ಪುನೀತ್ ರಾಜಕುಮಾರ್ ಎಂದರೆ ಅವರು ಒಬ್ಬ ಕಲಾವಿದ ಮಾತ್ರವಲ್ಲ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಅಭಿಮಾನಿಗಳೆಲ್ಲರ ಅಭಿಮಾನದ ದೇವರು ಎಂದೇ ಹೇಳಬಹುದು. ಇವರು ತೆರೆಮೇಲೆ ಮಾತ್ರ ಹೀರೋ ಆಗಿರದೆ ನಿಜ ಜೀವನದಲ್ಲಿ ಸಹಾ ತಮ್ಮ ಸರಳ ವ್ಯಕ್ತಿತ್ವ ಹಾಗೂ ಸೇವಾಗುಣದಿಂದ ಎಲ್ಲರ ಮನಗೆದ್ದು, ನಮ್ಮ ಅಪ್ಪು ಈಗ ಮನೆಮನೆಗಳಲ್ಲಿ ಪೂಜೆ ಮಾಡಿಸಿ ಕೊಳ್ಳುವಂತಹ ದೇವರೇ ಆಗಿಬಿಟ್ಟಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ನೀವು ಈಗ ಯಾವುದೇ ಮನೆಗಳಿಗೆ ಭೇಟಿ ನೀಡಿದರು ಅಲ್ಲಿ ಸಣ್ಣದಾದರೂ ಒಂದು ಪುನೀತ್ ರಾಜಕುಮಾರ್ ಅವರ ಫೋಟೋ ಇರುತ್ತದೆ. ಇನ್ನು ಹೇಳಬೇಕು ಎಂದರೆ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಹೋದ ದಿನದಿಂದ ಹಿಡಿದು ಈ ದಿನದ ವರೆಗೂ ಹಲವಾರು ಫೋಟೋ ಅಂಗಡಿಗಳ ಮಾಲೀಕರೇ ಹೇಳುವಂತೆ ಎಲ್ಲಾ ಫೋಟೋ ಗಳಿಗಿಂತ ಹೆಚ್ಚಾಗಿ ಪುನೀತ್ ರಾಜಕುಮಾರ್ ಅವರ ಫೋಟೋಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ ಅಂತೆ.
ಅದೆಷ್ಟೋ ಮದುವೆಮನೆಗಳಲ್ಲಿ ಮದುಮಕ್ಕಳಿಗೆ ಬಂದಿರುವ ಗಿಫ್ಟ್ ಗಳನ್ನು ನೋಡಿದರೆ ಅದರಲ್ಲಿ ನಾಲ್ಕೈದು ಆದರೂ ಪುನೀತ್ ರಾಜಕುಮಾರ್ ಅವರ ಫೋಟೋ ಗಿಫ್ಟ್ ಆಗಿ ಬಂದಿರುತ್ತದೆ. ಇಂದಿಗೂ ಸಹ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಫ್ಲಕ್ಸ್ ಗಳನ್ನು ತೆಗೆಯಲು ಯಾರಿಗೂ ಮನಸ್ಸು ಬರದೆ ಇಂದಿಗೂ ಸಹ ಅವುಗಳು ಎಲ್ಲಾ ಕಡೆ ಕಾಣಸಿಗುವುದೇ ಕನ್ನಡಿಗರು ಪುನೀತ್ ರಾಜಕುಮಾರ್ ಅವರ ಮೇಲೆ ಎಷ್ಟರ ಮಟ್ಟಿಗೆ ಅಭಿಮಾನ ಇಟ್ಟಿದ್ದಾರೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎನ್ನಬಹುದು. ಪುನೀತ್ ರಾಜಕುಮಾರ್ ಒಬ್ಬ ನಟನಾಗಿ ಚಿಕ್ಕ ವಯಸ್ಸಿನಲ್ಲಿ ಅದ್ಭುತವಾದ ಅಭಿನಯದಿಂದ ಎಲ್ಲರ ಮನಗೆದ್ದಿದ್ದರು. ಉತ್ತಮವಾದ ಕಂಠ, ಒಳ್ಳೆಯ ಡ್ಯಾನ್ಸ್ ಹಾಗೂ ತೀರ ಸಹಜ ಎನ್ನುವಂತಹ ಅಮೋಘ ನಟನೆ ಇವುಗಳ ಮೂಲಕ ಚಿಕ್ಕವಯಸ್ಸಿನಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾವಂತ. ಇವರ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಎಲ್ಲರಿಗೂ ಸಹ ಪುನೀತ್ ರಾಜ್ ಕುಮಾರ್ ಎಂದರೆ ಪಂಚಪ್ರಾಣ.
ಆದರೆ ಅವರ ಮೇಲಿದ್ದ ಅಭಿಮಾನ ಮತ್ತೊಂದು ಮಟ್ಟಕ್ಕೆ ಹೆಚ್ಚಾಗಿದ್ದು ಅವರು ಸಮಾಜಕ್ಕೆ ಮಾಡುತ್ತಿದ್ದ ಸೇವೆ ಎಂಥದ್ದು ಎಂದು ತಿಳಿದ ಬಳಿಕವೇ. ನಿಜಕ್ಕೂ ಪುನೀತ್ ರಾಜಕುಮಾರ್ ಅವರು ನಮ್ಮ ಕನ್ನಡದ ಜನತೆಗೆ ಮಾಡಿರುವ ಉಪಕಾರವನ್ನು ಇದುವರೆಗೆ ಯಾವ ಹೀರೋ ಕೂಡ ಮಾಡಿರಲಿಲ್ಲ ಎಂದೇ ಹೇಳಬಹುದು. ಯಾವ ಪ್ರಚಾರವನ್ನು ಬಯಸದೆ ತಮ್ಮ ಪಾಡಿಗೆ ತಾವು ನೊಂದವರ ಕಣ್ಣೀರು ಒರೆಸುವ ಮತ್ತು ರೈತರಿಗೆ ಹಾಗೂ ಬಡ ಹೆಣ್ಣುಮಕ್ಕಳಿಗೆ ಸಹಾಯವನ್ನು ಮಾಡುತ್ತಿದ್ದರು ಈ ಮಾಣಿಕ್ಯ. ಅವರ ಸಹೃದಯ ಎಷ್ಟರಮಟ್ಟಿಗೆ ಇತ್ತು ಎನ್ನುವುದು ಹಾಗೂ ಅವರು ಈ ನೆಲಕ್ಕೆ ಮಾಡಿರುವ ಸೇವೆ ಏನು ಎನ್ನುವುದು ಎಲ್ಲರಿಗೂ ಅರಿವಾದದ್ದು ಅವರ ಅಗಲಿಕೆಯ ನಂತರವೇ ಆದರೆ ಆ ಬಳಿಕವಂತೂ ಕನ್ನಡಿಗರು ಪುನೀತ್ ರಾಜಕುಮಾರ್ ಅವರನ್ನು ಒಬ್ಬ ದೇವರ ರೀತಿಯಲ್ಲಿ ಕಾಣಲು ಶುರು ಮಾಡಿದರು.
ಇಂದಿಗೂ ಅದೆಷ್ಟೋ ಮನೆಗಳಲ್ಲಿ ದೇವರಫೋಟೋ ಪಕ್ಕ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಇಟ್ಟಿದ್ದಾರೆ ಹಾಗೆಯೇ ಎಷ್ಟೋ ಊರುಗಳ ತೇರುಗಳ ಸಮಯದಲ್ಲಿ ರಾಜಕುಮಾರ್ ಅವರ ಫೋಟೋವನ್ನು ಸಹ ತಲೆಮೇಲೆ ಹೊತ್ತು ಮೆರೆಸಿದ್ದಾರೆ. ಸಿನಿಮಾ ತಾರೆಗಳನ್ನು ಸೇರಿದಂತೆ ಎಷ್ಟೋ ಜನರ ಕೈಗಳ ಮೇಲೆ ಪುನೀತ್ ರಾಜಕುಮಾರ್ ಅವರ ಹೆಸರು ಹಾಗೂ ಮೊದಲಕ್ಷರವನ್ನು ಟ್ಯಾಟೂ ಹಾಕಿಸಿಕೊಂಡವರ ಸಂಖ್ಯೆಗೇನು ಕಡಿಮೆಯಿಲ್ಲ. ಹಾಗೂ ಎಷ್ಟೋ ಜನ ಆಟೋ ಚಾಲಕರು ಹಾಗೂ ಕ್ಯಾಬ್ ಡ್ರೈವರ್ ಗಳು ತಮ್ಮ ಆಟೋ ಮತ್ತು ಕಾರಿನ ಹಿಂದೆ ಪುನೀತ್ ಅವರ ಭಾವಚಿತ್ರವನ್ನು ಹಾಕಿಸಿಕೊಂಡಿದ್ದಾರೆ. ಆದರೆ ವಿಷಯ ಈಗ ಏನಪ್ಪಾ ಎಂದರೆ ಈ ರೀತಿ ಕಾರಿನ ಮೇಲೆ ಪುನೀತ್ ರಾಜಕುಮಾರ್ ಅವರ ಫೋಟೋ ಹಾಗೂ ಕನ್ನಡದ ಚಿತ್ರವನ್ನು ಹಾಕಿಸಿಕೊಂಡಿದ್ದ ವ್ಯಕ್ತಿಗೆ ತಿರುಮಲದಲ್ಲಿ ಒಳಗೆ ಪ್ರವೇಶ ನೀಡದೆ ರಕ್ಷಣಾ ಸಿಬ್ಬಂದಿ ತಡೆದಿದ್ದಾರೆ ಹಾಗೂ ಪುನೀತ್ ರಾಜಕುಮಾರ್ ಅವರ ಚಿತ್ರ ಮತ್ತು ಕನ್ನಡ ಧ್ವಜದ ಚಿತ್ರವನ್ನು ಕಿತ್ತು ಹಾಕುವಂತೆ ಮಾಡಿದ್ದಾರೆ.
ಆಂಧ್ರ ಸರ್ಕಾರವು ತಿರುಮಲ ದೇವಸ್ಥಾನಕ್ಕೆ ಯಾವುದೇ ರಾಜ್ಯದವರು ಬಂದರು ಅವರ ಧ್ವಜ ಹಾಗೂ ಅದರ ಚಿತ್ರಗಳು ವಾಹನಗಳ ಮೇಲೆ ಇದ್ದರೆ ಪ್ರವೇಶ ನೀಡುವುದಿಲ್ಲ. ಆದರೆ ನಮ್ಮ ರಾಜಕೀಯದವರು ಹಾಗೂ ಸಿನಿಮಾದವರು ತೆಲುಗು ಸಿನಿಮಾಗಳಿಗೆ ಹಾಗೂ ತೆಲುಗು ಭಾಷೆಯ ಬಗ್ಗೆ ತುಂಬಾ ಸಹಕಾರ ಭಾವನೆಯನ್ನು ತೋರುತ್ತಾರೆ. ಅವರ ಭಾಷೆಗಳನ್ನು ಗೌರವಿಸುವಂತೆ ಅವರ ಸಿನಿಮಾಗಳನ್ನು ನೋಡುವಂತೆ ಹೇಳುತ್ತಾರೆ ಆದರೆ ನಮ್ಮ ಕನ್ನಡಿಗರೆಲ್ಲರ ಭಾವನೆ ಆಗಿರುವಂತಹ ಪುನೀತ್ ರಾಜಕುಮಾರ್ ಅವರ ಚಿತ್ರವನ್ನು ಮತ್ತು ಕನ್ನಡ ಧ್ವಜವನ್ನು ಕಿತ್ತುಹಾಕುವಂತೆ ಮಾಡಿದ್ದು ಪ್ರತಿ ಕನ್ನಡಿಗರ ಮನಸ್ಸಿಗೆ ತೀರ ನೋ’ವನ್ನುಂಟು ಮಾಡಿದೆ. ಈ ಬಗ್ಗೆ ಈಗಾಗಲೇ ಸೋಶಿಯಲ್ ವಿಡಿಯೋಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಯ ಬಗ್ಗೆ ಭಾರಿ ವಿ’ರೋ’ಧಗಳು ಕನ್ನಡಿಗರಿಂದ ವ್ಯಕ್ತವಾಗುತ್ತಿದೆ ಈ ರೀತಿ ಘಟನೆ ಮತ್ತೊಮ್ಮೆ ಮರುಕಳಿಸದಿರಲಿ ಎಂದು ಬಯಸೋಣ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.