Friday, June 9, 2023
HomePublic Vishyaಯಾವ ಮುಖ್ಯಮಂತ್ರಿ ಕಾಲದಲ್ಲಿ ಕರ್ನಾಟಕದ ಸಾಲ ಹೆಚ್ಚಾಯಿತು ಗೊತ್ತಾ.? ಯಾರ ಅವಧಿಯಲ್ಲಿ ಎಷ್ಟು ಸಾಲ ಆಗಿತ್ತು...

ಯಾವ ಮುಖ್ಯಮಂತ್ರಿ ಕಾಲದಲ್ಲಿ ಕರ್ನಾಟಕದ ಸಾಲ ಹೆಚ್ಚಾಯಿತು ಗೊತ್ತಾ.? ಯಾರ ಅವಧಿಯಲ್ಲಿ ಎಷ್ಟು ಸಾಲ ಆಗಿತ್ತು ಸಂಪೂರ್ಣ ಮಾಹಿತಿ ಮಾಹಿತಿ ಇಲ್ಲಿದೆ ನೋಡಿ.!

ಕರ್ನಾಟಕ ರಾಜಕೀಯದ ಆಟ ಈಗ ಹಾದಿಬೀದಿ ಜಗಳವಾಗಿ ಹೋಗಿದೆ. ಬಹಿರಂಗವಾಗಿ ಹಾಲಿ ಹಾಗೂ ಮಾಜಿ ಮಂತ್ರಿಗಳು ಎನ್ನುವ ಭೇದವಿಲ್ಲದೆ ಮಾಧ್ಯಮಗಳ ಎದುರೇ ಘಂಟಾಗೋಶವಾಗಿ ಒಬ್ಬರೊಬ್ಬರು ಆರೋಪವನ್ನು ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಮುಖ್ಯ ಆರೋಪ ಏನೆಂದರೆ ಕರ್ನಾಟಕದ ಸಾಲದ ಮೊತ್ತ ಹೆಚ್ಚಾಗಿರುವ ಬಗ್ಗೆ. ಇತ್ತೀಚಿನ ದಿನಗಳಲ್ಲಿ ನೋಡುವುದಾದರೆ ಕರ್ನಾಟಕದಲ್ಲಿ ಪ್ರಭಾವಿ ರಾಜಕೀಯ ಪಕ್ಷಗಳು ಎಂದು ಹೆಸರು ಪಡೆದಿರುವ ಕಾಂಗ್ರೆಸ್ BJP ಮತ್ತು JDS ಮೂರು ಪಕ್ಷದ ನಾಯಕರು ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದಾರೆ.

ಆದರೂ ಕೂಡ ಒಂದು ಪಕ್ಷವು ಪ್ರತಿಪಕ್ಷದ ವಿರುದ್ಧ ಸಾಲ ಮಾಡಿದ್ದೆ ನಿಮ್ಮ ಸಾಧನೆ ಎನ್ನುವ ಆರೋಪವನ್ನು ಮಾಡುತ್ತಿವೆ. BJP ಪಕ್ಷದ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಹಾಗೂ ಕಾಂಗ್ರೆಸ್ ಪಾಳಯದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಕಾಲ ಮತ್ತು JDS ನ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿ ಈ ಮೂರರಲ್ಲಿ ಯಾರ ಅವಧಿಯಲ್ಲಿ ಸಾಲ ಹೆಚ್ಚಾಯಿತು ಎಂದು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2006ರಲ್ಲಿ ಮೊಟ್ಟಮೊದಲಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಿ ಅಧಿಕಾರದ ಚುಕ್ಕಾಣಿ ಹಿಡಿದರು. ಇದು ಕೂಡ ಬಿಜೆಪಿ ಸರ್ಕಾರದ ಮೈತ್ರಿ ಜೊತೆಗೆ. ಇವರು ಮುಖ್ಯಮಂತ್ರಿ ಪದವಿಗೆ ಬಂದಾಗ ಕರ್ನಾಟಕದ ಸಾಲವು 49,587 ಕೋಟಿ ರೂ ಇತ್ತು. 2007 ಮೇ ಅಂತ್ಯಕ್ಕೆ 58,079 ಕೋಟಿ ಆಯಿತು. 2007 ರ ಅಕ್ಟೋಬರ್ ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದರು.

2008ರ ಅಂತ್ಯದ ವೇಳೆಗೆ 60,555 ಕೋಟಿ ಆಗಿತ್ತು, ಒಟ್ಟಾರೆಯಾಗಿ ಕುಮಾರಸ್ವಾಮಿ ಅವರ ಅವಧಿಯಲ್ಲಿ ರಾಜ್ಯದ ಸಾಲವು 11,000 ಕೋಟಿ ಹೆಚ್ಚಾಯಿತು. ರಾಜ್ಯದಲ್ಲಿ BJPಯ ಪ್ರಭಾವಿ ವ್ಯಕ್ತಿ ಎಂದು ಕರೆಸಿಕೊಂಡಿರುವ ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಅವಧಿಯಲ್ಲಿ ಸಾಲ ಎಷ್ಟು ಹೆಚ್ಚಾಯಿತು ಎಂದು ನೋಡುವುದಾದರೆ ಇವರು ಮೊದಲು ಸಿಎಂ ಆಗಿದ್ದು 2007ರಲ್ಲಿ ಆದರೆ ಒಂದೇ ವಾರಕ್ಕೆ JDS ಪಕ್ಷವು ತನ್ನ ಬೆಂಬಲ ಹಿಂಪಡೆದ್ದರಿಂದ ಇವರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು.

ನಂತರ 2008ರಲ್ಲಿ ವಿಧಾನಸಭಾ ಎಲೆಕ್ಷನ್ ನಡೆದಾಗ ಸ್ಪಷ್ಟ ಬಹುಮತದೊಂದಿಗೆ BJP ಅಧಿಕಾರಕ್ಕೆ ಬಂತು ಆಗಲು ಸಹ ಯಡಿಯೂರಪ್ಪನವರ ಮುಖ್ಯಮಂತ್ರಿಯಾದರು. ಅವರು ಅಧಿಕಾರಕ್ಕೆ ಏರಿದಾಗ ರಾಜ್ಯದ ಸಾಲವು 60,555 ಕೋಟಿ ಇತ್ತು. 2009 ಮಾರ್ಚ್ ಅಂತ್ಯದ ವೇಳೆಗೆ 65,219 ಕೋಟಿ, 2010ರಲ್ಲಿ 84,534 ಕೋಟಿ 2011 ರಲ್ಲಿ 93,447 ಕೋಟಿ ಆಯಿತು. 2011 ಆಗಸ್ಟ್ ವೇಳೆಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಡೆ ಇಳಿದರು ಅಲ್ಲಿಯವರೆಗೂ ಮೂರು ವರ್ಷದಲ್ಲಿ ಅವರ ಅವಧಿಯಲ್ಲಿ ಹೆಚ್ಚಾದ ಸ್ಥಳದ ಮೊತ್ತ 33,000 ಕೋಟಿ.

ಬಳಿಕ ಸದಾನಂದ ಗೌಡ ಅವರು 2012ರಲ್ಲಿ ಮತ್ತು ಜಗದೀಶ್ ಶೆಟ್ಟರ್ ಅವರು 2013 ಮುಖ್ಯಮಂತ್ರಿ ಆಗಿದ್ದರು. 2013ರ ಎಲೆಕ್ಷನ್ ವೇಳೆಗೆ ಕರ್ನಾಟಕ ರಾಜ್ಯದ ಸಾಲದ ಮೊತ್ತವು 1,12,667 ಕೋಟಿಗೆ ಏರಿತ್ತು. ಬಳಿಕ 2013ರ ಎಲೆಕ್ಷನ್ ಬಳಿಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಜಾರಿಗೆ ಬಂತು, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯು ಆದರು, ಸಂಪೂರ್ಣ 5 ವರ್ಷಗಳ ಮುಖ್ಯಮಂತ್ರಿ ಆಗಿದ್ದರು.

ಆ ಅವಧಿಯಲ್ಲಿ ನೋಡುವುದಾದರೆ 2013ರಲ್ಲಿ 1,12,667 ಕೋಟಿ ಇದ್ದ ಸಾಲವು 2018ರಲ್ಲಿ 2,45,951 ಕೋಟಿ ಆಯಿತು. ಅಂದರೆ ಬರೋಬರಿ 5 ವರ್ಷದಲ್ಲಿ 1,33,000 ಕೋಟಿ ಸಾಲದ ಹೊರೆಯು ಕರ್ನಾಟಕದ ರಾಜ್ಯದ ಮೇಲೆ ಬಿತ್ತು. ನಂತರ ಆದ ಬೆಳವಣಿಗೆಗಳು ಹಾಗೂ ಈಗ ಕರ್ನಾಟಕ ರಾಜ್ಯದ ಮೇಲೆ ಈಗ ಇರುವ ಸಾಲದ ಮೊತ್ತವನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.