ದರ್ಶನ್ ವಿರುದ್ಧ ದೂರ ನೀಡುತ್ತಿರುವ ಅಪ್ಪು ಅಭಿಮಾನಿಗಳು
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಮೇಲೆ ಹೊಸಪೇಟೆಯಲ್ಲಿ ನಡೆದಂತಹ ಘಟನೆ ಇದೀಗ ಎಲ್ಲೆಲ್ಲೋ ಹೋಗುತ್ತಿದೆ ಹೌದು ದರ್ಶನ್ ಅವರು ಕ್ರಾಂತಿ ಸಿನಿಮಾದ ಎರಡನೇ ಹಾಡು ಆದಂತಹ ಬೊಂಬೆ ಎಂಬ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಾರೆ. ಈ ಸಮಯದಲ್ಲಿ ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಬಂದಿರುತ್ತಾರೆ ಅದರಲ್ಲಿ ಕಿಡಿಗೇಡಿ ಒಬ್ಬರು ದರ್ಶನ್ ಮೇಲೆ ಚಪ್ಪಲಿಯನ್ನು ಎಸೆಯುತ್ತಾರೆ. ಆದರೆ ಈ ಒಂದು ಕೃತ್ಯವನ್ನು ಮಾಡಿರುವುದು ಅಪ್ಪು(Puneeth) ಅಭಿಮಾನಿ ಎಂಬುವುದು ದರ್ಶನ್ ಫ್ಯಾನ್ ಗಳ ವಾದವಾಗಿದೆ.
ಆದರೆ ಈ ಮಾತನ್ನು ಅಪ್ಪು ಅಭಿಮಾನಿಗಳು ಒಪ್ಪುತ್ತಿಲ್ಲ ದಿನದಿಂದ ದಿನಕ್ಕೆ ಇದರ ವಾದ ಮತ್ತು ವಿವಾದಗಳು ಹೆಚ್ಚಾಗುತ್ತದೆ ಇವೆಲ್ಲವನ್ನು ನೋಡಿದಂತಹ ಅಪ್ಪು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಾಜವಂಶದ ಬಗ್ಗೆ ಹಾಗೂ ಅಪ್ಪುವಿನ ಬಗ್ಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇವೆಲ್ಲವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ದರ್ಶನ್ ಅವರು ತಮ್ಮ ಅಭಿಮಾನಿಗಳಿಗಂತು ಬುದ್ಧಿ ಹೇಳುತ್ತಿಲ್ಲ. ಹಾಗಾಗಿ ದರ್ಶನ್ ಅವರ ವಿರುದ್ಧವೇ ಇದೀಗ ನಾವು ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದು ತೀರ್ಮಾನಿಸಿದಂತಹ ಅಪ್ಪು ಅಭಿಮಾನಿಗಳು ನಾಳೆ ಅಂದರೆ 29 ನೇ ತಾರೀಕು ಬೆಂಗಳೂರಿನ ಗಾಂಧಿನಗರದಲ್ಲಿ ಇರುವಂತಹ ಚಲನಚಿತ್ರ ವಾಣಿಜ್ಯ ಮಂಡಳಿ ಫಿಲಂ ಚೇಂಬರ್ಸ್ ಗೆ ಹೋಗಿ ದರ್ಶನ್ ಅವರ ವಿರುದ್ಧ ದೂರನ್ನು ದಾಖಲಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ ದರ್ಶನ್ ಅವರನ್ನು ನೀವು ಕರೆಸಿ ಅವರಿಗೆ ಬುದ್ಧಿವಾದವನ್ನು ಹೇಳಬೇಕು ಅವರ ಅಭಿಮಾನಿಗಳನ್ನು ಹದ್ದು ಬಸ್ತಿನಲ್ಲಿ ಇಡುವಂತೆ ಮನವಿ ಮಾಡಿ ಎಂದು ಅಪ್ಪು ಅಭಿಮಾನಿಗಳು ಸಮಾಲೋಚನೆ ಮಾಡಿದ್ದಾರೆ. ಹೀಗಾಗಿ ಕರ್ನಾಟಕದಾದ್ಯಂತ ಇರುವಂತಹ ಎಲ್ಲಾ ಅಪ್ಪು ಅಭಿಮಾನಿ ಬಳಗ ಹಾಗೂ ರಾಜವಂಶದ ಅಭಿಮಾನಿಗಳನ್ನು ಈ ಒಂದು ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಕರೆ ಕೊಟ್ಟಿದ್ದಾರೆ. ಇದಕ್ಕೆ ಸಾತ್ ನೀಡುವುದಕ್ಕೆ ಹಲವಾರು ಕನ್ನಡ ಪರ ಹೋರಾಟ ಸಂಘಗಳು ಕೂಡ ಮುಂದಾಗಿದೆ ಇನ್ನು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಎರಡು ವಾರವಾದರೂ ಕೂಡ ಈ ಒಂದು ಗಲಾಟೆಗೆ ಸುಖಂತ್ಯ ಎಂಬುದೇ ದೊರೆತಿಲ್ಲ.
ದರ್ಶನ್ ಅವರು ಈ ವಿಚಾರವನ್ನು ಮರೆತು ಹೋಗಿದ್ದಾರೆ ಅಂತ ಸಾಕಷ್ಟು ಜನ ಅಂದುಕೊಂಡಿದ್ದರು ಆದರೆ ಹುಬ್ಬಳ್ಳಿಯಲ್ಲಿ ಅವರು ಪುಷ್ಪವತಿ(Pushpavathi) ಎಂಬ ಹಾಡನ್ನು ರಿಲೀಸ್ ಮಾಡಲು ಹೋದಾಗ ಶರ್ಟ್ ಕಾಲರ್ ಅನ್ನು ಮೇಲೆ ಎತ್ತಿ ನಮ್ಮನ್ನು ಉರಿದುಕೊಳ್ಳುವವರಿಗೆ ಇನ್ನಷ್ಟು ಉರಿಸೋಣ ಎಂದು ಪ್ರಚೋದನಾತ್ಮಕ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇದನ್ನು ನೋಡಿದಂತಹ ದರ್ಶನ್ ಅಭಿಮಾನಿಗಳು ಇನ್ನಷ್ಟು ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಫ್ಯಾನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ ಇದರಿಂದ ಮನ ನೋಂದಂತಹ ಕೆಲವು ಅಪ್ಪು ಅಭಿಮಾನಿಗಳು ಏನಾದರೂ ಮಾಡಿ ಇದೆಲ್ಲದಕ್ಕೂ ಕೂಡ ಒಂದು ಅಂತ್ಯ ಹಡಲೇಬೇಕು ಎಂದು ನಾಳೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ನಡೆಸುತ್ತಿದ್ದಾರೆ.
ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೂ ಕೂಡ ಒಪ್ಪಿಸಿದ್ದಾರೆ. ಇನ್ನು ಕೆಲವು ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ ಇದೆಲ್ಲದರ ನಡುವೆ ಮತ್ತೆ ಅಪ್ಪು ಮತ್ತು ದರ್ಶನ್ ಫ್ಯಾನ್ ಗಳ ವರ್ ಮಿತಿಮೀರಿ ನಡೆಯುತ್ತಿರುವುದರಿಂದ ಇವೆಲ್ಲವುದಕ್ಕೂ ಕಡಿವಾಣ ಹಾಕುವುದಕ್ಕೆ ಫಿಲಂ ಚೇಂಬರ್ ಗೆ ಮನವಿ ಮಾಡುತ್ತಿದ್ದಾರೆ. ಫಿಲಂ ಚೇಂಬರ್ ನವರು ಯಾವ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ಇನ್ನು ಮುಂದೆಯಾದರೂ ಫ್ಯಾನ್ ವಾರ್ ಎಂಬುದು ಕಡಿಮೆಯಾದರೆ ಸಾಕು ಎಂಬುವುದು ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ