Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಹೊರ ಬಂದ ನಂತರ ಬಿಗ್ ಬಾಸ್ ಮನೆಗೆ ಹೋಗುವಂತಹ ಗೋಲ್ಡನ್...

ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಹೊರ ಬಂದ ನಂತರ ಬಿಗ್ ಬಾಸ್ ಮನೆಗೆ ಹೋಗುವಂತಹ ಗೋಲ್ಡನ್ ಆಪರ್ಚುನಿಟಿ ಪಡೆದುಕೊಂಡ ನಟ ಅನಿರುದ್ಧ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಜೊತೆ ಜೊತೆಯಲಿ ಧಾರವಾಹಿ ತಂಡದಿಂದ ನಟ ಅನಿರುದ್ಧ ಅವರು ಹೊರ ಬಂದಿದ್ದಾರೆ ನಿರ್ಮಾಪಕರು ನಿರ್ದೇಶಕರು ಹಾಗೂ ಅನಿರುದ್ ನಡುವೆ ನಡೆದಂತಹ ಮಾತಿನ ಚಿಕಮಕಿಯಿಂದ ಅನಿರುದ್ಧ ಅವರನ್ನು ಧಾರವಾಹಿ ತಂಡದಿಂದ ಹೊರ ಹಾಕಲಾಗಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಯಾವುದೇ ಧಾರಾವಾಹಿ ಆಗಿರಬಹುದು ಮನೋರಂಜನ ಕ್ಷೇತ್ರ ಆಗಿರಬಹುದು ಅಥವಾ ಕಿರುತೆರೆಗೆ ಸಂಬಂಧಪಟ್ಟಂತಹ ಕಾರ್ಯಕ್ರಮಗಳಿಗೆ ಸಮಾರಂಭಗಳಿಗೆ ಅನಿರುಧ್ ಅವರನ್ನು ಸೇರಿಸಿಕೊಳ್ಳಬಾರದು ಅವರನ್ನು ಕಿರುತೆರೆಯಿಂದ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಜೊತೆ ಜೊತೆಯಲಿ ಧಾರವಾಹಿ ತಂಡದ ನಿರ್ಮಾಪಕರು ಮತ್ತು ನಿರ್ದೇಶಕರು ಕಿರುತರೆ ಸಂಘಟನೆಗಳಿಗೆ ಮನವಿಯನ್ನು ಮಾಡಿಕೊಂಡಿದ್ದರು.

ಅಷ್ಟೇ ಅಲ್ಲದೆ ಇದಾಗಲೇ ಅನಿರುದ್ಧ ಅವರ ಪಾತ್ರಕ್ಕೆ ನಟ ಹರೀಶ್ ರಾಜ್ ಅವರನ್ನು ಕರೆತರಲಾಗಿದೆ ಹೌದು ಅನಿರುದ್ಧ ಅವರ ಪಾತ್ರವನ್ನು ಬದಲಾಯಿಸುವುದಕ್ಕಾಗಿ ಕಥೆಯಲ್ಲಿ ಬದಲಾವಣೆ ಮಾಡಿ ಆರ್ಯವರ್ಧನ್ ಗೆ ಆ.ಕ್ಸಿ.ಡೆಂ.ಟ್ ಆಗಿದೆ ಎಂಬ ಕಥೆಯನ್ನು ಹೇಳಿದ್ದು ಆತನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂಬ ಕಥೆಯನ್ನು ಕಟ್ಟಿ ಇದೀಗ ಹರೀಶ್ ರಾಜ್ ಅವರನ್ನು ಅನಿರುಧ್ ಅವರ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇದೀಗ ಅನಿರುದ್ಧ ವರು ಸಂಪೂರ್ಣವಾಗಿ ಕಿರುತೆರೆಯಿಂದ ದೂರ ಉಳಿದಿದ್ದಾರೆ ಇದರ ಬೆನ್ನಲ್ಲೇ ಇದೀಗ ಮತ್ತೊಂದು ವಿಚಾರಕ್ಕೆ ಅನಿರುಧ್ ಅವರು ಸುದ್ದಿಯಾಗಿದ್ದಾರೆ ಹೌದು.

ಈಗಾಗಲೇ ಓಟಿಟಿಯಲ್ಲಿ ಮಿನಿ ಬಿಗ್ ಬಾಸ್ ಪ್ರಾರಂಭವಾಗಿದ್ದು ಸುಮಾರು ಒಂದು ತಿಂಗಳೇ ಆಗಿದೆ ಅಷ್ಟೇ ಅಲ್ಲದೆ ಇದೆ ಕೊನೆಯ ವಾರ ಈ ಬಿಗ್ ಬಾಸ್ ಕಾರ್ಯಕ್ರಮವು ಕೂಡ ಮುಕ್ತಾಯವಾಗಲಿದೆ. ಹಾಗಾಗಿ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಮುಗಿಯುತ್ತಿದ್ದ ಹಾಗೆ ಬಿಗ್ ಬಾಸ್ ಸೀಸನ್ 9 ಪ್ರಾರಂಭ ಮಾಡಬೇಕು ಅಂತ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಬಿಗ್ ಬಾಸ್ 9 ರ ಪ್ರೋಮೊ ಶೂಟಿಂಗ್ ಕೂಡ ಮುಕ್ತಾಯವಾಗಿದೆ ಈ ಒಂದು ಪ್ರೋಮವನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಹಂಚಿಕೊಳ್ಳಲಾಗಿದೆ.

ಇವೆಲ್ಲವನ್ನೂ ನೋಡುತ್ತಿದ್ದರೆ ಈಗಾಗಲೇ ಬಿಗ್ ಬಾಸ್ ಸೀಸನ್ 9 ಕ್ಕೆ ಬರುವಂತಹ ಸ್ಪರ್ಧೆಗಳನ್ನು ಆಯ್ಕೆ ಮಾಡಲಾಗಿದೆ ಎಂಬ ವಿಚಾರ ಬಿದ್ದಿದೆ. ಅನಿರುದ್ಧ್ ಅವರನ್ನು ಜೊತೆ ಜೊತೆಯಲಿ ಧಾರವಾಹಿ ತಂಡದಿಂದ ಹೊರ ಹಾಕಿದ ನಂತರ ಅವರಿಗೆ ಯಾವುದೇ ರೀತಿಯಾದಂತಹ ಅವಿಕಾಶವಿಲ್ಲ ಇನ್ನು ಮುಂದೆ ಅವರು ಕಿರುತೆರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕೆಲವು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಬಂದ ನಂತರ ಇದೀಗ ಬಿಗ್ ಬಾಸ್ ನಲ್ಲಿ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದೆ.

ಈ ವಿಚಾರಕ್ಕೆ ಸಂಬಂಧಪಟ್ಟಂತಹ ಪೋಸ್ಟರ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಇದನ್ನು ನೋಡಿದಂತಹ ಕೆಲವು ಅಭಿಮಾನಿಗಳು ಧಾರವಾಹಿ ತಂಡದಿಂದ ಹೊರ ಬಂದ ನಂತರ ಅನಿರುದ್ಧ ಅವರಿಗೆ ಒಂದು ಬ್ರೇಕ್ ಬೇಕಾಗಿದೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಇವರ ಲೈಫ್ ಗೆ ಒಂದು ಟರ್ನಿಂಗ್ ಪಾಯಿಂಟ್ ಆಗಲಿದೆ ಹಾಗಾಗಿ ಬಿಗ್ ಬಾಸ್ ನಲ್ಲಿ ಇವರು ಸ್ಪರ್ಧಿಸುವುದು ಉತ್ತಮ ಎಂದು ಹೇಳಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಅನಿರುಧ್ ಆಗಲಿ ಅಥವಾ ಬಿಗ್ ಬಾಸ್ ತಂಡವಾಗಲಿ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಆಗಲು ಎಲ್ಲಿಯೂ ಕೂಡ ಸುಳಿವನ್ನು ಬಿಟ್ಟು ಕೊಟ್ಟಿಲ್ಲ.

ಹಾಗಾಗಿ ಈ ಬಾರಿಯ ಬಿಗ್ ಬಾಸ್ ನಲ್ಲಿ ಅನಿರುಧ್ ಅವರು ಕಾಣಿಸಿಕೊಳ್ಳಲಿದ್ದಾರ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ಅಂತು ಅನಿರುಧ್ ಅವರು ಬಿಗ್ ಬಾಸ್ ಗೆ ಹೋಗುತ್ತಾರೆ ಎಂಬ ಮಾಹಿತಿಗಳು ಮಾತ್ರ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನಿಮ್ಮ ಪ್ರಕಾರ ಅನಿರುಧ್ ಬಿಗ್ ಬಾಸ್ ಮನೆಗೆ ಹೋಗುವುದು ಸೂಕ್ತ ನಾ ಅಥವಾ ಇಲ್ಲವಾ ಎಂಬುದನ್ನು ತಿಳಿಸಿ.