Home Useful Information ಪಲಾವ್ ಎಲೆಗೆ ಇರುವ ಶಕ್ತಿ ಎಂತಹದ್ದು ಗೊತ್ತಾ.? ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಪಲಾವ್ ಎಲೆಯ ಈ ತಂತ್ರದಿಂದ ಪರಿಹಾರ ಮಾಡಬಹುದು.!

ಪಲಾವ್ ಎಲೆಗೆ ಇರುವ ಶಕ್ತಿ ಎಂತಹದ್ದು ಗೊತ್ತಾ.? ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಪಲಾವ್ ಎಲೆಯ ಈ ತಂತ್ರದಿಂದ ಪರಿಹಾರ ಮಾಡಬಹುದು.!

0
ಪಲಾವ್ ಎಲೆಗೆ ಇರುವ ಶಕ್ತಿ ಎಂತಹದ್ದು ಗೊತ್ತಾ.? ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಪಲಾವ್ ಎಲೆಯ ಈ ತಂತ್ರದಿಂದ ಪರಿಹಾರ ಮಾಡಬಹುದು.!

 

ಇದುವರೆಗೆ ಪಲಾವ್ ಎಲೆಯನ್ನು ಒಂದು ಮಸಾಲೆ ಪದಾರ್ಥ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಆದರೆ ಪಲಾವ್ ಎಲೆಗೆ ಆಹಾರದ ರುಚಿ ಹೆಚ್ಚಿಸುವ ಗುಣದ ಜೊತೆಗೆ ವಿಶೇಷ ತಂತ್ರ ಶಕ್ತಿಯು ಕೂಡ ಇದೆ. ಪಲಾವ್ ಎಲೆಯನ್ನು ಬಳಸಿಕೊಂಡು ಕೆಲವೊಂದು ತಂತ್ರಗಳನ್ನು ಮಾಡುವ ಮೂಲಕ ನಾವು ನಮ್ಮ ಜೀವನದ ಅನೇಕ ಸಮಸ್ಯೆಗಳನ್ನು ಹಾಗೂ ನಮ್ಮ ಕುಟುಂಬದ ಅನೇಕ ಕೌಟುಂಬಿಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.

ಇಂದು ಈ ಅಂಕಣದಲ್ಲಿ ಪಲಾವ್ ಎಲೆಗೆ ಇರುವ ಅದ್ಭುತ ಚಮತ್ಕಾರಿ ಶಕ್ತಿಯ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

ಪಲಾವ್ ಎಲೆಯಿಂದ ಹೇಗೆ ತಂತ್ರ ಮಾಡಬೇಕು:-
ಮೊದಲನೇ ದಿನ ಶುದ್ಧ ಮನಸ್ಸಿನಿಂದ ದೇವರ ಪೂಜೆ ಮಾಡಿ ನಿಮ್ಮ ಯಾವ ಸಮಸ್ಯೆ ಪರಿಹಾರ ಆಗಬೇಕು ಎನ್ನುವುದರ ಬಗ್ಗೆ ಸಂಕಲ್ಪ ಮಾಡಿಕೊಳ್ಳಿ, ಬಹಳ ನಂಬಿಕೆ ಹಾಗೂ ಶ್ರದ್ಧೆಯಿಂದ ಈ ತಂತ್ರವನ್ನು ಮಾಡಿದರೆ ಶೀಘ್ರವಾಗಿ ಇದು ಕೆಲಸ ಮಾಡುತ್ತದೆ.

ಒಂದು ಪಲಾವ್ ಎಲೆಯನ್ನು ತೆಗೆದುಕೊಳ್ಳಿ ಆ ಪಲಾವ್ ಎಲೆ ಅರಿದಿರಬಾರದು, ರಂಧ್ರವಾಗಿರಬಾರದು ಮತ್ತು ಅದರ ಮೇಲೆ ಯಾವುದೇ ಕಲೆ ಇರಬಾರದು ಆ ರೀತಿಯ ಪಲಾವ್ ಎಲೆ ತೆಗೆದುಕೊಂಡು ನೀಲಿ ಬಣ್ಣದ ಪೆನ್ನಿನಿಂದ ನಿಮ್ಮ ಕೋರಿಕೆ ಏನು ಎನ್ನುವುದನ್ನು ಪಾಸಿಟಿವ್ ಆಗಿ ಬರೆಯಿರಿ. ಉದಾಹರಣೆಗೆ ನಿಮಗೆ ಬೇಗ ಉದ್ಯೋಗ ಸಿಗಬೇಕು ಎಂದಿದ್ದರೆ ನನಗೆ ನನ್ನ ಕನಸಿನ ಉದ್ಯೋಗ ಸಿಕ್ಕಿತು ಎಂದು ಬರೆಯಿರಿ.

ನಂತರ ಆ ಪಲಾವ್ ಎಲೆಯನ್ನು ಸುಟ್ಟು ಬೂದಿ ಮಾಡಿ, ಆ ಬೂದಿಯನ್ನು ಮನೆಯಿಂದ ಹೊರಗೆ ತಂದು ಊದಿಬಿಡಿ. ತಪ್ಪದೇ ನಿರಂತರವಾಗಿ 21 ದಿನಗಳು ಈ ತಂತ್ರವನ್ನು ಮಾಡುವುದರಿಂದ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ. ನಿಮ್ಮ ಯಾವುದೇ ಕೋರಿಕೆ ಇದ್ದರೂ ಕೂಡ ಅದು ಶೀಘ್ರವಾಗಿ ನೆರವೇರುತ್ತದೆ.

ಪಲಾವ್ ಎಲೆಯ ತಂತ್ರವು ಪರಿಹಾರ ಮಾಡುವ ಸಮಸ್ಯೆಗಳು:-
● ನಮ್ಮ ಜೀವನದ ದೈನಂದಿಕ ಜಂಜಾಟಗಳಾದ ನಿರುದ್ಯೋಗ ಸಮಸ್ಯೆ, ಹಣ-ಆಸ್ತಿ ವಿಚಾರದಲ್ಲಿ ಸಂಬಂಧಿಕರ ನಡುವೆ ಕಲಹ, ಕುಟುಂಬದಲ್ಲಿ ಸದಸ್ಯರ ನಡುವೆ ಮನಸ್ತಾಪ, ಗಂಡ ಹೆಂಡತಿ ನಡುವೆ ಸದಾ ಜಗಳ, ಪ್ರಮೋಷನ್ ಸಿಗದೇ ಇರುವುದು, ಓದಿನಲ್ಲಿ ಏಕಾಗ್ರತೆ ಇಲ್ಲದೆ ಇರುವುದು, ಮದುವೆ ವಿಳಂಬ, ಸಂತಾನ ಸಮಸ್ಯೆ, ಬಿಜಿನೆಸ್ ಲಾಸ್ ಆಗುತ್ತಿರುವುದು, ಸಾಲ ಕೊಟ್ಟವರು ವಾಪಸ್ ಕೊಡದೆ ಇರುವುದು ಸಾಲಗಾರರ ಕಾಟ ಇನ್ನು ಮುಂತಾದ ಅನೇಕ ಸಮಸ್ಯೆಗಳು ಪರಿಹಾರ ಆಗುತ್ತವೆ.

● ಯಾವುದೇ ಕೋರಿಗಳು ಇದ್ದರೂ ಕೂಡ ಅದನ್ನು ಸಹ ಬರೆದುಕೊಳ್ಳಬಹುದು, ಆಗ ಆ ಕೋರಿಕೆಗಳು ನೆರವೇರುತ್ತವೆ. ಉದಾಹರಣೆಗೆ ಮನೆ ಕಟ್ಟಿಸಬೇಕು, ಆಸ್ತಿ ಖರೀದಿಸಬೇಕು, ಚಿನ್ನಾಭರಣ ಖರೀದಿಸಬೇಕು ವಾಹನ ಖರೀದಿಸಬೇಕು ಇನ್ನು ಮುಂತಾದ ಯಾವುದೇ ಕೋರಿಕೆಗಳಿದ್ದರೂ ಬರೆಯಬಹುದು.

● ಆಲಸ್ಯ, ಅಂಗಾಂಗಗಳ ನೋವು ಸೇರಿದಂತೆ ದೀರ್ಘ ಕಾಲದಿಂದ ಬಳಲುತ್ತಿರುವ ಅನಾರೋಗ್ಯ ಸಮಸ್ಯೆಗಳಿಗೂ ಕೂಡ ಈ ತಂತ್ರ ಪರಿಣಾಮಕಾರಿಯಾಗಿ ಪರಿಹಾರ ನೀಡುತ್ತದೆ.
● ನಿಮ್ಮ ಕುಟುಂಬದ ಮೇಲೆ ಕೆಟ್ಟ ಕಣ್ಣು ಬಿದ್ದು ದೃಷ್ಟಿ ದೋಷ ಆಗಿದ್ದರೂ ಕೂಡ ಆ ದೋಷವೆಲ್ಲಾ ನಿವಾರಣೆ ಆಗುತ್ತದೆ.
● ಜಿರಳೆ, ಪತಂಗ ಇನ್ನು ಮುಂತಾದ ಕೀಟಬಾಧೆಯಿಂದ ಸಮಸ್ಯೆ ಇದ್ದರೂ ಕೂಡ ಅದೆಲ್ಲವೂ ಪರಿಹಾರ ಆಗುತ್ತದೆ.

● ಕೆಲವರಿಗೆ ಮನಸಿನಲ್ಲಿ ಯಾವಾಗಲೂ ಒಂದು ಆತಂಕ ಭಯದ ವಾತಾವರಣ ಇರುತ್ತದೆ ಅಂತವರು ಕೂಡ ಈ ತಂತ್ರ ಮಾಡಿದರೆ ಅವರ ಮನಸ್ಸು ಶಾಂತವಾಗುತ್ತದೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಉಂಟಾಗುತ್ತದೆ.

LEAVE A REPLY

Please enter your comment!
Please enter your name here