ಬಡತನ ದರಿದ್ರ ಎನ್ನುವುದು ಶಾಪವಲ್ಲ ಯಾವ ವ್ಯಕ್ತಿ ಬಡವನಾಗಿ ಹುಟ್ಟುತ್ತಾನೋ ಅದು ಅವನ ಆಯ್ಕೆ ಅಲ್ಲ ಆತ ಬಡವನಾಗಿಯೇ ಬದುಕುತ್ತಿದ್ದರೆ ಅಥವಾ ಬಡವನಾಗಿ ಸತ್ತರೆ ಖಂಡಿತ ಆ ಸಂಪೂರ್ಣ ಹೊಣೆ ಅವನ್ನದ್ದೇ. ಯಾಕೆಂದರೆ ಬಡತನವನ್ನು ಬದಲಾಯಿಸುವ ಶಕ್ತಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುತ್ತದೆ. ಪ್ರತಿಯೊಂದು ಮನೆಗಳಲ್ಲೂ ಕೂಡ ಬಡತನ ರೇಖೆಯನ್ನು ದಾಟುವಂತಹ ಒಬ್ಬ ವ್ಯಕ್ತಿ ಹುಟ್ಟಿಯೇ ಹುಟ್ಟಿರುತ್ತಾನೆ.
ಅದು ಯಾರಾದರೂ ಆಗಬಹುದು, ಅದು ನೀವು ಕೂಡ ಆಗಿರಬಹುದು. ಆದರೂ ಕೂಡ ನೀವು ಇನ್ನೂ ಅದೇ ಬಡತನದ ಕರಿ ನೆರಳಿನಲ್ಲಿ ಕರಗುತ್ತಿದ್ದೀರ, ಕೊರಗುತ್ತಿದ್ದೀರಾ ಎಂದರೆ ಅದಕ್ಕೆ ನೀವು ಮಾಡುತ್ತಿರುವ ಈ 20 ತಪ್ಪುಗಳೇ ಕಾರಣ. ನೀವು ಏನಾದರೂ ಈ ರೀತಿ ಮಾಡುತ್ತಿದ್ದರೆ ನಿಮ್ಮ ಬಳಿಗೆ ಅದೃಷ್ಟ ದೇವತೆ ಎಂದೂ ಬರುವುದಿಲ್ಲ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವು ಪದ್ಧತಿಗಳನ್ನು ನಂಬಿಕೊಂಡು, ಆಚರಣೆಗಳನ್ನು ಅನುಸರಿಸಿಕೊಂಡು, ಹಿರಿಯರು ಹೇಳಿದ ಮಾತುಗಳನ್ನು ಕೇಳಿಕೊಂಡು ಬಂದಿದ್ದೇವೆ. ಆದರೆ ಎಂದಿಗೂ ನಮಗೆ ಇಂತಹ ಮಾತುಗಳನ್ನು ಪಾಲಿಸಿರುವುದರಿಂದ ನಷ್ಟವೇ ಆಗಿಲ್ಲ. ಬದಲಾಗಿ ಸದಾ ನೆಮ್ಮದಿ ಶಾಂತಿ ಆರೋಗ್ಯ ತುಂಬಿರುತ್ತದೆ. ಯಾಕೆಂದರೆ ಹಿಂದೂ ಧರ್ಮ, ಸಂಸ್ಕೃತಿ ಅಥವಾ ಸಂಪ್ರದಾಯ ಎಂದರೆ ಅದು ಬರೀ ಪೂಜೆ ಪುರಸ್ಕಾರ ದೇವರು ವ್ರತ ಮಂತ್ರ ಇವುಗಳಷ್ಟೇ ಅಲ್ಲ ಅವುಗಳನ್ನು ಮೀರಿದ ಒಂದು ಚೌಕಟ್ಟು.
ಸಂಸ್ಕಾರ ಎನ್ನುವ ಚೌಕಟ್ಟಿನಲ್ಲಿ ಅದರೊಳಗೆ ನಡೆದುಕೊಂಡಾಗ ಕಷ್ಟ ಕಾಡುವುದಿಲ್ಲ, ಲಕ್ಷ್ಮಿ ಬರುತ್ತಾಳೆ ಎಂದು ಹಿರಿಯರು ಹೇಳಿದ್ದಾರೆ. ಅದರರ್ಥ ಸಾಕ್ಷಾತ್ ಮಹಾಲಕ್ಷ್ಮಿ ನಮ್ಮ ಮನೆಗೆ ಬರುತ್ತಾರೆ ಎನ್ನುವ ಅರ್ಥ ಅಲ್ಲದಿದ್ದರೂ ಪರೋಕ್ಷವಾಗಿ ಅದು ನಮಗೆ ಧನಾಗಮನ ಆಗುವಂತೆ ಮಾಡುವುದು ಅಥವಾ ಆರೋಗ್ಯ ಹಾನಿಯಾಗಿ ಆ ಮೂಲಕ ಹಣ ಪೋಲಾಗುವುದನ್ನು ತಪ್ಪಿಸುವುದು, ಸಮಾಜದಲ್ಲಿ ನಮ್ಮ ಘನತೆ ಗೌರವ ಹೆಚ್ಚಾಗಿ ಕೀರ್ತಿ ಬರುವುದು ಇದೆಲ್ಲಾ ಉಂಟಾಗಲು ಸಂಸ್ಕಾರ ಎನ್ನುವ ಹೆಸರಿನಲ್ಲಿ ಶಿಷ್ಟಾಚಾರವನ್ನು ಕಲಿಸಲಾಗಿದೆ.
ಇವುಗಳನ್ನು ಮೀರಿದ್ದಲ್ಲಿ ನಮಗೆ ಆರ್ಥಿಕವಾಗಿ ಸಾಮಾಜಿಕವಾಗಿ ದೈಹಿಕವಾಗಿ ಎಲ್ಲ ರೀತಿಯ ದರಿದ್ರ ಬಂದೇ ಬರುತ್ತದೆ. ಮುಖ್ಯವಾಗಿ ಬಡತನ ಬರಲು ಕಾರಣವಾಗಿರುವ ಆ 20 ತಪ್ಪುಗಳನ್ನು ನಾವಿಂದು ಹೇಳುತ್ತಿದ್ದೇವೆ. ನೀವು ಈ ಮಾಹಿತಿಗಳನ್ನು ತಿಳಿದುಕೊಂಡು ಕೂಡ ಆ ರೀತಿ ಮಾಡುತ್ತಿದ್ದರೆ ನಿಮ್ಮ ತಪ್ಪುಗಳನ್ನು ತಿದ್ದುಕೊಳ್ಳಿ ಮತ್ತು ಈ ಮಾಹಿತಿಯನ್ನು ಇತರರ ಜೊತೆ ಹಂಚಿಕೊಳ್ಳುವ ಮೂಲಕ ಅವರು ಸಹ ಇನ್ನು ಮುಂದೆ ಅವರ ತಪ್ಪುಗಳನ್ನು ತಿದ್ದುಕೊಳ್ಳುವಂತೆ ಮಾಡಿ.
ಅಡುಗೆಮನೆ ಬಳಿ ಮೂತ್ರ ಮಾಡುವುದು, ಅಡುಗೆ ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳುವುದೇ ಇರುವುದು, ಪದೇ ಪದೇ ಬೇರೆಯವರ ಬಳಿ ಸಾಲ ಕೇಳುವುದು, ಹಲ್ಲು ಕಚ್ಚುತ್ತಾ ಇರುವುದು, ಉಗುರು ಕಚ್ಚುತ್ತಾ ಇರುವುದು, ಸ್ನಾನ ಮಾಡದಿರುವುದು, ಕೊಳಕಾದ ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು, ಹೊತ್ತು ಮುಳುಗಿದ ಮೇಲೆ ಮನೆಯಲ್ಲಿ ದೀಪ ಹಚ್ಚದೆ ಮನೆ ಕತ್ತಲಾಗಿ ಇಡುವುದು, ಮುರಿದ ಬಾಚಣಿಗೆಯಲ್ಲಿ ತಲೆಬಾಚುವುದು,
ಒಡೆದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಮನೆ ಮುಂದೆ ಚಪ್ಪಲಿಗಳನ್ನು ಅಸ್ತವ್ಯಸ್ತವಾಗಿ ಬಿಡುವುದು, ದೇವರಿಗೆ ದೀಪ ಹಚ್ಚದಿರುವುದು, ದೇವರಿಗೆ ಪೂಜೆ ಮಾಡದೇ ಇರುವುದು, ಅಡುಗೆ ಮನೆಯಲ್ಲಿ ತಲೆ ಬಾಚುವುದು, ಸೂರ್ಯೋದಯ ಆದ ಮೇಲೆ ನಿದ್ದೆ ಮಾಡುವುದು, ಒಡೆದ ಕನ್ನಡಿಯಲ್ಲಿ ಮುಖ ನೋಡುವುದು, ಕಾಲು ಮೇಲೆ ಕಾಲು ಹಾಕಿ ಅಲ್ಲಾಡಿಸುತ್ತಾ ಇರುವುದು, ಬಾತ್ರೂಮ್ ಬಾಗಿಲು ತೆರೆದು ಇಡುವುದು, ಅಡುಗೆ ಮಾಡಿದ ಪದಾರ್ಥಗಳ ಮೇಲೆ ಮುಚ್ಚದೇ ಇರುವುದು, ಇನ್ನು ಇತ್ಯಾದಿ ಕಾರಣಗಳಿವೆ. ಅವುಗಳನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ವಿಡಿಯೋವನ್ನು ಒಮ್ಮೆ ನೋಡಿ.