Sunday, June 4, 2023
HomeUseful InformationP.M ಹೊಸ ಯೋಜನೆ, ವರ್ಷಕ್ಕೆ 20 ರೂಪಾಯಿ ಪಾವತಿಸಿ 2 ಲಕ್ಷ ಪಡೆಯಿರಿ.

P.M ಹೊಸ ಯೋಜನೆ, ವರ್ಷಕ್ಕೆ 20 ರೂಪಾಯಿ ಪಾವತಿಸಿ 2 ಲಕ್ಷ ಪಡೆಯಿರಿ.

 

ಕೇಂದ್ರ ಸರ್ಕಾರವು ದೇಶದ ನಾಗರಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನರ ಆರೋಗ್ಯ ಹಾನಿ ಆಗಿ ತೊಂದರೆಯಾದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಒದಗಿಸಲು ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಚನೆಗಳಲ್ಲಿ ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆ ಬಹಳ ಜನಪ್ರಿಯವಾಗಿರುವಂತಹ ಯೋಜನೆ. ಆದರೆ ಇನ್ನು ಅನೇಕ ಮಂದಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಆ ಕುರಿತ ಮಾಹಿತಿ ಮತ್ತು ಇದರ ಕುರಿತಾದ ಎಲ್ಲಾ ಅನುಕೂಲಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

PMSBY ಅಂದರೆ ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಆಗಿದೆ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಕೂಡ ಒಂದು. ಈ ಯೋಜನೆಯು ದೇಶದಾದ್ಯಂತ ಹಲವಾರು ಜನರಿಗೆ ಅನುಕೂಲ ಮಾಡಿಕೊಡುವಂತಹ ಯೋಜನೆ ಆಗಿದೆ. ಒಂದು ಅರ್ಥದಲ್ಲಿ ಈ ಯೋಜನೆಯನ್ನು ತಪ್ಪದೆ ದೇಶದ ಎಲ್ಲಾ ನಾಗರಿಕರು ಕೂಡ ಹೊಂದಿರಬೇಕು ಎಂದರು ಸಹ ಆ ಮಾತು ತಪ್ಪಾಗಲಾರದು. ಆ ರೀತಿ ಕಡಿಮೆ ಹಣದಲ್ಲಿ ಖರೀದಿ ಮತ್ತು ಪಾವತಿ ಮಾಡಿ ಅನಾಹುತ ಆದ ಆಪತ್ಕಾಲದಲ್ಲಿ ಕೈಹಿಡಿಯುವಂತಹ ಉತ್ತಮ ಯೋಜನೆಗಳಲ್ಲಿ ಒಂದು ಈ ಯೋಜನೆ.

ಜೊತೆಗೆ ಇದನ್ನು ಯಾವುದೇ ವಿಮೆ ಕಂಪನಿ ಮಾತ್ರ ಅಲ್ಲದೆ ನಿಮ್ಮ ಉಳಿತಾಯ ಖಾತೆಗಳ ಮೂಲಕ ಪಡೆಯಬಹುದಾದರಿಂದ ಇದು ಇನ್ನೂ ಹೆಚ್ಚಿಗೆ ಸಾರ್ವಜನಿಕರಿಗೆ ಹತ್ತಿರವಾಗಿರುವ ಮತ್ತು ಅನುಕೂಲಕರವಾಗಿರುವ ಯೋಜನೆ ಎಂದು ಸಹ ಹೇಳಬಹುದು. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿಯಲ್ಲಿ ನೋಂದಾಯಿತರಾಗಬೇಕು ಎಂದರೆ ಅವರ ಕೆವೈಸಿ ಅಪ್ಡೇಟ್ ಆಗಿರಬೇಕು ಅವರ ಉಳಿತಾಯ ಖಾತೆ ಅಥವಾ ಪೋಸ್ಟ್ ಆಫೀಸ್ ಖಾತೆ ಮೂಲಕ ನೋಂದಣಿ ಆಗಬಹುದು.

ಕೆಲವು ಬ್ಯಾಂಕ್ಗಳು ಹಾಗೂ ವಿಮೆ ಕಂಪನಿಗಳು ಕೂಡ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯ ನೋಂದಣಿ ಮಾಡಿಕೊಳ್ಳುತ್ತವೆ. ಇದಕ್ಕೆ ನೀವು ಪ್ರೀಮಿಯಂ ಗಳನ್ನು ಕೂಡ ಕಟ್ಟಬೇಕು. ಆದರೆ ಅದು ಅತಿ ಕಡಿಮೆ ಮೊತ್ತದ್ದಾಗಿದೆ. ವರ್ಷಕ್ಕೆ 20 ರೂಗಳನ್ನು ನೀವು ಪಾವತಿ ಮಾಡಿದರೆ 2 ಲಕ್ಷದವರೆಗೆ ಅದರ ವಿಮೆ ಇರುತ್ತದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಇದನ್ನು ರಿನಿವಲ್ ಕೂಡ ಮಾಡಿಕೊಳ್ಳಬಹುದಾದ ಅನುಕೂಲತೆ ಇದೆ.

ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಅಡಿ ನೊಂದಾಯಿತರಾದರು ಒಂದು ವೇಳೆ ಯಾವುದಾದರೂ ಅ.ಪ.ಘಾ.ತಕ್ಕೆ ಒಳಗಾಗಿ ಸಾ.ವ.ನ್ನ.ಪ್ಪಿದರೆ ಅಥವಾ ಅಂಗವೈಫಲ್ಯ ಆದರೆ ಅವರಿಗೆ ಎರಡು ವರ್ಷದವರೆಗೆ ವಿಮೆ ಪಾವತಿ ಆಗುತ್ತದೆ. ಒಂದು ವೇಳೆ ಭಾಗಶಃ ಅಂಗವೈಫಲ್ಯ ಆದರೆ ಒಂದು ಲಕ್ಷದವರೆಗೆ ಅವರಿಗೆ ಹಣ ಕ್ಲೈಮ್ ಆಗುತ್ತದೆ. ಜೊತೆಗೆ ಇದಕ್ಕೆ ಪ್ರೇಮಿಯಂ ಅನ್ನು ನೀವೇ ಹೋಗಿ ಪಾವತಿ ಮಾಡುವ ಅವಶ್ಯಕತೆ ಏನು ಇಲ್ಲ. ನಿಮ್ಮ ಖಾತೆಯಿಂದ ಆಟೋ ಡೆಬಿಟ್ ಮೂಲಕ ಇದು ಪಾವತಿ ಆಗುತ್ತದೆ. ಕೆಲವೊಂದು ಬ್ಯಾಂಕ್ಗಳು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಇದರ ಪ್ರೇಮಿಯಂಗಳನ್ನು ಖರೀದಿಸುವ ಅನುಕೂಲ ಮಾಡಿಕೊಟ್ಟಿವೆ.

ಆ ಮೂಲಕ ಕೂಡ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಹೊಂದಿರುವವರು ಈ ಪ್ರೀಮಿಯಂ ಅನ್ನು ಖರೀದಿಸಬಹುದಾಗಿದೆ. ಈ ರೀತಿಯಲ್ಲಿ ಕೈಗೆಟುಕುವ ದರದಲ್ಲಿ ಕಟ್ಟಬಹುದಾದ ಪ್ರೀಮಿಯಂನೊಂದಿಗೆ ಜನ ಸಾಮಾನ್ಯರಿಗೆ ಸುರಕ್ಷತೆ ಹಾಗೂ ಭದ್ರತೆ ಒದಗಿಸುವ ಪ್ರೀಮಿಯಂ ಇದಾಗಿದೆ. ತಪ್ಪದೆ ನೀವು ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಚಂದಾದಾರರಾಗಿರಿ ಹಾಗೂ ಈ ಮಾಹಿತಿ ಹೆಚ್ಚಿನ ಜನರಿಗೆ ತಲುಪುವಂತೆ ಶೇರ್ ಮಾಡಿ.