ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಫ್ರಿಜ್ ನಲ್ಲಿ ಎಲ್ಲಾ ರೀತಿಯ ವಸ್ತುಗಳನ್ನು ಪದಾರ್ಥಗಳನ್ನು ಇಡುತ್ತಾರೆ. ಏಕೆಂದರೆ ಅಲ್ಲಿ ಇಟ್ಟರೆ ಯಾವುದೇ ಆಹಾರ ಪದಾರ್ಥವಾಗಲಿ ಯಾವುದೇ ವಸ್ತುವಾಗಲಿ ಹಾಳಾಗುವುದಿಲ್ಲ ಎನ್ನುವ ಉದ್ದೇಶದಿಂದ ಹೆಚ್ಚಿನ ಜನ ಫ್ರಿಜ್ ನಲ್ಲಿ ಎಲ್ಲ ರೀತಿಯ ವಸ್ತುಗಳನ್ನು ಇಡುತ್ತಾರೆ ಹಾಗೂ ಅದು ಸರ್ವೇಸಾಮಾನ್ಯ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹೌದು ಆ ವಸ್ತುಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ಹೆಚ್ಚಿನ ದಿನ ಬಾಳಿಕೆ ಬರುತ್ತದೆ ಎನ್ನುವ ಉದ್ದೇಶದಿಂದ ಎಲ್ಲರೂ ಈ ರೀತಿಯ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಕೆಲವೊಂದು ಪದಾರ್ಥಗಳನ್ನು ಅದರಲ್ಲೂ ಕೆಲವೊಂದು ತರಕಾರಿಗಳನ್ನು ಫ್ರಿಜ್ ನಲ್ಲಿ ಇಡಲೇಬಾರದು ಏಕೆಂದರೆ ಅವುಗಳನ್ನು ಫ್ರಿಜ್ ನಲ್ಲಿ ಇಟ್ಟರೆ ಅವು ಹಾಳಾಗುತ್ತದೆ.
ಅಂದರೆ ಅದು ವಿಷವಾಗಿ ಬದಲಾಗುತ್ತದೆ. ಆದ್ದರಿಂದ ಅದನ್ನು ನಾವು ಸೇವನೆ ಮಾಡುವುದು ಅಷ್ಟು ಸೂಕ್ತವಲ್ಲ ಎಂದೇ ಹೇಳಬಹುದಾಗಿದೆ. ಅದರಲ್ಲೂ ಆ ರೀತಿಯ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡುವುದರಿಂದ ಮುಂದಿನ ದಿನದಲ್ಲಿ ನಾವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆದ್ದರಿಂದ ಈಗ ನಾವು ಹೇಳುವಂತಹ ಈ ಆಹಾರ ಪದಾರ್ಥಗಳಾಗಲಿ ಈ ವಸ್ತುಗಳನ್ನಾಗಲಿ ಯಾವುದೇ ಕಾರಣಕ್ಕೂ ಫ್ರಿಜ್ ನಲ್ಲಿ ಇಡಬೇಡಿ ಹಾಗಾದರೆ ಆ ವಸ್ತುಗಳು ಆಹಾರ ಪದಾರ್ಥಗಳು ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಯೋಣ. ಅದರಲ್ಲೂ ಮುಂದಿನ ದಿನದಲ್ಲಿ ಬರುವಂತಹ ಆರೋಗ್ಯ ಸಮಸ್ಯೆಯನ್ನು ತಡೆಗಟ್ಟಬೇಕು ಎನ್ನುವ ಉದ್ದೇಶದಿಂದಲೂ ಈ ವಿಧಾನವನ್ನು ಅನುಸರಿಸುವುದು ಒಳ್ಳೆಯದು. ಹಾಗಾದರೆ ಮೊದಲನೆಯದಾಗಿ ಯಾವ ವಸ್ತುಗಳನ್ನು ಫ್ರಿಜ್ ನಲ್ಲಿ ಕಡ್ಡಾಯವಾಗಿ ಇಡಲೇಬಾರದು ಎನ್ನುವುದನ್ನು ನೋಡುವುದಾದರೆ.
* ಆಲೂಗೆಡ್ಡೆ :- ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗುತ್ತದೆ. ಫ್ರಿಜ್‌ನ ತಾಪಮಾನವು ಆಲೂಗಡ್ಡೆ ಪಿಷ್ಟವನ್ನು ಒಡೆಯುತ್ತದೆ. ಇದು ಆಲೂಗಡ್ಡೆ ಯ ಸಿಹಿಯನ್ನು ಹೆಚ್ಚಿಸುತ್ತದೆ. ಫ್ರಿಡ್ಜ್ ನಲ್ಲಿಟ್ಟ ಆಲೂಗಡ್ಡೆಯನ್ನು ಬೇಯಿಸಿದಾಗ ಅದರಿಂದ ಹಾನಿಕಾರಕ ರಾಸಾಯನಿಕವಾದ ಅಕ್ರಿಲಮೈಡ್ ಹೊರಬರುತ್ತದೆ. ಇದನ್ನು ತಿನ್ನುವುದರಿಂದ ಕ್ಯಾನ್ಸರ್ ಬರುವ ಅಪಾಯವಿದೆ.
* ಜೇನುತುಪ್ಪ :- ಜೇನುತುಪ್ಪವು ನೈಸರ್ಗಿಕವಾಗಿ ಸಂರಕ್ಷಿಸಲ್ಪಟ್ಟ ಆಹಾರವಾಗಿದೆ. ನೀವು ಅದನ್ನು ಸಾಮಾನ್ಯ ತಾಪಮಾನದಲ್ಲಿ ಇರಿಸಿದರೆ, ನಂತರ ಅದರ ಜೀವಿತಾವಧಿಯು ಹೆಚ್ಚು. ಅದನ್ನು ಎಂದಿಗೂ ತುಂಬಾ ಬಿಸಿ ಅಥವಾ ತಣ್ಣನೆಯ ತಾಪಮಾನದಲ್ಲಿ ಇಡಬೇಡಿ. ಇದು ಜೇನುತುಪ್ಪ ವನ್ನು ಸ್ಪಟಿಕೀಕರಣಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ, ಅದರ ನೈಸರ್ಗಿಕ ಗುಣಲಕ್ಷಣಗಳು ಕೊನೆಗೊಳ್ಳಲು ಪ್ರಾರಂಭಿಸುತ್ತದೆ.
* ಬೆಳ್ಳುಳ್ಳಿ :- ಸಂಪೂರ್ಣ ಬೆಳ್ಳುಳ್ಳಿ ಅಥವಾ ಬೆಳ್ಳುಳ್ಳಿ ಮೊಗ್ಗುಗಳನ್ನು ಫ್ರಿಜ್‌ನಲ್ಲಿ ಇಡಬೇಡಿ, ಏಕೆಂದರೆ ಅದು ಮೃದುವಾಗುತ್ತದೆ ಮತ್ತು ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ, ಇದು ಅದರ ರುಚಿಯನ್ನು ಕಡಿಮೆ ಮಾಡುತ್ತದೆ.
* ಟೊಮೆಟೊ :- ನಮಗೆಲ್ಲರಿಗೂ ಟೊಮೇಟೊದ ರುಚಿ ಮತ್ತು ಬಣ್ಣ ಇಷ್ಟ, ಆದರೆ ಫ್ರಿಜ್ ನಲ್ಲಿ ಇಡುವುದರಿಂದ ಅವುಗಳ ರುಚಿ ಮತ್ತು ಬಣ್ಣ ಎರಡನ್ನೂ ನಾಶಪಡಿಸುತ್ತದೆ. ಫ್ರಿಜ್ ನ ತಣ್ಣನೆಯ ಉಷ್ಣತೆಯು ಟೊಮೆಟೊದ ಹೊರ ಚರ್ಮವನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ಅದರ ರುಚಿ ಕಡಿಮೆಯಾಗುತ್ತದೆ. ಇದರೊಂದಿಗೆ, ತಂಪಾದ ಗಾಳಿಯು ಟೊಮೆಟೊಗಳ ಮಾಗಿದ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ.
* ಬ್ರೆಡ್:- ಕಡಿಮೆ ತಾಪಮಾನವು ತಿನ್ನಲು ಅನೇಕ ವಸ್ತುಗಳನ್ನು ಒಣಗಿಸಬಹುದು. ಅದೇ ಪರಿಣಾಮ ಬ್ರೆಡ್ ಮೇಲೆ ಸಂಭವಿಸುತ್ತದೆ. ನೀವು ಬ್ರೆಡ್ ಅನ್ನು ಫ್ರಿಜ್ ನಲ್ಲಿ ಇರಿಸಿದರೆ ಅದು ಒಣಗಬಹುದು.
* ಕಲ್ಲಂಗಡಿ : – ಕಲ್ಲಂಗಡಿ ಯಾವಾಗಲೂ ತಾಜಾ ತಿನ್ನಬೇಕು. ಫ್ರಿಜ್ ನಲ್ಲಿಟ್ಟರೆ ಅದರ ಆ್ಯಂಟಿಆಕ್ಸಿಡೆಂಟ್ ನಾಶವಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ತಿನ್ನುವವರಲ್ಲಿ ನೀವೂ ಒಬ್ಬರಾಗಿದ್ದರೆ ಈ ರೀತಿ ಮಾಡಬೇಡಿ.
* ಮೊಟ್ಟೆಗಳು : – ಮೊಟ್ಟೆಗಳನ್ನು ಫ್ರಿಜ್ ನಲ್ಲಿ ಇಡುವುದರಿಂದ ಅವುಗಳ ಹೊರ ಕವಚದ ಮೇಲೆ ಬ್ಯಾಕ್ಟಿರಿಯಾಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ, ಅವರು ಖಾದ್ಯವಾಗಿ ಉಳಿಯುವುದಿಲ್ಲ.