ಜೀವನದಲ್ಲಿ ದುಡಿಯುತ್ತಿರುವಾಗಲೇ ಉಳಿತಾಯದ ಬಗ್ಗೆ ಯೋಚನೆ ಮಾಡಬೇಕು. ಜೀವನದ ಸಂಧ್ಯಾ ಕಾಲದ ಸಮಯ ನಿಶ್ಚಿಂತೆಯಿಂದ ಇರಬೇಕು ಎಂದರೆ ಉದ್ಯೋಗ ಇದ್ದ ಸಮಯದಿಂದಲೇ ಆ ಬಗ್ಗೆ ಪ್ಲಾನ್ ಮಾಡಿ ಸ್ವಲ್ಪ ಮೊತ್ತದ ಹಣವನ್ನು ನಿಶ್ಚಿಂತೆಯ ಜೀವನಕ್ಕಾಗಿ ಎತ್ತಿಡಬೇಕು. ಎಲ್ಲರಿಗೂ ಸಹ ಉದ್ಯೋಗದ ನಂತರ ಪಿಂಚಣಿ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಹಾಗಾಗಿ ಅಸಂಘಟಿತ ವಲಯದವರು ತಾವೇ ಈ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದು ಕೊಳ್ಳಬೇಕು.
ಸರ್ಕಾರ ಇವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಕಡಿಮೆ ಪಾವತಿ ಇರುವ ಭವಿಷ್ಯದಲ್ಲಿ ದೊಡ್ಡ ಲಾಭ ಕೊಡುವ ಯೋಜನೆಯೊಂದನ್ನು ಜಾರಿಗೆ ತಂದಿದೆ. ಕಡಿಮೆ ಪ್ರೀಮಿಯಂ ಗಳಲ್ಲಿ ಯೋಜನೆಯನ್ನು ಖರೀದಿಸಿ ಬದುಕಿನ ಇಳಿ ವಯಸ್ಸಿನಲ್ಲಿ ನೆಮ್ಮದಿಯಾಗಿರುವಂತೆ ಸೂಚಿಸುತ್ತದೆ, ಅವುಗಳ ಪೈಕಿ ಅಟಲ್ ಪೆನ್ಷನ್ ಯೋಜನೆ ಕೂಡ ಒಂದು.
ಅಟಲ್ ಪೆನ್ಷನ್ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ 210ರೂ. ಹೂಡಿಕೆ ಮಾಡುವ ಮೂಲಕ ನೀವು 60 ವರ್ಷ ಆದ ಬಳಿಕ ಮಾಸಿಕವಾಗಿ 5000ರೂ. ಪೆನ್ಷನ್ ಪಡೆಯಬಹುದು. ನೀವೇನಾದರೂ ಜಂಟಿಯಾಗಿ ಯೋಜನೆ ಖರೀದಿಸುವುದಾದರೆ ಪತಿ ಪತ್ನಿ ಇಬ್ಬರು ಕೂಡ ಕೊನೆಗಾಲದಲ್ಲಿ ತಲಾ ಐದೈದು ಸಾವಿರ ಪೆನ್ಷನ್ ಗಳಿಸುವ ಮೂಲಕ ಯಾರಿಗೂ ಡಿಪೆಂಡ್ ಆಗದೆ ನೆಮ್ಮದಿಯಾಗಿ ಜೀವನ ಸಾಗಿಸಬಹುದು.
ಈ ಅಟಲ್ ಪೆನ್ಷನ್ ಯೋಜನೆ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿಸುವ ಸಲುವಾಗಿ ಈ ಯೋಜನೆಯನ್ನು ಖರೀದಿಸಲು ಇರುವ ಕಂಡೀಷನ್ ಗಳು ಏನು? ಅರ್ಜಿ ಹೇಗೆ ಸಲ್ಲಿಸಬೇಕು? ಏನೆಲ್ಲಾ ದಾಖಲೆ ಬೇಕಾಗುತ್ತದೆ ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.
ಅಟಲ್ ಪೆನ್ಷನ್ ಯೋಜನೆಯ ಬಗ್ಗೆ ಪ್ರಮುಖ ಮಾಹಿತಿ:-
● 18 ವರ್ಷ ವಯಸ್ಸಿನಿಂದ 40 ವರ್ಷ ವಯಸ್ಸಿನವರೆಗೆ ಪುರುಷ ಅಥವಾ ಮಹಿಳೆ ಯಾರು ಬೇಕಾದರೂ ಈ ಯೋಜನೆಯನ್ನು ಖರೀದಿಸಬಹುದು.
● ಈ ಯೋಜನೆಯನ್ನು ಖರೀದಿಸಲು ಭಾರತೀಯರ ಪ್ರಜೆಗಳಷ್ಟೇ ಅರ್ಹರಾಗಿರುತ್ತಾರೆ.
● ಪ್ರತಿ ತಿಂಗಳು 210 ರೂಪಾಯಿಯನ್ನು ಕನಿಷ್ಠ ಮಾಸಿಕ ಪಿಂಚಣಿಯಾಗಿ ಪಾವತಿ ಮಾಡಬೇಕಾಗುತ್ತದೆ, ನೀವು 18 ವರ್ಷ ವಯಸ್ಸಿಗೆ ಇದನ್ನು ಖರೀದಿಸಿದರೆ 60 ವರ್ಷ ಆದ ಬಳಿಕ ಮಾಸಿಕವಾಗಿ 5000 ರೂಪಾಯಿ ಮಾಸಿಕ ಪೆನ್ಷನ್ ಸಿಗುತ್ತದೆ.
● ಈ ಯೋಜನೆಯನ್ನು ಖರೀದಿಸಲು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು.
● ಪ್ರತಿ ತಿಂಗಳು ಕೂಡ ತಪ್ಪದೆ ಮಾಸಿಕ ಕಂತುಗಳನ್ನು ಕಟ್ಟಬೇಕು, ಒಂದು ವೇಳೆ 60 ವರ್ಷಕ್ಕೂ ಮುನ್ನ ಮೃತಪಟ್ಟಲ್ಲಿ ವ್ಯಕ್ತಿ ಸೂಚಿಸಿರುವ ನಾಮಿನಿ ಹೆಸರಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತವನ್ನು ವರ್ಗಾವಣೆ ಆಗುತ್ತದೆ.
● ಆನ್ಲೈನ್ ಅಲ್ಲೂ ಕೂಡ ಅರ್ಜಿ ಸಲ್ಲಿಸಿ ಅಟಲ್ ಪೆನ್ಷನ್ ಯೋಜನೆ ಖರೀದಿಸಬಹುದು, ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಖರೀದಿಸುವದಾದರೆ ಹತ್ತಿರದಲ್ಲಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ಅರ್ಜಿ ಫಾರಂ ತುಂಬಿಸಿ ಸಂಬಂಧ ಪಟ್ಟ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಅಟಲ್ ಪೆನ್ಷನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಆಫ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವುದಾದರೆ ತುಂಬಿದ ಅರ್ಜಿ ಫಾರಂ ಪ್ರತಿ
● ಅರ್ಜಿದಾರರ ಆಧಾರ್ ಕಾರ್ಡ್
● ಬ್ಯಾಂಕ್ ಖಾತೆಯ ವಿವರ
● ಪಾಸ್ ಸೈಜ್ ಫೋಟೋಗಳು
● ಮೊದಲ ಕಂತಿನ ಹಣ
● ನಿವಾಸ ದೃಢೀಕರಣ ಪತ್ರ
● ನಾಮಿನಿ ಮಾಹಿತಿ
● ಮೊಬೈಲ್ ಸಂಖ್ಯೆ
● ಇನಿತ್ಯಾದಿ ಪ್ರಮುಖ ದಾಖಲೆಗಳು.