ಕೇವಲ 7 ಲಕ್ಷದಲ್ಲಿ ಡಬಲ್ ಬೆಡ್ರೂಮ್ ಮನೆ ನಿರ್ಮಾಣ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಆಸೆ ಇದ್ದವರು ತಪ್ಪದೆ ಇದನ್ನು ನೋಡಿ.!

 

ನಗರ ಪ್ರದೇಶದಲ್ಲಿ ಹೆಜ್ಜೆ ದೂರದಲ್ಲೇ ನಮಗೆ ಬೇಕಾದ ಎಲ್ಲಾ ಸೇವೆಗಳು ಹಾಗೂ ಸೌಲಭ್ಯಗಳು ಸಿಗುತ್ತವೆ. ಆದರೆ ಹಳ್ಳಿಗಳಲ್ಲಿ ಹಾಗಲ್ಲ. ನಗರ ಪ್ರದೇಶದಲ್ಲಿ ಬೆಳೆದು ಆ ಬದುಕಿಗೆ ಹೊಂದಿಕೊಂಡವರು ಹಳ್ಳಿಗಳಲ್ಲಿ ಬದುಕುವುದು ಬಹಳ ಕಷ್ಟ ಅದರಲ್ಲೂ ವಿದ್ಯಾವಂತರು ಒಳ್ಳೆ ಉದ್ಯೋಗದಲ್ಲಿದ್ದು ಕೈ ತುಂಬ ಸಂಬಳ ತೆಗೆದುಕೊಳ್ಳುತ್ತಿದ್ದವರು ಎಲ್ಲ ಅನುಕೂಲತೆಯನ್ನು ಒಳಗೊಂಡ ಮನೆಗಳಲ್ಲಿ ಬದುಕುತ್ತಿದ್ದವರು ಹಳ್ಳಿಗಳಲ್ಲಿ ಹೋಗಿ ಜೀವನ ನಡೆಸುವುದು ಬಹಳ ಕಷ್ಟ.

ಯಾಕೆಂದರೆ ಹಳ್ಳಿಗಳಲ್ಲಿ ವಿದ್ಯುತ್, ಸಾರಿಗೆ ಇನ್ನು ಮುಂತಾದ ಅನೇಕ ಮೂಲಭೂತ ಅವಶ್ಯಕತೆಗಳಿಗೆ ಸಮಸ್ಯೆ ಇದೆ. ಅವರು ಸಿಟಿಗಳಲ್ಲಿ ಇದ್ದು ಕಳೆದಂತ ಲೈಫ್ ಸ್ಟೈಲ್ ಅನ್ನು ಹಳ್ಳಿಗಳಲ್ಲಿ ಕಳೆಯಲು ಸಾಧ್ಯವಿಲ್ಲ. ಹಳ್ಳಿಗರು ಬಂದು ಸಿಟಿಯಲ್ಲಿ ಅಡ್ಜಸ್ಟ್ ಆಗಬಹುದು ಆದರೆ ಪಟ್ಟಣಿಗರು ಹಳ್ಳಿಗಳಲ್ಲಿ ನೀಸಲಾರರು. ಆದರೂ ಇತ್ತೀಚೆಗೆ ಕೃಷಿಯ ಗಂಧಗಾಳಿ ತಿಳಿಯದಿದ್ದರೂ ಕೂಡ ಅನೇಕರಿಗೆ ಕೃಷಿಯ ಬಗ್ಗೆ ಒಲವು ಇದೆ.

ಕಾರಣ ಈಗ ಎಲ್ಲರೂ ರೈತನ ಮಹತ್ವ ಏನು ಎಂದು ಅರಿವಾಗಿದೆ. ಮಣ್ಣಿನ ಮೌಲ್ಯದ ಬಗ್ಗೆ ಮನನ ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವುದನ್ನು ನಂಬಿ ಹಳ್ಳಿಗಳಿಗೆ ಹಿಂದಿರುಗಿ ಕೃಷಿ ಮಾಡಬೇಕು ಎಂದು ಆಸೆ ಪಡುತ್ತಿದ್ದಾರೆ. ಸಾಕಷ್ಟು ಮಂದಿ ಈ ರೀತಿ ಇದ್ದ ಉದ್ಯೋಗವನ್ನು ಬಿಟ್ಟು ಹಳ್ಳಿಗೆ ವಾಪಸ್ ಆಗಿ ಕೃಷಿ ಭೂಮಿ ಖರೀದಿ ಮಾಡಿ ನೆಮ್ಮದಿಯ ಜೀವನವನ್ನು ಕಳೆಯುತ್ತಿರುವ ಉದಾಹರಣೆಯನ್ನು ಕಾಣಬಹುದು.

ರೈತನಾಗಿ ಕೃಷಿ ಮಾಡಿ ಆದಾಯ ಗಳಿಸುವುದು, ಅದನ್ನು ಉದ್ಯಮವಾಗಿ ಪರಿಗಣಿಸುವುದು ಮನಸ್ಸು ಮಾಡಿದರೆ ಕಷ್ಟದ ಕೆಲಸವಲ್ಲ. ಹಾಗೆ ಆಗಲಿಲ್ಲ ಎಂದರೂ ಕೂಡ ನೆಮ್ಮದಿಗೇನು ಕೊರತೆ ಇಲ್ಲ. ಈ ಕಾರಣಕ್ಕಾಗಿ ಎಲ್ಲರೂ ಮಣ್ಣನ್ನು ನಂಬಿ ಬದುಕಲು ಇಚ್ಚಿಸುತ್ತಾರೆ. ಇದೇ ರೀತಿಯ ಮಹಾಕಾಂಕ್ಷೆಯಿಂದ ಇಂಜಿನಿಯರ್ ಕೆಲಸವನ್ನು ಬಿಟ್ಟ ಇಬ್ಬರು ದಂಪತಿಗಳು ಹಳ್ಳಿಗಳಿಗೆ ಹೋಗಿ ಜಮೀನನ್ನು ಖರೀದಿ ಮಾಡಿದ್ದಾರೆ.

ಆದರೆ ಈ ರೀತಿ ಜಮೀನು ಖರೀದಿ ಮಾಡಿದ ಮೇಲೆ ಅವರಿಗೆ ಆ ಗ್ರಾಮದಲ್ಲಿ ಉಳಿದುಕೊಳ್ಳಲು ವಸತಿಯ ಸೌಲಭ್ಯ ಸಿಗಲಿಲ್ಲ, ಬಾಡಿಗೆ ಮನೆ ಸಿಗಲಿಲ್ಲ. ಆಗ ಅವರು ತಾವು ಖರೀದಿಸಿದ ಜಮೀನಿನಲ್ಲಿಯೇ ಮನೆ ಕಟ್ಟುವ ಪ್ಲಾನ್ ಮಾಡಿದರು. ನಗರಗಳಲ್ಲಿ ಫೇಮಸ್ ಆಗಿದ್ದ ಕಂಟೇನರ್ ಮನೆ ಪ್ರಯೋಗವನ್ನು ಹಳ್ಳಿಯಲ್ಲಿ ಮಾಡಲು ಇಚ್ಚಿಸಿದರು. ಕಂಟೇನರ್ ಮನೆಗಳನ್ನು ನಿರ್ಮಿಸುವುದು ಕೂಡ ಬಹಳ ಸುಲಭ ಜೊತೆಗೆ ಅದನ್ನು ಬೇಕಾದಾಗ ವಿನ್ಯಾಸಗೊಳಿಸುವುದು ಕೂಡ ಬಹಳ ಸುಲಭ.

ಒಂದು ಬಾರಿ ಬಂಡವಾಳ ಹಾಕಿದರೆ ಆಮೇಲೆ ಬೇಕಾದ ಜಾಗಕ್ಕೆ ಸ್ವಲ್ಪ ಖರ್ಚಿನಲ್ಲಿ ಬದಲಾಯಿಸಬಹುದು ಅಥವಾ ವಿನ್ಯಾಸ ಮಾಡಬಹುದು ಎನ್ನುವ ಕಾರಣಕ್ಕಾಗಿ ಈ ರೀತಿ ಕಂಟೇನರ್ ಮನೆ ಮಾಡಿಕೊಳ್ಳಲು ಜನ ಇಚ್ಚಿಸುತ್ತಾರೆ. ಈ ಪ್ರಯೋಗವನ್ನು ಅವರು ತಮ್ಮ ಜಮೀನಿನಲ್ಲಿ ಮಾಡಿದರು. 7 ಲಕ್ಷ ಖರ್ಚಿನಲ್ಲಿ ಎಲ್ಲ ಸೌಲಭ್ಯವನ್ನು ಒಳಗೊಂಡ ಎರಡು ಕೋಣೆಗಳುಳ್ಳ ಕಂಟೇನರ್ ಮನೆಯನ್ನು ನಿರ್ಮಿಸಿದರು. ಆ ಹಳ್ಳಿಯಲ್ಲಿ ಮತ್ತು ಅಕ್ಕಪಕ್ಕದ ಹಳ್ಳಿಯಲ್ಲಿ ಅದೇ ಮೊದಲ ಪ್ರಯತ್ನವಾಗಿತ್ತು.

ಈಗ ಆ ಮನೆಯನ್ನು ನೋಡಲು ಜನರು ಆಶ್ಚರ್ಯದಿಂದ ಬರುತ್ತಿದ್ಧಾರೆ ಮತ್ತು ಹಲವರು ತಾವು ಸಹ ಇದೇ ರೀತಿ ಜಮೀನುಗಳಲ್ಲಿ ಸಣ್ಣ ಮನೆ ಮಾಡಿಕೊಳ್ಳಬೇಕು ಎಂದು ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಂಟೇನರ್ಗಳ ಮನೆ ಮಾಡಿಕೊಳ್ಳುವುದು ಖರ್ಚನ್ನು ತಗ್ಗಿಸಿ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ನಿಮಗೂ ಸಹ ಕಂಟೇನರ್ ಮನೆಗಳನ್ನು ಮಾಡಿಕೊಳ್ಳಲು ಆಸಕ್ತಿ ಇದ್ದರೆ ಪುಷ್ಪಕ್ ನರಸಿಂಹನ್ 9663493831 ಈ ನಂಬರಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.

Leave a Comment