ಆಸ್ತಿ ಹಂಚಿಕೆ ವಿಷಯದಲ್ಲಿ ಕೆಲವೊಮ್ಮೆ ಗೊಂದಲಗಳಿರುತ್ತವೆ. ಅದರಲ್ಲೂ, ಹೆಣ್ಣು ಮಕ್ಕಳಿಗೆ ಸಂಬಂಧಿಸಿದಂತ ಆಸ್ತಿಯ ಹಕ್ಕಿನ ಬಗ್ಗೆ ಕೆಲವರು ಗೊಂದಲಕ್ಕೊಳಗಾಗಿರುತ್ತಾರೆ. ಇಂದಿನ ಲೇಖನದಲ್ಲಿ ಹೆಣ್ಣು ಮಕ್ಕಳು ಯಾವ ಯಾವ ಆಸ್ತಿಯಲ್ಲಿ ತಮ್ಮ ಹಕ್ಕನ್ನ ಕೇಳಬಹುದು ಮತ್ತು ಯಾವ ಯಾವ ಆಸ್ತಿಯಲ್ಲಿ ಹಕ್ಕು ಕೇಳಲು ಬರುವುದಿಲ್ಲ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ…
ಹೆಣ್ಣು ಮಕ್ಕಳು ಯಾವ ಯಾವ ಆಸ್ತಿಯಲ್ಲಿ ಭಾಗವನ್ನ ಕೇಳಬಹುದು ಅಂತ ನೋಡುವುದಾದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಸಮಾನವಾದ ಹಕ್ಕು ಇರುತ್ತದೆಯೋ, ಹಾಗೆ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದಂತಹ ಹಕ್ಕು ಇರುವುದರಿಂದ ಮೊದಲನೆಯದಾಗಿ ಪಿತ್ರಾರ್ಜಿತವಾಗಿ ಬಂದಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಕ್ಕುದಾರರಾಗಿರುತ್ತಾರೆ.
ವಂಶ ಪಾರಂಪರೆಯಾಗಿ ಬಂದಿರುವಂತಹ ಆಸ್ತಿ ತಂದೆ, ತಾತ, ಮುದ್ದಾದ ಮೂರು ತಲೆಮಾರಿನಿಂದ ಬಂದಿರುವಂತಹ ಆಸ್ತಿ ಆಗಿರುತ್ತದೆ. ಒಬ್ಬ ಮಹಿಳೆಗೆ ತಂದೆಯಿಂದ ತಾತನಿಂದ, ಮುತ್ತಾತನಿಂದ ಬಂದಿರುವಂತಹ ಆಸ್ತಿಯೇ ಪಿತ್ರಾರ್ಜಿತ ಆಸ್ತಿ ಪಿತ್ರಾರ್ಜಿತ ಆಸ್ತಿಯೆಂದು ಪರಿಗಣಿಸಲಾಗುವುದು.
ಮೂರು ತಲೆಮಾರಿಗೆ ಮಾತ್ರ ಕೊಟ್ಟು ಕುಟುಂಬದ ಮೂಲಕ ಗಳಿಸಿರುವಂತಹ ಆಸ್ತಿಗಳು ತಂದೆ ಮತ್ತು ತಂದೆ, ಅಣ್ಣ, ತಮ್ಮಂದಿರು ಎಲ್ಲರೂ ಸೇರಿ ಒಟ್ಟಾಗಿ ಜೊತೆಯಲ್ಲಿದ್ದು ಸಂಪಾದಿಸಿರುವಂತಹ ಆಸ್ತಿ ಜಂಟಿ ಕುಟುಂಬದಲ್ಲಿ ಇರುವಂತಹ ಸಂದರ್ಭದಲ್ಲಿ ಮಾಡಿರುವಂತಹ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಪಾಲನ್ನು ಕೇಳಬಹುದು. ಅದನ್ನ ಜಂಟಿ ಕುಟುಂಬದ ಆಸ್ತಿ ಅಂತ ಹೇಳಲಾಗುತ್ತದೆ.
ಒಟ್ಟು ಕುಟುಂಬದ ಆಸ್ತಿಗೆ ಸಂಬಂಧಪಟ್ಟಿರುವುದರಿಂದ ಅದರಲ್ಲೂ ಕೂಡ ಹಕ್ಕನ್ನು ಕೇಳಬಹುದು. ಒಟ್ಟು ಕುಟುಂಬದ ಆಸ್ತಿ ಎಂದರೆ, ಅದು ಕೂಡ ಪಿತ್ರಾರ್ಜಿತವಾದ ಆಸ್ತಿಯಾಗುತ್ತದೆ. ಕೊಟ್ಟು ಕುಟುಂಬದ ಆಸ್ತಿಯಿಂದ ಬಂದ ಬಂಡವಾಳದಿಂದ ಆಸ್ತಿಯನ್ನು ಖರೀದಿಸಿದರೆ ಅಥವಾ ಒಟ್ಟು ಕುಟುಂಬದ ಆಸ್ತಿಗೆ ಸಂಬಂಧಿಸಿದ ಯಾವುದೇ ಒಂದು ಗಳಿಕೆಯಿಂದ ಖರೀದಿಸಿರುವಂತಹ ಆಸ್ತಿಗಳಲ್ಲಿ ಕೂಡ ಹೆಣ್ಣು ಮಕ್ಕಳು ಹಕ್ಕನ್ನ ಕೇಳಬಹುದು.
ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಬೇರೆ ಆಸ್ತಿಯನ್ನು ಖರೀದಿಸಿದರೆ, ಅದು ಕೂಡ ಒಟ್ಟು ಕುಟುಂಬದ ಆಸ್ತಿ ಆಗುತ್ತದೆ. ಅದರಲ್ಲೂ ಕೂಡ ಹೆಣ್ಣು ಮಕ್ಕಳು ಹಕ್ಕನ್ನ ಕೇಳಬಹುದು. ಅದು ಕೂಡ ಪಿತ್ರಾರ್ಜಿತ ಆಸ್ತಿ ಆಗುತ್ತದೆ.
2005 ತಿದ್ದುಪಡಿಯ ನಂತರ ಯಾವುದೇ ರೀತಿಯ ವಿಭಾಗವನ್ನು ಮಾಡದೆ ಹಾಗೆ ಉಳಿದಿರುವಂತಹ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು. ಒಟ್ಟು ಕುಟುಂಬದ ಆಸ್ತಿಗೆ ಸಂಬಂಧಪಟ್ಟ ಒಬ್ಬ ಪುರುಷ ಅವನ ಸ್ವಂತ ಖರ್ಚಿನಿಂದ ಆಸ್ತಿಯನ್ನು ಖರೀದಿಸಿ ಒಟ್ಟು ಕುಟುಂಬಕ್ಕೆ ಬಿಟ್ಟು ಕೊಟ್ಟಿದ್ರೆ, ಒಟ್ಟು ಕುಟುಂಬದ ಉಪಯೋಗಕ್ಕಾಗಿ ಮತ್ತು ಅವರ ಒಳಿತಿಗಾಗಿ ಬಿಟ್ಟು ಕೊಟ್ಟಿದ್ರೆ, ಆ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಹಕ್ಕನ್ನ ಕೇಳಬಹುದು.
ಹೆಣ್ಣು ಮಕ್ಕಳನ್ನು ಬಿಟ್ಟು ಗಂಡು ಮಕ್ಕಳು ಮಾತ್ರ 2005ರ ನಂತರ ಪಾರ್ಟಿಶನ್ ಮಾಡಿಕೊಂಡಿದ್ದರೆ, ಅವಿಭಾಗವನ್ನು ಮಾಡಿಕೊಳ್ಳುವ ಟೈಮಲ್ಲಿ ಹೆಣ್ಣು ಮಕ್ಕಳಿಂದ ಯಾವುದೇ ರೀತಿಯ ಸಹಿಯನ್ನು ಪಡೆಯದೆ, ಯಾವುದೇ ರೀತಿಯ ಹಕ್ಕು ಬಿಡುಗಡೆ ಪತ್ರವನ್ನು ಪಡೆಯದೆ, ಅವರವರೇ ಒಂದು ವಿಭಾಗವನ್ನ ಮಾಡಿಕೊಂಡಿದ್ದರೆ ಈ ಮೂಲಕವೂ ಸಹ ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಕೇಳಬಹುದು. ಇದೆಲ್ಲವೂ ಕೂಡ ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಕೇಳಲು ಇರುವ ಒಂದು ವ್ಯವಸ್ಥೆಯಾಗಿದೆ.
ಇನ್ನು ಯಾವ ಯಾವ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಕ್ಕು ಕೇಳಲು ಬರುವುದಿಲ್ಲ ಎಂಬುದನ್ನು ನೋಡೋಣ ಬನ್ನಿ…
* ಮೊದಲಿಗೆ ತಾಯಿಗೆ ಬಂದಂತಹ ಆಸ್ತಿಯಲ್ಲಿ ಹಕ್ಕನ್ನ ಕೇಳಲು ಬರುವುದಿಲ್ಲ. ಯಾಕಂದ್ರೆ, ಅದು ತಾಯಿಗೆ ತವರು ಮನೆಯಿಂದ ಬಂದಿರುವಂತಹ ಆಸ್ತಿ ಆಗಿರುತ್ತದೆ.
ಅದು ಅವರ ತಾಯಿಗೆ ಮಾತ್ರ ಸಂಬಂಧಪಟ್ಟಿರುತ್ತದೆ. ಅದನ್ನ ಅವರು ಯಾರಿಗೆ ಬೇಕಾದರೂ ಕೊಡಬಹುದು. ಆ ಆಸ್ತಿಯಲ್ಲಿ ಹೆಣ್ಣು ಮಕ್ಕಳು ನಮಗೂ ಕೂಡ ಹಕ್ಕಿದೆ ಅನ್ನೋದಕ್ಕೆ ಬರೋದಿಲ್ಲ.
* ತಂದೆಗೆ ತಾಯಿಯಿಂದ ಆಸ್ತಿ ಬಂದಿದ್ರೆ, ಅಂದ್ರೆ ತಾಯಿಗೆ ತನ್ನ ತವರು ಮನೆಯಿಂದ ಬಂದ ಆಸ್ತಿಯನ್ನು ಮಗನಿಗೆ ಕೊಟ್ಟಿದ್ದರೆ, ನಿಮ್ಮ ತಂದೆಗೆ ಆ ಆಸ್ತಿ ಹಕ್ಕನ್ನು ಕೇಳಲು ನಿಮಗೆ ಬರುವುದಿಲ್ಲ. ಇನ್ನು ತಂದೆಗೆ ಬಿಲ್ ಮೂಲಕವೋ ಅಥವಾ ದಾನದ ಮೂಲಕ ಬಂದ ಆಸ್ತಿಯ ಮೇಲೆ ಮಕ್ಕಳಿಗೆ ಹಕ್ಕು ಇರೋದಿಲ್ಲ.
* ತಂದೆಗೆ ಸರ್ಕಾರದಿಂದ ಮಂಜೂರಾದ ಆಸ್ತಿಯನ್ನು ತಂದೆ ಬದುಕಿರುವಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹಕ್ಕನ್ನ ಕೇಳೋಕೆ ಆಗೋದಿಲ್ಲ.
* ತಂದೆ ತನ್ನ ಸಾಮರ್ಥ್ಯದಿಂದ ಅಂದ್ರೆ, ಸ್ವಯಾರ್ಜಿತವಾಗಿ ಆಸ್ತಿಯನ್ನು ಗಳಿಸಿದರೆ ಆ ಆಸ್ತಿಯಲ್ಲಿ ಪಾಲನ್ನು ಕೇಳುವ ಹಕ್ಕು ಹೆಣ್ಣು ಮಕ್ಕಳಿಗೆ ಇರುವುದಿಲ್ಲ.
* ಇನ್ನು 2005ರ ಮೊದಲ ಮೊದಲೇ ಗಂಡು ಮಕ್ಕಳು ಮತ್ತು ತಂದೆ ಎಲ್ಲರೂ ಕೂಡ ಅವರವರ ಭಾಗವನ್ನು ಪಡೆದುಕೊಂಡಿದ್ದರೆ, ಆಗಲೂ ಕೂಡ ಹೆಣ್ಣು ಮಕ್ಕಳು ತಮಗೆ ಹಕ್ಕು ಬೇಕು ಎಂದು ಕೇಳಲು ಬರೋದಿಲ್ಲ.
* ತಂದೆ ಅವಧಿಯ ನಂತರ ತಂದೆಯ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು. ತಂದೆಯ ಜೀವಿತಾವಧಿಯಲ್ಲಿ ತಂದೆ ಸ್ವಂತವಾಗಿ ದುಡಿದಿರುವಂತಹ ಆಸ್ತಿಯಲ್ಲಿ ಹಕ್ಕನ್ನ ಕೇಳಲು ಬರುವುದಿಲ್ಲ.
* ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣಾಗಲಿ ಅಥವಾ ಗಂಡಾಗಲಿ ಯಾರು ಕೂಡ ಹಕ್ಕನ್ನು ಕೇಳಲು ಬರುವುದಿಲ್ಲ. ಯಾಕಂದ್ರೆ, ಅದು ತಂದೆ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ. ಈ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ನೀಡಬಹುದು. ಗಂಡು ಅಥವಾ ಹೆಣ್ಣು ಮಕ್ಕಳಿಗೆ ಕೊಡಬಹುದು.
* ಈ ಸ್ವಯಾರ್ಜಿತ ಆಸ್ತಿಯನ್ನು ತಂದೆ ಏನಾದರೂ ಗಂಡು ಮಕ್ಕಳಿಗೆ ಪಾಲನ್ನು ಮಾಡಿಕೊಟ್ಟಿದರೆ, ಅದನ್ನು ಹೆಣ್ಣು ಮಕ್ಕಳು ಕೇಳಲು ಬರುವುದಿಲ್ಲ.
* ಇನ್ನು ಪಿತ್ರಾರ್ಜಿತ ಆಸ್ತಿಯಾಗಿ ಬಂದಿರುವಂತಹ ಆಸ್ತಿಯನ್ನು 2005ರ ಮೊದಲೇ ವಿಭಾಗವಾಗಿ ಮಾಡಿ ರಿಜಿಸ್ಟರ್ ಮಾಡಿಸಿದ್ರೆ ಮಾಡಿಕೊಂಡು ಅವರವರ ಪಾಲನ್ನು ಅನುಭವಿಸುತ್ತಿದ್ದರೆ, ಅಂದ್ರೆ ಗಂಡು ಮಕ್ಕಳು ಮಾತ್ರ ವಿಭಾಗವನ್ನು ಮಾಡಿಕೊಂಡು ಆಸ್ತಿಯನ್ನು ಅನುಭವಿಸುತ್ತಿದ್ದರೆ, ಆಗ ಹೆಣ್ಣು ಮಕ್ಕಳು ಆಸ್ತಿಯಲ್ಲಿ ಹಕ್ಕನ್ನು ಕೇಳಲು ಬರುವುದಿಲ್ಲ.