ಪ್ರತಿಯೊಬ್ಬರಿಗೂ ತಿಳಿದಿರುವಂತೆ ನಾವು ಯಾವುದೇ ರೀತಿಯ ಬ್ಯಾಂಕ್ ವ್ಯವಹಾರಗಳನ್ನು ಮಾಡಬೇಕು ಎಂದರೆ ಅದಕ್ಕೆ ಕಡ್ಡಾಯವಾಗಿ ಪಾನ್ ಕಾರ್ಡ್ ಅಗತ್ಯ ಎಂದು ಹೇಳುತ್ತಿರುತ್ತಾರೆ ಹೌದು ಪಾನ್ ಕಾರ್ಡ್ ಇಲ್ಲದೆ ಬ್ಯಾಂಕ್ ನಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಹೇಳಿದರು ತಪ್ಪಾಗುವುದಿಲ್ಲ ಅಷ್ಟರಮಟ್ಟಿಗೆ ನಮ್ಮ ಪ್ರತಿಯೊಂದು ಕೆಲಸಗಳಿಗೂ ಸಹ ಪಾನ್ ಕಾರ್ಡ್ ಅಗತ್ಯವಿದೆ ಅದರಲ್ಲೂ ಇತ್ತೀಚಿನ ದಿನದಲ್ಲಿ ಪಾನ್ ಕಾರ್ಡ್ ಆಧಾರ್ ಕಾರ್ಡ್ ಎರಡು ಸಹ ಲಿಂಕ್ ಆಗಿರಲೇಬೇಕು ಅದು ಸ್ಥಗಿತಗೊಳ್ಳುತ್ತದೆ ಎಂದೆ ಹೇಳುತ್ತಿರುತ್ತಾರೆ.
ಹಾಗಾಗಿ ಇವೆರಡನ್ನು ಸಹ ಲಿಂಕ್ ಮಾಡಿಸತಕ್ಕದ್ದು ಎಂದು ಕೆಲವೊಂದಷ್ಟು ಜನ ಹೇಳುತ್ತಿದ್ದರು. ಅದೇ ರೀತಿಯಾಗಿ ಬಹಳ ಹಿಂದಿನ ದಿನದಲ್ಲಿ ಪಾನ್ ಕಾರ್ಡ್ ಮಾಡಿಸಿ ದವರಿಗೆ ಆಧಾರ್ ಕಾರ್ಡ್ ಲಿಂಕ್ ಇರುವುದಿಲ್ಲ ಹಾಗಾಗಿ ಈ ಸಮಯ ದಲ್ಲಿ ನೀವು ಮಾಡಿಸಿಕೊಳ್ಳಬೇಕು ಎನ್ನುವಂತಹ ಆದೇಶವನ್ನು ಸಹ ತಿಳಿಸಿದ್ದರು.
ಹಾಗಾಗಿ ಆ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಎರಡನ್ನು ಲಿಂಕ್ ಮಾಡಿಸಿಕೊಳ್ಳುತ್ತಿ ದ್ದರು ಅದರಲ್ಲಿ ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುವವರು ಇದನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಲೇಬೇಕು ಎಂಬ ಆದೇಶವನ್ನು ಸಹ ನೀಡಿದ್ದರು.
ಇಲ್ಲದಿದ್ದರೆ ನಿಮ್ಮ ಯಾವುದೇ ಹಣಕಾಸಿನ ವ್ಯವಹಾರದ ಸಂಗತಿಗಳು ಪೂರ್ಣವಾಗುವುದಿಲ್ಲ ನಿಮಗೆ ಸರಿಯಾದ ಸಮಯಕ್ಕೆ ನೌಕರಿ ಬರುವುದಿಲ್ಲ ನೀವು ಯಾವುದೇ ಬ್ಯಾಂಕ್ ವ್ಯವಹಾರಕ್ಕೆ ಹೋದರು ಅದು ನಡೆಯುವುದಿಲ್ಲ ಎಂಬ ಆದೇಶವನ್ನು ಹೊರಡಿಸಿದ್ದರು ಆನಂತರ ಪ್ರತಿಯೊಬ್ಬರೂ ಕೂಡ ತಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಂಡರು.
ಆದರೆ ಕೆಲವೊಂದಷ್ಟು ಜನರಿಗೆ ಪಾನ್ ಕಾರ್ಡ್ ಯಾವ ಒಂದು ಕೆಲಸಕ್ಕೆ ಉಪಯೋಗವಾಗುತ್ತದೆ ಹಾಗೂ ಅದರ ಪ್ರಯೋಜನವೇನು ಹಾಗೂ ಪಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿಲ್ಲ ಎಂದರೆ ಯಾವು ದೆಲ್ಲ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬ ಮಾಹಿತಿಯು ಸಹ ತಿಳಿದಿಲ್ಲ. ಈ ದಿನ ಪಾನ್ ಕಾರ್ಡ್ ಲಿಂಕ್ ಮಾಡಿಸಿಲ್ಲ ಎಂದರೆ ಏನಾಗು ತ್ತದೆ ಹಾಗೂ ಪಾನ್ ಕಾರ್ಡ್ ಯಾವ ಒಂದು ಉದ್ದೇಶಕ್ಕಾಗಿ ನಮಗೆ ಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಇತ್ತೀಚಿಗೆ ಆದಾಯ ತೆರಿಗೆ ಇಲಾಖೆ ಹಾಗೂ ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಬೇಕು ಎಂದು ಹೇಳಿದ್ದರು. ಹಾಗೂ ನೀವೇನಾದರೂ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲ ಎಂದರೆ ಪಾನ್ ಕಾರ್ಡ್ ರದ್ದಾಗುತ್ತದೆ ಎಂಬ ಆದೇಶವನ್ನು ಸಹ ಹೊರಡಿಸಿದ್ದರು.
ಹಾಗೂ ಈ ಸಮಯದಲ್ಲಿ ನೀವು ಮಾಡಿಸಲಿಲ್ಲ ಎಂದರೆ ನಿಮಗೆ ಒಂದು ಸಾವಿರದಂಡವನ್ನು ವಿಧಿಸಿ ಆನಂತರ ಲಿಂಕ್ ಮಾಡಲಾಗುತ್ತದೆ ಎಂದು ಸಹ ಹೇಳಿದ್ದರು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಲಿಂಕ್ ಮಾಡಿಸಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲ ಎಂದರೆ ಏನೆಲ್ಲ ತೊಂದರೆಗಳು ಎದುರಾಗುತ್ತದೆ ಎಂದು ನೋಡುವುದಾದರೆ.
* ಮೊದಲನೆಯದಾಗಿ ನಿಮ್ಮ ಯಾವುದೇ ಹಣಕಾಸಿನ ವ್ಯವಹಾರವೂ ಸಹ ನಡೆಯುವುದಿಲ್ಲ.
* ಅದರಲ್ಲೂ ಬ್ಯಾಂಕ್ ವಿಚಾರವಾಗಿ ನೀವೇನಾದರೂ ಯಾವುದಾದರೂ ಲೋನ್ ತೆಗೆದುಕೊಳ್ಳಬೇಕು ಎಂದರೆ ಅಥವಾ ನೀವೇನಾದರೂ ಅಲ್ಲಿ ಅಕೌಂಟ್ ಓಪನ್ ಮಾಡಿದರೆ ಅಲ್ಲಿ ಕಡ್ಡಾಯವಾಗಿ ಪಾನ್ ಕಾರ್ಡ್ ಲಿಂಕ್ ಮಾಡಿಸಲೇಬೇಕಾಗುತ್ತದೆ. ಇಲ್ಲವಾದರೆ ನಿಮ್ಮ ಅಕೌಂಟ್ ಅನ್ನು ಸ್ಥಗಿತಗೊಳಿಸಲಾಗುತ್ತದೆ.
* ಹಾಗೇನಾದರೂ ಲಿಂಕ್ ಮಾಡಿಸಿಲ್ಲ ಎಂದರೆ ಯಾವುದೆಲ್ಲ ರೀತಿಯ ತೊಂದರೆಗಳು ಉಂಟಾಗುತ್ತದೆ ಎಂದು ನೋಡುವುದಾದರೆ.
* ಕೋ ಆಪರೇಟಿವ್ ಬ್ಯಾಂಕ್ ನಿಂದ ಹಿಡಿದು ಖಾಸಗಿ ಬ್ಯಾಂಕ್ ಗಳವರೆಗೆ ಯಾವುದೇ ರೀತಿಯ ಹೊಸ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.
* ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರರ್ಡ್ ಗಳನ್ನು ಪಡೆಯಲು ಸಾಧ್ಯವಿಲ್ಲ.
* ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಡಿ ಮಾರ್ಟ್ ಖಾತೆಯನ್ನು ತೆರೆಯಲು ಸಾಧ್ಯವಾಗುವುದಿಲ್ಲ.
* ಹಾಗೂ ವಿದೇಶಕ್ಕೆ ನೀವೇನಾದರೂ ಕೇರಳಬೇಕು ಎಂದರೆ 50000 ಹಣವನ್ನು ಪಾವತಿ ಮಾಡಲು ಕೂಡ ಸಾಧ್ಯವಾಗುವುದಿಲ್ಲ.
* ಒಂದು ವಹಿವಾಟಿನಲ್ಲಿ 50000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಪಾವತಿಮಾಡಲು ಸಾಧ್ಯವಿಲ್ಲ.
* ಮ್ಯೂಚುವೆಲ್ ಫಂಡ್ ನಲ್ಲಿ 50000 ರೂಪಾಯಿ ಹಣಕ್ಕಿಂತ ಅಧಿಕ ಮೊತ್ತ ಹಣ ಹೂಡಿಕೆ ಮಾಡಲು ಸಾಧ್ಯವಿಲ್ಲ.
* ಹಾಗೂ ಯಾವುದೇ ಸಂಸ್ಥೆಗೆ 50000 ರೂಪಾಯಿ ಹಣಕ್ಕಿಂತ ಅಧಿಕ ಮೊತ್ತ ಹಣ ಪಾವತಿ ಮಾಡಲು ಸಾಧ್ಯವಿಲ್ಲ.
* ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾ ದಿಂದ 50000 ರೂಪಾಯಿ ಹಣಕ್ಕಿಂತ ಮೊತ್ತದ ಬಾಂಡ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ.