Sunday, May 28, 2023
HomeUseful Informationಸಿದ್ದು CM ಆಗುತ್ತಿದ್ದ ಹಾಗೇ ಬಿಗ್ ಶಾ-ಕ್ ಕೊಟ್ಟಿದ್ದಾರೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಸಿಗಬೇಕು...

ಸಿದ್ದು CM ಆಗುತ್ತಿದ್ದ ಹಾಗೇ ಬಿಗ್ ಶಾ-ಕ್ ಕೊಟ್ಟಿದ್ದಾರೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಸಿಗಬೇಕು ಅಂದ್ರೆ ನಿಮ್ಮ ಬಳಿ ಈ ಕಾರ್ಡ್ ಇರಬೇಕು ಇಲ್ಲದಿದ್ದರೆ ಹಣ ಸಿಗಲ್ಲ.!

ಕರ್ನಾಟಕದಲ್ಲಿ ಹೊಸ ಸರ್ಕಾರ ಸ್ಥಾಪನೆ ಆಗುತ್ತಿದೆ. ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ರಾಜ್ಯದ ಅಧಿಕಾರದ ಹಿಡಿದಿದೆ. ಇದರ ಬೆನ್ನಲ್ಲೇ ಜನಸಾಮಾನ್ಯರಿಂದ ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ಕೊಟ್ಟಿದ್ದ ಭರವಸೆಗಳನ್ನು ಜಾರಿಗೆ ತರುವಂತೆ ಒತ್ತಡ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷವು ನೀಡಿದ ಐದು ಗ್ಯಾರಂಟಿ ಕಾರ್ಡ್ ಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ ಅಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ಸಹಾಯಧನ ಕೊಡಲಾಗುತ್ತದೆ.

ಎನ್ನುವುದು ಈಗ ಕಾಂಗ್ರೆಸ್ ಪಕ್ಷದ ಸರ್ಕಾರ ಸ್ಥಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಸಹಾಯಧನ ಪಡೆಯುವುದು ಹೇಗೆ? ಮತ್ತು ಕಂಡಿಷನ್ ಗಳು ಏನೆಲ್ಲಾ ಇರಬಹುದು ಎನ್ನುವುದರ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಕಾರ್ಡ್ಗಳನ್ನು ಘೋಷಣೆ ಮಾಡಿದ ಸಂದರ್ಭದಲ್ಲಿಯೇ ಸ್ಪಷ್ಟವಾಗಿ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಯಜಮಾನಿಗೆ ಈ ಸಹಾಯಧನ ನೀಡಲಾಗುವುದು ಎಂದು ಹೇಳಿದ್ದರಿಂದ.

ಫಲಾನುಭವಿಗಳನ್ನು ಗುರುತಿಸುವುದಕ್ಕೆ ಅರ್ಜಿ ಆಹ್ವಾನ ಮಾಡುವ ಬದಲು ರೇಷನ್ ಕಾರ್ಡ್ ಮೂಲಕವೇ ಫಲಾನುಭವಿಗಳನ್ನು ಗುರುತಿಸಬಹುದು ಎನ್ನುವುದು ಕೆಲವರ ಅಭಿಪ್ರಾಯ. ಯಾಕೆಂದರೆ ಈಗ ಸರ್ಕಾರದ ಯಾವುದೇ ಯೋಚನೆಯ ಸಹಾಯಧನಗಳಾದರು ಕೂಡ ನೇರವಾಗಿ DBT ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ.

ಒಂದು ಬಾರಿ ಅರ್ಜಿ ಸಲ್ಲಿಸಿ ಮಾಹಿತಿ ಕೊಟ್ಟಿದ್ದೇ ಆದಲ್ಲಿ ಅಭ್ಯರ್ಥಿಗಳ ಯಾವ ಬ್ಯಾಂಕ್ ಖಾತೆಯು NPCI ಗೆ ಲಿಂಕ್ ಆಗಿರುತ್ತದೆ ಆ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಈಗ ಇದೇ ಮಾನದಂಡ ಇಟ್ಟುಕೊಂಡು ಫಲಾನುಭವಿಗಳನ್ನು ಗುರುತಿಸಿದರೆ ಸರಕಾರಕ್ಕೆ ಮನೆಯ ಯಜಮಾನರ ಗುರುತಿಸುವಿಕೆ ಸರಳವಾಗುತ್ತದೆ. ಬಹುತೇಕ ಎಲ್ಲಾ ರೇಷನ್ ಕಾರ್ಡ್ ಗಳು ಕೂಡ ಮಹಿಳೆಯ ಹೆಸರುಗಳಲ್ಲೇ ಇವೆ ಮನೆಯ ಉಳಿದ ಸದಸ್ಯರ ಹೆಸರುಗಳು ನಂತರದಲ್ಲಿ ಇದೆ.

ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ಈ ಸಹಾಯಧನ ಸಿಗುತ್ತಿರುವುದರಿಂದ ಇದೇ ಮಾನದಂಡ ಪ್ರಯೋಗ ಮಾಡಿದರೆ ಯಾವ ಮಹಿಳೆಯ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ ಮತ್ತು ಆ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆಯೋ ಆ ಖಾತೆಗೆ ಯಾವುದೇ ಅರ್ಜಿ ಆಹ್ವಾನ ಮಾಡದೆ ಸಹಾಯಧನ ವರ್ಗಾವಣೆ ಮಾಡಬಹುದು.

ಸರ್ಕಾರ ಇದನ್ನೇ ಪರಿಣನೆಗೆ ತೆಗೆದುಕೊಂಡರೆ ಒಂದು ಬಾರಿ ಈ ರೀತಿ ಸಹಾಯಧನವನ್ನು ಪಡೆದರೆ ಅದು ಖಾಯಂ ಆಗಿ ಯೋಜನೆ ಜಾರಿಯಲ್ಲಿ ಇರುವಷ್ಟು ವರ್ಷಗಳವರೆಗೂ ಬರಲಿದೆ. ಆದರೆ ಈ ಪ್ರಯೋಜನ ಬಿಪಿಎಲ್ ಮತ್ತು ಎ ವೈ ರೇಷನ್ ಕಾರ್ಡ್ ಹೊಂದಿ ಆಧಾರ್ ಲಿಂಕ್ ಮಾಡಿಸಿರುವ ಮಹಿಳೆಯರಿಗೆ ಮಾತ್ರ ಸಿಗಲಿದೆ. ಕೂಡ ಆಗಲಿದೆ. ಇದರ ಬದಲು ಸರ್ಕಾರ ಏನಾದರೂ ಅರ್ಜಿ ಆಹ್ವಾನಿಸಿ ಇನ್ನಷ್ಟು ದಾಖಲೆಗಳ ಪತ್ರಗಳನ್ನು ಕೇಳಿ ಕಂಡಿಷನ್ ಗಳನ್ನು ಹೇರಿ ಯೋಜನೆಯನ್ನು ಜಾರಿಗೆ ತರುವುದಾದರೆ ಹಲವು ಫಲಾನುಭವಿಗಳು ಇದರಿಂದ ವಂಚಿತರಾಗಬಹುದು.

ಮೊದಲಿಗೆ ಸರ್ಕಾರ ಎಲ್ಲರಿಗೂ ಉಚಿತ ಎಂದು ಘೋಷಣೆ ಮಾಡಿದ್ದರೂ ನಿಧಾನವಾಗಿ ಒಂದೊಂದೇ ಯೋಜನೆಗಳ ಮೇಲೆ ನಿಯಮಗಳನ್ನು ಹೇರುತ್ತಿದೆ. ಈ ಬಗ್ಗೆ ಈ ಪರಮೇಶ್ವರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಶೀಘ್ರವಾಗಿಯೇ ಮೊದಲ ಕ್ಯಾಬಿನೆಟ್ ಅಲ್ಲಿಯೇ ಯೋಜನೆಗಳ ಜಾರಿಗೆ ಆದೇಶ ಹೊರ ಬೀಳಲಿದೆ ಎಂದಿರುವುದರಿಂದ ಅಂತಿಮವಾಗಿ ಸರ್ಕಾರ ನಿಲುವು ಏನು ಎನ್ನುವುದನ್ನು ತಿಳಿದುಕೊಳ್ಳಲು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.