Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದಿನವು ಫುಟ್ಪಾತ್ ನಲ್ಲಿ ಕಿತ್ತಳೆಹಣ್ಣು ಮಾರಿ ಬಂದ ಹಣದಲ್ಲಿ ಈ ಅಜ್ಜ ಮಾಡುತ್ತಿದ್ದ ಕೆಲಸವೇನು ಗೊತ್ತ.? ಸರ್ಕಾರಿ ಅಧಿಕಾರಿಗಳೇ ಶಾ-ಕ್ ಆದ್ರೂ.!

Posted on May 2, 2023 By Kannada Trend News No Comments on ದಿನವು ಫುಟ್ಪಾತ್ ನಲ್ಲಿ ಕಿತ್ತಳೆಹಣ್ಣು ಮಾರಿ ಬಂದ ಹಣದಲ್ಲಿ ಈ ಅಜ್ಜ ಮಾಡುತ್ತಿದ್ದ ಕೆಲಸವೇನು ಗೊತ್ತ.? ಸರ್ಕಾರಿ ಅಧಿಕಾರಿಗಳೇ ಶಾ-ಕ್ ಆದ್ರೂ.!

 

ಫುಟ್ ಪಾತ್ ನಲ್ಲಿ ಕಿತ್ತಳೆಹಣ್ಣು ಮಾರುತ್ತಿದ್ದ ಬಡವನಿಗೆ ಅವಮಾನ ಮಾಡಿದ್ರು, ಆದ್ರೆ ಈತ ಯಾರು ಅಂತ ತಿಳಿದಾಗ ಸರ್ಕಾರಿ ಅಧಿಕಾರಿಗಳೇ ಶಾ’ಕ್ ಆಗಿ ಎದ್ದು ನಿಂತು ನಮಸ್ಕಾರ ಮಾಡಿದ್ರು.! ಇಂಗ್ಲೀಷಿನಲ್ಲಿ ಬಂದು ಪ್ರಚಲಿತವಾದ ಕೋಟ್ ಇದೆ. ಡೋಂಟ್ ಜಡ್ಜ್ ದ ಬುಕ್ ಬೈ ಇಟ್ಸ್ ಕವರ್ ಎಂದು. ಸಧ್ಯಕ್ಕೆ ನಾವೀಗ ಹೇಳುವ ವ್ಯಕ್ತಿಗೆ ಇದು ಬಹಳ ಒಪ್ಪುತ್ತದೆ. ಯಾಕೆಂದರೆ ಅವರ ಕಥೆಯನ್ನು ನೀವೇ ಒಮ್ಮೆ ನೋಡಿ. ವ್ಯಕ್ತಿಯೊಬ್ಬ ಮಂಗಳೂರಿನ ಬಸ್ ನಿಲ್ದಾಣಗಳಲ್ಲಿ ಹಲವು ವರ್ಷಗಳಿಂದ ಕಿತ್ತಳೆ ಹಣ್ಣು ವ್ಯಾಪಾರ ಮಾಡುತ್ತಿರುತ್ತಾರೆ. ಅವರಿಗೆ ಗೊತ್ತಿರುವುದು ಪ್ರತಿದಿನ ಬೆಳಿಗ್ಗೆ ಮಂಕರಿ ತುಂಬಾ ಕಿತ್ತಳೆ ಹಣ್ಣುಗಳನ್ನು ತರುವುದು ಬಸ್ ನಿಲ್ದಾಣದಲ್ಲಿ ಅತ್ತ ಇತ್ತ ಓಡಾಡಿ ಹಣ್ಣುಗಳನ್ನೆಲ್ಲ ಮಾರಾಟ ಮಾಡಿ ಮನೆಗೆ ಹೋಗುವುದು.

ಇಷ್ಟಿದ್ದ ಅವರ ಪ್ರಪಂಚದಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಬದಲಾವಣೆ ತರುವಂತಹ ಘಟನೆ ನಡೆದು ಹೋಗುತ್ತದೆ. ಅದೇನೆಂದರೆ ವಿದೇಶಿ ವ್ಯಕ್ತಿ ಇವರ ಬಳಿ ಬಂದು 1 ಕೆಜಿ ಹಣ್ಣಿಗೆ ಎಷ್ಟು ದುಡ್ಡು ಎಂದು ಕೇಳುತ್ತಾರೆ. ಆದರೆ ಆತ ಮಾತನಾಡಿದ ಭಾಷೆ ಇವರಿಗೆ ಅರ್ಥ ಆಗದ ಕಾರಣ ಇವರಿಗೆ ಪ್ರತಿಕ್ರಿಯಿಸಲು ಬರುವುದಿಲ್ಲ. ಜೊತೆಗೆ ಆತ ಏನು ಹೇಳುತ್ತಿದ್ದಾನೆ ಎನ್ನುವುದರ ಅರ್ಥವು ತಿಳಿಯುವುದಿಲ್ಲ. ಅಂದು ಬಹಳ ಬೇಸರ ಮಾಡಿಕೊಂಡ ಇವರು ನನಗೂ ಸಹ ಶಿಕ್ಷಣ ಸಿಕ್ಕಿದರೆ ಈಗಾಗುತ್ತಿರಲಿಲ್ಲ ಎಂದು ನೊಂದುಕೊಳ್ಳುತ್ತಾರೆ.

ಅಷ್ಟಕ್ಕೆ ಸುಮ್ಮನಾಗದ ಇವರು ತನ್ನಂತೆ ತನ್ನೂರಿನಲ್ಲಿ ಮತ್ತಾರಿಗೂ ಈ ರೀತಿ ಆಗಬಾರದು ಎಂದು ನಿರ್ಧರಿಸುತ್ತಾರೆ. ಯಾಕೆಂದರೆ ಆ ವ್ಯಕ್ತಿ ಇದ್ದ ಊರಿನಲ್ಲಿ ಶಾಲೆ ಇರಲಿಲ್ಲ, ಆ ಕಾರಣಕ್ಕೆ ಆ ಗ್ರಾಮದಲ್ಲಿ ಅನೇಕರು ಅನಕ್ಷರಸ್ಥರಾಗಿದ್ದರು. ಅವರ ಬದುಕು ಮುಂದೆ ಎಷ್ಟು ಕಷ್ಟ ಎನ್ನುವ ಮುಂದಾಲೋಚನೆಯಿಂದ ಅದುವರೆಗೆ ಇವರು ಕಿತ್ತಳೆ ಹಣ್ಣಿನ ವ್ಯಾಪಾರ ಮಾಡಿ ಕೂಡಿಟ್ಟ ಹಣದಲ್ಲಿ ಶಾಲೆಯಿಂದ ತೆರೆಯಲು ನಿರ್ಧರಿಸುತ್ತಾರೆ.

ಆದರೆ ಕೂಲಿ ವ್ಯಾಪಾರಿಯಾಗಿದ್ದ ಇವರ ಹಣದಿಂದ ಶಾಲೆ ನಿರ್ಮಿಸುವುದು ಅಸಾಧ್ಯದ ಮಾತಾಗಿತ್ತು. ಉಳ್ಳವರ ಮನೆ ಕದ ತಟ್ಟಿ ಸಹಾಯ ಮಾಡಲು ಕೇಳಿಕೊಂಡರು. ಈ ಸಮಯದಲ್ಲಿ ಅವರು ಪಟ್ಟ ಅವಮಾನ ಅಷ್ಟಿಷ್ಟಲ್ಲ. ಕೆಲವರು ಈತ ಮೋಸಗಾರ ಶಾಲೆ ಹೆಸರು ಹೇಳಿಕೊಂಡು ದುಡ್ಡು ಹೊಡೆಯುತ್ತಾನೆ ಎಂದು ಹಣ ಕೊಡಲು ಹಿಂದೆ ಮುಂದೆ ನೋಡಿದರು.

ಇನ್ನೂ ಕೆಲವರು ಅದರಲ್ಲೂ ಶಾಲೆ ವ್ಯವಸ್ಥೆಗಾಗಿ ಸರ್ಕಾರಿ ಕಚೇರಿಗಳ ಸಹಾಯ ಅರಸಿ ಹೋದಾಗ ಸರ್ಕಾರಿ ಅಧಿಕಾರಿಗಳೇ ತೀರ ಕೇವಲವಾಗಿ ಕಂಡರು. ಭಿಕ್ಷೆ ನೀಡುವಂತೆ ಐವತ್ತು ನೂರು ಎಸೆದು ಇದೆಲ್ಲ ನಡೆಯುವುದಿಲ್ಲ ಮನೆಗೆ ಹೋಗುವಂತೆ ಹೇಳಿದ್ದರು. ಆದರೂ ಕೂಡ ತನ್ನ ಛಲ ಬಿಡದ ಇವರು ಹೊಸ ಪದಪು ಎನ್ನುವ ಗ್ರಾಮದಲ್ಲಿ 2011 ರಲ್ಲಿ ಶಾಲೆಯೊಂದನ್ನು ಕಟ್ಟಿಯೇ ತೀರಿದರು. ಇವರು ಅಲ್ಲಿ ಸ್ಥಳ ಖರೀದಿಸಿ ಶಾಲೆ ನಿರ್ಮಾಣ ಮಾಡಲೇಬೇಕು ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಾಗ ಕೆಲ ಮಾನವೀಯ ವ್ಯಕ್ತಿಗಳು ಇವರ ನೆರವಿಗೆ ಬಂದರು.

ಕೆಲವರು ಯಂತ್ರೋಪಕರಣಗಳ ಸಹಾಯ ಮಾಡಿದರು ಕೆಲವರು ಸಿಮೆಂಟ್ ಮರಳು ಕಬ್ಬಿಣದ ವ್ಯವಸ್ಥೆ ಮಾಡಿದರೆ ಕೆಲವರು ಜಾಗ ಸಹ ನೀಡಿದರು. ಕೊನೆಗೆ ಅವರ ಕನಸಂತೆ ಊರಿನಲ್ಲೊಂದು ಶಾಲೆ ನಿರ್ಮಾಣ ಆಯಿತು. ಇದಕ್ಕಾಗಿ ಶ್ರಮ ಪಟ್ಟ ಆ ವ್ಯಕ್ತಿ ಬೇರೆ ಯಾರು ಅಲ್ಲ 2020ನೇ ವರ್ಷದ ಸಾಲಿನಲ್ಲಿ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಹರೇಕಳ ಹಾಜಪ್ಪ. ಇವರು ಕಟ್ಟಿದ ಶಾಲೆಗೆ 20 ವರ್ಷಗಳಾಗಿವೆ. ಹಾಜಪ್ಪ ಶಾಲೆ ಎಂದೆ ಶಾಲೆಗೆ ಹೆಸರಿಡಲಾಗಿದೆ.

ಆ ಭಾಗದಲ್ಲಿ ಇವರನ್ನು ಅಕ್ಷರ ಸಂತ ಎಂದು ಕೂಡ ಕರೆಯುತ್ತಾರೆ. ಇವರ ಅಕ್ಷರ ಕ್ರಾಂತಿ ಕುರಿತು ಕರ್ನಾಟಕದಲ್ಲಿ ಹಾಗೂ ಬ್ರಿಟನಲ್ಲೂ ಪುಸ್ತಕಗಳು ಬಿಡುಗಡೆ ಆಗಿವೆ. ಕನ್ನಡಪ್ರಭದಲ್ಲಿ ಮ್ಯಾನ್ ಆಫ್ ದಿ ಇಯರ್ ಎನ್ನುವ ಹೆಸರನ್ನು ಪಡೆದಿದ್ದರು. ಹಾಗೆಯೇ ರಾಷ್ಟ್ರಪತಿಗಳಿಂದ ಇವರನ್ನು ಕರೆ ತರಲು ಕರೆ ಬಂದಾಗ ಅಂದು ಸಹಾಯ ಕೇಳಿದಾಗ ಯಾರೆಲ್ಲಾ ಅವಮಾನ ಮಾಡಿದ್ದರು ಅವರಿಂದಲೇ ಸೆಲ್ಯೂಟ್ ಹೊಡಿಸಿಕೊಂಡರು.

Public Vishya
WhatsApp Group Join Now
Telegram Group Join Now

Post navigation

Previous Post: 2023ರ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ BJP ಸರ್ಕಾರ, ಡಬಲ್ ಇಂಜಿನ್ ಸರ್ಕಾರ ಕೊಟ್ಟಿರುವ ಭರವಸೆಗಳು ಏನೇನು ಗೊತ್ತಾ.?
Next Post: ಉಪ್ಪಿನ ಜಾಡಿಯಲ್ಲಿ ಈ ಮೂರು ವಸ್ತುಗಳನ್ನು ಹಾಕಿ ಸಾಕು, ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ.! ನಂಬಿಕೆ ಇಟ್ಟು ಈ ಪ್ರಯೋಗ ಮಾಡಿ ನೋಡಿ ಫಲಿತಾಂಶ ಸಿಕ್ಕೆ ಸಿಗುತ್ತೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore