ನಮ್ಮ ಸಮಾಜದಲ್ಲಿ ಇರುವಂತಹ ಪ್ರತಿಯೊಬ್ಬರೂ ಕೂಡ ಎಲ್ಲಾ ರೀತಿಯ ವಿಚಾರದಲ್ಲೂ ತಮ್ಮದೇ ಆದಂತಹ ನಿರ್ಧಾರಗಳನ್ನು ಅಂದರೆ ತಮ್ಮದೇ ಆದ ಮಾತುಗಳನ್ನು ಹೇಳುತ್ತಿರುತ್ತಾರೆ. ಆದರೆ ಅದು ಎಷ್ಟರ ಮಟ್ಟಿಗೆ ಸರಿ ಅದು ಎಷ್ಟರಮಟ್ಟಿಗೆ ತಪ್ಪು ಎನ್ನುವುದನ್ನು ಸಹ ಅವರು ಆಲೋಚನೆ ಮಾಡುವುದಿಲ್ಲ. ಬದಲಿಗೆ ಬಾಯಿಗೆ ಬಂದ ಹಾಗೆ ಪ್ರತಿ ಯೊಂದನ್ನು ಸಹ ಮಾತನಾಡುತ್ತಿರುತ್ತಾರೆ.
ಆದರೆ ಯಾವುದೇ ಕಾರಣ ಕ್ಕೂ ಆ ರೀತಿ ಮಾಡುವುದು ತಪ್ಪು ಬದಲಿಗೆ ಯಾವ ವಿಚಾರವಾಗಿ ನಾವು ಮಾತನಾಡುತ್ತಿದ್ದೆವು ಆ ಒಂದು ವಿಚಾರ ಸರಿಯಾಗಿದೆಯಾ ಅಥವಾ ತಪ್ಪಾಗಿದೆಯಾ ನಾವು ಮಾತನಾಡುವುದರಿಂದ ಜನರು ಏನಾದರೂ ತಪ್ಪು ತಿಳಿದುಕೊಳ್ಳಬಹುದು ಎನ್ನುವುದರ ಆಲೋಚನೆ ಯನ್ನು ಸಹ ಮಾಡುವುದಿಲ್ಲ. ಬದಲಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುತ್ತಾರೆ.
ಅದರಲ್ಲೂ ಯಾವುದಾದರೂ ಒಂದು ವಿಷಯ ಸಿಕ್ಕಿದರೆ ಆ ಒಂದು ವಿಷಯ ತಮ್ಮ ಕಣ್ಣ ಮುಂದೆಯೇ ನಡೆದಿದೆ ಇದೇ ರೀತಿ ನಡೆದಿದೆ ಎಂದು ಹೇಳುವಷ್ಟರ ಮಟ್ಟಿಗೆ ತಮ್ಮ ಮಾತುಗಳ ಮೂಲಕ ಆ ಒಂದು ವಿಷಯ ವನ್ನು ಎಲ್ಲರಿಗೂ ಹಬ್ಬಿಸುತ್ತಾರೆ. ಇದೇ ರೀತಿಯಾಗಿ ಜನರು ಕೆಲವೊಮ್ಮೆ ಕೆಲವೊಂದು ಸಂದರ್ಭದಲ್ಲಿ ಹೇಳಿದಂತಹ ಮಾತುಗಳು ಬೇರೆಯವರಿಗೆ ಕಷ್ಟವನ್ನು ಉಂಟು ಮಾಡಿರುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವ ಒಂದು ವಿಚಾರವಾಗಿ ಎಲ್ಲರ ಮುಂದೆ ಯಾವ ಮಾತನ್ನು ಹೇಳಿದರೆ ಅದು ಆ ವ್ಯಕ್ತಿಗೆ ಒಳ್ಳೆಯದಾಗುತ್ತದೆ ಅಥವಾ ಅವನಿಗೆ ಕೆಟ್ಟದಾಗುತ್ತದೆ ಎನ್ನುವುದನ್ನು ಆಲೋಚನೆ ಮಾಡಿ ಆನಂತರ ತಮ್ಮ ಮಾತುಗಳನ್ನು ಎಲ್ಲರ ಮುಂದೆ ಸ್ಪಷ್ಟೀಕರಿಸುವುದು ಒಳ್ಳೆಯದು. ಅದರಲ್ಲೂ ಪ್ರತಿಯೊಬ್ಬರು ಕೂಡ ಯಾವ ಕೆಲವು ವಿಚಾರವಾಗಿ ತಮ್ಮ ಮಾತುಗಳನ್ನು ಹೇಳುತ್ತಿರುತ್ತಾರೆ ಎಂದು ನೋಡುವುದಾದರೆ.
ಅಂದರೆ ಸಮಾಜದಲ್ಲಿರುವಂತಹ ಜನರು ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೇಳುವಂತಹ ಮಾತುಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
• ಅವಿದ್ಯಾವಂತರು ಉದ್ಧಾರವಾಗುವುದಿಲ್ಲ.
• ಪದವೀಧರರಾದಮೇಲೆ ಎಲ್ಲವೂ ಸುಲಭ.
• ಜಾಬ್ ಸೆಕ್ಯೂರಿಟಿ ಉಳ್ಳ ಸರ್ಕಾರಿ ಕೆಲಸವೇ ಶ್ರೇಷ್ಟ.
• ಮೂವತ್ತರ ಒಳಗೆ ಮದುವೆ ಆಗದಿದ್ದರೆ ಜೀವನ ಕಠಿಣ.
• ಹೆಣ್ಣು ಮಕ್ಕಳು ತಗ್ಗಿ ಬಗ್ಗಿ ನಡೆಯಬೇಕು ಮತ್ತು ಕೆಲವು ಕೆಲಸಗಳನ್ನು ಗಂಡಸರಿಗೆ ಬಿಟ್ಟುಬಿಡಬೇಕು. ಅವರ ಉಡುಪು, ನಡೆ-ನುಡಿ ಎಲ್ಲವೂ ಸಮಾಜಕ್ಕೆ ಹೊಂದುವಂತಿರಬೇಕು.
• ಗಂಡಸರು ಕಣ್ಣೀರು ಹಾಕಬಾರದು. ಕಷ್ಟವನ್ನೆಲ್ಲ ಒಳಗೆ ನುಂಗಿಕೊಳ್ಳ ಬೇಕು
• ಡ್ರೈವರ್ ಕೆಲಸ, ಸರ್ವರ್ ಕೆಲಸ ಅಥವಾ ಕಸ ವಿಲೇವಾರಿ ಮುಂತಾ ದವು ಎಲ್ಲರಿಗಲ್ಲ.
• ಸ್ವಂತ ಉದ್ಯಮವೆಂದರೆ ನಷ್ಟವೇ. ಮುಂದೊಂದು ದಿನ ಬೀದಿಗೆ ಬರಬೇಕಾದೀತು.
• ಶೇರ್ ವ್ಯಾಪಾರ, ಚಿಟ್ ಬಿಸಿನೆಸ್, ಇವೆಲ್ಲ ಮುಗಿಯುವುದು ಜೈಲಿನಲ್ಲಿ ಅಥವಾ ಆತ್ಮಹತ್ಯೆಯಲ್ಲಿ.
• ಒಬ್ಬ ಹುಡುಗ ಮತ್ತು ಹುಡುಗಿ ಒಳ್ಳೆ ಗೆಳೆಯರಾಗಿರಲು ಅಸಾಧ್ಯ.
• ಓದು, ಕೆಲಸ, ಮದುವೆ, ಮಕ್ಕಳು, ಮೈ ತುಂಬಾ EMI (ಮನೆ, ವಾಹನ, ಇತ್ಯಾದಿ) ಇದೇ ಸರಿಯಾದ ದಾರಿ.
• ದೊಡ್ಡವರು ಏನೇ ಮಾಡಿದರೂ ಒಳಿತು.
• ಇಂಜಿನಿಯರಿಂಗ್ ಮತ್ತು ಮೆಡಿಕಲ್ ಬಿಟ್ಟರೆ ಬೇರೆ ಕಡೆ ಬೆಳವಣಿಗೆ ಇಲ್ಲ.
• ಅಪ್ಪಾನೂ ದುಡೀಬೇಕು, ಅಮ್ಮಾನೂ ಹಡಿಬೇಕು.
• ದುಶ್ಚಟಗಳೆಂದರೆ – ಕುಡಿಯುವುದು, ಜೂಜು, ತಂಬಾಕು ಇತ್ಯಾದಿ ಮಾತ್ರ.
ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ಸಹ ಜನಸಾಮಾನ್ಯರು ಪ್ರತಿ ಬಾರಿ ಹೇಳುತ್ತಲೇ ಇರುತ್ತಾರೆ. ಆದರೆ ಇದು ಎಷ್ಟರಮಟ್ಟಿಗೆ ನಿಜ ಎಷ್ಟರಮಟ್ಟಿಗೆ ಸುಳ್ಳು ಎನ್ನುವುದನ್ನು ಅವರು ಆಲೋಚನೆ ಮಾಡುವುದಿಲ್ಲ. ಒಂದು ರೀತಿಯಾಗಿ ಹೇಳಬೇಕು ಎಂದರೆ ಮೇಲೆ ಹೇಳಿದ ಎಷ್ಟು ಮಾಹಿತಿಗಳು ಕೂಡ ಇಂದಿನ ದಿನ ನಡೆಯುತ್ತಿರುವಂತಹ ಸತ್ಯ ಘಟನೆಗಳೇ ಆಗಿದೆ.