ಜಗತ್ತಿನ ಶ್ರೀಮಂತ ದೇವರು ಎಂದು ಕರೆಸಿಕೊಂಡಿರುವ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ವೈಭೋಗದ ಬಗ್ಗೆ ಎಲ್ಲರಿಗೂ ಸಹ ಗೊತ್ತೇ ಇದೆ. ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯಿಂದ ಭಾರತದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ಕೊಡುವ ಪುಣ್ಯಕ್ಷೇತ್ರ ಎನ್ನುವ ಹೆಸರು ಪಡೆದಿರುವ ತಿಮ್ಮಪ್ಪನ ಸನ್ನಿಧಾನವು ಭಕ್ತಾದಿಗಳು ನೀಡುವ ಕಾಣಿಕೆ ಕಾರಣದಿಂದ ಜಗತ್ತಿನ ಗಮನ ಸೆಳೆದಿದೆ.
ಇಷ್ಟೊಂದು ವೈಭೋಗ ಇದ್ದರು ಧನ ಕನಕ ಹರಿದು ಬರುತ್ತಿದ್ದರೂ ಕೂಡ ತಿರುಪತಿ ತಿಮ್ಮಪ್ಪ ಇನ್ನು ಸಹ ಸಾಲಗಾರ. ಈ ರೀತಿ ಸಂಕಟ ಪರಿಹಾರ ಮಾಡುವ ವೆಂಕಟರಮಣನೇ ಸಾಲಗಾರನಾದ ಬಗ್ಗೆ ಅನೇಕರಿಗೆ ಕಾರಣವೇ ಗೊತ್ತಿಲ್ಲ. ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ರಾಮಾಯಣದ ಕಾಲದಲ್ಲಿ ಸೀತಾದೇವಿ ಬದಲು ವೇದವತಿ ಅಶೋಕನದಲ್ಲಿ ಇದ್ದ ಕಾರಣ ಸೀತಾರಾಮಂ ಮಾತೆ ಮಾತಿನಂತೆ ಶ್ರೀರಾಮ ರು ಆಕೆಯನ್ನು ವರ ಕೇಳಿದಾಗ ವೇದವತಿಯು ಶ್ರೀರಾಮನನ್ನು ವರಿಸುವ ಇಂಗಿತ ವ್ಯಕ್ತಪಡಿಸುತ್ತಾರೆ. ಶ್ರೀರಾಮನು ತಾನು ಏಕಪತ್ನಿವ್ರತಸ್ಥ ಆದರೆ ಕಲಿಯುಗದಲ್ಲಿ ವಿವಾಹವಾಗುತ್ತೇನೆ ಎಂದು ಭರವಸೆ ಕೊಟ್ಟಿರುತ್ತಾರೆ.
ಕಲಿಯುಗದಲ್ಲಿ ಆಕೆ ಪದ್ಮಾವತಿಯಾಗಿ ಜನ್ಮ ತಾಳುತ್ತಾರೆ. ಅದೇ ರೀತಿ ದ್ವಾಪರ ಯುಗದಲ್ಲಿ ಬಾಲಕೃಷ್ಣನ ಎಲ್ಲಾ ಲೀಲೆಯನ್ನು ನೋಡಿದ್ದ ಯಶೋಧ ಮಾತೆಗೆ ಶ್ರೀ ಕೃಷ್ಣನ ವಿವಾಹವನ್ನು ನೋಡುವ ಆಸೆಯಾಗಿ ಕೇಳಿದಾಗ ಈಗ ಅದು ಸಾಧ್ಯವಿಲ್ಲ. ಕಲಿಯುಗದಲ್ಲಿ ನೆರವೇರಿಸುವುದಾಗಿ ಹೇಳುತ್ತಾರೆ. ನಂತರ ಯಶೋದೆಯು ಕಲಿಯುಗದಲ್ಲಿ ಬಕುಳ ದೇವಿಯಾಗಿ ಜನ್ಮ ತಾಳುತ್ತಾರೆ.
ಕಲಿಯುಗದ ಆರಂಭಕ್ಕೂ ಮುನ್ನ ವೈಕುಂಠದಲ್ಲಿ ಒಮ್ಮೆ ವಿಷ್ಣು ಹಾಗೂ ಮಹಾಲಕ್ಷ್ಮಿಯು ತಮ್ಮ ಲೋಕದಲ್ಲಿದ್ದಾಗ ಅಲ್ಲಿಗೆ ಬಂದ ಭೃಗು ಮಹರ್ಷಿಗಳು ಅನೇಕ ಬಾರಿ ವಿಷ್ಣುವನ್ನು ಕರೆಯುತ್ತಾರೆ ಆಗಲೂ ವಿಷ್ಣುವಿಗೆ ಇವರ ಆಗಮನದ ಅರಿವಾಗದಿದ್ದಾಗ ಕೋಪಗೊಂಡ ಭೃಗು ಮಹರ್ಷಿಗಳು ವಿಷ್ಣುವಿನ ವೃಕ್ಷಸ್ಥಳಕ್ಕೆ ಒದೆಯುತ್ತಾರೆ.
ಕೋಪಗೊಳ್ಳದೇ ವಿಷ್ಣುವು ಭೃಗು ಮಹರ್ಷಿಗಳನ್ನು ಸಮಾಧಾನದಿಂದ ಮಾತನಾಡಿಸುತ್ತಾರೆ. ಇದರಿಂದ ಕೋಪಗೊಂಡ ಲಕ್ಷ್ಮಿಯು ತನಗೆ ಗೌರವ ಸಿಗದ ಜಾಗದಲ್ಲಿ ತಾನು ಇರುವುದಿಲ್ಲ ಎಂದು ಹೇಳಿ ಭೂಮಿಗೆ ಬರುತ್ತಾರೆ. ಆಗ ಲಕ್ಷ್ಮಿ ಗಾಗಿ ವಿಷ್ಣು ಸಹ ಭೂಮಿಗೆ ಬರುತ್ತಾರೆ. ಶ್ರೀನಿವಾಸನಾಗಿ ಭೂಮಿಯಲ್ಲಿ ಬಂದ ವಿಷ್ಣುವಿಗೆ ಹಿಂದಿನದೆಲ್ಲ ಮರೆತು ಹೋಗುತ್ತದೆ.
ಆ ಸಮಯದಲ್ಲಿ ಹಿಂದೆ ಕೊಟ್ಟಿದ್ದ ವಚನದಂತೆ ಬಕುಳದೇವಿಯ ಸಮ್ಮುಖದಲ್ಲಿ ಪದ್ಮಾವತಿಯನ್ನು ಶ್ರೀನಿವಾಸ ವೈಭೋಗದಿಂದ ವಿವಾಹ ಆಗುತ್ತಾರೆ. ಆ ವಿವಾಹವು 11 ದಿನಗಳ ಕಾಲ ನಡೆಯುತ್ತದೆ. ಇದು ಶ್ರೀನಿವಾಸ ಕಲ್ಯಾಣ ಎಂದು ಪುರಾಣಗಳಲ್ಲಿ ದಾಖಲಾಗಿದೆ. ಈ ವಿವಾಹವು ಅತ್ಯಂತ ಅದ್ದೂರಿಯಾಗಿ ನಡೆದ ಕಾರಣ ಮದುವೆ ಖರ್ಚಿಗೆ ಸಾಲವಾಗಿ ಶಿವ ಮತ್ತು ಬ್ರಹ್ಮನ ಸಾಕ್ಷಿಯಲ್ಲಿ ವಿಷ್ಣುವು ಕುಬೇರನಿಂದ 14 ಲಕ್ಷ ಬಂಗಾರದ ರಾಮ ಮುದ್ರೆ ಗಳನ್ನು ಪಡೆದಿರುತ್ತಾರೆ.
ಕುಬೇರನು ಒಂದು ಕಂಡಿಶನ್ ಹಾಕಿ 14 ಲಕ್ಷ ರಾಮ ಮುದ್ರೆ ಇರುವ ಬಂಗಾರದ ನಾಣ್ಯಗಳನ್ನು ಸಾಲ ನೀಡಿರುತ್ತಾರೆ. ಸಾವಿರ ವರ್ಷಗಳವರೆಗೆ ಈ 14 ಲಕ್ಷ ಬಂಗಾರದ ರಾಮ ಮುದ್ರೆಗಳಿಗೆ ಬಡ್ಡಿಯನ್ನು ತೀರಿಸಬೇಕು ಎಂದು ಹೇಳಿರುತ್ತಾರೆ. ದೇವತೆಗಳ ಸಾವಿರ ವರ್ಷ ಎಂದರೆ ಮನುಷ್ಯರ ಲೆಕ್ಕದಲ್ಲಿ ಕಲಿಯುಗ ಅಂತ್ಯ ಆಗುವವರೆಗೂ ಅದಕ್ಕೆ ಒಪ್ಪಿಕೊಂಡು ಶ್ರೀನಿವಾಸ ಸಾಲ ತೆಗೆದುಕೊಂಡಿರುತ್ತಾರೆ.
ಈಗ ಕಲಿಯುಗದಲ್ಲಿ ಶ್ರೀ ವೆಂಕಟೇಶ್ವರನ ಸನ್ನಿಧಿಗೆ ಬಂದು ಭಕ್ತಾದಿಗಳು ಕೊಡುತ್ತಿರುವ ಕಾಣಿಕೆಯು ಕುಬೇರನ ಬಡ್ಡಿಗೆ ತೀರುತ್ತಿದೆ, ಕಲಿಯುಗದ ಅಂತ್ಯದವರೆಗೂ ಕೂಡ ಅದು ಬರಿ ಬಡ್ಡಿಗೆ ಸಮ ಆಗುತ್ತದೆ. ಭಕ್ತಾದಿಗಳು ತಮ್ಮ ಇಷ್ಟದೈವವಾದ ವೆಂಕಟೇಶ್ವರನಿಗೆ ಸಾಲ ತೀರಿಸಲು ನೆರವಾಗಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಹುಂಡಿಗೆ ಹಣವನ್ನು ಹಾಕುತ್ತಿದ್ದಾರೆ. ಈ ವಿಚಾರದ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ಶ್ರೀನಿವಾಸ ಕಲ್ಯಾಣ ಕಥೆಯನ್ನು ಕೇಳಿ ಅಥವಾ ಚರಿತೆಯನ್ನು ಓದಿ ತಿಳಿದುಕೊಳ್ಳಿ.