Monday, April 21, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಗೌರಿ ಹಬ್ಬದ ಪ್ರಯುಕ್ತ ಮುತ್ತೈದೆಯರಿಗೆ ಬಾಗೀನ ಕೊಡುವಾಗ ನನ್ನ ಮಗಳಿಗೆ ಈ ಸೌಭಾಗ್ಯ ಸಿಗಲಿಲ್ಲವೇ ಎಂದು...

ಗೌರಿ ಹಬ್ಬದ ಪ್ರಯುಕ್ತ ಮುತ್ತೈದೆಯರಿಗೆ ಬಾಗೀನ ಕೊಡುವಾಗ ನನ್ನ ಮಗಳಿಗೆ ಈ ಸೌಭಾಗ್ಯ ಸಿಗಲಿಲ್ಲವೇ ಎಂದು ಕಣ್ಣೀರು ಹಾಕಿದ ಪ್ರಮೀಳಾ.

ಗೌರಿ ಹಬ್ಬ ಹೆಣ್ಣು ಮಕ್ಕಳ ಪಾಲಿಗೆ ತುಂಬಾ ವಿಶೇಷ. ಕಾರಣ ಇಷ್ಟೇ ಮದುವೆ ಆಗಿ ಗಂಡನ ಮನೆ ಅಲ್ಲಿ ಇರುವ ಹೆಣ್ಣು ಮಕ್ಕಳನ್ನು ಹಬ್ಬದ ನೆಪದಲ್ಲಿ ಮನೆಗೆ ಕರೆಸಿ ತಂದೆ ಅಥವಾ ಅಣ್ಣ-ತಮ್ಮಂದಿರು ಬಾಗಿನವನ್ನು ಕೊಡುತ್ತಾರೆ. ಗಂಡನ ಮನೆಯಲ್ಲಿ ಎಷ್ಟೇ ಸಂಪತ್ತಿದ್ದರು ಕೂಡ ತವರು ಕಡೆಯಿಂದ ಬರುವ ಈ ಬಾಗಿನದ ಸಂತಸ ಹೆಣ್ಣುಮಕ್ಕಳ ಪಾಲಿಗೆ ಪದಗಳಲ್ಲಿ ವಿವರಿಸಲು ಅಸಾಧ್ಯ. ನಮ್ಮ ಭಾರತೀಯ ಸಂಸ್ಕೃತಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಮತ್ತು ನಮ್ಮ ಕರ್ನಾಟಕದಲ್ಲಿ ಎಲ್ಲಾ ಭಾಗಗಳಲ್ಲೂ ಕೂಡ ಈ ಹಬ್ಬವನ್ನು ಇದೇ ರೀತಿ ಆಚರಿಸುತ್ತಾರೆ. ಆದರೆ ಈಗಿನ ಮಾಡಲ್ ಲೈಫ್ ಸ್ಟೈಲ್ ಗೆ ಹೊಂದಿಕೊಂಡಿರುವ ಈಗಿನ ಸಂಬಂಧಗಳು ಇತ್ತೀಚೆಗೆ ಇದರ ಮೌಲ್ಯವನ್ನು ಮರೆತು ಬಿಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೂ ಕೂಡ ಮನದಾಳದಲ್ಲಿ ಸಾಧ್ಯವಾದಷ್ಟು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹಂಬಲ ಇನ್ನು ಹಲವಾರು ಮನಗಳಲ್ಲಿ ಇವೆ. ಎಷ್ಟೋ ಕಂಪನಿಗಳಲ್ಲಿ ಈ ಹಬ್ಬಕ್ಕೆ ಅವರ ಸಂಸ್ಥೆಯ ವತಿಯಿಂದ ಹೆಣ್ಣು ಮಕ್ಕಳಿಗೆ ಬೋನಸ್ ಕೊಡುತ್ತಾರೆ ತಂದೆಯ ಪ್ರೀತಿ ಅಥವಾ ಅಣ್ಣಂದಿರಿಂದ ಉಡುಗೊರೆ ಸಿಗದಿದ್ದರೂ ಯಾರೋ ಆ ಸ್ಥಾನದಲ್ಲಿ ನಿಂತು ಅದನ್ನು ನಡೆಸಿಕೊಟ್ಟಾಗ ಮನತುಂಬಿ ಬರುತ್ತದೆ. ಮತ್ತು ಶಾಲಾ ಕಾಲೇಜು ದಿನಗಳಲ್ಲಿ ಜೊತೆಯಾದ ಸ್ನೇಹಿತರು ಅಥವಾ ಕಚೇರಿಯಲ್ಲಿ ಅಣ್ಣ-ತಮ್ಮಂದಿರಾಗಿ ಬೆರೆತು ಹೋದ ಸಹೋದ್ಯೋಗಿಗಳು ಕೂಡ ಸಹೋದರಿಯ ರೂಪದಲ್ಲಿ ಕಾಣುವವರಿಗೆ ತಾವೇ ಆ ಸ್ಥಾನದಲ್ಲಿ ನಿಂತು ಹೆಣ್ಣು ಮಕ್ಕಳ ಉಡಿ ತುಂಬಿಸುತ್ತಾರೆ. ನಿಜವಾಗಿಯೂ ಈ ಭಾಂಧವ್ಯ ಹಾಗೂ ಭಾವನೆ ಬಾಗಿನ ಮತ್ತು ಉಡುಗೊರೆಗೆ ಮಾತ್ರ ಮೀಸಲಲ್ಲ. ಅದನ್ನು ಮೀರಿ ಒಂದು ಸಾಂತ್ವನ ಹಾಗೂ ಭಾತೃತ್ವದ ರೂಪದಲ್ಲಿ ಅದು ಹೆಣ್ಣು ಮಕ್ಕಳಿಗೆ ಶಕ್ತಿಯಾಗುತ್ತದೆ.

ನಮ್ಮ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಈ ವರ್ಷದಿಂದ ಸಿನಿಮಾರಂಗದಲ್ಲಿ ಕೆಲಸ ಮಾಡುವ ಎಲ್ಲ ಮುತ್ತೈದೆ ಹೆಣ್ಣು ಮಕ್ಕಳಿಗೆ ಕಾರ್ಯಕ್ರಮವನ್ನು ಏರ್ಪಡಿಸಿ ಬಾಗಿನ ಕೊಡುವ ಕಾರ್ಯ ಮಾಡಬೇಕು ಎಂದು ನಿರ್ಧರಿಸಿ, ಈ ವಿಷಯವನ್ನು ಬಾಮ ಹರೀಶ್ ಅವರು ಪ್ರಮೀಳಾ ಜೋಷಾಯ್ ಮತ್ತು ಸುಂದರರಾಜ್ ಅವರೊಂದಿಗೆ ಈ ಹಂಚಿಕೊಂಡು ಕಾರ್ಯಕ್ರಮವನ್ನು ನಡೆಸಿಕೊಡಬೇಕು ಎಂದು ಹೇಳಿದಾಗ ಇಬ್ಬರು ಕೂಡ ಸಂತೋಷದಿಂದ ಒಪ್ಪಿಕೊಂಡು ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅದರ ಭಾಗವಾಗಿ ಗೌರಿ ಹಬ್ಬದ ದಿನದಂದು ಕನ್ನಡ ಇಂಡಸ್ಟ್ರಿಯ ಹೆಣ್ಣು ಮಕ್ಕಳಿಗೆ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಹೀಗೆ ಬಂದ ನಟಿಯರು, ಸಹ ಕಲಾವಿದೆಯರು ಹಿನ್ನೆಲೆ ಗಾಯಕಿಯರು ಎಲ್ಲರಿಗೂ ಕೂಡ ಪ್ರಮೀಳಾ ಜೋಶಾಯ್ ಅವರು ಬಾಗಿನ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದವರು ಪ್ರಮೀಳಾ ಜೋಶಿ ಅವರ ಪತಿ ಸುಂದರರಾಜ್ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ವೀಡಿಯೋಗಳು ಹರಿದಾಡುತ್ತಿದ್ದು, ವೀಡಿಯೋವನ್ನು ನೋಡಿದವರು ಪ್ರಮೀಳಾ ಜೋಶಿ ಅವರ ಮುಖದಲ್ಲಿ ಇದ್ದ ದುಃಖದ ಭಾವವನ್ನು ಗುರುತಿಸಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಇದಕ್ಕೆ ಕಾರಣ ಇಷ್ಟೇ ಇರಬಹುದು ಎಲ್ಲರಿಗೂ ಭಾಗ್ಯ ಕೊಡುತ್ತಿದ್ದೇನೆ. ನನ್ನ ಮಗಳಿಗೆ ಆ ಭಾಗ್ಯ ಇಲ್ಲವಲ್ಲ ಎಂದು ಕಣ್ಣೀರು ಹಾಕಿದ್ದಾರೆ ತಾಯಿ ನಟಿ ಆಗಿರಬೇಕು ಅಥವಾ ಸಾಧಾರಣ ಮಹಿಳೆ ಆಗಿರಬಹುದು ಆದರೆ ತನ್ನ ಮಗಳು ಮುತ್ತೈದೆ ಆಗಿ ಇರಬೇಕು ಅಂತ ಬಯಸುತ್ತಾಳೆ ಆದರೆ ಮೇಘನ್ ರಾಜ್ ಗೆ ಈ ಸೌಭಾಗ್ಯ ದೊರೆಯಲೇ ಇಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾಳೆ ಚಿರು ಬದುಕಿದ್ದಾರೆ ಮೇಘಾನ ಇಂದು ಎಲ್ಲರಂತೆ ಬಾಗೀನ ಪಡೆಯುತ್ತಿದ್ದರು ನಿಜಕ್ಕೂ ಈ ಸ್ಥಿತಿ ಯಾವ ಹೆಣ್ಣಿಗೂ ಬರದಿರಲಿ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡಿ.