Friday, June 9, 2023
HomeEntertainmentಇಂದು ಯಶ್ ಮತ್ತು ರಾಧಿಕಾ ಪಂಡಿತ್ 6ನೇ ವರ್ಷದ ವಿವಾಹ ವಾರ್ಷಿಕೋತ್ಸವ ಪತಿಗಾಗಿ ಭಾವನಾತ್ಮಕ ಸಂದೇಶ...

ಇಂದು ಯಶ್ ಮತ್ತು ರಾಧಿಕಾ ಪಂಡಿತ್ 6ನೇ ವರ್ಷದ ವಿವಾಹ ವಾರ್ಷಿಕೋತ್ಸವ ಪತಿಗಾಗಿ ಭಾವನಾತ್ಮಕ ಸಂದೇಶ ಕಳಿಸಿದ ರಾಧಿಕಾ ಪಂಡಿತ್ ಏನದು ಗೊತ್ತಾ.?

ಯಶ್ ರಾಧಿಕಾ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ವಿಚಾರ ನಿಮಗೆ ತಿಳಿದೇ ಇದೆ. 10 ವರ್ಷದ ಹಿಂದೆಯೇ ಇವರಿಬ್ಬರೂ ಕೂಡ ಸ್ನೇಹಿತರಾಗಿದ್ದರು ಸ್ನೇಹಿತರಾದ ನಂತರ ಐದು ವರ್ಷಗಳ ಕಾಲ ಒಬ್ಬರನ್ನು ಒಬ್ಬರು ಅರಿತುಕೊಂಡು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಎಲ್ಲಿಯೂ ಕೂಡ ರಾಧಿಕಾ ಪಂಡಿತ್ ಯಶ್ ಅವರನ್ನು ಪ್ರೀತಿ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ರಿವೀಲ್ ಮಾಡುವುದಿಲ್ಲ.

ಬಹಳ ಗೌಪ್ಯವಾಗಿಯೇ ಈ ವಿಚಾರವನ್ನು ಮುಚ್ಚಿಡುತ್ತಾರೆ ಮುಂದೊಂದು ದಿನ ಎಂಗೇಜ್ಮೆಂಟ್ ಆಗುವಂತಹ ಸಮಯದಲ್ಲಿ ಈ ವಿಚಾರವನ್ನು ಎಲ್ಲರ ಎದುರು ಬಹಿರಂಗ ಪಡಿಸುತ್ತಾರೆ. ಇನ್ನು ನಟ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಕೂಡ ಒಂದೇ ಕಾಲ ಘಟ್ಟದವರು ಒಟ್ಟಿಗೆ ಮೊದಲ ಬಾರಿಗೆ ಸೀರಿಯಲ್ ನಲ್ಲಿ ನಟನೆ ಮಾಡುತ್ತಾರೆ ತದನಂತರ ಒಟ್ಟಿಗೆ ಒಂದೇ ಸಿನಿಮಾದ ಮೂಲಕ ನಟ ನಟಿಯರಾಗಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡುತ್ತಾರೆ.

ಮೊಗ್ಗಿನ ಮನಸ್ಸು ಎಂಬ ಸಿನಿಮಾದ ಮೂಲಕ ಇವರ ಜರ್ನಿ ಪ್ರಾರಂಭವಾಗುತ್ತದೆ ಅಲ್ಲಿಂದ ಹಿಡಿದು ಇಲಿಯವರೆಗು ಕೂಡ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಇಬ್ಬರೂ ಕೂಡ ತಮ್ಮನ್ನು ಸಹ ಸಕ್ರಿಯವಾಗಿ ಇಟ್ಟುಕೊಂಡಿದ್ದಾರೆ. ಎಂಗೇಜ್ಮೆಂಟ್ ಆದ ನಾಲ್ಕೇ ತಿಂಗಳಿಗೆ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡುತ್ತಾರೆ ಹೌದು

2017 ಡಿಸೆಂಬರ್ 6ನೇ ತಾರೀಕು ಎರಡು ಕುಟುಂಬಸ್ಥರ ಸಮ್ಮತಿಯ ಮೇರೆಗೆ ಅಭಿಮಾನಿಗಳ ಮುಂದೆ ಹಾಗೂ ಸಾಕಷ್ಟು ಗಣ್ಯರ ಎದುರಿಗೆ ರಾಧಿಕಾ ಪಂಡಿತ್ ಯಶ್ ಅವರನ್ನು ಮದುವೆಯಾಗುತ್ತಾರೆ. ಇಂದಿಗೆ ಯಶ್ ರಾಧಿಕಾ ಅವರನ್ನು ಮದುವೆಯಾಗಿ ಆರು ವರ್ಷವಾಗಿದೆ ಈ ಆರು ವರ್ಷದಲ್ಲಿ ಇಬ್ಬರೂ ಕೂಡ ಸಾಂಸಾರಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡಿದ್ದಾರೆ.

ಮದುವೆಯಾದ ಎರಡು ವರ್ಷಗಳ ತನಕ ಒಬ್ಬರನ್ನು ಒಬ್ಬರು ಅರಿತುಕೊಳ್ಳುತ್ತಾರೆ ಎರಡು ಕುಟುಂಬದವರು ಕೂಡ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ತದನಂತರ ಮುದ್ದಾದ ಮಗಳು ಜನಿಸುತ್ತಾಳೆ ಮಗಳು ಹುಟ್ಟಿದ ಒಂದೇ ವರ್ಷಕ್ಕೆ ಮಗ ಕೂಡ ಹುಟ್ಟುತ್ತಾನೆ ಒಟ್ಟಾರೆಯಾಗಿ ಹೇಳುವುದಾದರೆ ಕುಟುಂಬ ಅಂದರೆ ಹೀಗಿರಬೇಕು ಎಂದು ಮಾತನಾಡಿಕೊಳ್ಳುವಂತೆ ಬೆಳೆದು ನಿಲ್ಲುತ್ತಾರೆ.

ಸದ್ಯಕ್ಕೆ ಯಶ್ ಪರಿಪೂರ್ಣ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ ಇನ್ನು ನ್ಯಾಷನಲ್ ಸ್ಟಾರ್ ಆಗಿದ್ದರು ಕೂಡ ಯಶ್ ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ಮೀಸಲಿಡುತ್ತಾರೆ. ತಮ್ಮ ವೃತ್ತಿ ಜೀವನಕ್ಕೆ ಎಷ್ಟು ಬೆಲೆ ಗೌರವವನ್ನು ನೀಡುತ್ತಾರೋ ಅಷ್ಟೇ ಬೆಲೆ ಗೌರವವನ್ನು ತಮ್ಮ ಕುಟುಂಬಕ್ಕೂ ಕೂಡ ನೀಡುತ್ತಾರೆ. ಇನ್ನು ನಟಿ ರಾಧಿಕಾ ಪಂಡಿತ್ ತಮ್ಮ ವಿವಾಹ ವಾರ್ಷಿಕೋತ್ಸವದ ಸಲುವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪತಿಯು ಒಟ್ಟಿಗೆ ಇರುವಂತಹ ಕೆಲವು ಸುಂದರ ಫೋಟೋಗಳನ್ನು ಶೇರ್ ಮಾಡುವುದರ ಮೂಲಕ ತಮ್ಮ ಜೀವನದ ಕೆಲವು ಸುಂದರ ಕ್ಷಣಗಳನ್ನು ಅವಿಸ್ಮರಣೀಯ ಮಾಡಿಕೊಂಡಿದ್ದಾರೆ.

ಈ ಫೋಟೋಗಳ ಅಡಿ ಬರಹದಲ್ಲಿ ಹ್ಯಾಪಿ ಆನಿವರ್ಸರಿ ಮೈ ಲವ್ ನಾವು ಈ ಆರು ವರ್ಷದಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡಿದ್ದೇವೆ ಒಟ್ಟಿಗೆ ಸಿನಿಮಾ ಮಾಡಿದ್ದೇವೆ. ಒಟ್ಟಿಗೆ ಧಾರ್ಮಿಕ ಕಾರ್ಯಗಳನ್ನು ಮಾಡಿದ್ದೇವೆ ಒಟ್ಟಿಗೆ ಎಲ್ಲಾ ಕಡೆಯೂ ಕೂಡ ಹೋಗಿದ್ದೇವೆ ನನ್ನ ಜೀವನವನ್ನು ಇಷ್ಟೊಂದು ಸುಂದರಮಯವನ್ನಾಗಿ ಮಾಡಿದಂತಹ ನಿಮಗೆ ಧನ್ಯವಾದಗಳು ಸಲ್ಲಿಸುತ್ತೇನೆ.

ಜೀವನದ ಕೊನೆಯ ಕ್ಷಣದವರೆಗೂ ಕೂಡ ನಿಮ್ಮೊಟ್ಟಿಗೆ ಬದುಕುವುದಕ್ಕೆ ಇಷ್ಟ ಪಡುತ್ತೇನೆ ಲವ್ ಯು ಫಾರ್ ಎವರ್ ಯಶ್ ಎಂದು ಬರೆದುಕೊಂಡಿದ್ದಾರೆ. ಈ ಬರಹ ಮತ್ತು ಫೋಟೋಗಳನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಯಶ್ ಮತ್ತು ರಾಧಿಕಾ ಜೋಡಿ ಇನ್ನೂ ನೂರು ವರ್ಷಗಳ ಕಾಲ ಒಟ್ಟಾಗಿ ಬದುಕಲಿ ಎಂದು ಹರಸೋಣ ಈ ಜೋಡಿ ಎಂದಿಗೂ ಕೂಡ ಹೀಗೆ ಖುಷಿಯಾಗಿರಲಿ ಎಂಬುದಷ್ಟೇ ನಮ್ಮ ಉದ್ದೇಶ.