ಪ್ರತಿಯೊಂದು ತಿಂಗಳಲ್ಲಿ ಜನಿಸಿದವರ ಲಕ್ಷಣ ಸ್ವಭಾವ ಬೇರೆ ಬೇರೆ ಯಾಗಿರುತ್ತದೆ. ವರ್ಷದ ಹನ್ನೆರಡು ತಿಂಗಳಲ್ಲಿ ಜನಿಸಿದವರ ಮಾತುಗಾ ರಿಕೆ, ಬುದ್ಧಿವಂತಿಕೆ ಧೈರ್ಯವಂತರು, ಆತ್ಮವಿಶ್ವಾಸವುಳ್ಳವರು ಭಿನ್ನ ಭಿನ್ನವಾದ ಗುಣ ಇರುತ್ತದೆ. ಹಾಗಾಗಿ ಎಲ್ಲರೂ ಒಂದೇ ರೀತಿಯ ಗುಣ ಹೊಂದಿರುವುದಿಲ್ಲ. ಜೀವನದ ದಿಕ್ಕು ಮತ್ತು ಸ್ಥಿತಿಯನ್ನು ನಿರ್ಧರಿಸುವಲ್ಲಿ ಜನ್ಮ ತಿಂಗಳು ದೊಡ್ಡ ಪಾತ್ರ ವಹಿಸುತ್ತದೆ. ಹಾಗಾದರೆ ಅವರು ಹುಟ್ಟಿದ ತಿಂಗಳಿನ ಆಧಾರದ ಮೇಲೆ ಅವರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.
* ಜನವರಿ – ಇವರು ಹುಟ್ಟಿನಿಂದಲೇ ನಾಯಕತ್ವದ ಗುಣವನ್ನು ಹೊಂದಿ ರುತ್ತಾರೆ. ಇವರನ್ನು ಕಂಡರೆ ಕೆಲವರಿಗೆ ಆಗುವುದಿಲ್ಲ. ಯಾಕೆಂದರೆ ಇವರು ನಿರ್ಣಯಗಳನ್ನು ಸ್ವಂತ ತೆಗೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳು ಆಡಿದ ಮಾತಿಗೆ ಬದ್ಧರಾಗಿರುತ್ತಾರೆ. ಇವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುವ ವ್ಯಕ್ತಿಗಳು.
* ಫೆಬ್ರವರಿ – ಈ ತಿಂಗಳಲ್ಲಿ ಜನಿಸಿದವರು ವ್ಯಕ್ತಿತ್ವ ತುಂಬಾ ಆಕರ್ಷಕ ವಾಗಿರುತ್ತದೆ. ಸ್ವಭಾವದಲ್ಲಿ ನಾಚಿಕೆಯುಳ್ಳ ವ್ಯಕ್ತಿಗಳು ಆಗಿರುತ್ತಾರೆ. ಇವರ ಜೀವನಶೈಲಿ ದುಬಾರಿಯಾಗಿರುತ್ತದೆ.
* ಮಾರ್ಚ್ – ಈ ತಿಂಗಳಲ್ಲಿ ಜನಿಸಿದವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತದೆ. ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಾರೆ. ಇವರು ಹೆಚ್ಚು ಬುದ್ಧಿಶಾಲಿಗಳು.
* ಏಪ್ರಿಲ್ – ಇವರು ಕಷ್ಟಗಳ ಜೊತೆ ಜೀವನ ಮಾಡುತ್ತಾರೆ. ಪ್ರತಿಯೊಂದು ಕಷ್ಟವೂ ಸಹ ಯಶಸ್ವಿಯಾಗಿ ಎದುರಿಸುತ್ತಾರೆ.
* ಮೇ – ತಿಂಗಳಲ್ಲಿ ಹುಟ್ಟಿದವರು ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಖುಷಿಯಾಗಿ ಬೆರೆಯುತ್ತಾರೆ. ಆಲೋಚನೆ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇವರಿಗೆ ತುಂಬಾ ಇರುತ್ತದೆ. ನೋಡಲು ಸುಂದರವಾಗಿ ಇರುತ್ತಾರೆ ಇವರನ್ನು ಅರ್ಥಮಾಡಿಕೊಳ್ಳಲು ತುಂಬಾ ಕಷ್ಟಕರವಾಗಿರುತ್ತದೆ.
* ಜೂನ್ – ಇವರು ತುಂಬಾ ಪ್ರಾಮಾಣಿಕರು. ಇವರು ಉತ್ತಮ ಸ್ನೇಹಿತರಾಗಿರುತ್ತಾರೆ. ಮಾನಸಿಕವಾಗಿ ತುಂಬಾ ಬುದ್ದಿವಂತರು.
* ಜುಲೈ – ಇವರು ಪ್ರಯಾಣಪ್ರಿಯರು ಆಗಿರುತ್ತಾರೆ. ಇವರು ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ. ಇವರ ಜೀವನದಲ್ಲಿ ವಸ್ತುಗಳನ್ನು ಸಂಗ್ರಹಿಸಲು. ಸಿನಿಮಾಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಇತರರನ್ನು ಸಂತೋಷಪಡಿಸುವ ಗುಣ ಹೊಂದಿರುತ್ತಾರೆ.
* ಆಗಸ್ಟ್ – ಬೇರೆಯವರ ಜೊತೆ ಸುಲಭವಾಗಿ ಬರೆಯುತ್ತಾರೆ .ನೋಡಲು ತುಂಬಾ ಸುಂದರವಾ ಗಿರುತ್ತಾರೆ. ಇವರು ಹೆಚ್ಚು ಯೋಜನಾಶಕ್ತಿಯನ್ನು ಹೊಂದಿರುತ್ತಾರೆ.
* ಸಪ್ಟೆಂಬರ್ – ಈ ತಿಂಗಳಲ್ಲಿ ಜನಿಸಿದರು ತುಂಬಾ ಶಕ್ತಿವಂತರು. ಇವರು ತೆಗೆದುಕೊಳ್ಳುವ ನಿರ್ಧಾರದಿಂದ ನಂತರ ಪಶ್ಚಾತಾಪ ಪಡುತ್ತಾರೆ. ತುಂಬಾ ಬುದ್ಧಿವಂತರು. ಇವರು ಹೊಸದಾಗಿ ಕಲಿಯಲು ಇಷ್ಟ ಪಡುತ್ತಾರೆ. ಇವರಿಗೆ ಪ್ರಯಾಣದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ.
* ಅಕ್ಟೋಬರ್ – ಅಕ್ಟೋಬರ್ ತಿಂಗಳಲ್ಲಿ ಜನಿಸಿದವರು ಮಾತಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ತಮ್ಮ ಭಾವನೆಗಳನ್ನು ಮರುಮಾಚುವುದು ಇಲ್ಲ.
* ನವೆಂಬರ್ – ಈ ತಿಂಗಳಲ್ಲಿ ಜನಿಸಿದವರು ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಯಾವುದೇ ಕೆಲಸವನ್ನು ಪ್ರಾರಂಭ ಮಾಡಿದರೂ ಸಹ ಯಶಸ್ಸನ್ನು ಪಡೆಯುತ್ತಾರೆ. ಬೇಗನೆ ಕೋಪಗೊಳ್ಳುವ ಸ್ವಭಾವ. ಇವರ ಜೊತೆಯಲ್ಲಿರುವ ವ್ಯಕ್ತಿಗಳನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ.
* ಡಿಸೆಂಬರ್ – ಈ ತಿಂಗಳಲ್ಲಿ ಜನಿಸಿದವರು ಎಲ್ಲರೊಂದಿಗೆ ನಗುವುದು ಮತ್ತು ತಮಾಷೆ ಮಾಡುವ ಸ್ವಭಾವ ಇವರದ್ದು. ಇವರಿಗೆ ಸ್ನೇಹಿತರಾಗಿ ರಲು ತುಂಬಾ ಇಷ್ಟಪಡುತ್ತಾರೆ. ಹೀಗೆ ಒಂದೊಂದು ತಿಂಗಳು ಹುಟ್ಟಿದ ವ್ಯಕ್ತಿಗಳು ಒಂದೊಂದು ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅದೇ ರೀತಿಯಾಗಿ ಆ ವ್ಯಕ್ತಿ ಅಂದರೆ ಹುಟ್ಟಿದ ಸಮಯ ಹಾಗೂ ಹುಟ್ಟಿದ ದಿನಾಂಕ ಹುಟ್ಟಿದ ದಿನ ಎಲ್ಲವೂ ಕೂಡ ಅವರ ಗುಣ ಸ್ವಭಾವ ಅವರ ವ್ಯಕ್ತಿತ್ವವನ್ನು ಹೊಂದಿರುತ್ತದೆ ಎಂದು ಹೇಳಬಹುದು ಹಾಗೂ ಈ ಒಂದು ವಿಚಾರವಾಗಿ ನಮ್ಮ ಶಾಸ್ತ್ರ ಪುರಾಣದಲ್ಲಿ ಬಹಳ ಅದ್ಭುತವಾಗಿ ತಿಳಿಸಿಕೊಟ್ಟಿದ್ದಾರೆ. ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಯಾವುದೇ ಮಗು ಹುಟ್ಟಿದ ತಕ್ಷಣ ಆ ಮಗು ಹುಟ್ಟಿದ ದಿನಾಂಕ ಸಮಯ ದಿನ ಎಲ್ಲವನ್ನು ಕೂಡ ನೆನಪಿನಲ್ಲಿಟ್ಟು ಕೊಂಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.