Monday, April 21, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಗೀತಾಕ್ಕ ತಲೆ ಕೂದಲು ಬಾಚಿ ಸರಳತೆ ಮೆರೆದ ಶಿವಣ್ಣ, ಸ್ಟಾರ್ ನಟನಾಗಿದ್ದರು ಹೆಂಡತಿ ಸೇವೆ ಮಾಡಿ...

ಗೀತಾಕ್ಕ ತಲೆ ಕೂದಲು ಬಾಚಿ ಸರಳತೆ ಮೆರೆದ ಶಿವಣ್ಣ, ಸ್ಟಾರ್ ನಟನಾಗಿದ್ದರು ಹೆಂಡತಿ ಸೇವೆ ಮಾಡಿ ಮಾದರಿಯಾದ ಶಿವಣ್ಣ. ಈ ವೈರಲ್ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ವೇದ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವೇದ ಸಿನಿಮಾದ ವಿಜಯೋತ್ಸವವನ್ನು ಆಚರಿಸಲು ಶಿವಣ್ಣ ಹಾಗೂ ಗೀತಾ ಹಾಗೂ ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿರುವಂತಹ ಗಾನವಿ ಲಕ್ಷ್ಮಣ್ ಹಾಗೂ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಶ್ವೇತಾ ಚಂಗಪ್ಪ ಸೇರಿದಂತೆ ಚಿತ್ರ ಡೈರೆಕ್ಟರ್ ಆದಂತಹ ಹರ್ಷ ಹಾಗೂ ಇನ್ನಿತರ ಪ್ರತಿದಿನವೂ ಕೂಡ ಒಂದೊಂದು ಪ್ರದೇಶಗಳಿಗೆ ಹೋಗಿ ವೇದ ಸಿನಿಮಾದ ವಿಜಯೋತ್ಸವದ ಆಚರಿಸುತ್ತಿದ್ದಾರೆ.

ವೇದಾ ಸಿನಿಮಾವನ್ನು ಸ್ವತಃ ಶಿವರಾಜ್ ಕುಮಾರ್ ಅವರ ಧರ್ಮಪತ್ನಿ ಗೀತಾ ಅವರೇ ನಿರ್ಮಾಣ ಮಾಡಿದ್ದಾರೆ ಹೌದು ಗೀತಾ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ಶಿವಣ್ಣ ಅವರ 125ನೇ ಸಿನಿಮಾ ಬಿಡುಗಡೆಯಾಗಿರುವುದು ಎಲ್ಲರಲ್ಲೂ ಕೂಡ ಸಂತಸವನ್ನು ತಂದಿದೆ. ಈ ಕಾರಣಕ್ಕಾಗಿಯೇ ದೀತಕ್ಕ ಅವರು ಕೂಡ ಚಿತ್ರಕಂಡದ ಜೊತೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ ಕನ್ನಡ ಮಾತ್ರವಲ್ಲದೆ ಸುಮಾರು ಐದು ಭಾಷೆಯಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಈ ದಿನ ಕೂಡ ಶಿವಣ್ಣ ಅವರು ಶಿವಮೊಗ್ಗಗೆ ತೆರಳಿ ವೇದ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಪ್ರಚಾರ ಕಾರ್ಯ ಮುಗಿದ ನಂತರ ಶಿವಣ್ಣ ಹಾಗೂ ಗೀತಕ್ಕ ಅವರು ಹೋಗಿದ್ದಾರೆ. ಇದೇ ಸಮಯದಲ್ಲಿ ಶಿವಣ್ಣ ಅವರು ಗೀತಕ್ಕ ಅವರ ತಲೆ ಬಾಚಿದ್ದಾರೆ ಶಿವಣ್ಣ ಅವರು ಗೀತಕ್ಕ ಅವರ ತಲೆ ಬಚುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಏಕೆಂದರೆ ಕಳೆದ ಒಂದು ತಿಂಗಳ ಹಿಂದೆ ಗೀತಕ್ಕ ಅವರು ತಮ್ಮ ಕೈಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ ಹಾಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರ ಎಡಗೈ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಹಾಗಾಗಿ ಶಿವಣ್ಣ ಅವರು ಗೀತಕ್ಕ ಅವರ ಸಂಪೂರ್ಣ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಹೆಂಡತಿಯ ಸೇವೆಯನ್ನು ಮಾಡಿದ್ದಾರೆ ನಿಜಕ್ಕೂ ಕೂಡ ಇದು ಮೆಚ್ಚುವಂತಹ ವಿಷಯವೇ ಬೇರೆ ನಟರಾಗಿದ್ದರೆ ಹೆಂಡತಿಯನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರೇನು.

ಆದರೆ ಶಿವಣ್ಣ ಅವರು ಮಾತ್ರ ತಾವು ಎಲ್ಲೇ ಹೋದರು ಕೂಡ ಗೀತಕ್ಕ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅನಾರೋಗ್ಯ ಇದ್ದರೂ ಕೂಡ ಅವರನ್ನು ಮಗುವಿನಂತೆ ಲಾಲನೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಸ್ಟಾರ್ ನಟನಾಗಿದ್ದರೂ ಕೂಡ ಅದನ್ನೆಲ್ಲ ಮರೆತು ತಾನೊಬ್ಬ ಗಂಡ ಪತ್ನಿಯ ಕಷ್ಟದ ಸಮಯದಲ್ಲಿ ಜೊತೆಗೆ ನಿಲ್ಲಬೇಕು ಆಕೆಗೆ ಸಹಾಯ ಮಾಡಬೇಕು ಎಂಬ ಮನೋಗುಣವನ್ನು ಮೈಗೂಡಿಸಿಕೊಂಡಿದ್ದಾರೆ.

ದೊಡ್ಮನೆಯ ಸರಳತೆಯ ಬಗ್ಗೆ ಹಾಗೂ ದೊಡ್ಮನೆಯಾ ಸದ್ಗುಣಗಳ ಬಗ್ಗೆ ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಆದರೆ ಶಿವಣ್ಣ ಅವರು ಮಾಡಿದಂತಹ ಈ ಕೆಲಸ ಇದೀಗ ಎಲ್ಲರಿಗೂ ಸ್ಪೂರ್ತಿ ಅಂತಾನೆ ಹೇಳಬಹುದು. ಇದನ್ನು ನೋಡಿದಂತಹ ಎಷ್ಟೋ ಗಂಡಸರು ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಬಹುದು ಹೆಂಡತಿಯನ್ನು ಸಮಾನನಾಗಿ ಕಾಣಬಹುದು. ಹಾಗೂ ಪತ್ನಿಗೆ ಆರೋಗ್ಯದ ಸಮಯದಲ್ಲಿ ಪತಿಯ ನೆರವು ಬೇಕಾಗುತ್ತದೆ ಎಂಬುದನ್ನು ಈ ವಿಡಿಯೋ ಸಾಬೀತು ಪಡಿಸುತ್ತದೆ.

ಸದ್ಯಕ್ಕೆ ಶಿವಣ್ಣ ಅವರು ಗೀತಕ್ಕ ಅವರಿಗೆ ತಲೆ ಬಾಚುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರಿಂದಲೂ ಕೂಡ ಮೆಚ್ಚುಗೆಯ ಮಹಾಪೂರವನ್ನು ಪಡೆದುಕೊಳ್ಳುತ್ತಿದೆ. ನೀವು ಕೂಡ ಶಿವಣ್ಣ ಅವರು ತಲೆ ಬಾಚುತ್ತಿರುವಂತಹ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.

https://fb.watch/hV6DiyQWSp/