LIC ಭಾರತೀಯರಿಗೆ ಅತಿ ಹತ್ತಿರವಾಗಿರುವ ಹಣಕಾಸಿನ ಸಂಸ್ಥೆ. LIC ಭಾರತೀಯರಿಗೆ ಅನೇಕ ಯೋಜನೆಗಳನ್ನು ನೀಡಿದೆ. LIC ಜೀವ ವಿಮಾ ಯೋಜನೆ, LIC ನ್ಯೂ ಶಾಂತಿ ಪೆನ್ಷನ್ (858) ಯೋಜನೆ ಇನ್ನು ಮುಂತಾದ ಅನೇಕ ಯೋಜನೆಗಳನ್ನು LIC ನೀಡಿದೆ. ಈ ಲಿಸ್ಟಿಗೆ ಮತ್ತೊಂದು ಹೊಸ ಯೋಚನೆ ಸೇರ್ಪಡೆ ಆಗುತ್ತಿದ್ದು, ಈ ಯೋಜನೆ ಕೂಡ ಎಂದಿನಂತೆ ಗ್ರಾಹಕರಿಗೆ ಅಚ್ಚುಮೆಚ್ಚಿನದ್ದಾಗಿದೆ LIC ಜೀವನ್ ಪ್ರಗತಿ ಪಾಲಿಸಿ ಇದಾಗಿದ್ದು.
ಈ ಯೋಜನೆ ಮೂಲಕ ಹಣವನ್ನು ಶೀಘ್ರವಾಗಿ ದುಪ್ಪಟ್ಟು ಮಾಡಬಹುದಾಗಿದೆ. ಇದರ ಬಗ್ಗೆ ಆಸಕ್ತಿ ಇರುವವರಿಗೆ ಯೋಜನೆ ಬಗ್ಗೆ ತಿಳಿಸುವ ಸಲುವಾಗಿ ಈ ಅಂಕಣದಲ್ಲಿ ಕೆಲವು ಪ್ರಮುಖ ವಿಷಯಗಳನ್ನು ತಿಳಿಸುತ್ತಿದ್ದೇವೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ LIC ಶಾಖೆ ಅಥವಾ LIC ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.
ಯೋಜನೆಯ ಹೆಸರು:- LIC ಜೀವನ್ ಪ್ರಗತಿ ಪಾಲಿಸಿ.
ಯೋಜನೆಯ ಪ್ರಮುಖ ಅಂಶಗಳು:-
● LIC ಜೀವನ್ ಪ್ರಗತಿ ಪಾಲಿಸಿಯನ್ನು 12 ವರ್ಷದವರಿಂದ 45 ವರ್ಷ ವಯಸ್ಸಿನ ಯಾರು ಬೇಕಾದರೂ ಖರೀದಿಸಬಹುದು.
● ಪಾಲಿಸಿ ಅವಧಿ 12 ರಿಂದ 20ವರ್ಷಗಳು.
● ಪಾಲಿಸಿ ಮೆಚುರಿಟಿ ಅವಧಿ ಗರಿಷ್ಠ 65 ವರ್ಷಗಳು
● LIC ಜೀವನ್ ಪ್ರಗತಿ ಪಾಲಿಸಿಯಲ್ಲಿ ಕನಿಷ್ಠ 1,50,000 ದಿಂದ ಗರಿಷ್ಠ ಎಷ್ಟು ಮೊತ್ತದ ಹಣವನ್ನಾದರೂ ಹೂಡಿಕೆ ಮಾಡಬಹುದು.
● ಹೂಡಿಕೆ ಹಣವನ್ನು ಕಂತುಗಳ ಲೆಕ್ಕದಲ್ಲಿ ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಬೇಕಾದರೂ ಹೂಡಿಕೆ ಮಾಡಬಹುದು.
● ಉದಾಹರಣೆಯೊಂದಿಗೆ ಹೇಳುವುದಾದರೆ ಒಬ್ಬ ವ್ಯಕ್ತಿಯು 25 ವರ್ಷದವನಾಗಿದ್ದು ಈ ಪಾಲಿಸಿಯನ್ನು 10 ಲಕ್ಷ ದ ಮೊತ್ತಕ್ಕೆ 20 ವರ್ಷಗಳ ಅವಧಿಗೆ ಖರೀದಿಸಿದರೆ, ಮೊದಲ ವರ್ಷದಲ್ಲಿ 49,899 ಮತ್ತು 2ನೇ ವರ್ಷದಲ್ಲಿ 48,824 ಈ ರೀತಿ ಪ್ರೀಮಿಯಂಗಳನ್ನು ಕಟ್ಟುತ್ತಾ ಬರಬೇಕು.
● ಮಾಸಿಕವಾಗಿ ಪ್ರೀಮಿಯಂಗಳನ್ನು ಕಟ್ಟುವುದಾದರೆ ತಿಂಗಳಿಗೆ 4,918ರೂ. ಮೂರು ತಿಂಗಳಿಗೆ ಕಟ್ಟುವುದಾದರೆ 14,755ರೂ. ಆರು ತಿಂಗಳಿಗೊಮ್ಮೆ ಕಟ್ಟುವುದಾದರೆ 29,212 ರೂಗಳನ್ನು ಕಟ್ಟಬೇಕು.
● ಈ ವ್ಯಕ್ತಿಯ 25 ವರ್ಷದವರಾಗಿದ್ದಾಗ ಈ ಪಾಲಿಸಿ ಖರೀದಿಸಿದ್ದರೆ ಇದರ ಮೆಚುರಿಟಿ ಅವಧಿ 20 ವರ್ಷಕ್ಕೆ ಆರಿಸಿದರೆ ವ್ಯಕ್ತಿಗೆ 45 ವರ್ಷ ಆದಾಗ ಪಾಲಿಸಿಯು ಮೆಚೂರ್ಡ್ ಆಗುತ್ತದೆ. ಆಗ ಸಮ್ ಅಶ್ಯೂರ್ಡ್ ಮೊತ್ತ ಮತ್ತು ಬೋನಸ್ ಹಾಗೂ ಫೈನಲ್ ಅಡಿಷನಲ್ ಬೋನಸ್ ಎಲ್ಲವೂ ಸೇರಿ 18,70,000 ಸಿಗುತ್ತದೆ. ವ್ಯಕ್ತಿ ಕಟ್ಟಿದ ಹಣದ 9,77,555 ರುಪಾಯಿ ಆಗಿರುತ್ತದೆ.
● ಡೆತ್ ಬೆನಿಫಿಟ್ ನೋಡವುದಾದರೆ ಪಾಲಿಸಿ ಮಾಡಿಸಿದ 5 ವರ್ಷ ತುಂಬಿದ ನಂತರ ವ್ಯಕ್ತಿ ಮೃತ ಪಟ್ಟಲ್ಲಿ 100 ಕ್ಕೆ 100ರಷ್ಟು ಅಶ್ಯೂರ್ಡ್ ಅಮೌಂಟ್ ಸಿಗುತ್ತದೆ. ಅಂದರೆ 10 ಲಕ್ಷ ಹಣ ನಾಮಿನಿಗೆ ಸಿಗುತ್ತದೆ.
● ಪಾಲಿಸಿ ಖರೀದಿಸಿದ 6 ವರ್ಷದಿಂದ 10 ವರ್ಷದ ಒಳಗೆ ವ್ಯಕ್ತಿ ಮೃತ ಪಟ್ಟಲ್ಲಿ 125% ಅಂದರೆ 12.5 ಲಕ್ಷ ಹಣ ಸಿಗುತ್ತದೆ.
● 11 ರಿಂದ 15ನೇ ವರ್ಷದ ಸಮಯದಲ್ಲಿ ವ್ಯಕ್ತಿ ಮೃತಪಟ್ಟಲ್ಲಿ ಅಶ್ಯೂರ್ಡ್ ಮೊತ್ತದ 150% ಅಂದರೆ 15 ಲಕ್ಷ ರೂ. ಸಿಗುತ್ತದೆ. 15ನೇ ವರ್ಷದಲ್ಲಿ ವ್ಯಕ್ತಿಯ ಮತ್ತ ಪಟ್ಟಲ್ಲಿ ಬೋನಸ್ ಆಗಿ ಹೆಚ್ಚುವರಿ 6 ಲಕ್ಷ ಸಿಗಲಿದೆ. ಒಟ್ಟಾರೆ 21 ಲಕ್ಷ ನಾಮಿನಿಗೆ ಸಿಗಲಿದೆ.
● 16 ರಿಂದ 20 ವರ್ಷದ ಸಮಯದಲ್ಲಿ ವ್ಯಕ್ತಿ ಮೃತ ಪಟ್ಟಲ್ಲಿ ಅಶ್ಯೂರ್ಡ್ ಮೊತ್ತ 200% ಅಂದರೆ 20 ಲಕ್ಷ ಸಿಗುತ್ತದೆ. 17 ವರ್ಷದಲ್ಲಿ ವ್ಯಕ್ತಿ ಮೃತಪಟ್ಟಲ್ಲಿ 20 ಲಕ್ಷ ಮತ್ತು 6,80,000 ಎಕ್ಸ್ಟ್ರಾ ಬೋನಸ್ ಸೇರಿ 26.8 ಲಕ್ಷ ರೂಗಳು ಅವರು ನಾಮಿನಿ ಮಾಡಿದ ವ್ಯಕ್ತಿಗೆ ಸಿಗಲಿದೆ.
● ಆದರೆ ಈ ಬೆನಿಫಿಟ್ ಗಳು ವ್ಯಕ್ತಿಯ ಸಾವು ಸ್ವಾಭಾವಿಕವಾಗಿದ್ದಾಗ ಮಾತ್ರ ಸಿಗಲಿದೆ, ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.