ಇತ್ತೀಚೆಗೆ ನಾವು ಸರ್ಕಾರಿ ಅಧಿಕಾರಿಗಳಿಗೆ ಪ್ರಾಮಾಣಿಕತೆಗೆ ಇಲ್ಲ ಎಂದು ಘೋಷಿಸುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ ಹಾಗೂ ಕೇಳುತ್ತಿದ್ದೇವೆ. ಪ್ರತಿ ದಿನ ಕೂಡ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಲಂಚ ತಿನ್ನುವ ಹಗರಣಗಳು ಮತ್ತು ಕಳ್ಳ ವ್ಯವಹಾರಗಳನ್ನು ಕಂಡು ಸರ್ಕಾರಿ ಅಧಿಕಾರಿಗಳ ಮೇಲಿದ್ದ ನಂಬಿಕೆ ಹೊರಟುಹೋಗಿದೆ. ಜೊತೆಗೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೆಲಸ ಮಾಡುವಂತಹ ಸರ್ಕಾರಿ ಹಾಗೂ ಸರ್ಕಾರದ ಅಂಗ ಸಂಸ್ಥೆಗಳ ಸಿಬ್ಬಂದಿಗಳು ಈ ಕಾಲದಲ್ಲಿ ಸಿಗುವುದೇ ಕಷ್ಟವಾಗಿದೆ.
ಬಡ ಜನರು, ದೀನರು ಎನ್ನುವ ಯಾವುದೇ ಕರುಣೆ ಇಲ್ಲದೆ ಜನರಿಂದ ರಕ್ತ ಹೀರಲು ತಯಾರಾಗಿರುವ ಐವತ್ತು ಹಾಗೂ ನೂರು ರೂಪಾಯಿಗೂ ಹಿಂಸೆ ಕೊಟ್ಟು ಕೈಚಾಚುವ ಇಂತವರ ಮಧ್ಯೆ ಇಲ್ಲೊಬ್ಬ ಸರ್ಕಾರಿ ಬಸ್ ಕಂಡಕ್ಟರ್ ಎಲ್ಲರಿಂದ ಶಭಾಷ್ ಎನಿಸಿಕೊಳ್ಳುತ್ತಿದ್ದಾರೆ ಮಾಹಿತಿಗಾಗಿ ಪೂರ್ತಿ ಓದಿ. ಸರ್ಕಾರಿ ಬಸ್ ಕಂಡಕ್ಟರ್ ಒಬ್ಬರಿಗೆ ಅವರ ಬಸ್ ಅಲ್ಲಿ ನಿಧಿ ರೀತಿ ಹಣ ಸಿಕ್ಕಿದೆ ಅದೇನೆಂದರೆ ಎಲ್ಲರೂ ಕೂಡ ಬಸ್ ಇಳಿದು ಹೋದ ಮೇಲೆ ಕಂಡಕ್ಟರ್ ಒಮ್ಮೆ ಬಸ್ ಚೆಕ್ ಮಾಡಿದ್ದಾರೆ.
ಆಗ ಬಸ್ ಅಲ್ಲಿ ಪ್ರಯಾಣಿಸಿದ್ದ ಒಬ್ಬ ವ್ಯಕ್ತಿ ತಾನು ಕೂತಿದ್ದ ಸೀಟ್ ಕೆಳಗೆ ತನ್ನ ದೊಡ್ಡ ಬ್ಯಾಗ್ ಬಿಟ್ಟು ಹೋಗಿರುವುದು ಕಾಣುತ್ತದೆ. ಮೊದಲಿಗೆ ಅದು ಬಟ್ಟೆ ಬ್ಯಾಗ್ ಅಥವಾ ಇನ್ನೇನೋ ಇರಬೇಕು ನೋಡೋಣ ಮಾಹಿತಿ ಇದ್ದರೆ ತಲುಪಿಸೋಣ ಎಂದುಕೊಂಡು ಬ್ಯಾಗ್ ಓಪನ್ ಮಾಡಿ ನೋಡಿದ ಕಂಡಕ್ಟರಿಗೆ ಅಲ್ಲಿ ಶಾ’ಕ್ ಕಾದಿತ್ತು. ಯಾಕೆಂದರೆ ಲಕ್ಷಕ್ಕೂ ಹೆಚ್ಚಿನ ದುಡ್ಡಿನ ಕಂತೆ ಹಾಗೂ ಹಲವಾರು ಕಾರ್ಡುಗಳು ಮತ್ತು ಕೆಲ ಮುಖ್ಯ ದಾಖಲೆಗಳು ಹಾಗೂ ಒಂದು ಡೈರಿ ಕೂಡ ಆ ಬ್ಯಾಗಲ್ಲಿ ಇತ್ತು.
ಆಗ ಆ ಕಂಡಕ್ಟರ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಆ ಕಂಡಕ್ಟರ್ ಮಾತ್ರ ತನ್ನ ವೃತ್ತಿಪರತೆ ಮೆರೆದು ಪ್ರಾಮಾಣಿಕತೆ ತೋರಿದ್ದಾರೆ. ಆ ಡೈರಿಯನ್ನು ತೆಗೆದು ನೋಡಿದಾಗ ಡೈರಿ ಬರೆದಿದ್ದವರ ಮೊಬೈಲ್ ನಂಬರ್ ಸಿಕ್ಕಿದೆ. ಆ ಮೊಬೈಲ್ ನಂಬರ್ ಗೆ ಕರೆ ಮಾಡುತ್ತಾರೆ. ಕರೆ ಸ್ವೀಕರಿಸಿದವರೇ ಆ ಬ್ಯಾಗನ್ನು ಅಲ್ಲಿ ಬಿಟ್ಟು ಹೋಗಿದ್ದವರು ಆಗಿರುತ್ತಾರೆ. ಅಲ್ಲೇ ಅವರು ಹತ್ತಿರದಲ್ಲಿದ್ದು ಬಸ್ ಅಲ್ಲಿ ಬ್ಯಾಗ್ ಅನ್ನು ಮರೆತು ಹೋಗಿದ್ದಾರೆ ಎನ್ನುವುದು ಆಗ ಅವರಿಗೆ ಅರಿವಾಗುತ್ತದೆ.
ತಕ್ಷಣವೇ ಓಡೋಡಿ ಬಂದು ಬಸ್ ಕಂಡಕ್ಟರಿಗೆ ಹೃದಯಪೂರ್ವಕವಾಗಿ ಧನ್ಯವಾದಗಳು ಅರ್ಪಿಸಿ. ತನ್ನ ಹಣ ಮತ್ತು ವಸ್ತುಗಳನ್ನೆಲ್ಲ ತೆಗೆದುಕೊಂಡು ಹೋಗುತ್ತಾರೆ ಜೊತೆಗೆ ಕಂಡಕ್ಟರ್ ಗೆ ಸ್ವಲ್ಪ ಹಣ ಕೂಡ ಕೊಡಲು ಮುಂದಾಗುತ್ತಾರೆ ಆದರೆ ಅದನ್ನು ಕಂಡಕ್ಟರ್ ಸ್ವೀಕರಿಸದೆ ತಮ್ಮ ನೈತಿಕತೆ ತೋರಿದ್ದಾರೆ. ಇದೀಗ ಈ ಸುದ್ದಿ ದೇಶದಾದ್ಯಂತ ಎಲ್ಲರ ಗಮನ ಸೆಳೆದಿದೆ ಮತ್ತು ಎಲ್ಲರೂ ಕಂಡಕ್ಟರ್ ಗೆ ಶಭಾಷ್ ಎನ್ನುತ್ತಿದ್ದಾರೆ.
ಅಷ್ಟು ದೊಡ್ಡ ಮೊತ್ತದ ಹಣ ಆ ವ್ಯಕ್ತಿಯ ಐದು ತಿಂಗಳ ಸಂಬಳ ಆಗಿತ್ತು ಅದನ್ನು ಊರಿನಲ್ಲಿ ಕೃಷಿ ಮಾಡುತ್ತಿದ್ದ ತನ್ನ ರೈತ ತಂದೆಗೆ ಕೊಟ್ಟು ತನ್ನ ಜಮೀನಿಗೆ ಸಂಬಂಧಪಟ್ಟ ಸಾಲವನ್ನು ತಿಳಿಸಲು ಅವರು ತೆಗೆದುಕೊಂಡು ಹೋಗುತ್ತಿದ್ದರು. ಯಾವುದೋ ಗಾಬರಿ ಅಥವಾ ಯೋಚನೆಯಲ್ಲಿ ಮುಳುಗಿ ಈ ರೀತಿ ಅದನ್ನೇ ಮರೆತು ಬಸ್ಸಿಂದ ಇಳಿದಿದ್ದರು ಈಗ ವಾಪಸ್ಸು ಕೊಟ್ಟ ಕಂಡಕ್ಟರ್ ಅವರಿಗೆ ದೈವ ಸ್ವರೂಪವಾಗಿ ಕಂಡಿದ್ದಾರೆ. ಈ ಕಂಡಕ್ಟರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ನಲ್ಲಿ ತಿಳಿಸಿ