ಇಲ್ಲಿ ಹರಕೆ ಕಾಯಿ ಕಟ್ಟಿದ್ರೆ ಸಾಕು ಭಕ್ತರ ಎಲ್ಲಾ ಇಷ್ಟಾರ್ಥಗಳು ಸಿದ್ದಿ ಆಗುತ್ತದೆ, ಮದುವೆ, ಸಂತಾನ, ಉದ್ಯೋಗ, ಹಣಕಾಸಿನ ಸಮಸ್ಯೆ ಏನೇ ಇರಲಿ ವಾರದೊಳಗೆ ಪರಿಹಾರ ಸಿಗುತ್ತೆ ಈ ದೇವಾಲಯ ಎಲ್ಲಿದೆ ಗೊತ್ತಾ.?

 

ತೇತ್ರಾಯುಗದಲ್ಲಿ ರಾಮನಿಗೆ ಸೀತಾಮಾತೆಯನ್ನು ಹುಡುಕಲು ಸಹಾಯ ಮಾಡಿ, ರಾವಣ ಸಂಹಾರ ಮಾಡುವ ಆ ಕಾರ್ಯಕ್ಕೆ ಕೈಜೋಡಿಸಿದ ಹನುಮಂತನು ಕಲಿಗಾಲದಲ್ಲೂ ಕೂಡ ಕಲಿಯುಗದ ಪ್ರತ್ಯಕ್ಷ ದೈವ. ಈಗಲೂ ಭಕ್ತರ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾರೆ. ಅದರಲ್ಲೂ ಕೂಡ ಬೆಂಗಳೂರಿನಲ್ಲಿರುವ ಈ ಹನುಮ ಕಾರ್ಯಸಿದ್ಧಿ ಆಂಜನೇಯ ಎಂದೇ ಹೆಸರಾಗಿದ್ದಾರೆ.

ಪೂರ್ಣ ಫಲವಾದ ತೆಂಗಿನ ಕಾಯಿಯನ್ನು ಕಟ್ಟಿ ಹರಕೆ ಕಟ್ಟಿಕೊಳ್ಳುವ ಮೂಲಕ ಇಷ್ಟಾರ್ಥಸಿದ್ಧಿಗಾಗಿ ಆಂಜನೇಯನನ್ನು ಪ್ರಾರ್ಥಿಸಿದರೆ ಮತ್ತು ಈ ಪ್ರಕಾರವಾಗಿ ನಡೆದುಕೊಂಡರೆ ಖಂಡಿತ ಆ ಹರಕೆಗಳು ನೆರವೇರುತ್ತದೆ ಎನ್ನುವುದು ಈ ಭಾಗದಲ್ಲಿ ಪ್ರತೀತಿಯಾಗಿದೆ. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದಾದ್ಯಂತ ಈ ಕಾರ್ಯಸಿದ್ಧಿ ಆಂಜನೇಯ ಪ್ರಸಿದ್ಧರಾಗಿದ್ದಾರೆ. ಈ ಪ್ರಸಿದ್ಧ ದೇವಾಲಯವು ಬೆಂಗಳೂರಿನ ಗಿರಿನಗರದಲ್ಲಿ ಇದೆ.

ಗಿರಿನಗರದ ಒಂದನೇ ಫೇಸ್ ನಲ್ಲಿರುವ ಮೂರನೇ ಸಿ ಮೇನ್ ರೋಡ್ ಅಲ್ಲಿ ಇರುವ ಅವಧೂತ ದತ್ತಪೀಠದಲ್ಲಿ ಈ ಕಾರ್ಯಸಿದ್ಧಿ ಆಂಜನೇಯನ ದೇವಸ್ಥಾನ ಇದೆ. ಗುರುದತ್ತಾತ್ರೇಯರು ಇಲ್ಲಿ ಮೂಲದೇವರಾಗಿದ್ದು ನಮಸ್ಕಾರ ಮುದ್ದೆಯಲ್ಲಿರುವ ಆಂಜನೇಯನನ್ನು ಕೂಡ ಇಲ್ಲೇ ಪ್ರತಿಷ್ಠಾಪಿಸಲಾಗಿದೆ. ಬೆಂಗಳೂರಿನಂತಹ ಸಿಲಿಕಾನ್ ಸಿಟಿ ಮಧ್ಯೆ ಈ ದೇವಾಲಯದ ಇದ್ದರೂ ದೇವಸ್ಥಾನದ ವಾತಾವರಣ ಪ್ರಶಾಂತವಾಗಿದೆ.

ದೇವಸ್ಥಾನದ ಪ್ರಾಂಗಣದಲ್ಲಿ ಸಿಪ್ಪೆ ಸುಲಿದ ತೆಂಗಿನಕಾಯಿಗಳು ಕಟ್ಟಿರುವುದನ್ನು ನೋಡಬಹುದು. ಈ ದೇವಾಲಯದ ವಿಶೇಷತೆಯೇ ಈ ರೀತಿ ಇದೆ. ಇದನ್ನು ಪೂರ್ಣ ಫಲ ಸಮರ್ಪಣೆ ಎಂದು ಕರೆಯುತ್ತಾರೆ. ನಮ್ಮ ಸಮಸ್ಯೆ ಏನೇ ಇದ್ದರೂ ಅದು ಆರೋಗ್ಯ, ಹಣಕಾಸು, ವಿದ್ಯಾಭ್ಯಾಸ, ವಿವಾಹ, ಉದ್ಯೋಗ, ಸಂತಾನ ಭಾಗ್ಯ ಇದಕ್ಕೆ ಸಂಬಂಧಪಟ್ಟ ಯಾವುದೇ ಕೋರಿಕೆಗಳಿದ್ದರೂ ಕೂಡ ಇಲ್ಲಿಗೆ ಬಂದು ತೆಂಗಿನಕಾಯಿ ಹರಕೆ ಕಟ್ಟಿಕೊಂಡರೆ ಅದು 48 ದಿನಗಳಲ್ಲಿ ನೆರವೇರುತ್ತದೆ.

ದೇವಾಲಯದ ಕೌಂಟರ್ನಲ್ಲಿ ಈ ಪೂರ್ಣಫಲವನ್ನು ತೆಗೆದುಕೊಳ್ಳಬೇಕು. ಗುರುತಿಗಾಗಿ ತೆಂಗಿನಕಾಯಿ ಮೇಲೆ ದಿನಾಂಕ ಮತ್ತು ಸಂಖ್ಯೆಯನ್ನು ಬರೆದುಕೊಡುತ್ತಾರೆ. ಆ ಪೂರ್ಣ ಫಲವನ್ನು ತೆಗೆದುಕೊಂಡು ಬಂದು ಆಂಜನೇಯನ ಮುಂದೆ ಇಟ್ಟು ಮನಸ್ಸಿನಲ್ಲಿರುವ ಕೋರಿಕೆಯನ್ನು ಹೇಳಿಕೊಂಡು ಸಂಕಲ್ಪವನ್ನು ಮಾಡಬೇಕು. ಅರ್ಚಕರೇ ನಿಮ್ಮಿಂದ ಮಂತ್ರವನ್ನು ಹೇಳಿಸಿ ಸಂಕಲ್ಪ ಮಾಡಿಸುತ್ತಾರೆ. ನಂತರ ಆ ತೆಂಗಿನಕಾಯಿಯನ್ನು ತಂದು ದೇವಸ್ಥಾನದ ಪ್ರಾಂಗಣದಲ್ಲಿ ಕಟ್ಟಬೇಕು.

16 ದಿನಗಳವರೆಗೆ ತೆಂಗಿನಕಾಯಿ ಅಲ್ಲಿಯೇ ಇರುತ್ತದೆ. ಆ 16 ದಿನಗಳಲ್ಲಿ ಕನಿಷ್ಠ ನಾಲ್ಕು ದಿನಗಳು ಆದರೂ ಹರಕೆ ಕಟ್ಟಿಕೊಂಡವರು ಅಲ್ಲಿಗೆ ಬಂದು 41 ಬಾರಿ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಬೇಕು. ಈ ರೀತಿ ಪ್ರದರ್ಶನ ಹಾಕುವಾಗ ತಮಸ್ಮಿನ್ ಕಾರ್ಯನಿರ್ಯೋಗ ಪ್ರಮಾಣಂ ಹರಿಸತ್ತಮ ಹನುಮಾನ್ ಯತ್ನಮಾಸಾಯ ದುಃಖ ಕ್ಷಯ ಕರೋಭವ ಈ ಮಂತ್ರವನ್ನು ಪಟಿಸಬೇಕು. ಈ ಮಂತ್ರವನ್ನು ಸಾಕ್ಷಾತ್ ಸೀತಾಮಾತೆಯ ರಚಿಸಿದರು ಎನ್ನುವ ನಂಬಿಕೆ ಇದೆ.

ಮನೆಯಲ್ಲಿ ಕೂಡ ಈ ಮಂತ್ರವನ್ನು ಪ್ರತಿದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿ ಬಳಿಕ 108 ಬಾರಿ 16 ದಿನಗಳವರೆಗೆ ಜಪಿಸಬೇಕು. ನಿಮಗೆ ಕೊಟ್ಟಿದ್ದ ಸಂಖ್ಯೆ ಆಧಾರದ ಮೇಲೆ ತೆಂಗಿನಕಾಯಿಯನ್ನು ಬಿಡಿಸಿಕೊಂಡು ಮನೆಗೆ ತಂದು ಆ ಕಾಯನ್ನು ಒಡೆದು ಅದರಲ್ಲಿ ಸಿಹಿ ಮಾಡಿ ಮನೆ ಮಂದಿಯೆಲ್ಲಾ ಸೇವಿಸಬೇಕು. ಈ ರೀತಿ ಮಾಡುವುದರಿಂದ ಶೀಘ್ರವಾಗಿ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವುದು ಭಕ್ತಾದಿಗಳ ನಂಬಿಕೆ.

ಈ ನಂಬಿಕೆಗೆ ಸಾಕ್ಷಿಯಾಗಿ ಅನೇಕ ಪವಾಡಗಳ ಜರುಗಿದ್ದು ಪ್ರತಿದಿನವೂ ಕೂಡ ನೂರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ಕೋರಿಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಸದಾ ದೇವಾಲಯದಲ್ಲಿ ಭಕ್ತರ ದಂಡೇ ತುಂಬಿರುತ್ತದೆ ಹನುಮ ಜಯಂತಿಯ ವಿಶೇಷ ಸಂದರ್ಭಗಳಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ಆಚರಣೆಗಳು ಕೂಡ ಇಲ್ಲಿ ನಡೆಯುತ್ತವೆ. ತಪ್ಪದೇ ನೀವು ಸಹ ಒಮ್ಮೆ ಈ ದೇವಾಲಯಕ್ಕೆ ಭೇಟಿ ಕೊಡಿ ನಿಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆಂಜನೇಯನನ್ನು ಈ ಪರಿಯಾಗಿ ಪ್ರಾರ್ಥಿಸಿ.

Leave a Comment