಂದು ಕೊನೆಯಲ್ಲಿ ತನ್ನ ಪ್ರಶ್ಣಾವಳಿ ಮುಗಿಸಿದಳು ನರ್ಸ್ ನೋಡುತ್ತಾ.
ಅವಳ ಕೈಗೆ ನಾಲ್ಕು ಭಾಗವಾಗಿ ಮಡಚಿರುವ ಒಂದು ಬಿಳಿ ಹಾಳೆ ಕೊಟ್ಟು ತಲೆ ನೇವರಿಸಿ ಹೊರ ಹೋದರು ತೆರೆದ ಹಾಳೆ ಕೈಯಲ್ಲಿ ಹಿಡಿದಳು. ಮಗಳೆ, ನನಗೆ ಬರೆಯಲು ಬರಲ್ಲ ಎನ್ನುವುದು ನಿನಗೆ ತಿಳಿದೇ ಇದೆ. ಇಲ್ಲಿ ಒಬ್ಬ ನರ್ಸ್ ಸಹಾಯದಿಂದ ನನ್ನ ಮೊದಲ ಹಾಗೂ ಕೊನೆಯ ಪತ್ರ ಬರೆದಿದ್ದೇನೆ. ಮಕ್ಕಳಾದರೆ ಸಾಯುತ್ತೇನೆ ಎಂದು ತಿಳಿದಿದ್ದರೂ ಮದುವೆಯಾಗಿ ಹನ್ನೆರಡು ವರುಷಗಳ ನಂತರ ಹಠ ಮಾಡಿ ನಿನ್ನಮ್ಮ ನಿನಗೆ ಜನ್ಮಕೊಟ್ಟು ಕಣ್ಮುಚ್ಚಿದಳು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.