ಕಳೆದ ಕೆಲವು ದಿನಗಳಿಂದ ಕನ್ನಡ ಹಾಗೂ ತೆಲುಗು ಭಾಷೆಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಿರ್ಮಾಪಕ ನರೇಶ್ ಅವರ ಸಂಬಂಧದ ವಿಚಾರ ಸುದ್ದಿಯಾಗುತ್ತಲೇ ಇದೆ. ಮೊದಮೊದಲಿಗೆ ಇವರಿಬ್ಬರಿಗೂ ಮದುವೆ ಆಗಿದೆ ಎಂದು ಶುರುವಾದ ಈ ಸುದ್ದಿ ಎಲ್ಲಾ ಕಡೆ ಹಬ್ಬುತ್ತಿದ್ದಂತೆ ದಿಢೀರ್ ಎಂದು ಮಾಧ್ಯಮಗಳ ಮುಂದೆ ಬಂದ ನರೇಶ್ ಅವರ ಮೂರನೇ ಪತ್ನಿ ಇವರಬ್ಬಿರ ನಡುವೆ ಇರುವುದು ಬಿಜಿನೆಸ್ ಅಷ್ಟೇ ಎನ್ನುವ ಹೇಳಿಕೆಯನ್ನು ಕೊಟ್ಟರು. ಹಾಗೆಯೇ ಮಾಧ್ಯಮಗಳ ಮುಂದೆ ಕೂತು ತಮ್ಮ ಅಳಲನ್ನು ತೋಡಿಕೊಂಡ ರಮ್ಯ ಅವರು ಪವಿತ್ರ ಲೋಕೇಶ್ ಅವರ ಮೇಲೆ ಹಲವಾರು ಆ.ರೋ.ಪ.ಗಳನ್ನು ಕೂಡ ಹೊರಿಸಿದರು. ಮತ್ತು ಮಾಧ್ಯಮಗಳು ಲೋಕೇಶ್ ಅವರ ಪತಿ ಸುಚೇಂದ್ರ ಪ್ರಸಾದ್ ಅವರನ್ನು ಕೂಡ ಹುಡುಕಿಕೊಂಡು ಹೋಗಿ ಹಲವಾರು ಪ್ರಶ್ನೆಗಳನ್ನು ಮಾಡಿದ್ದರು.
ಅಲ್ಲಿಯೂ ಕೂಡ ಸುಚೇಂದ್ರಾ ಪ್ರಸಾದ್ ಅವರು ಪವಿತ್ರ ಲೋಕೇಶ್ ಅವರ ಬಗ್ಗೆ ಮಾತನಾಡಿ ಅವರ ವ್ಯಕ್ತಿತ್ವ ಎಂತಹದ್ದು ಎಂದು ಎಲ್ಲರಿಗೂ ತಿಳಿಯುವ ಹಾಗೆ ಮಾತನಾಡಿದರು. ಇಷ್ಟಕ್ಕೆ ನಿಲ್ಲದ ಪವಿತ್ರ ಲೋಕೇಶ್ ಅವರು ಇವರಿಬ್ಬರ ಹೇಳಿಕೆಗಳಿಗೆ ತಿರುಗೇಟು ಕೊಡುವ ಸಲುವಾಗಿ ತಾವೇ ಒಂದು ಪ್ರೆಸ್ ಮೀಟ್ ಕೂಡ ಕರೆದಿದ್ದರು. ಅಲ್ಲಿ ಅವರ ಮೇಲೆ ಇರುವ ಆರೋಪಗಳನ್ನು ಸಮರ್ಥಿಸಿಕೊಂಡ ಪವಿತ್ರ ಲೋಕೇಶ್ ಅವರು ರಮ್ಯಾ ಮತ್ತು ಸುಚೇಂದ್ರ ಪ್ರಸಾದ್ ಅವರು ತಮ್ಮ ಬಗ್ಗೆ ಆಡಿರುವ ಅಷ್ಟು ಮಾತುಗಳು ಸಂಪೂರ್ಣವಾಗಿ ನಿಜವಲ್ಲ ಎಂದು ವಾದ ಮಾಡಿದರು. ಹೀಗೆ ನಡೆಯುತ್ತಿದ್ದ ವಾಕ್ ಸಮರ ಪ್ರತಿದಿನ ಕನ್ನಡಿಗರಿಗೆ ಟಿವಿ ಮುಂದೆ ಕುಳಿತು ನೋಡಿ ನೋಡಿ ಬೇಸವರನ್ನು ಉಂಟು ಮಾಡಿತ್ತು ಜೊತೆಗೆ ತೆಲುಗು ಪ್ರೇಕ್ಷಕರು ಕೂಡ ಇದರಿಂದ ಬೇಸತ್ತು ಹೋದರು.
ನಂತರ ಮೈಸೂರಿನ ಹೋಟೆಲ್ ಮುಂದೆ ನಡೆದ ಹೈಡ್ರಾಮದಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರು ನಡೆದುಕೊಂಡ ರೀತಿ ನೋಡಿದರೆ ನಿಜಕ್ಕೂ ಎಲ್ಲಾರಿಗೂ ಅಸಹ್ಯ ಎನಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋಗಳನ್ನು ನೋಡುತ್ತಿರುವ ನೆಟ್ಟಿಗರು ಕೂಡ ಕೋಪಗೊಂಡು ಇವರ ನಡೆಗಳ ಬಗ್ಗೆ ಕಮೆಂಟ್ ಮಾಡಿ ಉಗಿಯುತ್ತಿದ್ದಾರೆ. ಪವಿತ್ರ ಲೋಕೇಶ್ ಅವರು ಹಣದ ಆಸೆಗಾಗಿ ಹೀಗೆಲ್ಲ ಮಾಡಿದ್ದಾರೆ ಎನ್ನುವ ಅಪವಾದ ಕೆಲವು ಜನ ಹೇಳುವುದಾದರೆ, ಪವಿತ್ರ ಲೋಕೇಶ್ ಅವರು ಕೂಡ ಅವರ ತಂದೆ ಮೈಸೂರು ಲೋಕೇಶ್ ಅವರ ರೀತಿಯಲ್ಲೇ ನಡೆದುಕೊಂಡು ಅಪಮಾನ ಮಾಡಿಕೊಂಡರು ಎಂದು ಕೆಲವು ಜನ ಹೇಳುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಪವಿತ್ರ ಲೋಕೇಶ್ ಅವರು ತಾವು ಮಾಡಿದ್ದೆ ಸರಿ ಎನ್ನುವ ರೀತಿ ಇದ್ದರು ಆದರೆ ಈಗ ತೆಲುಗು ಚಿತ್ರರಂಗ ಅವರಿಗೊಂದು ಶಾಕ್ ಸುದ್ದಿ ನೀಡಿದೆ.
ಇತ್ತೀಚಿಗೆ ತೆಲುಗು ಚಿತ್ರರಂಗದಲ್ಲಿ ನಟಿ ಪವಿತ್ರ ಲೋಕೇಶ್ ಅವರು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದರು ಬಹುತೇಕ ಎಲ್ಲಾ ಸ್ಟಾರ್ ನಟರಿಗೆ ತಾಯಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ತೆಲುಗು ಚಿತ್ರರಂಗ ಪವಿತ್ರ ಲೋಕೇಶ್ ಅವರಿಗೆ ಒಳ್ಳೆಯ ಸ್ಥಾನ ನೀಡುತ್ತಿದೆ ಎಂದು ಎಲ್ಲರೂ ಖುಷಿಪಟ್ಟಿದ್ದರು. ಆದರೆ ಪವಿತ್ರ ಅವರ ಈ ಬೆಳವಣಿಗೆಗಳಿಂದ ಬೇಸತ್ತ ಚಿತ್ರರಂಗ ತಾಯಿ ಪಾತ್ರಕ್ಕೆ ಇವರು ಸೂಕ್ತವಲ್ಲ ಆ ಪಾತ್ರಕ್ಕೆ ಇವರ ನ್ಯಾಯ ಒದಗಿಸುವುದಿಲ್ಲ ಎನ್ನುವ ನೆಪ ಹೇಳಿ ಈಗಾಗಲೇ ಒಪ್ಪಿಕೊಂಡಿದ್ದ ನಾಲ್ಕು ಸಿನಿಮಾಗಳಿಂದ ಪವಿತ್ರ ಲೋಕೇಶ್ ಅವರ ಹೆಸರನ್ನು ಕೈ ಬಿಟ್ಟಿದ್ದಾರಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಪವಿತ್ರ ಲೋಕೇಶ್ ಅವರನ್ನು ತೆಲುಗು ಸಿನಿಮಾರಂಗದಿಂದ ಬ್ಯಾನ್ ಮಾಡಿರುವುದು ಸರಿನಾ ಅಥವಾ ತಪ್ಪಾ ಎಂಬುದನ್ನು ಕಾಮೆಂಟ್ ಮುಖಾಂತರ ತಿಳಿಸಿ.