ತಿಂಗಳಿಗೆ ಕೇವಲ 1500 ರೂಪಾಯಿ. ಕಟ್ಟಿದ್ರೆ ಸಾಕು, 35 ಲಕ್ಷ ಸಿಗುತ್ತದೆ. ಭಾರತ ಸರ್ಕಾರದ ಹೊಸ ಸ್ಕೀಮ್.!

ಪ್ರತಿಯೊಬ್ಬರೂ ಕೂಡ ಗಳಿಕೆ ಮಾಡುವ ಹಣವನ್ನು ಹೂಡಿಕೆ ಮಾಡಿ ಅದರಿಂದಲೂ ಕೂಡ ಲಾಭ ಗಳಿಸಲು ಇಚ್ಚಿಸುತ್ತಾರೆ. ಆದರೆ ಆ ರೀತಿ ಉಳಿತಾಯ ಮಾಡಿದ ಹಣಕ್ಕೆ ಸುರಕ್ಷತೆ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ ಹೆಚ್ಚಿನ ಜನರು ಹೂಡಿಕೆಗೆ ಸರ್ಕಾರದ ಯೋಜನೆಗಳ ಮೊರೆ ಹೋಗುತ್ತಾರೆ. ಭಾರತದಲ್ಲಿ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಅಂಚೆ ಕಛೇರಿಯು ಈ ರೀತಿ ತನ್ನಲ್ಲಿ ಉಳಿತಾಯ ಮಾಡಲು ಇಚ್ಛಿಸುವ ಗ್ರಾಹಕರಿಗೆ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ.

ಎಲ್ಲಾ ವರ್ಗದವರನ್ನು ಕೂಡ ಗಮನದಲ್ಲಿಟ್ಟುಕೊಂಡು ಸರ್ಕಾರ ಅವರವರಿಗೆ ಅನುಕೂಲ ಆಗುವ ರೀತಿಯ ಯೋಜನೆಗಳನ್ನು ಬಡವರಿಗಾಗಿ ಮತ್ತು ಮಧ್ಯಮ ವರ್ಗದವರಿಗಾಗಿಯೇ ರೂಪಿಸಿದೆ. ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಭವಿಷ್ಯದಲ್ಲಿ ಒಂದೊಳ್ಳೆ ಮೊತ್ತದ ಹಣವನ್ನು ಪಡೆದು ನಿಮ್ಮ ಅವಶ್ಯಕತೆಗಾಗಿ ಅಥವಾ ಕನಸಿಗಾಗಿ ಬಳಸಿಕೊಳ್ಳಬಹುದು. ಇವುಗಳ ಪೈಕಿ ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆ ಕೂಡ ಒಂದು ಗ್ರಾಮೀಣ ಭಾಗದಲ್ಲಿ ಈ ಯೋಜನೆ ಹೆಚ್ಚು ಹೆಸರುವಾಸಿ ಆಗಿದ್ದು ಅನೇಕರು ಈ ಯೋಚನೆಯ ಗ್ರಾಹಕರಾಗಿದ್ದಾರೆ.

ಕಡಿಮೆ ಮೊತ್ತದ ಕಂತುಗಳನ್ನು ಪಾಲಿಸಿ ಹೆಚ್ಚು ಮೊತ್ತದ ಹಣವನ್ನು ಗಳಿಸುವ ಇಚ್ಛೆ ಇರುವವರಿಗೆ ಈ ಯೋಜನೆ ಅನುಕೂಲಕರವಾಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವಾಗ ನಿಮ್ಮ ಹೂಡಿಕೆಯ ಮೊತ್ತವನ್ನು ಮೊದಲೇ ನಿರ್ಧಾರ ಮಾಡಬೇಕು. ನೀವು ತಿಂಗಳಿಗೆ 1500 ಉಳಿತಾಯ ಮಾಡುತ್ತೀರಾ ಎನ್ನುವುದಾದರೆ ದಿನಕ್ಕೆ ರೂ.50 ಲೆಕ್ಕ ಬೀಳುತ್ತದೆ.

ತಿಂಗಳಿಗೆ 1500 ಹೂಡಿಕೆ ಮಾಡುವ ಆಯ್ಕೆ ಆಯ್ದುಕೊಂಡರೆ ನಿಮ್ಮ ಸ್ಕೀಮ್ ನ ಮೆಚುರಿಟಿ ಅವಧಿ ವೇಳೆಗೆ 31 ರಿಂದ 35 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆಯುತ್ತೀರಿ. ಈ ಅಂಕಣದಲ್ಲಿ ಅಂಚೆ ಕಛೇರಿ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
● ಅಂಚೆಕಚೇರಿ ಗ್ರಾಮೀಣ ಸುರಕ್ಷಾ ಯೋಜನೆಯನ್ನು 19 ವರ್ಷ ವಯಸ್ಸಿನಿಂದ 55 ವರ್ಷದ ವಯಸ್ಸಿನವರೆಗೆ ಯಾರು ಬೇಕಾದರೂ ಖರೀದಿಸಬಹುದು.

● 19 ವರ್ಷದ ವ್ಯಕ್ತಿ ತನ್ನ 19ನೇ ವಯಸ್ಸಿನಲ್ಲಿ 10 ಲಕ್ಷ ರೂಪಾಯಿಗೆ ಈ ಯೋಜನೆಯನ್ನು ಪ್ರಾರಂಭಿಸಿದರೆ, 55 ವರ್ಷಗಳಿಗೆ ಆತ ಪ್ರತಿ ತಿಂಗಳು 1555ರೂ. ಕಟ್ಟಬೇಕಾಗುತ್ತದೆ. ಆತ ಕಟ್ಟಿದ ಮೊತ್ತವು 10 ಲಕ್ಷ ಆಗಿದ್ದರೆ ಆತನಿಗೆ ರಿಟರ್ನ್ಸ್ 31.60 ಲಕ್ಷ ಬರುತ್ತದೆ. 58 ವರ್ಷಗಳ ಪಾಲಿಸಿ ಆಯ್ದುಕೊಂಡರೆ ಪ್ರತಿ ತಿಂಗಳು 1463ರೂ ಕಟ್ಟಬೇಕು, ಕೊನೆಯಲ್ಲಿ 33.40 ಲಕ್ಷ ಬರುತ್ತದೆ. 60 ವರ್ಷಗಳಿಗೆ ಪ್ಲಾನ್ ಮಾಡಿದರೆ 1411 ರೂ. ಪ್ರತಿತಿಂಗಳಿಗೆ ಕಟ್ಟಬೇಕಾಗಿ ಬರುತ್ತದೆ ಕೊನೆಯಲ್ಲಿ 34.60 ಲಕ್ಷ ನಿಮ್ಮ ಕೈ ಸೇರುತ್ತದೆ.

● 10,000 ದಿಂದ 10 ಲಕ್ಷದವರೆಗೂ ಕೂಡ ಈ ಯೋಜನೆಯನ್ನು ಖರೀದಿಸಬಹುದು. ಆ ಮೊತ್ತದ ಆಧಾರದ ಮೇಲೆ ಪ್ರತಿ ತಿಂಗಳ ಪ್ರೀಮಿಯಂ ಮೊತ್ತ ನಿರ್ಧಾರವಾಗುತ್ತದೆ.
● ಈ ಯೋಜನೆಯನ್ನು ಖರೀದಿಸಿದ ಮೇಲೆ ನೀವು ಮಾಡಿದ ಹೂಡಿಕೆ ಹಣದ ಆಧಾರದ ಮೇಲೆ ಸಾಲ ಕೂಡ ಪಡೆಯಬಹುದು. ಮೂರು ವರ್ಷಗಳು ತುಂಬಿದ ಬಳಿಕ ನೀವು ಯಾವುದೇ ಸಮಯದಲ್ಲಿ ಬೇಕಾದರೂ ಸರೆಂಡರ್ ಕೂಡ ಮಾಡಬಹುದು ಆದರೆ ಆ ಸಮಯದಲ್ಲಿ ಹೆಚ್ಚಿನ ಲಾಭಗಳಿರುವುದಿಲ್ಲ.

● ಎಲ್ಲಾ ಅಂಚೆ ಕಚೇರಿ ಯೋಜನೆಯಂತೆ ನಾಮಿನಿ ಸೌಲಭ್ಯ ಕೂಡ ಇದೆ. ಈ ಯೋಜನೆಯನ್ನು ಖರೀದಿಸಿದ ಮೇಲೆ ನೀವು ಮೃ’ತ ಪಟ್ಟಲ್ಲಿ ನಾಮಿನಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತ ಸೇರುತ್ತದೆ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ಅಂಚೆ ಕಚೇರಿಯನ್ನು ಸಂಪರ್ಕಿಸಿ ಅಥವಾ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ಕೊಟ್ಟು ಸಂಪೂರ್ಣ ಮಾಹಿತಿ ಪಡೆಯಿರಿ.

Leave a Comment