ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ. ಯಾರನ್ನು ಯಾರು ಮದುವೆಯಾಗಬೇಕು ಎಂದು ದೇವರು ಮೊದಲೇ ನಿರ್ಧಾರ ಮಾಡಿ ಭೂಮಿಗೆ ಕಳಿಸಿರುತ್ತಾನೆ ಎಂದು ನಮ್ಮ ಭಾರತೀಯರು ನಂಬಿದ್ದಾರೆ. ಈ ಒಂದು ಕಾರಣಕ್ಕಾಗಿ ನಮ್ಮಲ್ಲಿ ಯಾರು ಯಾರನ್ನೇ ಮದುವೆ ಆದರೂ ಕೂಡ ಇವರ ಹೆಸರೇ ನಮ್ಮ ಹಣೆಯಲ್ಲಿ ಬರೆದಿತ್ತು ಎಂದು ಒಪ್ಪಿಕೊಂಡು ಕೊನೆಯವರೆಗೂ ನೆಮ್ಮದಿಯಿಂದ ಜೀವನ ಕಳೆಯುತ್ತಾರೆ. ಸಂಸಾರ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೂಡ ಪತಿ-ಪತ್ನಿ ಆದವರು ಒಬ್ಬರನೊಬ್ಬರು ಬಿಟ್ಟುಕೊಡದೆ ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ. ಈ ರೀತಿ ಸಾಮರಸ್ಯವನ್ನು ನಾವು ಭಾರತದ ಮದುವೆಗಳಲ್ಲಿ ಮಾತ್ರ ಕಾಣಬಹುದು. ಯಾಕೆಂದರೆ ನಮ್ಮಲ್ಲಿ ಹೆಚ್ಚಿನ ಮದುವೆಗಳು ದೊಡ್ಡವರು ನಿಶ್ಚಯಿಸಿದ ಮದುವೆಗಳಾಗಿರುತ್ತವೆ. ಹಿರಿಯರು ನಿರ್ಧಾರ ಮಾಡುವ ಇಂತಹ ಮದುವೆಗಳೇ ದೇವರ ನಿಶ್ಚಯ ಎಂದು ನಂಬಿ ಬದುಕುತ್ತಾರೆ ನಮ್ಮವರು.
ಆದರೆ ಈಗ ನಮ್ಮಲ್ಲಿ ಕೂಡ ಪ್ರೇಮ ವಿವಾಹಗಳು ಹೆಚ್ಚಾಗುತ್ತಿವೆ. ಸಹಪಾಠಿಗಳನ್ನು, ಸ್ನೇಹಿತರನ್ನು ಅಥವಾ ಸಹೋದ್ಯೋಗಿಗಳನ್ನು ಮೆಚ್ಚಿಕೊಂಡು ಅವರನ್ನೇ ಬಾಳ ಸಂಗಾತಿಯನ್ನಾಗಿ ಆಯ್ದುಕೊಂಡು ಸಂತೋಷದ ಜೀವನ ನಡೆಸುವವರು ಇದ್ದಾರೆ. ಈ ರೀತಿ ಪ್ರೇಮ ವಿವಾಹ ಆಗುವವರಲ್ಲಿ ಹಿರಿಯರು ನಿಶ್ಚಯಿಸುವ ಮದುವೆಯಲ್ಲಿ ಇರುವ ವಯಸ್ಸಿನ ಅಂತರಕ್ಕಿಂತ ಕಡಿಮೆ ಅಂತರ ಇರುತ್ತದೆ ಎನ್ನುವುದು ಎಲ್ಲರ ಭಾವನೆ. ಹಾಗಾಗಿ ಇವರ ನಡುವೆ ಹೊಂದಾಣಿಕೆ ಹೆಚ್ಚಿನ ಮಟ್ಟದಲ್ಲಿರುತ್ತದೆ ಎಂದು ಸಹ ಕೆಲವರು ನಂಬುತ್ತಾರೆ. ಆದರೆ ಪ್ರೇಮ ವಿವಾಹಗಳಲ್ಲೂ ಕೂಡ ಕೆಲವೊಮ್ಮೆ ಆಶ್ಚರ್ಯ ಘಟನೆಗಳು ನಡೆಯುತ್ತವೆ. ಅದೇನೆಂದರೆ ಇತ್ತೀಚೆಗೆ ವಯಸ್ಸಾಗಿರುವ ಮಹಿಳೆ ಚಿಕ್ಕ ವಯೋಮಾನದ ಹುಡುಗನನ್ನು ಮದುವೆಯಾಗುತ್ತಿರುವ ಘಟನೆಗಳು ಹಾಗೂ ಚಿಕ್ಕ ವಯಸ್ಸಿನ ಹುಡುಗಿ ವಯಸ್ಸಾದ ವೃದ್ಧನನ್ನು ಮದುವೆಯಾಗುತ್ತಿರುವುದು ಅಥವಾ ಇಬ್ಬರು ಸಲಿಂಗಿಗಳೇ ಮದುವೆ ಆಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತವೆ.
ಪ್ರೀತಿಯ ಹೆಸರಲ್ಲಿ ಇಂತಹ ಮದುವೆಗಳು ನಡೆದಾಗ ಕೆಲವರಿಗೆ ಆಶ್ಚರ್ಯ ಎನಿಸಬಹುದು ಆದರೆ ಅವುಗಳ ನಿಜ ಕಾರಣ ಕೇಳಿದರೆ ನಿಜವಾಗಿಯೂ ಮೆಚ್ಚಬೇಕು ಅನಿಸುತ್ತದೆ. ಇಂತಹದೇ ಒಂದು ಪ್ರಕರಣ ಇತ್ತೀಚೆಗೆ ನಡೆದಿದೆ ಹಾಗೂ ಈ ಮದುವೆಗೆ ಸಂಬಂಧಪಟ್ಟ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಪ್ರಕರಣದ ವಿಷಯ ಏನೆಂದರೆ 18 ವರ್ಷದ ಹುಡುಗಿ 61 ವಯಸ್ಸಿನ ವೃದ್ಧನನ್ನು ಮದುವೆಯಾಗಿದ್ದಾಳೆ. ತನಕ್ಕಿಂತ ಮೂರು ಪಟ್ಟು ಹೆಚ್ಚು ಎಂದರೆ 43 ವರ್ಷ ವಯಸ್ಸಿನ ಅಂತರ ಇರುವವರನ್ನು ಈಕೆ ಮದುವೆಯಾಗಲು ಕಾರಣ ಕೇಳಿದಕ್ಕೆ ಅವಳು ಹೇಳುತ್ತಿರುವುದು ಆ ವ್ಯಕ್ತಿಯ ಮೇಲಿರುವ ಪ್ರೀತಿ ಎಂದು. ಈ ಕಾರಣಕ್ಕಾಗಿಯೇ ಯುವತಿ ಹಠಬಿದ್ದು ಆತನನ್ನು ವಿವಾಹವಾಗಿದ್ದಾಳಂತೆ. ಇದು ಸಾಧ್ಯವೇ ಎಂದು ಎಲ್ಲರಿಗೂ ಆಶ್ಚರ್ಯ ಎನಿಸಬಹುದು ಆದರೆ ನಿಜಕ್ಕೂ ಇಂಥದೊಂದು ಪ್ರಕರಣದ ಬಗ್ಗೆ ಇತ್ತೀಚೆಗೆ ಎಲ್ಲರಿಗೂ ತಿಳಿಯುತ್ತಿದೆ.
ಆಸಿಯಾ ಎನ್ನುವ 18 ವರ್ಷದ ಹುಡುಗಿ ಶಂಶದ್ ಎನ್ನುವ 61 ವರ್ಷ ವಯಸ್ಸಿನ ವೃದ್ಧನನ್ನು ಪ್ರೀತಿಸಿ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದಾಳೆ. ಶಂಶದ್ ಅವರು ಒಬ್ಬ ಸಮಾಜ ಸೇವಕ, ಆಪಾರ ಆಸ್ತಿ ಹೊಂದಿರುವ ಪುರುಷ ಜೊತೆಗೆ ಬಡವರಿಗೆ ಸಹಾಯ ಮಾಡುವುದು ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವುದು ಈ ರೀತಿ ಕೆಲಸಗಳಲ್ಲಿ ತೊಡಗಿದ್ದರು. ಇವರ ಈ ಗುಣವೇ ಆಸಿಯಾಗೆ ಇಷ್ಟವಾಗಿ ಮದುವೆಯಾಗಿದ್ದಾಳೆ ಶಂಶದ್ ಕೂಡ ತುಂಬಾ ಒಳ್ಳೆಯ ವ್ಯಕ್ತಿಯಾಗಿತ್ತು ಆಸಿಯಾ ಮಾತ್ರವಲ್ಲದೇ ಆಸಿಯಾ ಕುಟುಂಬದ ಎಲ್ಲರನ್ನು ಕೂಡ ಸಂತೋಷವಾಗಿ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಇಷ್ಟು ಕಾರಣ ಸಾಕಲ್ಲವೇ ಒಬ್ಬ ಯುವತಿ ಸಂತೋಷದಿಂದ ಮದುವೆಗೆ ಜೀವನಕ್ಕೆ ಕಾಲಿಡಲು. ಈ ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.