ತಾಯಿ ಪ್ರೀತಿಯನ್ನು ಮೀರಿಸುವಂತಹ ನಿಸ್ವಾರ್ಥ ಪ್ರೀತಿ ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ . ತಂದೆ ತಾಯಿಗಳು ಎಷ್ಟೋ ತ್ಯಾಗ ಮಾಡಿ ತಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕುತ್ತಾರೆ. ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಮಗುವಿನ ಭಾರವನ್ನು ಹೊತ್ತು ಹೆತ್ತು ಸಾಕುತ್ತಾಳೆ. ಆದರೆ ಇಲ್ಲಿ ಒಬ್ಬ ಮಗನು ತನ್ನ ತಾಯಿಯನ್ನು ಗುಡಿಯ ಹತ್ತಿರ ಬಿಟ್ಟು ಹೋಗಿದ್ದಾನೆ ಮುಂದೇನಾಯಿತು ನೋಡಿ.
ತಮಿಳುನಾಡಿನ ಚೆನ್ನೈನಲ್ಲಿ ಬಹಳ ಫೇಮಸ್ ಆಗಿರುವಂತಹ ಒಂದು ಮಾರಿಯಮ್ಮನ ದೇವಸ್ಥಾನವಿದೆ ಈ ದೇವಸ್ಥಾನದ ಮುಂದೆ ಇರುವಂತಹ ಮೆಟ್ಟಿಲುಗಳ ಮೇಲೆ ಬಹಳಷ್ಟು ಜನ ದೇವಸ್ಥಾನಕ್ಕೆ ಬರುವಂತಹ ಭಕ್ತರಿಂದ ಭಿಕ್ಷೆ ಬೇಡುತ್ತಿರುತ್ತಾರೆ. ಒಂದು ದಿನ ಏಳು ವರ್ಷದ ಒಬ್ಬ ಪುಟ್ಟ ಬಾಲಕ ಅಲ್ಲಿನ ಭಿಕ್ಷುಕರೆಗೆಲ್ಲ ತಲಾ ಇಪ್ಪತ್ತೊಂದು ರೂಪಾಯಿಗಳನ್ನು ಕೊಡುತ್ತಿದ್ದ.
ಆಗ ಅಲ್ಲಿದ್ದ ಒಬ್ಬ ಭಿಕ್ಷುಕ ಆ ಹುಡುಗನನ್ನು ಇಲ್ಲಿ ಇರುವ ಎಲ್ಲಾ ಭಿಕ್ಷುಕರಿಗೂ ಏಕೆ ಹಣವನ್ನು ಕೊಡುತ್ತಿದ್ದೀಯ ನಿಮ್ಮ ಮನೆಯಲ್ಲಿ ಏನಾದರೂ ವಿಶೇಷತೆ ಇದೆಯಾ ಎಂದು ಕೇಳುತ್ತಾರೆ ಅದಕ್ಕೆ ಆ ಹುಡುಗನು ನಾವು ಒಂದು ಹೊಸ ಮನೆಯನ್ನು ಖರೀದಿಸಬೇಕೆಂದು ದೇವರಲ್ಲಿ ಹರಕೆ ಮಾಡಿದ್ದೇವೆ ಅದಕ್ಕಾಗಿ ನಮ್ಮ ಹರಕೆ ನೆರವೇರುವ ಮುನ್ನ ಇಲ್ಲಿರುವ ಭಿಕ್ಷುಕರಿಗೆಲ್ಲ ಹಣ ಕೊಡು ಅಂತ ಅಪ್ಪ ಅಮ್ಮ ಹೇಳಿದ್ದರು ಎಂದು ಉತ್ತರಿಸಿ ಅಲ್ಲಿಂದ ಹೊರಡುತ್ತಾನೆ.
ನಂತರ ಕೆಲವು ದಿನಗಳ ಬಳಿಕ ಆ ಹುಡುಗನ ಕುಟುಂಬದವರು ಪ್ರಾರ್ಥನೆ ಮಾಡಿಕೊಂಡಂತೆ ಒಂದು ಹೊಸ ಮನೆಯನ್ನು ತೆಗೆದುಕೊಳ್ಳುತ್ತಾರೆ ಹಾಗೂ ಜೀವನದಲ್ಲಿ ಎಲ್ಲಾ ಖುಷಿಗಳು ಇವರಿಗೆ ಸಿಕ್ಕಿವೆ. ನಂತರ ಇಡೀ ಕುಟುಂಬವು ಮತ್ತೆ ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದಿದ್ದು ಅಲ್ಲಿನ ಭಿಕ್ಷುಕರಿಗೆಲ್ಲ ಅನ್ನದಾನ ಮಾಡಿ, ಹಣ್ಣುಗಳನ್ನು ನೀಡಿ ತಲಾ 500 ರೂಪಾಯಿಗಳನ್ನು ನೀಡುತ್ತಾರೆ.
ಅಲ್ಲಿದ್ದಂತಹ ಭಿಕ್ಷುಕರಲ್ಲಿ ಒಬ್ಬ ಅಜ್ಜಿಯು ಒಂದು ಪತ್ರವನ್ನು ಇನ್ನೊಬ್ಬ ಭಿಕ್ಷುಕನಿಗೆ ನೀಡಿ ಆ ಹುಡುಗನು ಮತ್ತೊಮ್ಮೆ ಬಂದರೆ ಅವನ ತಂದೆಗೆ ಈ ಪತ್ರವನ್ನು ಕೊಡುವಂತೆ ತಿಳಿಸಿರುತ್ತಾಳೆ ಅದರಂತೆ ಆ ಹುಡುಗನು ಮತ್ತೊಮ್ಮೆ ತನ್ನ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಬಂದಾಗ ಭಿಕ್ಷುಕ ಆ ಹುಡುಗನ ಅಪ್ಪನನ್ನು ಕರೆದು ಆ ಪತ್ರವನ್ನು ತಲುಪಿಸುತ್ತಾನೆ. ಆ ಪತ್ರವನ್ನು ಓದಿದ ಆ ಹುಡುಗನ ಅಪ್ಪ ಕಣ್ಣೀರು ಹಾಕುತ್ತಾ ಗಡಗಡ ನಡುಗುತ್ತಾನೆ ಅದನ್ನು ನೋಡಿದ ಭಿಕ್ಷುಕರೆಲ್ಲ ಆ ಪತ್ರದಲ್ಲಿ ಏನಿರಬಹುದು ಎಂದು ಆಶ್ಚರ್ಯಗೊಳ್ಳುತ್ತಾರೆ.
ಆ ಪತ್ರವನ್ನು ನೀಡಿದ ಆ ಭಿಕ್ಷುಕಿ ಅಜ್ಜಿಯು ಆ ಹುಡುಗನ ಅಜ್ಜಿಯಾಗಿರುತ್ತಾಳೆ ಅಂದರೆ ಆ ಹುಡುಗನ ತಂದೆಗೆ ಸ್ವಂತ ತಾಯಿ ಆಗಿರುತ್ತಾಳೆ. ಹತ್ತು ವರ್ಷಗಳ ಹಿಂದೆ ಇದೆ ತಂದೆಯು ತನ್ನ ತಾಯಿಯನ್ನು ದೇವಸ್ಥಾನಕ್ಕೆ ಕರೆತಂದು ದೇವರ ದರ್ಶನ ಮಾಡಿ ಹೊರ ಬಂದ ಬಳಿಕ ಅಮ್ಮ ನೀವು ಇಲ್ಲಿಯೇ ಕುಳಿತಿರಿ ನನಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ಹೋದವನು ತನ್ನ ತಾಯಿಯನ್ನು ಮನೆಗೆ ಕರೆದೊಯ್ಯಲು ಮತ್ತೆ ಯಾವತ್ತು ಬರಲೇ ಇಲ್ಲ.
ಆದರೆ ಅಜ್ಜಿಯು ಮಗ ಬರುತ್ತಾನೆ ಎಂದು ಕಾಯುತ್ತಾ ತಿನ್ನಲು ಊಟ ಸಿಗದೆ ಉಟ್ಟ ಬಟ್ಟೆಯಲ್ಲಿಯೆ ದೇವಸ್ಥಾನದ ಬಳಿ ಬಿಕ್ಷೆ ಬೇಡಲು ಆರಂಭಿಸಿದಳು. ಆ ಪತ್ರದಲ್ಲಿ ಬರೆದದ್ದು ಏನೆಂದರೆ ಕಳೆದ ಹತ್ತು ವರ್ಷದ ಹಿಂದೆ ನಿನ್ನ ಹೆಂಡತಿಯ ಮಾತನ್ನು ಕೇಳಿಕೊಂಡು ನನ್ನನ್ನು ಇಲ್ಲಿ ಬಿಟ್ಟು ಹೋಗಿದ್ದೆ ಆದರೆ ಈಗ ನಿನಗೂ ಒಬ್ಬ ಮಗ ಇದ್ದಾನೆ ಅವನು ಮುಂದೆ ನಿನ್ನನ್ನು ನನ್ನ ಪರಿಸ್ಥಿತಿಗೆ ತರಬಾರದೆಂದು, ತಂದರೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಹಾಗೂ ನಾನು ಭಿಕ್ಷೆ ಬೇಡುತ್ತಿರುವಾಗ ಅನಾರೋಗ್ಯ ಸಮಸ್ಯೆ ಎದುರಾದಾಗ ಇಲ್ಲಿನ ಭಿಕ್ಷುಕರು ನನಗೆ ಸಹಾಯ ಮಾಡಿದ್ದಾರೆ ಅವರಿಗೆ ನಾನು ಚಿರರುಣಿ.
ಅಲ್ಲದೆ ನಾನು ಭಿಕ್ಷೆ ಬೇಡಿ ಒಂದು ಹೊತ್ತು ತಿಂದು ಎರಡು ಹೊತ್ತಿನ ಊಟದ ಹಣವನ್ನು ಸಂಗ್ರಹಿಸಿ ನನ್ನ ಅಂತ್ಯಕ್ರಿಯೆಗೆಂದು ಇಟ್ಟಿದ್ದೇನೆ ಆ ಹಣದಲ್ಲಿ ನೀನು ಹೊಸ ಬಟ್ಟೆ ಖರೀದಿಸಿ ಧರಿಸಿಕೊ ಎಂದು ಬರೆದಿತ್ತು. ಆ ತಂದೆಯು ತನ್ನ ತಾಯಿಯನ್ನು ನೋಡಿಕೊಳ್ಳಲಾಗದೆ ಭಿಕ್ಷುಕರಿಗಿಂತಲೂ ಕೆಳಮಟ್ಟದವನಾಗಿ ಬಿಟ್ಟಿದ್ದಾನೆ.