Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

12 ವರ್ಷದಿಂದ ಒಂದೇ ಮನೆ ಅಥವಾ ಅಂಗಡಿಯಲ್ಲಿ ಬಾಡಿಗೆಗೆ ಇದ್ದಿರಾ.? ಹಾಗಾದ್ರೆ ಇನ್ನೂ ಮುಂದೆ ಆ ಆಸ್ತಿ ನಿಮ್ಮ ಸ್ವಂತದ್ದೆ ಆಗುತ್ತೆ. ಹೇಗೆ ಗೊತ್ತಾ.?

Posted on May 5, 2023 By Kannada Trend News No Comments on 12 ವರ್ಷದಿಂದ ಒಂದೇ ಮನೆ ಅಥವಾ ಅಂಗಡಿಯಲ್ಲಿ ಬಾಡಿಗೆಗೆ ಇದ್ದಿರಾ.? ಹಾಗಾದ್ರೆ ಇನ್ನೂ ಮುಂದೆ ಆ ಆಸ್ತಿ ನಿಮ್ಮ ಸ್ವಂತದ್ದೆ ಆಗುತ್ತೆ. ಹೇಗೆ ಗೊತ್ತಾ.?

ಪ್ರತಿಕೂಲ ಸ್ವಾಧೀನ ಅಥವಾ ಪ್ರತಿಕೂಲ ಕಬ್ಜೆ ಎಂದರೆ ಯಾವುದೋ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮಾಲೀಕತ್ವದಲ್ಲಿರುವ ಆಸ್ತಿಯನ್ನು ಸ್ವಾಧೀನ ಪಡಿಸಿಕೊಂಡು, ಆ ಸ್ವಾಧೀನ ಪಡಿಸಿಕೊಂಡ ಆಸ್ತಿಯನ್ನು ಪ್ರತ್ಯಕ್ಷವಾಗಿ, ಬಹಿರಂಗವಾಗಿ, ನಿರಂತರವಾಗಿ 12 ವರ್ಷಗಳಿಗಿಂತಲೂ ಹೆಚ್ಚುಕಾಲ ಯಾವುದೇ ಅಡೆತಡೆ ಇಲ್ಲದೆ ಆ ಆಸ್ತಿಯ ಸ್ವಾಧೀನಾನುಭವ ಹೊಂದಿದ್ದ ಪಕ್ಷದಲ್ಲಿ ಅದನ್ನು ಪ್ರತಿಕೂಲ ಸ್ವಾಧೀನ ಎನ್ನುತ್ತಾರೆ.

ಇದನ್ನು ಪ್ರತಿಕೂಲ ಸ್ವಾಧೀನ ಎಂದು ಕರೆಯಲು ಕಾರಣ ಆ ಆಸ್ತಿ ಮಾಲಿಕ ಬೇರೆ ಯಾರೋ ಆಗಿರುತ್ತಾರೆ ಆದರೆ ಈ ವ್ಯಕ್ತಿಯು ಅದನ್ನು ಸ್ವಾಧೀನ ಪಡಿಸಿಕೊಂಡಿರುತ್ತಾನೆ ಹಾಗಾಗಿ ಪ್ರತಿಕೂಲ ಸ್ವಾಧೀನ ಎನ್ನುತ್ತಾರೆ. ಈ ರೀತಿ ಪ್ರತಿಕೂಲ ಸ್ವಾಧೀನ ಎಂದು ಕರೆಸಿಕೊಳ್ಳಬೇಕು ಎಂದರೆ ಹಲವು ಅಂಶಗಳನ್ನು ಅದು ಹೊಂದಿರಬೇಕಾಗುತ್ತದೆ. ಅದರಲ್ಲಿ ಪ್ರಮುಖವಾದವು ಈ ರೀತಿ ಇವೆ ನೋಡಿ.

ಪ್ರತಿಕೂಲ ಸ್ವಾಧೀನ ಎಂದು ಕರೆಸಿಕೊಳ್ಳಬೇಕು ಎಂದರೆ ಪ್ರತ್ಯಕ್ಷವಾಗಿ ಆತ ಅದನ್ನು ಅನುಭವಿಸುತ್ತಿರಬೇಕು, ಆ ಆಸ್ತಿ ಆತನ ಸ್ವಾಧೀನಾನುಭವದಲ್ಲಿರಬೇಕು. ಯಾವ ವ್ಯಕ್ತಿ ಈ ರೀತಿ ನಾನು ಪ್ರತಿಕೂಲಸ್ವಾಧೀನಾನುಭವ ಹೊಂದಿದ್ದೇನೆ ಎಂದು ಹೇಳುತ್ತಾರೋ ಆ ವ್ಯಕ್ತಿಯು ಪ್ರತ್ಯಕ್ಷವಾಗಿ ಅವನೇ ಸ್ವಾಧೀನಾನುಭವದಲ್ಲಿ ಇರಬೇಕು. ಆಗ ಮಾತ್ರ ಅದು ಪ್ರತಿಕೂಲ ಸ್ವಾಧೀನಾನುಭವ ಎಂದು ಕರೆಸಿಕೊಳ್ಳುತ್ತದೆ.

ಅವನ ನೆರೆಹೊರೆಯವರು, ಸಾರ್ವಜನಿಕರು ಮತ್ತು ಮುಖ್ಯವಾಗಿ ಆ ಆಸ್ತಿಯ ಮಾಲೀಕನಿಗೂ ಗೊತ್ತಿಬೇಕು. ಈ ವ್ಯಕ್ತಿ ಪ್ರತಿಕೂಲ ಸ್ವಾಧೀನಾನುಭವದಲ್ಲಿ ಇದ್ದಾನೆ ಎಂದು. ಎರಡನೇ ಮುಖ್ಯ ಅಂಶ ಏನು ಎಂದರೆ ಆತ ಬಹಿರಂಗವಾಗಿ ಆ ಆಸ್ತಿಯ ಸ್ವಾಧೀನಾನುಭವದಲ್ಲಿ ಇರಬೇಕು. ಇದೆಲ್ಲವು ಆ ಆಸ್ತಿಯ ಮಾಲೀಕನಿಗೂ ಅರಿವಿರಬೇಕು. ನಾನು ಈ ಆಸ್ತಿಯ ಮಾಲೀಕನು ಆಗಿದ್ದರು ಕೂಡ ಅವನು ನನ್ನ ಆಸ್ತಿಯ ಸ್ವಾಧೀನಾನುಭವದಲ್ಲಿ ಇದ್ದಾನೆ ಎಂದು.

ಹಾಗೆ ಆ ಆಸ್ತಿಯ ನೆರೆಹೊರೆಯಲ್ಲಿ ಇರುವವರೆಗೂ ಕೂಡ ಈ ಆಸ್ತಿಯ ಮಾಲೀಕ ಈತನಲ್ಲ, ಸ್ವಾಧೀನಾನುಭವದಲ್ಲಿ ಈತನಿದ್ದಾನೆ ಎನ್ನುವುದು ಗೊತ್ತಿರಬೇಕು. ಈ ವಿಚಾರವಾಗಿ ಮತ್ತೊಂದು ಪ್ರಮುಖ ಅಂಶ ಏನೆಂದರೆ ಒಂದು ಆಸ್ತಿಯ ಸ್ವಾಧೀನಾನುಭವದಲ್ಲಿ ಇರುವ ವ್ಯಕ್ತಿ ನಿರಂತರವಾಗಿ 12 ಅಥವಾ 12 ಕ್ಕಿಂತ ಹೆಚ್ಚು ವರ್ಷಗಳ ಕಾಲ ಆ ಆಸ್ತಿಯ ಸ್ವಾಧೀನಾನುಭವದಲ್ಲಿ ಇರಬೇಕು. ಅಂತಹ ಸಂದರ್ಭದಲ್ಲಿ ಮಾತ್ರ ಅದನ್ನು ಪ್ರತಿಕೂಲ ಸ್ವಾಧೀನಾನುಭವ ಎಂದು ಒಪ್ಪಬಹುದು. ಈ 12 ವರ್ಷಗಳಲ್ಲಿ ಸಂಪೂರ್ಣವಾಗಿ 12 ವರ್ಷವೂ ಕೂಡ ಆತ ಆಸ್ತಿಯ ಸ್ವಾಧೀನಾನುಭವದಲ್ಲಿ ಇರಬೇಕು.

ಎರಡು ವರ್ಷ ಇರುವುದು, ಮಧ್ಯೆ ಆರು ತಿಂಗಳು ಅಥವಾ ವರ್ಷ ಇಲ್ಲದಿರುವುದು ಮೂರು ವರ್ಷಗಳ ನಂತರ ಮತ್ತೆ ಬಂದು ಅನುಭವದಲ್ಲಿ ಇರುವುದು ಈ ರೀತಿ ಆದಾಗ ಅದು ಪರಿಗಣನೆಗೆ ಬರುವುದಿಲ್ಲ. ಹಾಗಾಗಿ ಹೇಳಿರುವುದು ನಿರಂತರವಾಗಿ 12 ಅಥವಾ 12ಕ್ಕಿಂತ ಹೆಚ್ಚು ವರ್ಷಗಳು ಸ್ವಾಧಿನಾನುಭವದಲ್ಲಿ ಇರಬೇಕು ಎಂದು. ಒಬ್ಬ ವ್ಯಕ್ತಿ ಒಂದು ಆಸ್ತಿಯ ಸ್ವಾದೀನಾನುಭವ ಹೊಂದಿರುವಾಗ ಅದರ ಮಾಲೀಕ ನ್ಯಾಯಾಲಯದಲ್ಲಿ ಈ ಆಸ್ತಿಯ ಬಗ್ಗೆ ಯಾವುದೇ ರೀತಿ ತಕರಾರು ಹೊಂದಿರಬಾರದು.

ಈತ ಅಕ್ರಮವಾಗಿ ಅಥವಾ ಬಲವಂತವಾಗಿ ಈ ರೀತಿ ಕಬ್ಜೆ ಮಾಡಿದ್ದಾನೆ ಎನ್ನುವ ದೂರು ಮಾಲೀಕನ ಕಡೆಯಿಂದ ಇರಬಾರದು. ಅಂತಹ ಆಸ್ತಿ ಮಾತ್ರ ಪ್ರತಿಕೂಲ ಸ್ವಾಧೀನ ಎನಿಸಿಕೊಳ್ಳುತ್ತದೆ. ಇದೆಲ್ಲ ಇದ್ದ ಪಕ್ಷದಲ್ಲಿ ಅದನ್ನು ನಿಮ್ಮ ಸ್ವಂತ ಆಸ್ತಿಯಾಗಿ ಮಾಡಿಕೊಳ್ಳಬಹುದು. ಅದಕ್ಕೆ ಮುಂದಿನ ಕ್ರಮಗಳನ್ನು ಏನೇನು ಕೈಗೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

https://youtu.be/RMT_nzmRrts

Useful Information
WhatsApp Group Join Now
Telegram Group Join Now

Post navigation

Previous Post: ಈ ಡಾಕ್ಟರ್ ರೋಗಿಗಳಿಗೆ ತಾವೇ ದುಡ್ಡು ಕೊಡುತ್ತಾರೆ. ಸಾಕ್ಷಾತ್ ವೈದ್ಯನಾರಾಯಣ. ಇವರ ಬಳಿ ಬಂದ್ರೆ ವಾಸಿ ಆಗದೇ ಇರೋ ಖಾಯಿಲೆನೇ ಇಲ್ಲ.
Next Post: ಅಂದುಕೊಂಡ ಕೆಲಸ ಅರ್ಧಕ್ಕೆ ನಿಂತಿದ್ದಿಯಾ.? ಒಂದು ಹ್ಯಾಂಡ್ ಕರ್ಚೀಫ್ ನಿಂದ ಈ ಉಪಾಯ ಮಾಡಿ ಸಾಕು ನಿಮ್ಮೆಲ್ಲಾ ಕೋರಿಕೆಗಳು ನೆರವೇರುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore