ತಮಿಳಿನಾ ಜನಪ್ರಿಯ ಖ್ಯಾತ ನಟಿ ಮತ್ತು ನಿರೂಪಕಿ ಆದಂತಹ ಮಹಾಲಕ್ಷ್ಮಿಯವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಮಹಾಲಕ್ಷ್ಮಿಯವರು ಮದುವೆಯಾಗಿರುವ ಫೋಟೋಸ್ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ನೆಟ್ಟಿಗರು ನಕಾರಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ಎರಡು ರೀತಿಯಲ್ಲೂ ಕೂಡ ಕಾಮೆಂಟ್ ಮಾಡಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಏನೆಂದರೆ ಸಾಮಾನ್ಯವಾಗಿ ನಟಿಯರು ಆಗಿರಬಹುದು ಅಥವಾ ನಟರು ಆಗಿರಬಹುದು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಬಹಳಷ್ಟು ಯೋಚನೆ ಮಾಡಿ ಆಯ್ಕೆ ಮಾಡಿಕೊಳ್ಳುತ್ತಾರೆ. ರೂಪದಲ್ಲಿ ಇರಬಹುದು ಸಿರಿವಂತಿಕೆಯಲ್ಲಿ ಇರಬಹುದು ವಯಸ್ಸಿನಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ತಮಗೆ ಮ್ಯಾಚ್ ಆಗುವಂತಹ ಜೋಡಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಆದರೆ ಮಹಾಲಕ್ಷ್ಮಿಯವರು ಮಾತ್ರ ಈ ಎಲ್ಲಾ ವಿಚಾರಗಳಿಗೂ ಕೂಡ ತದ್ವಿರುದ್ಧವಾದಂತಹ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿರುವುದು ಇದೀಗ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ. ಹೌದು ನಟಿ ಮಹಾಲಕ್ಷ್ಮಿಯವರು ನೋಡುವುದಕ್ಕೆ ಸಾಕ್ಷಾತ್ ಮಹಾಲಕ್ಷ್ಮಿಯ ರೀತಿಯೇ ಕಾಣುತ್ತಾರೆ. ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಸಾಲು ಸಾಲು ಆಫರ್ ಗಳಿವೆ ಖ್ಯಾತ ನಿರೂಪಕಿಯು ಕೂಡ ಹೌದು ಉತ್ತಮ ಪ್ರತಿಭೆಯನ್ನು ಹೊಂದಿದ್ದಾರೆ ಆದರೂ ಕೂಡ ಇದೀಗ ನಿರ್ಮಾಪಕ ಆದಂತಹ ಚಂದ್ರಶೇಖರ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ ಚಂದ್ರಶೇಖರ್ ನೋಡುವುದಕ್ಕೆ ದೇಹದಾಢ್ಯ ಅಷ್ಟೇ ಅಲ್ಲದೆ ಕಪ್ಪು ಬಣ್ಣದಿಂದ ಕೂಡಿದ್ದರೆ ಇವರಿಬ್ಬರಿಗೂ ಜೋಡಿ ಇಲ್ಲ ಎಂಬುದೇ ಕೆಲವು ಅಭಿಮಾನಿಗಳ ಅಭಿಪ್ರಾಯ ಇದೆ ಆದರೂ ಕೂಡ ಇದೀಗ ಇವರು ಪ್ರೀತಿಸಿ ಮದುವೆಯಾಗಿರುವಂತಹ ವಿಚಾರ ಎಲ್ಲರಲ್ಲೂ ಕೂಡ ಅಚ್ಚರಿ ಮೂಡಿಸಿದೆ.
ಮಹಾಲಕ್ಷ್ಮಿ ಹಾಗೂ ಚಂದ್ರಶೇಖರನ್ ಇಬ್ಬರೂ ಕೂಡ ತಿರುಪತಿಯಲ್ಲಿ ಮದುವೆಯಾಗಿದ್ದಾರೆ ಈ ಮದುವೆಗೆ ಕುಟುಂಬಸ್ಥರು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನವನ್ನು ನೀಡಲಾಗಿದೆ ಸದ್ಯಕ್ಕೆ ಮಹಾಲಕ್ಷ್ಮಿಯವರು ತಮ್ಮ ಮದುವೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಇದರ ಜೊತೆಗೆ ”ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬ ಅದೃಷ್ಟ ಮಾಡಿದ್ದೇನೆ. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ. ಲವ್ ಯೂ ಅಮ್ಮು..” ಎಂಬ ಅಡಿ ಬರೆದು ಕೊಂಡಿದ್ದಾರೆ. ಮಹಾಲಕ್ಷ್ಮಿ ಅವರು ನಿರೂಪಕಿಯಾಗಿ ಮಾತ್ರವಲ್ಲದೆ ನಟಿಯಾಗಿಯೂ ಕೂಡ ಮಹಾಲಕ್ಷ್ಮೀ ಅವರು ಗಮನ ಸೆಳೆದಿದ್ದಾರೆ. ವಿಶೇಷವೆಂದರೆ, ರವೀಂದರ್ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್ ವಾರೈ ಕಾಥಿರು’ ಸಿನಿಮಾದಲ್ಲೂ ಮಹಾಲಕ್ಷ್ಮೀ ನಟಿಸಿದ್ದರು. ಆ ಸಿನಿಮಾದಲ್ಲಿ ವಿದಾರ್ಥ್ ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿದ್ದರು ಇನ್ನು, ಧಾರಾವಾಹಿ ಕ್ಷೇತ್ರದಲ್ಲೂ ಮಹಾಲಕ್ಷ್ಮೀ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ.
ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ಹಾಗೆಯೇ, ರವೀಂದರ್ ಚಂದ್ರಶೇಖರನ್ ಅವರು ಕೂಡ ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಮಹಾಲಕ್ಷ್ಮಿ ಅವರು ಹಂಚಿಕೊಂಡಿರುವಂತಹ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಒಂದು ಸಂಚಲನವನ್ನು ಸೃಷ್ಟಿ ಮಾಡಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಈ ಫೋಟೋ ನೋಡಿದಂತಹ ನಿಟ್ಟಿಗರು ಪ್ರೀತಿಗೆ ಕಣ್ಣಿಲ್ಲ ಎಂಬುದು ಸತ್ಯ ಎಂಬುದನ್ನು ಈ ನಟಿ ಇದೀಗ ಸಾಬೀತುಪಡಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.