Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟ ಪ್ರಭಾಕರ್ ಬೆಡ್ ರೂಂ ನಲ್ಲಿ ಇಟ್ಟಿದ್ದ ಅಮೂಲ್ಯ ಖಜಾನೆ ರಹಸ್ಯ ರಿವೀಲ್ ಮಾಡಿದ ವಿನೋದ್ ಪ್ರಭಾಕರ್

Posted on December 9, 2022 By Kannada Trend News No Comments on ನಟ ಪ್ರಭಾಕರ್ ಬೆಡ್ ರೂಂ ನಲ್ಲಿ ಇಟ್ಟಿದ್ದ ಅಮೂಲ್ಯ ಖಜಾನೆ ರಹಸ್ಯ ರಿವೀಲ್ ಮಾಡಿದ ವಿನೋದ್ ಪ್ರಭಾಕರ್

ಟೈಗರ್

ಪ್ರಭಾಕರ್ ತಮ್ಮ ತಂದೆ ಮನೆಯಲ್ಲಿ ಇಟ್ಟಿರುವಂತಹ ಅಮೂಲ್ಯ ಖಜಾನೆಯ ರಹಸ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರಭಾಕರ್ ಶೇಖರಿಸಿದ್ದ ಅಮೂಲ್ಯ ವಸ್ತು ಏನು ಗೊತ್ತಾ.

ಸುಮಾರು 80 90 ರ ದಶಕದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದಂತಹ ಖಳ ನಾಯಕರ ಪಟ್ಟಿಯಲ್ಲಿ ಟೈಗರ್ ಪ್ರಭಾಕರ್ ಅವರು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಅಂತ ಹೇಳಿದರೆ ತಪ್ಪಾಗಲಾರದು‌ ಕೇವಲ ಖಳ ನಾಯಕ ಮಾತ್ರವಲ್ಲದೆ ಹಲವಾರು ಸಿನಿಮಾದಲ್ಲಿ ನಾಯಕ ನಟನಾಗಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಟೈಗರ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ಇಡೀ ಚಿತ್ರರಂಗವೇ ಅಲುಗಾಡುತ್ತಿತ್ತು ಏಕೆಂದರೆ ಹೆಸರಿಗೆ ತಕ್ಕಂತೆ ನಟನೆಯಲ್ಲಿ ದೇಹ ದಢದ್ಯತೆ ಹಾಗೂ ಅಭಿನಯದಲ್ಲಿ ಎಲ್ಲದರಲ್ಲೂ ಕೂಡ ಟೈಗರ್ ಪ್ರಭಾಕರ್ ಅವರು ನಿಸ್ಸೀಮರಾಗಿದ್ದರು.

ಇನ್ನು ನಟ ಟೈಗರ್ ಪ್ರಭಾಕರ್ ಅವರಿಗೆ ಮೂರು ಮದುವೆಯಾಗಿದ್ದು ಅದರಲ್ಲಿ ಮೊದಲನೇ ಮಡದಿ ಮೇರಿ ಅವರ ಪುತ್ರ ವಿನೋದ್, ವಿನೋದ್ ಕೂಡ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಇವರಿಗೆ ಹೆಚ್ಚು ಯಶಸ್ಸು ಮತ್ತು ಕೀರ್ತಿ ತಂದು ಕೊಟ್ಟ ಸಿನಿಮಾ ಅಂದರೆ ಅದು ನವಗ್ರಹ ಅಂತ ಹೇಳಬಹುದು. ನವಗ್ರಹ ಸಿನಿಮಾದ ಮೂಲಕ ಒಂದೊಳ್ಳೆ ಐಡೆಂಟಿಟಿಯನ್ನು ಪಡೆದುಕೊಂಡರು ಸದ್ಯಕ್ಕೆ ವಿನೋದ್ ಪ್ರಭಾಕರ್ ಅವರು ಲಂಕಾಸುರ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುತ್ತಿದ್ದಾರೆ.

ವಿಶೇಷ ಏನೆಂದರೆ ಈ ಸಿನಿಮಾದ ಸ್ವತಃ ವಿನೋದ್ ಪ್ರಭಾಕರ್ ಅವರೇ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ ಇದಿಷ್ಟು ಸಿನಿಮಾಗೆ ಸಂಬಂಧಪಟ್ಟ ವಿಚಾರ. ಇನ್ನು ವೈಯಕ್ತಿಕ ವಿಚಾರದಲ್ಲಿ ನಟ ಪ್ರಭಾಕರ್ ಅವರು ತಮ್ಮ ಮನೆಯಲ್ಲಿ ಇಟ್ಟಿದಂತಹ ಖಜಾನೆಯ ರಹಸ್ಯ ಒಂದನ್ನು ವಿನೋದ್ ಪ್ರಭಾಕರ್ ಅವರು ರಿವೀಲ್ ಮಾಡಿದ್ದಾರೆ. ಹೌದು, ಇತ್ತೀಚಿಗಷ್ಟೇ youtube ಸಂದರ್ಶನ ಒಂದರಲ್ಲಿ ವಿನೋದ್ ಪ್ರಭಾಕರ್ ಅವರು ಪ್ರಭಾಕರ್ ವಾಸವಾಗಿದಂತಹ ಮನೆಯ ಕೆಲವೊಂದಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ತಮ್ಮ ತಂದೆ ವಾಸವಾಗಿದಂತಹ ಭವ್ಯ ಬಂಗಲಿಯಲ್ಲಿ ಇದೀಗ ವಿನೋದ್ ರವರು ಕೂಡ ವಾಸ ಮಾಡುತ್ತಿದ್ದಾರೆ ಅವರು ಉಪಯೋಗ ಮಾಡುತ್ತಿದ್ದಂತಹ ವಸ್ತುಗಳನ್ನು ಬಳಕೆ ಮಾಡುತ್ತಿದ್ದಾರೆ. ಇನ್ನು ಪ್ರಭಾಕರ್ ಅವರು ತಮ್ಮ ಬೆಡ್ ರೂಮ್ ನಲ್ಲಿ ಮರದ ಶೋಕೇಸ್ ಒಂದನ್ನು ಮಾಡಿಸಿ ಅದರಲ್ಲಿ ತುಂಬಾ ಆಂಟಿಕ್ ವಸ್ತುಗಳನ್ನು ಇಟ್ಟಿದ್ದಾರೆ ಇದರ ಜೊತೆಗೆ ಕಾಸ್ಟ್ಲಿ ಡ್ರಿಂಕ್ಸ್ ಹಾಗೂ ಕ್ರಿಸ್ಟಲ್ ಗ್ಲಾಸ್ ಗಳನ್ನು ಕೂಡ ಶೇಖರಣೆ ಮಾಡಿ ಇಟ್ಟಿದ್ದಾರೆ.

ಸಾಮಾನ್ಯವಾಗಿ ಮನೆ ಎಂದ ಮೇಲೆ ಅಲ್ಲಿ ಅಲಂಕಾರಿಕ ವಸ್ತುಗಳು ಮತ್ತು ಗೃಹ ಉಪಯೋಗಿ ವಸ್ತುಗಳು ಅಥವಾ ಯಾವುದಾದರೂ ವಿವಿಧ ಚಿತ್ರಪಟಗಳು ಇರುವುದನ್ನು ನಾವು ಕಾಣಬಹುದು. ಆದರೆ ಪ್ರಭಾಕರ್ ಅವರು ಮಾತ್ರ ತಮ್ಮ ಮನೆಯಲ್ಲಿ ಕಾಸ್ಟ್ಲಿ ಡ್ರಿಂಕ್ಸ್ ಗಳನ್ನು ಶೇಖರಣೆ ಮಾಡಿ ಇಟ್ಟಿದ್ದಾರೆ. ಪುಟ್ಟ ಪುಟ್ಟ ಬಾಟಲ್ ಗಳಲ್ಲಿ ಇದನ್ನು ಶೇಖರಣೆ ಮಾಡಿರುವುದು ನಿಜಕ್ಕೂ ಆಶ್ಚರ್ಯ ಇದು ನೋಡುವುದಕ್ಕೆ ಬಹಳ ಮನಮೋಹಕವಾಗಿ ಕಾಣುತ್ತದೆ. ವಿಶೇಷ ಏನೆಂದರೆ ಪ್ರಭಾಕರ್ ಅವರು ವಿ.ಧಿ.ವ.ಶರಾಗಿ ಸುಮಾರು 20 ವರ್ಷಗಳಾಯಿತು ಆದರೂ ಕೂಡ ಈ ಎಲ್ಲಾ ವಸ್ತುಗಳನ್ನು ವಿನೋದ್ ಪ್ರಭಾಕರ್ ಅವರು ಇನ್ನೂ ಹಾಗೆಯೇ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ಇನ್ನು ಪ್ರಭಾಕರ್ ಅವರು ಡ್ರಿಂಕ್ಸ್ ಮಾಡುತ್ತಿದ್ದ ವಿಚಾರ ಸಾಕಷ್ಟು ಜನರಿಗೆ ತಿಳಿದೆ ಇದೆ ಇವರು ಅಫಿಶಿಯಲ್ ಡ್ರಿಂಕರ್ ಆಗಿದ್ದರು ಆದರೆ ಇವರ ಜೀವನದಲ್ಲಿ ನಡೆದಂತಹ ಕೆಲವು ಕಹಿ ಘಟನೆಗಳ ನೋವಿನಿಂದಾಗಿ ದಿನ ಕಳೆಯುತ್ತಾ ಕುಡಿತಕ್ಕೆ ದಾಸರಾಗುತ್ತಾರೆ. ಇದರಿಂದ ಅವರ ಆರೋಗ್ಯವೂ ಕೂಡ ಹದಗಿಡುತ್ತದೆ ಇವೆಲ್ಲವನ್ನೂ ಕಣ್ಣಾರೆ ಕಂಡಂತಹ ವಿನೋದ್ ಪ್ರಭಾಕರ್ ಅವರು ಈ ಕುಡಿತದ ದಾಸಕ್ಕೆ ಎಂದಿಗೂ ಕೂಡ ಒಳಗಾಗಬಾರದು ಎಂದಿದ್ದಾರೆ.

ಅಷ್ಟೇ ಅಲ್ಲದೆ ವಿನೋದ್ ಪ್ರಭಾಕರ್ ಎಂದಿಗೂ ಕೂಡ ಒಂದು ಹನಿ ಎಣ್ಣೆಯನ್ನು ಕೂಡ ಮುಟ್ಟಿಲ್ಲವಂತೆ ತಮ್ಮ ತಂದೆಯ ಬಗೆಗಿನ ಜೀವನದ ಕೆಲವು ರಹಸ್ಯಗಳನ್ನು ಹೇಳಿಕೊಳ್ಳುವುದರ ಮೂಲಕ ದಯವಿಟ್ಟು ಯಾರು ಕುಡಿತಕ್ಕೆ ಒಳಗಾಗಬೇಡಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಇದರಿಂದ ಸಾಕಷ್ಟು ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ನನ್ನ ಜೀವನದಲ್ಲಿ ಇದನ್ನು ನಾನು ಕಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Entertainment Tags:Tiger Prabhakar, Vinod Prabhakar
WhatsApp Group Join Now
Telegram Group Join Now

Post navigation

Previous Post: ಅಶ್ವಿನಿ ಪಕ್ಕಾ ನಿಂತಿರುವ ಈ ವ್ಯಕ್ತಿ ಯಾರು ಗೊತ್ತ.? ಅಪ್ಪು ಅ.ಗ.ಲಿ.ದ ಒಂದೇ ವರ್ಷಕ್ಕೆ ದಿಟ್ಟ ನಿರ್ಧಾರ ಕೈಗೊಂಡ ಅಶ್ವಿನಿ.! ಅಭಿಮಾನಿಗಳ ಮನಸ್ಸಲ್ಲಿ ಗೊಂದಲ ಮೂಡಿದೆ.
Next Post: ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore