Sunday, June 4, 2023
HomeEntertainmentಕ್ರಾಂತಿ ಸಿನಿಮಾ ಟ್ರೈಲರ್ ಲಾಂಚ್ ಮಾಡುವ ಸಮಯದಲ್ಲಿ ಬೇಸರ ಮಾಡಿಕೊಂಡು ವೇದಿಕೆಯಿಂದ ಕೆಳಗಿಳಿದ ದರ್ಶನ್ ಕಾರಣವೇನು...

ಕ್ರಾಂತಿ ಸಿನಿಮಾ ಟ್ರೈಲರ್ ಲಾಂಚ್ ಮಾಡುವ ಸಮಯದಲ್ಲಿ ಬೇಸರ ಮಾಡಿಕೊಂಡು ವೇದಿಕೆಯಿಂದ ಕೆಳಗಿಳಿದ ದರ್ಶನ್ ಕಾರಣವೇನು ಗೊತ್ತ.?

ಇಡೀ ಕರ್ನಾಟಕ ಕಾಯುತ್ತಿರುವ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈ ವರ್ಷದ ಮೊದಲ ಸ್ಟಾರ್ ಸಿನಿಮಾ ಆಗಿ ಜನವರಿ 26ರಂದು ರಾಜ್ಯದಾದ್ಯಂತ ತೆರೆ ಕಾಣುತ್ತಿದೆ. ಈಗಾಗಲೇ ಸಿನಿಮಾ ಬಗ್ಗೆ ಸಿನಿಮಾ ಹಾಡುಗಳ ಬಗ್ಗೆ ಪ್ರಚಾರ ಮಾಡುತ್ತಿರುವ ಸಿನಿಮಾ ತಂಡ ನಾನಾ ಬಗೆಯಲ್ಲಿ ಜನರಿಗೆ ಕ್ರಾಂತಿ ಸಿನಿಮಾದ ವಿಷಯ ತಿಳಿಸುವ ಕೆಲಸ ಮಾಡುತ್ತಿದೆ. ಇದರ ಪ್ರಯುಕ್ತ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡಿತ್ತು.

ಇದೀಗ ಟೈಲರ್ ರಿಲೀಸ್ ಅನ್ನು ಕೂಡ ಹೊಸ ರೀತಿ ಪ್ರಯೋಗದಲ್ಲಿ ಮಾಡಿ ರಾಜ್ಯದಲ್ಲೇ ಮೊದಲ ಬಾರಿಗೆ ಥಿಯೇಟರ್ ಅಲ್ಲಿ ಸಿನಿಮಾ ಟೈಲರ್ ರಿಲೀಸ್ ಮಾಡಿದ ಸಿನಿಮಾ ಎನ್ನುವ ಖ್ಯಾತಿಗೆ ಒಳಗಾಗಿದೆ. ಕ್ರಾಂತಿ ಸಿನಿಮಾ ರಿಲೀಸ್ ಅನ್ನು ರಾಜ್ಯದ ನಾನಾ ಥಿಯೇಟರ್ ಗಳಲ್ಲಿ ಏರ್ಪಡಿಸಲಾಗಿತ್ತು ಈ ಇವೆಂಟನ್ನು ಚಿತ್ರತಂಡವು ಅದ್ದೂರಿಯಾಗಿ ನಡೆಸಿಕೊಟ್ಟಿದೆ.

ಚಿತ್ರದ ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರುಗಳ ದಂಡೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮ ಯಶಸ್ವಿ ಆಗಿದೆ. ಈ ಇವೆಂಟ್ ಅಲ್ಲಿ ದರ್ಶನ್ ಅವರ ಸಹ ಮಾತನಾಡಿ ಅಭಿಮಾನಿಗಳಿಗೆ ಖುಷಿಪಡಿಸಿದ್ದಾರೆ ದರ್ಶನ್ ಅವರು ಯಾವುದಾದರೂ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರೆ ಅಲ್ಲಿ ಅವರ ಕೋಟ್ಯಾಂತರ ಅಭಿಮಾನಿಗಳು ಸೇರಿರುತ್ತಾರೆ. ದರ್ಶನ್ ಅವರನ್ನು ನೋಡುವುದಕ್ಕೆ ಆಸೆ ಪಡುವ ಅಭಿಮಾನಿಗಳು ಮತ್ತು ಅವರ ಮಾತುಗಳನ್ನು ಕೇಳಲು ಕಾಯುತ್ತಿರುವ ಅಭಿಮಾನಿಗಳು ಕೂಡ ಇರುತ್ತಾರೆ.

ಹಾಗಾಗಿ ದರ್ಶನ್ ಎಲ್ಲೇ ಮಾತನಾಡುತ್ತಿದ್ದಾರೆ ಎಂದರು ಎಲ್ಲರ ಕಿವಿ ನೆಟ್ಟಗಾಗುತ್ತದೆ. ಆದರೆ ಅದು ಯಾಕೋ ಕ್ರಾಂತಿ ಸಿನಿಮಾ ಟ್ರೈಲರ್ ರಿಲೀಸ್ ವೇದಿಕೆ ಮೇಲೆ ದರ್ಶನ್ ಅವರು ಎರಡೇ ಎರಡು ಮಾತನಾಡಿ ತಮ್ಮ ಮಾತನ್ನು ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಿಟ್ಟಿದ್ದಾರೆ. ದರ್ಶನ್ ಅವರು ಈ ರೀತಿ ಮಾಡುತ್ತಾರೆ ಎಂದು ಯಾರೂ ಕೂಡ ಊಹೆ ಮಾಡಿರಲಿಲ್ಲ. ಚಿತ್ರಕ್ಕೆ ಸಂಬಂಧಪಟ್ಟ ಕೆಲವರು ಮಾತನಾಡಿದ ಮೇಲೆ ದರ್ಶನವರನ್ನು ಕೂಡ ವೇದಿಕೆಗೆ ಆಹ್ವಾನಿಸಲಾಗುತ್ತದೆ.

ಮೊದಲಿಗೆ ವೇದಿಕೆ ಮೇಲೆ ಹೋಗುವ ದರ್ಶನ್ ಅವರು ಸುಮಲತಾ ಅವರಿಗೆ ಮತ್ತು ಗಿರಿಜಾ ಲೋಕೇಶ್ ಅವರಿಗೆ ನಮಸ್ಕಾರ ಹೇಳುತ್ತಾ ಈ ಸಿನಿಮಾಗಾಗಿ ಕೆಲಸ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ಎಲ್ಲಾ ಕಲಾವಿದರುಗಳಿಗೂ ಧನ್ಯವಾದಗಳು, ಈ ಕಾರ್ಯಕ್ರಮಕ್ಕೆ ಸ್ವಾಗತ ಎಂದು ಹೇಳುತ್ತಾ ಮಾತು ಶುರು ಮಾಡುತ್ತಾರೆ. ದರ್ಶನ್ ಅವರು ಇನ್ನೇನು ಹೇಳುತ್ತಾರೆ ಎಂದು ಕಾಯುತ್ತಿದ್ದ ಎಲ್ಲರಿಗೂ ಕ್ಷಣದಲ್ಲೇ ನಿರಾಸೆ ಆಗಿದೆ.

ನಾನು ಈಗಾಗಲೇ 20 ರಿಂದ 30 ಚಾನೆಲ್ ಅಲ್ಲಿ ಕ್ರಾಂತಿ ಸಿನಿಮಾ ಬಗ್ಗೆ ಮಾತನಾಡಿದ್ದೇನೆ ಹಾಗಾಗಿ ಈಗ ಕ್ರಾಂತಿ ಎಂದರೆ ಏನು ಎನ್ನುವ ಸುಳಿದು ಎಲ್ಲರಿಗೂ ಸಿಕ್ಕಿದೆ ಆದರೆ ಎಲ್ಲರೂ ಇಮ್ಯಾಜಿನ್ ಮಾಡಿರುವುದು 0.01% ಮಾತ್ರ ಸಿನಿಮಾದಲ್ಲಿ ಅದಕ್ಕಿಂತಲೂ ಮಿಗಿಲಾದ ವಿಷಯ ಇದೆ. ಹಾಗಾಗಿ ಎಲ್ಲರೂ ಥಿಯೇಟರ್ ಅಲ್ಲಿ ಬಂದು ಕ್ರಾಂತಿ ಸಿನಿಮಾವನ್ನು ನೋಡಿ ಎಂದು ಹೇಳುತ್ತಾ ವೇದಿಕೆಯಿಂದ ಕೆಳಗಿಳಿದು ಬಿಡುತ್ತಾರೆ. ಕ್ಷಣ ಎಲ್ಲರೂ ಕೂಡ ಮೌನವಾಗಿ ಅವರನ್ನೇ ನೋಡುತ್ತಿರುತ್ತಾರೆ.

ದರ್ಶನ್ ಅವರು ಕಳೆದ ಬಾರಿ ಆದ ಆ ಬೇಸರದಿಂದ ಹೊರ ಬಂದಿಲ್ಲವೋ ಅಥವಾ ಇನ್ನು ಎಲ್ಲರಿಗೂ ಮಾತನಾಡಲು ಅವಕಾಶ ಸಿಗಲಿ ಎಂದು ಈ ರೀತಿ ಮಾಡಿದ್ದಾರೋ ಅರ್ಥವಾಗುತ್ತಿಲ್ಲ ಆದರೆ ದರ್ಶನ್ ಮಾತು ಕೇಳಲು ಆಸೆ ಪಟ್ಟವರಿಗಂತೂ ಬೇಸರ ಆಗಿರುವುದು ನಿಜ. ಸಿನಿಮಾ ಸಕ್ಸಸ್ಫುಲ್ ಆಗಲಿ ಡಿ ಬಾಸ್ ನೋವೆಲ್ಲಾ ಸಕ್ಸಸ್ ಇಂದ ನಿವಾರಣೆ ಆಗಲಿ ಎಂದು ಹರಸೋಣ.