ಅಜ್ಜನ ಆಸ್ತಿಯ ಮೇಲೆ ಮೊಮ್ಮಗ ಅಥವಾ ಮೊಮ್ಮಗಳಿಗೆ ಎಷ್ಟು ಹಕ್ಕಿದೆ.? ಪೂರ್ವಿಕರ ಆಸ್ತಿ ಎಂದರೇನು.? ನಿನಗೆ ಸಿಗುವ ಆಸ್ತಿ ಪಾಲು ಎಷ್ಟು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

 

ಪೂರ್ವಿಕರ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿ ಎಂದರೆ ನಾಲ್ಕು ತಲೆಮಾರುಗಳಿಂದ ನಿರಂತರವಾಗಿ ವರ್ಗಾವಣೆ ಆಗಿ ಬಂದಿರುವ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಅಥವಾ ಪೂರ್ವಿಕರ ಆಸ್ತಿ ಎನ್ನುತ್ತಾರೆ. ಉದಾಹರಣೆಗೆ ಒಬ್ಬ ತಂದೆಯ ತಾತನ ಅಥವಾ ಮುತ್ತಾತನ ಆಸ್ತಿಯು ಅವರ ಹೆಸರಿಗೆ ಬಂದಿದ್ದರೆ ಅದು ಅವರ ಪಿತ್ರಾರ್ಜಿತ ಆಸ್ತಿ ಆಗಿರುತ್ತದೆ. ಸದ್ಯಕ್ಕೆ ನಮ್ಮ ದೇಶದ ಕಾನೂನಿನ ಚೌಕಟ್ಟಿನ ಒಳಗೆ ಪಿತ್ರಾರ್ಜಿತ ಆಸ್ತಿಯನ್ನು ವಿಭಜನೆ ಮಾಡುವುದೇ ದೊಡ್ಡ ಸಂಕ್ಲಿಷ್ಟಕರ ಸಮಸ್ಯೆ ಆಗಿದೆ.

ಯಾಕೆಂದರೆ ಇಂದು ನ್ಯಾಯಾಲಯಗಳಲ್ಲಿ ಹೂಡಿರುವ ಧಾವೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಗಳು ಕೌಟುಂಬಿಕವಾಗಿ ಈ ರೀತಿ ಮಾಸ್ತಿ ವಿಭಜನೆಗೆ ಆಸ್ತಿ ಕಲಹಕ್ಕೆ ಸಂಬಂಧಪಟ್ಟದ್ದೇ ಆಗಿರುತ್ತದೆ. ಇವುಗಳನ್ನು ಅವರಿಗೆ ಅರ್ಥ ಮಾಡಿಸಿ ವಿಭಜನೆ ಮಾಡುವುದು ಸುಲಭದ ಮಾತಲ್ಲ ಅಥವಾ ಅದು ನಿಧಾನ ಆದಷ್ಟು ಎರಡು ಕಡೆಯ ಪರಿಸ್ಥಿತಿ ಹದಗೆಡುತ್ತಿರುವುದು ಕೂಡ ಮತ್ತೊಂದು ರೀತಿಯ ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ.

ಇಂದು ಪ್ರತಿಯೊಬ್ಬರೂ ಕೂಡ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ತಮ್ಮ ಹಕ್ಕು ಏನಿರುತ್ತದೆ, ಪೂರ್ವಿಕರ ಆಸ್ತಿ ಎಂದರೆ ಏನು ಜೊತೆಗೆ ಆತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಎಷ್ಟು ಪಾಲು ಇರುತ್ತದೆ ಎಂಬ ವಿಷಯದ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕು. ಈ ಅಂಕಣದಲ್ಲೂ ಸಹ ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.

ಉದಾಹರಣೆಗೆ ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಇರುವ ಹಕ್ಕನ್ನು ನೋಡುವುದಾದರೆ ಅದು ಪಿತ್ರಾರ್ಜಿತ ಆಸ್ತಿಯೇ ಅಥವಾ ಅವರೇ ಸಂಪಾದನೆ ಮಾಡಿದ ಸ್ವಯಾರ್ಜಿತ ಆಸ್ತಿಯೇ ಎಂದು ವಿಭಾಗ ಮಾಡಿ ಇದನ್ನು ವಿವರಿಸಬಹುದು. ಒಂದು ವೇಳೆ ತಾತನಿಗೆ ಅದು ಪಿತ್ರಾರ್ಜಿತ ಆಸ್ತಿ ಆಗಿ ಬಂದಿದ್ದರೆ ಅದು ಮತ್ತೊಂದು ಪೀಳಿಗೆಗೆ ವರ್ಗಾವಣೆ ಆಗುವಾಗ ಮತ್ತಷ್ಟು ವಿಭಜನೆ ಆಗುತ್ತದೆ. ಉದಾಹರಣೆಗೆ ನಿಮ್ಮ ತಾತನಿಗೆ ನಿಮ್ಮ ತಂದೆಯನ್ನು ಸೇರಿಸಿ ನಾಲ್ಕು ಜನ ಮಕ್ಕಳಿದ್ದಾರೆ, 8 ಎಕರೆ ಆಸ್ತಿ ಇದೆ ಎಂದು ಭಾವಿಸೋಣ.

ಪ್ರತಿ ಮಕ್ಕಳಿಗೂ ಕೂಡ ಎರಡು ಎಕರೆ ಆಸ್ತಿ ವಿಭಾಗ ಆಗಿರುತ್ತದೆ ಜೊತೆಗೆ ನಿಮ್ಮ ತಂದೆಗೆ ಇಬ್ಬರು ಮಕ್ಕಳಿದ್ದಾರೆ ನೀವು ಮತ್ತು ನಿಮ್ಮ ಸಹೋದರಿ ಎಂದು ನೋಡುವುದಾದರೆ ನಿಮ್ಮ ತಂದೆಯ ಎರಡು ಎಕರೆ ಆಸ್ತಿಯಲ್ಲಿ ತಲ ಇಬ್ಬರಿಗೂ ಒಂದೊಂದು ಎಕರೆ ಆಸ್ತಿ ಸಿಗುತ್ತದೆ. ತಾತನ ಪಿತ್ರಾರ್ಜಿತವಾಗಿ ಬಂದ ಆಸ್ತಿ ವಿಭಜನೆ ಆದಾಗ ಮೊಮ್ಮಗ ಹಾಗೂ ಮೊಮ್ಮಗಳಿಗೆ ಸಮಾನ ಹಕ್ಕು ಸಿಗುತ್ತದೆ. ಒಂದು ವೇಳೆ ನಿಮ್ಮ ತಾತ ಅದನ್ನು ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದ್ದಾಗಿದ್ದರೆ ಅದರಲ್ಲಿ ನೀವು ಹಕ್ಕು ಹುಡುಕುವ ಸಾಧ್ಯತೆ ಇಲ್ಲವೇ ಇಲ್ಲ.

ಯಾಕೆಂದರೆ ಅದು ಅವರ ಸ್ವ ಸಾಮರ್ಥ್ಯದಿಂದ ಸಂಪಾದಿಸ ಆಸ್ತಿ ಆಗಿರುತ್ತದೆ. ಅದರ ಸಂಪೂರ್ಣ ಹಕ್ಕುದಾರರು ಅವರೇ ಆಗಿರುತ್ತಾರೆ. ಅವರು ಇಚ್ಛೆ ಪಟ್ಟಲ್ಲಿ ಅವರ ಯಾವುದೇ ಮಕ್ಕಳಿಗೆ ಆಗಲಿ, ಮೊಮ್ಮಕ್ಕಳಿಗೆ ಆಗಲಿ ಅದನ್ನು ಕಾನೂನು ನಿಯಮಗಳ ಮೂಲಕವಾಗಿ ಮಾಡಿ ಕೊಡಬಹುದು. ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಮಾತ್ರ ಎಲ್ಲಾ ಮಕ್ಕಳಿಗೂ ಸಮಾನವಾದ ಹಕ್ಕಿರುವುದು. ಒಬ್ಬ ಮಗುವಿಗೆ ಆಸ್ತಿ ಹಕ್ಕು ಹಕ್ಕು ಹುಟ್ಟಿನಿಂದಲೇ ಬರುತ್ತದೆ. ಮಗು ಜನಿಸಿದ ತಕ್ಷಣವೇ ತಂದೆಯ ಮತ್ತು ತಾತನ ಪಿತ್ರಾರ್ಜಿತ ಆಸ್ತಿಯಲ್ಲಿ ಮಗು ಹಕ್ಕು ಹೊಂದಿರುತ್ತದೆ. ಆದರೆ ಸ್ವಯಾರ್ಜಿತ ಆಸ್ತಿಯಲ್ಲಿ ಆ ರೀತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

Leave a Comment