LIC ಕನ್ಯಾದಾನ ಪಾಲಿಸಿ ಈ ಹೆಸರೇ ಹೇಳುವಂತೆ ಇದು ಹೆಣ್ಣು ಮಕ್ಕಳಿಗಾಗಿ ಮಾತ್ರ ಇರುವ ಒಂದು ವಿಶೇಷ ಯೋಜನೆಯಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರವು ಭೇಟಿ ಪಡಾವೋ ಬೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಸುಕನ್ಯ ಸಮೃದ್ಧಿ ಯೋಜನೆಯನ್ನು ಆರಂಭಿಸಿತ್ತು. ಪೋಸ್ಟ್ ಆಫೀಸ್ ಗಳಲ್ಲಿ ಅಥವಾ ಹತ್ತಿರದ ಯಾವುದೇ ರಾಷ್ಟೀಯ ಬ್ಯಾಂಕ್ಗಳಲ್ಲಿ ಈ ಯೋಜನೆಯನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ಖರೀದಿಸುವ ಅವಕಾಶವನ್ನು ಅವರ ಹೆತ್ತವರಿಗೆ ಮಾಡಿ ಕೊಟ್ಟಿತ್ತು.
ಈಗ ಅದೇ ರೀತಿ LIC ಕೂಡ ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಹಾಗೂ ಭವಿಷ್ಯದಲ್ಲಿ ಅವರಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಅವರನ್ನು ಹಣಕಾಸು ವಿಷಯದಲ್ಲಿ ಸದೃಢರನ್ನಾಗಿ ಮಾಡಲು LIC ಕನ್ಯಾ ದಾನ ಯೋಜನೆ ಎನ್ನುವ ಹೆಸರಿನ ಹೊಸ ಪಾಲಿಸಿಯನ್ನು ತಂದಿದೆ.
LIC ಕನ್ಯಾ ದಾನ ಪಾಲಿಸಿಯ ಬಗ್ಗೆ ಕೆಲ ಪ್ರಮುಖ ವಿಷಯಗಳು:-
● ಈ ಯೋಜನೆಯಲ್ಲಿ ಮಗುವಿಗೆ ಒಂದು ವರ್ಷ ಪೂರೈಸಿದ ಬಳಿಕವೇ ಅವರ ಪೋಷಕರು ಮಗುವಿನ ಹೆಸರಿನಲ್ಲಿ ಯೋಚನೆಯನ್ನು ಖರೀದಿಸಬಹುದು. ● ಪೋಷಕರಿಗೆ 30 ವರ್ಷ ಹಾಗೂ ಮಗು 1 ವರ್ಷ ಪೂರೈಸಬೇಕು.
● 25 ವರ್ಷಗಳವರೆಗೆ ಪಾಲಿಸಿ ಖರೀದಿಸಬಹುದು, 22 ವರ್ಷಗಳಿಗೆ ಮಾತ್ರ ಪ್ರೀಮಿಯಂ ಪಾವತಿ ಮಾಡಬೇಕು.
● ದಿನಕ್ಕೆ 121 ಅಂದರೆ ತಿಂಗಳಿಗೆ 4,530 ರೂಗಳನ್ನು ಪ್ರೀಮಿಯಂ ಆಗಿ ಪಾವತಿಸಬೇಕು. 22 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಿದರೆ ಸಾಕು 25ನೇ ವರ್ಷದಲ್ಲಿ ಬರೋಬ್ಬರಿ 27 ರಿಂದ 31 ಲಕ್ಷಗಳು ನಿಮ್ಮ ಕೈ ಸೇರಲಿದೆ. ಈ ಯೋಜನೆಯ ಮೆಚ್ಯುರಿಟಿ ಪೀರಿಯಡ್ 25 ವರ್ಷ.
● ಈ ದೊಡ್ಡ ಮೊತ್ತದ ಹಣವೂ ನಿಮ್ಮ ಮಗಳ ವಿದ್ಯಾಭ್ಯಾಸಕ್ಕೆ ಅಥವಾ ಆಕೆ ಉದ್ಯಮ ಶುರು ಮಾಡಲು ಬಯಸಿದರೆ ಬಂಡವಾಳವಾಗಿ ಅಥವಾ ಆಕೆಯ ಮದುವೆ ಖರ್ಚಿಗೆ ಸಹಾಯಕ್ಕೆ ಬರುತ್ತದೆ. ಹೀಗಾಗಿ ಹೆಣ್ಣು ಮಗುವಿನ ಭವಿಷ್ಯಕ್ಕಾಗಿಯೇ ಇರುವ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಬಗ್ಗೆ ದೂರ ದೃಷ್ಟಿ ಹೊಂದಿರುವ ಯೋಜನೆ ಇದಾಗಿದೆ ಎನ್ನುವ ಖ್ಯಾತಿಗೂ ಒಳಗಾಗಿದೆ.
● ಒಂದು ವೇಳೆ ಈ ಪಾಲಿಸಿಯನ್ನು ಖರೀದಿಸಿದವರು ಅಪಘಾತವಾಗಿ ಮರಣ ಹೊಂದಿದ ಪಕ್ಷದಲ್ಲಿ ವಿಮೆ ಹಣವಾಗಿ 10 ಲಕ್ಷ ಹಾಗೂ ಸಾಮಾನ್ಯ ಸಾವಿಗೆ 5 ಲಕ್ಷ ಹಣವನ್ನು ಕಂಪನಿ ನೀಡುತ್ತದೆ.
LIC ಕನ್ಯಾದಾನ ಯೋಜನೆ ಖರೀದಿಸಲು ಬೇಕಾಗುವ ಕಡ್ಡಾಯ ದಾಖಲೆಗಳು:-
● ಹೆಣ್ಣು ಮಗುವಿನ ಮತ್ತು ಆಕೆಯ ಪೋಷಕರ ಆಧಾರ್ ಕಾರ್ಡ್
● ಕುಟುಂಬದ ಆದಾಯ ಪ್ರಮಾಣ ಪತ್ರ
● ಗುರುತಿನ ಚೀಟಿ
● ವಿಳಾಸದ ಪುರಾವೆ
● ಮಗು ಹಾಗೂ ಪೋಷಕರ ಪಾಸ್ಪೋರ್ಟ್ ಅಳತೆಯ ಫೋಟೋ
● ಸ್ವಯಂ ದೃಢೀಕರಿಸಿದ ನಮೂನೆ ಮತ್ತು ಚೆಕ್
● ಮಗುವಿನ ಜನನ ಪ್ರಮಾಣ ಪತ್ರ
● ಕಂಪನಿಯು ಕೇಳುವ ಇನ್ನಿತರ ಪ್ರಮುಖ ದಾಖಲೆಗಳು
ನೀವು ಸಹ ಹೆಣ್ಣು ಮಗುವಿನ ಪೋಷಕರಾಗಿದ್ದರೆ ಈ ಪಾಲಿಸಿ ಬಗ್ಗೆ ಆಸಕ್ತಿ ಹೊಂದಿದ್ದರೆ ಹೆಚ್ಚಿನ ಮಾಹಿತಿಗಾಗಿ LIC ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಿ ಅಥವಾ ಹತ್ತಿರದಲ್ಲಿರುವ LIC ಶಾಖೆಗೆ ಭೇಟಿ ಕೊಡುವ ಮೂಲಕ ಮಾಹಿತಿ ತಿಳಿದುಕೊಳ್ಳಿ ಆಫ್ಲೈನ್ ಅಲ್ಲಿ ಪಾಲಿಸಿಯನ್ನು ಖರೀದಿಸಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಕೂಡ ಹಂಚಿಕೊಳ್ಳಿ.