Home Entertainment ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?

ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?

0
ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?

ರಾಜ್ ಕುಟುಂಬ ಅಭಿಮಾನಿಗಳೇ ದೇವರು ಎಂದು ನಂಬಿ ಬದುಕುತ್ತಿದೆ. ಆದರೆ ಕರ್ನಾಟಕದ ಜನತೆ ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳ ದೇವರು ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಕಾರಣ ಇಷ್ಟೇ ಅಪ್ಪು ಅವರು ಅಭಿಮಾನಿಗಳ ಮೇಲೆ ಇಟ್ಟಿದ್ದ ಪ್ರೀತಿ ವಿಶ್ವಾಸ ಹಾಗೂ ಕರ್ನಾಟಕದ ಜನತೆ ಮೇಲೆ ಅಪ್ಪು ಅವರಿಗಿಂತ ಕಾಳಜಿ ಮತ್ತು ಸಮಾಜಕ್ಕಾಗಿ ಅಪ್ಪು ಅವರು ಮಾಡಿದ್ದ ಸಮಾಜ ಸೇವೆ. ಅಪ್ಪು ಅವರನ್ನು ಒಬ್ಬ ನಟನಾಗಿ ಇಡೀ ಕರ್ನಾಟಕವೇ ಬಾಲ್ಯದಿಂದಲೇ ಒಪ್ಪಿಕೊಂಡಿತ್ತು ಅಪ್ಪು ಅವರ ನಟನೆ ಅಪ್ಪು ಅವರ ಹಾಡಿನ ಶೈಲಿ, ಅವರ ಮಧುರವಾದ ಸ್ವರ ಎಲ್ಲಕ್ಕಿಂತ ಹೆಚ್ಚಾಗಿ ಅವರು ಮಾಡುತ್ತಿದ್ದ ಸ್ಟಂಟ್ಸ್ ಗಳು ಹಾಗೂ ಅವರ ಡ್ಯಾನ್ಸ್ ಗೆ ಫಿದಾ ಆಗದವರೆಲ್ಲ ಇಲ್ಲ. ಕರ್ನಾಟಕದ ಪ್ರತಿ ಮನೆ ಮನೆಗಳಲ್ಲೂ ಕೂಡ ಅಪ್ಪು ಅಭಿಮಾನಿಗಳು ಇದ್ದರು.

ಇದಕ್ಕೆ ಸಾಕ್ಷಿ ಎಂದರೆ ಕರ್ನಾಟಕದಲ್ಲಿ ಅಲ್ಲದೆ ಭಾರತದಲ್ಲಿಯೇ ಇವರಿಗೆ ಯಾರ ಸಾವಿಗೂ ಸೇರದಷ್ಟು ಅಭಿಮಾನಿಗಳು ಸುಮಾರು 25 ಲಕ್ಷಕ್ಕೂ ಹೆಚ್ಚಿನ ಜನ ಬಂದು ಅಪ್ಪು ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು ಹಾಗೂ ಕೊನೆಯದಾಗಿ ಅವರ ದರ್ಶನ ಪಡೆದಿದ್ದರು. ಆದರೆ ಅಪ್ಪು ಅವರ ಸಾ.ವಿ.ನ ಬಳಿಕ ಅವರು ಮಾಡುತ್ತಿದ್ದ ಸಮಾಜ ಸೇವೆ ಬಗ್ಗೆ ಜನರಿಗೆ ತಿಳಿದ ಬಳಿಕ ಅದು ಇನ್ನೂ ಎರಡು ಪಟ್ಟು ಹೆಚ್ಚಾಯಿತು ಎಂದು ಹೇಳಬಹುದು. ಇಂದಿಗೂ ಸಹ ಅಪ್ಪು ಅವರ ಸ್ಮಾರಕಕ್ಕೆ ಭೇಟಿ ನೀಡುತ್ತಿರುವ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ಅಪ್ಪು ಅವರನ್ನು ಕರ್ನಾಟಕದಲ್ಲಿ ಒಬ್ಬ ದೇವರ ರೀತಿಯಲ್ಲಿ ಜನರು ಕಾಣುತ್ತಿದ್ದಾರೆ. ಹಾಗೂ ಅಪ್ಪು ಅವರ ವ್ಯಕ್ತಿತ್ವ ಏನು ಎನ್ನುವುದನ್ನು ಅವರ ಹತ್ತಿರದವರಲ್ಲಿ ಕೇಳಿದರೆ ನಿಜಕ್ಕೂ ಕಣ್ಣಂಚಿನಲ್ಲಿ ನೀರು ತುಂಬುತ್ತದೆ.

https://youtu.be/3HUsMR6MNwU

ಅಜಾತಶತ್ರು ಅಪ್ಪು ಅವರು ಎಂದು ಹೇಳಬಹುದು ಏಕೆಂದರೆ ಕನ್ನಡದಲ್ಲಿ ಸ್ಟಾರ್ ವಾರ್ ಇರುವುದು ಎಲ್ಲರಿಗೂ ತಿಳಿದಿದೆ. ಆದರೆ ಪುನೀತ್ ರಾಜಕುಮಾರ್ ಅವರು ಯಾವ ನಟನೊಂದಿಗೂ ಇದುವರೆಗೆ ವಿವಾದ ಮಾಡಿಕೊಂಡಿಲ್ಲ. ಪ್ರತಿಯೊಬ್ಬರೂ ಅಪ್ಪು ಅವರ ಸ್ನೇಹವನ್ನು ಬಯಸುತ್ತಿದ್ದರು ಅಷ್ಟು ಸಹೃದಯಿ ಸಹಜ ಜೀವಿ ಅಪ್ಪು ಅವರು. ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಕೂಡ ಅಷ್ಟೇ ಇಷ್ಟಪಡುತ್ತಿದ್ದರು ಅದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಒಮ್ಮೆ ವ್ಯಕ್ತಿ ಒಬ್ಬ ಪುನೀತ್ ರಾಜಕುಮಾರ್ ಅವರಿಗೆ ಪ್ರೀತಿಯಿಂದ ಹಾಗೂ ಅಭಿಮಾನದಿಂದ ಚಿನ್ನದ ಸರವನ್ನು ಉಡುಗೊರೆ ಮಾಡಿಸಿಕೊಂಡು ತಂದಿದ್ದರು ಅದಕ್ಕೆ ಡಾಕ್ಟರ್ ರಾಜಕುಮಾರ್ ಅವರ ಡಾಲರ್ ಕೂಡ ಇತ್ತು. ಅದನ್ನು ಪುನೀತ್ ರಾಜಕುಮಾರ್ ಅವರ ಕೊರಳಿಗೆ ಅಭಿಮಾನಿಯೇ ಬಹಳ ಇಷ್ಟಪಟ್ಟು ಹಾಕಿದ್ದರು. ಅಭಿಮಾನಿ ಮನಸ್ಸನ್ನು ನೋಯಿಸಲು ಇಷ್ಟ ಪಡದ ಪುನೀತ್ ರಾಜಕುಮಾರ್ ಅವರು ಅದನ್ನು ಹಾಕಿಸಿಕೊಂಡರು.

ಆದರೆ ಒಂದು ಕ್ಷಣದ ನಂತರ ಅಷ್ಟೇ ನಯವಾಗಿ ನಾನು ಹಾಕಿಕೊಂಡರೆ ಮತ್ತೆ ತೆಗೆಯಬೇಕಾಗುತ್ತದೆ ಆದರೆ ಅದನ್ನು ನೀವೇ ಯಾವಾಗಲೂ ಹಾಕಿಕೊಂಡಿರಿ ಎಂದು ಪ್ರೀತಿಯಿಂದ ಅಭಿಮಾನಿಯ ಕೊರಳಿಗೆ ಪುನೀತ್ ಅವರೇ ಮತ್ತೆ ಹಾಕಿಬಿಟ್ಟರು. ಆ ವ್ಯಕ್ತಿ ಬೇರೆ ಯಾರು ಅಲ್ಲ ಶ್ರೀನಿವಾಸ್ ಎನ್ನುವ ರಾಜ್ ಕುಟುಂಬದ ಬಹುದೊಡ್ಡ ಅಭಿಮಾನಿ. ಹಾಸನದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಇವರು ಪುನೀತ್ ಕುಟುಂಬಕ್ಕೆ ತುಂಬಾ ಆತ್ಮೀಯರು. ಹಿಂದೊಮ್ಮೆ ಪುನೀತ್ ರಾಜಕುಮಾರ್ ಅವರಿಗೆ ಬೆಳ್ಳಿಯಲ್ಲಿ ಡಾಕ್ಟರ್ ರಾಜಕುಮಾರ್ ಅವರ ಫೋಟೋವನ್ನು ಕೂಡ ತಿದ್ದಿಸಿ ಗಿಫ್ಟ್ ಮಾಡಿದ್ದರು. ಇಂದಿಗೂ ಸಹ ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ ಆ ಗಿಫ್ಟ್ ಇದೆ. ತಮ್ಮ ಮನೆಯಲ್ಲಿ ಕೂಡ ಅದೇ ರೀತಿ ಹೋಲುವ ಫೋಟೋವನ್ನು ಇಟ್ಟುಕೊಂಡು ಪೂಜಿಸುತ್ತಿದ್ದಾರೆ ಈ ಅಭಿಮಾನಿ. ಅಭಿಮಾನಿ ತಂದಿದ್ದ ಚೈನನ್ನು ಮತ್ತೆ ಅವರಿಗೆ ಹಿಂತಿರುಗಿಸಿದರೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

LEAVE A REPLY

Please enter your comment!
Please enter your name here