
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಚುನಾವಣೆಯೋತ್ತರವಾಗಿ ಭರವಸೆ ನೀಡಿದ್ದಂತೆ 5 ಗ್ಯಾರಂಟಿ ಕಾರ್ಡ್ ಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿರುವ ಶಕ್ತಿಯೋಜನೆ ಬಗ್ಗೆ ರೂಪಿಸಿರುವ ಮಾರ್ಗಸೂಚಿಯನ್ನು ಕುರಿತ ಆದೇಶ ಪತ್ರವನ್ನು ಸರ್ಕಾರ ಹೊರಡಿಸಿದೆ.
ಇದರ ಅನ್ವಯ ಜೂನ್ 11ರಿಂದ ರಾಜ್ಯದಾದ್ಯಂತ ಕರ್ನಾಟಕದ ಮಹಿಳೆಯರು ರಾಜ್ಯದ ಗಡಿಯೊಳಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. KSRTC, BMTC, ಕಲ್ಯಾಣ ಕರ್ನಾಟಕ ಸಾರಿಗೆ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಆದರೆ ಎಸಿ ಬಸ್ ಮತ್ತು ಐಶಾರಾಮಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. BMTC ಬಸ್ ಹೊರತುಪಡಿಸಿ ಉಳಿದ ಬಸ್ ಗಳಲ್ಲಿ 50% ರಷ್ಟು ಆಸನಗಳನ್ನು ಪುರುಷರಿಗೆ ಮೀಸಲು ಎನ್ನುವುದನ್ನು ಕೂಡ ತಿಳಿಸಿ, ದೇಶದಲ್ಲಿ ಮೊದಲ ಬಾರಿಗೆ ಪುರುಷರಿಗೆ ಆಸನ ಮೀಸಲು ಕೊಟ್ಟಂತಹ ರಾಜ್ಯ ಎನ್ನುವ ಖ್ಯಾತಿಗೂ ಒಳಗಾಗಿದೆ. ಇನ್ನು ಮಹಿಳೆಯರು ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಗಳನ್ನು ಹೊಂದಿರಬೇಕು ಎನ್ನುವುದನ್ನು ಸರ್ಕಾರ ತಿಳಿಸಿದೆ.
ಸೇವಾ ಸಿಂಧು ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ಈ ಉಚಿತ ಪ್ರಯಾಣ ಯೋಜನೆಯ ಫಲಾನುಭವಿಗಳಾಗಲು ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು, ಈ ಪ್ರಕ್ರಿಯೆಯನ್ನು ಮೂರು ತಿಂಗಳ ಒಳಗೆ ಪೂರ್ತಿ ಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಅದರಿಂದ ರಾಜ್ಯದ ಎಲ್ಲಾ ಮಹಿಳೆಯರು ಕೂಡ ಈ ಮಾರ್ಗಸೂಚಿ ಅನ್ವಯ ದಾಖಲೆಗಳನ್ನು ಕೊಟ್ಟು ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಗಳನ್ನು ಪಡೆಯಬೇಕು ಆದರೆ ಈ ರೀತಿ ಸ್ಮಾರ್ಟ್ ಕಾರ್ಡ್ ಪಡೆಯುವವರೆಗೂ ಕೂಡ ಮಹಿಳೆಯರು ಭಾರತ ಸರ್ಕಾರ ಅಥವಾ ಕರ್ನಾಟಕ ರಾಜ್ಯ ನೀಡಿರುವ ಯಾವುದಾದರು ಭಾವಚಿತ್ರವಿರುವ ಗುರುತಿನ ಚೀಟಿ ತೋರಿಸಿ ಪ್ರಯಾಣ ಮಾಡಲು ಅನುಮತಿ ಇದೆ.
ಜೊತೆಗೆ ಮಹಿಳೆಯರು ಕೂಡ ಟಿಕೆಟ್ ಪಡೆಯಬೇಕು ಕಂಡಕ್ಟರ್ಗಳು ಮಹಿಳೆಯರಿಗೂ ಕೂಡ ಟಿಕೆಟ್ ವಿತರಣೆ ಮಾಡುತ್ತಾರೆ, ಆದರೆ ಇದಕ್ಕೆ ಯಾವುದೇ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯ ಟಿಕೆಟ್ ಅಂತೇ ಈ ಟಿಕೆಟ್ ಅಲ್ಲೂ ಸಹ ಬಸ್ ಡಿಪೋ ನಂಬರ್, ಬಸ್ ಸಂಖ್ಯೆ, ಪ್ರಯಾಣ ಮಾಡುವ ಸಮಯ ಹಾಗೂ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ವಿವರ ಸೇರಿದಂತೆ ಬಸ್ ಚಾರ್ಜ್ ಎನ್ನುವಲ್ಲಿ ನಿಲ್ ಎಂದು ತೋರಿಸಲಾಗಿರುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಟಿಕೆಟ್ ಅಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಪ್ರಿಂಟ್ ಆಗಿರುತ್ತದೆ. ಶಕ್ತಿ ಯೋಜನೆ ಅಡಿ 4 ಸಾರಿಗೆ ನಿಗಮಗಳಿಗೂ ತಗಲುವ ವೆಚ್ಚವನ್ನು ಶೂನ್ಯ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆಧರಿಸಿ ಭರಿಸಲಾಗುವುದು. ಆದ ಕಾರಣಕ್ಕಾಗಿ ಸರ್ಕಾರವು ಈ ರೀತಿ ಸ್ಮಾರ್ಟ್ ಕಾರ್ಡ್ ಗಳನ್ನು ಪಡೆಯಲು ಮಹಿಳೆಯರಿಗೆ ಸೂಚಿಸಲಾಗಿದೆ.
ಇದಕ್ಕೆ ತಂತ್ರಾಂಶದ ಸಿದ್ಧತೆ ಕಾರ್ಯವು ಕೂಡ ನಡೆಯುತ್ತಿದ್ದು ಯಾವ ರೀತಿ ಆನ್ಲೈನಲ್ಲಿ ಅಪ್ಲೈ ಮಾಡಬೇಕು ಮತ್ತು ಅಪ್ಲೈ ಮಾಡಲು ಏನೆಲ್ಲಾ ದಾಖಲೆಗಳನ್ನು ಮಹಿಳೆಯರು ಸಲ್ಲಿಸಬೇಕು ಎನ್ನುವುದರ ಕುರಿತು ಕೂಡ ಶೀಘ್ರದಲ್ಲಿ ತಿಳಿಸುತ್ತೇವೆ ಎಂದಿದ್ದಾರೆ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*