Friday, June 9, 2023
HomeEntertainmentಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ...

ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.

ರವಿಚಂದ್ರನ್ ಶಿವರಾಜ್ ಕುಮಾರ್

ಚಿತ್ರ ರಂಗ ಎಂಬುದು ಬಣ್ಣದ ಲೋಕ ಇಲ್ಲಿ ಯಾವಾಗ ಯಾರು ಹೇಗೆ ಬೇಕಾದರೂ ಕೂಡ ಬದಲಾಗುತ್ತಾರೆ. ಬಡವ ಶ್ರೀಮಂತನಾಗಬಹುದು ಶ್ರೀಮಂತ ಬಡವನಾಗಬಹುದು ಇದಕ್ಕೆ ಸಾಕಷ್ಟು ಉದಾಹರಣೆಯನ್ನು ನಾವು ನೋಡಿದ್ದೇವೆ. ಆದರೆ ಒಂದು ಕಾಲದಲ್ಲಿ ಇಡೀ ಚಿತ್ರರಂಗವನ್ನು ಆಳುತ್ತಿದ್ದ ಹಾಗೂ ಕೋಟಿ ಕೋಟಿ ಮೌಲ್ಯದ ಬಜೆಟ್ ಹೂಡಿಕೆ ಮಾಡುತ್ತಿದ್ದಂತಹ ರವಿಚಂದ್ರನ್ ಅವರು ಇಂದು ಯಾವ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ.

ರವಿಚಂದ್ರನ್ ಅವರು ಹುಟ್ಟುತ್ತಾ ಆಗರ್ಭ ಶ್ರೀಮಂತರು ಹಾಗೂ ಅವರ ತಂದೆ ನಿರ್ಮಾಪಕರು ಫೈನಾನ್ಸಿಯರ್ ಕೂಡ ಹೌದು ಅಂದಿನ ಕಾಲದಲ್ಲಿ ಕೋಟಿ ಕೋಟಿ ಮೌಲ್ಯದ ಹಣವನ್ನು ಹೂಡಿಕೆ ಮಾಡಿ ಅದ್ದೂರಿಯಾಗಿ ಸಿನಿಮಾ ತೆಗೆಯಿತ್ತಿದ್ದರು. ರವಿಚಂದ್ರನ್ ಸಿನಿಮಾ ಅಂದರೆ ಸಾಕು ಜನ ಹುಚ್ಚೆದ್ದು ನೋಡುತ್ತಿದ್ದರು ಏಕೆಂದರೆ ಆ ಸಿನಿಮಾದ ಮೇಕಿಂಗ್ ಅಷ್ಟರ ಮಟ್ಟಿಗೆ ಇರುತ್ತಿತ್ತು. ಆದರೆ ಇಂದು ರವಿಚಂದ್ರನ್ ಯಾವ ಪರಿಸ್ಥಿತಿಗೆ ಬಂದಿದ್ದಾರೆ ಅಂದರೆ ಇರುವ ಮನೆ ಮಠ ಎಲ್ಲವನ್ನು ಕೂಡ ಕಳೆದುಕೊಂಡು ಬಾಡಿಗೆ ಮನೆಯಲ್ಲಿದ್ದಾರೆ.

ಅಪ್ಪ ಸಂಪಾದನೆ ಮಾಡಿದ ಸಂಪೂರ್ಣ ಆಸ್ತಿಯನ್ನು ಕೂಡ ಕಳೆದುಕೊಂಡಿದ್ದಾರೆ ಎಲ್ಲರೂ ಶೋಕಿಗಾಗಿ ಹಣವನ್ನು ಖರ್ಚು ಮಾಡುತ್ತಾರೆ ಇನ್ನಿತರ ಚಟಕ್ಕಾಗಿ ಹಣವನ್ನು ವ್ಯಯ ಮಾಡುತ್ತಾರೆ. ಆದರೆ ರವಿಚಂದ್ರನ್ ಮಾತ್ರ ಸಿನಿಮಾಗಾಗಿಯೇ ತಮ್ಮ ಸಿರಿ ಸಂಪತ್ತು ಎಲ್ಲವನ್ನು ಕೂಡ ಇದೀಗ ಕಳೆದುಕೊಂಡಿರುವುದು ನಿಜಕ್ಕೂ ವಿಷಾದಕರ ವಿಚಾರವೇ. ರವಿಚಂದ್ರನ್ ಅವರೇ ವೇದಿಕೆಯೊಂದರಲ್ಲಿ ನಾನು ಸಿನಿಮಾಗಾಗಿ ಎಲ್ಲವನ್ನು ಕಳೆದುಕೊಂಡಿದ್ದೇನೆ ನನ್ನ ಆಸೆ ಕನಸು ಗುರಿ ಏನಿದ್ದರೂ ಪ್ರೇಕ್ಷಕರಿಗೆ ಮನರಂಜನೆ ಕೊಡಬೇಕೆಂಬುದಷ್ಟೇ ಎಂದು ಹೇಳಿಕೊಂಡು ಭಾವುಕರಾಗಿದ್ದರು.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರವಿಚಂದ್ರನ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ರವಿಚಂದ್ರನ್ ಮತ್ತು ಶಿವಣ್ಣ ಅವರ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಒಂದು ಮೂಡಿ ಬರುತ್ತಿದೆ ಈ ಸಿನಿಮಾದ ಚಿತ್ರೀಕರಣಕ್ಕೂ ಮುಂಚೆ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವರ ದರ್ಶನವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ದೇವರಿಗೆ ಮಂಗಳಾರತಿಯನ್ನು ಮಾಡಿ ಅದನ್ನು ಮುಂದೆ ನಿಂತಿರುವಂತಹ ಎಲ್ಲರಿಗೂ ಕೊಡುತ್ತಾರೆ.

ರವಿಚಂದ್ರನ್ ಬಳಿ ಬರುವುದಕ್ಕಿಂತ ಮುಂಚೆ ಶಿವಣ್ಣ ಅವರಿಗೆ ರವಿಚಂದ್ರನ್ ಅವರ ಪರಿಸ್ಥಿತಿ ಅರಿವಾಗಿರುತ್ತದೆ ಅದೇ ಸಮಯದಲ್ಲಿ ತಮ್ಮ ಪರ್ಸ್ ನಿಂದ 500 ರೂಪಾಯಿಗಳ ನೋಟನ್ನು ತೆಗೆದುಕೊಂಡು ರವಿಚಂದ್ರನ್ ನೀಡುತ್ತಾರೆ. ಶಿವಣ್ಣನ ಬಳಿ ಹಣವನ್ನು ನಿಸ್ಸಂಕೋಚವಾಗಿ ರವಿಚಂದ್ರನ್ ಪಡೆದು ಅದನ್ನು ಆರತಿ ತಟ್ಟೆಗೆ ಹಾಕುತ್ತಾರೆ. ತದನಂತರ ಮೊದಲು ನಿಮ್ಮ ತಂದೆಯವರು ನನಗೆ ಹಣ ನೀಡುತ್ತಿದ್ದರು ಇದೀಗ ನೀನು ನೀಡುತ್ತಿದೆ ಎಂದು ಹೇಳುತ್ತಾರೆ ರವಿಚಂದ್ರನ್ ಹೇಳಿದ ಮಾತನ್ನು ಕೇಳಿ ಶಿವಣ್ಣ ನಗುತ್ತಾರೆ.

ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ರವಿಚಂದ್ರನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರೆ ಏಕೆಂದರೆ ಒಂದು ಕಾಲದಲ್ಲಿ ಇಂಡಸ್ಟ್ರಿಯಲ್ಲಿ ರಾಜನಂತೆ ಬದುಕಿದ್ದಂತಹ ಈ ಸರದಾರ ಇಂದು ಶಿವಣ್ಣನ ಬಳಿ ಹಣ ಪಡೆದಿದ್ದು ನೋಡಿ ನಿಜಕ್ಕೂ ಕೂಡ ಕಾಲ ಯಾವಾಗ ಹೇಗೆ ಬದಲಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅದೇನೆ ಆಗಲಿ ಆದಷ್ಟು ಬೇಗ ರವಿಚಂದ್ರನ್ ಅವರ ಆರ್ಥಿಕ ಸಂಕಷ್ಟ ಕಡಿಮೆಯಾಗಲಿ, ಉತ್ತಮ ಸಿನಿಮಾ ತೆಗೆದು ಮತ್ತೆ ಮೊದಲಿನ ಸ್ಥಿತಿಗೆ ಬರಲಿ ಎಂದು ರವಿಚಂದ್ರನ್ ಅಭಿಮಾನಿಗಳು ಆಶಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.