Friday, June 9, 2023
HomePublic Vishyaಈ ಎರಡು ವರ್ಷದ ಮಗು ರೈಲ್ವೆ ಸ್ಟೇಷನ್ ನಲ್ಲಿ ಮಾಡಿದ ಕೆಲಸಕ್ಕೆ ಇಂದು ಇಡೀ ದೇಶವೇ...

ಈ ಎರಡು ವರ್ಷದ ಮಗು ರೈಲ್ವೆ ಸ್ಟೇಷನ್ ನಲ್ಲಿ ಮಾಡಿದ ಕೆಲಸಕ್ಕೆ ಇಂದು ಇಡೀ ದೇಶವೇ ಸೆಲ್ಯೂಟ್ ಮಾಡ್ತಿದೆ.! ಅಷ್ಟಕ್ಕೂ ಆ ಮಗು ಮಾಡಿದ್ದೇನು.? ಗೊತ್ತ.!

 

ತಾಯಿ ಮಕ್ಕಳ ಬಾಂಧವ್ಯ ಎಂತದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ತಾಯಿ ಮತ್ತು ಮಗುವಿನ ನಡುವೆ ಇರುವ ಪ್ರೀತಿ ಪ್ರೇಮ ಬಾಂಧವ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಒಬ್ಬ ತಾಯಿಯು ತನ್ನ ಮಗುವಿಗಾಗಿ ಏನು ಬೇಕಾದರೂ ಮಾಡಲು ಮುಂದಾಗುತ್ತಾಳೆ. ಅದೇ ರೀತಿ ತಾಯಿಯಲ್ಲಿರುವಷ್ಟು ಪ್ರೀತಿ ವಾತ್ಸಲ್ಯ ಮಕ್ಕಳಲ್ಲೂ ಇರುತ್ತದೆ ಎಂಬುದನ್ನು ನಿರೂಪಿಸುವಂತಹ ಒಂದು ಘಟನೆ ನಡೆದಿದೆ. ಅದು ಒಂದು ರೈಲು ನಿಲ್ದಾಣದಲ್ಲಿ ಜ್ಞಾನ ತಪ್ಪಿ ಬಿದ್ದಿದ್ದ ತನ್ನ ತಾಯಿಯನ್ನು ಈ ಎರಡು ವರ್ಷದ ಪುಟಾಣಿ ಮಗು ಹೇಗೆ ಕಾಪಾಡಿಕೊಂಡಿತು ಎಂದು ನೋಡಿದರೆ ಈ ಮಗುವಿಗೆ ಶಭಾಷ್ ಹೇಳಲೆಬೇಕು ಎನ್ನಿಸುತ್ತದೆ.

ಉತ್ತರಪ್ರದೇಶ ರಾಜ್ಯದ ಫರೋಕಬಾದ್ ನ ರೈಲು ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆ ಒಬ್ಬ ಮಹಿಳೆಯು ತನ್ನ ಎರಡು ವರ್ಷದ ಮಗುವಿನ ಜೊತೆ ಮತ್ತೊಂದು ಆರು ತಿಂಗಳ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ರೈಲ್ವೆ ಸ್ಟೇಷನ್ ಗೆ ಬಂದಿರುತ್ತಾಳೆ. ಈ ಮಹಿಳೆಯ ಜೊತೆ ಬೇರೆ ಯಾರು ಇರುವುದಿಲ್ಲವಾದ್ದರಿಂದ ಇಬ್ಬರು ಮಕ್ಕಳನ್ನು ಮಹಿಳೆಯೆ ನೋಡಿಕೊಳ್ಳಬೇಕಾಗಿತ್ತು. ಆ ಮಹಿಳೆಯು ಹತ್ತಬೇಕಿದ್ದ ರೈಲು ಬರಲು ಇನ್ನೂ ಅರ್ಧ ಗಂಟೆಯ ಸಮಯವಿತ್ತು ಆ ಸಮಯದಲ್ಲಿ ಮಹಿಳೆಯು ಇದ್ದಕ್ಕಿದ್ದಂತಲೂ ಅಥವಾ ಆರೋಗ್ಯ ಸಮಸ್ಯೆಗಳಿಂದಲೂ ಜ್ಞಾನ ತಪ್ಪಿ‌ ಪ್ಲಾಟ್ ಫಾರಂ ಮೇಲೆ ಬೀಳುತ್ತಾಳೆ.

ಆ ಇಬ್ಬರು ಪುಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಾಗಿದ್ದ ಈಕೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಆ 6 ತಿಂಗಳ ಪುಟ್ಟ ಮಗು ಕೂಡ ಅತ್ತು ಅತ್ತು ಪ್ರಜ್ಞೆ ತಪ್ಪಿದೆ. ಆ ಮಹಿಳೆಯು ತನ್ನ ಮಕ್ಕಳೊಂದಿಗೆ ಆ ಪ್ಲಾಟ್ ಫಾರ್ಮ್ ನ ಕೊನೆಯ ಮೂಲೆಯಲ್ಲಿ ಕೂತಿದ್ದರಿಂದ ಬೇರೆ ಯಾರು ಕೂಡ ಅಲ್ಲಿ ಇರಲಿಲ್ಲ‌. ಆರು ತಿಂಗಳ ತನ್ನ ತಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದನ್ನು ಆ ಎರಡು ವರ್ಷದ ಮಗು ನಿಂತು ನೋಡುತ್ತಿತ್ತು. ನಂತರ ಯಾರೂ ಊಹಿಸಲಾಗದಂತಹ ಆಶ್ಚರ್ಯಕರ ಕೆಲಸ ಒಂದನ್ನು ಆ ಮಗು ಮಾಡಿದೆ.

ತಕ್ಷಣ ಆ ಮಗು ಮೆಲ್ಲನೆ ಹೆಜ್ಜೆಗಳನ್ನು ಹಾಕುತ್ತಾ ಪ್ಲ್ಯಾಟ್ ಫಾರ್ಮ್ ನಿಂದ ಕೆಳಗೆ ಇಳಿದು ಮುಖ್ಯದ್ವಾರದ ಬಳಿ ಬಂದ್ದು ನಿಂತು ಅಲ್ಲಿ ಓಡಾಡುತ್ತಿದ್ದ ಜನಗಳನ್ನು ನೋಡುತ್ತಾ ನಿಂತಿರುತ್ತದೆ. ಆವಾಗ ಅಲ್ಲಿ ಇದ್ದಂತಹ ಮಹಿಳಾ ಪೊಲೀಸ್ ಈ ಮಗುವನ್ನು ಗಮನಿಸಿ ಯಾರದೋ ಮಗು ಒಂಟಿಯಾಗಿ ಸ್ಟೇಷನ್ ನಲ್ಲಿ ಯಾಕೆ ಓಡಾಡುತ್ತಿದೆ ಎಂದು ಗಮನಿಸಿ ನಂತರ ಅದು ಯಾರನ್ನೋ ಹುಡುಕುತ್ತಿದೆ ಎಂದು ತಿಳಿದು ಆ ಮಗುವಿನ ಬಳಿ ಬಂದು ಏನಾಯ್ತು ಮಗು ಎಂದು ಕೇಳುತ್ತಾರೆ ಆಗ ಮಗುವು ತನ್ನ ತೊದಲು ಮಾತುಗಳಿಂದಲೆ ನಡೆದ ಘಟನೆಯನ್ನು ವಿವರಿಸುತ್ತದೆ.

ಆದರೆ ಪೊಲೀಸರಿಗೆ ಅದು ಸರಿಯಾಗಿ ಅರ್ಥವಾಗುವುದಿಲ್ಲ ನಂತರ ಆ ಮಗು ಪೊಲೀಸರ ಕೈ ಹಿಡಿದುಕೊಂಡು ವೇಗವಾಗಿ ತನ್ನ ತಾಯಿ ಮತ್ತು ತಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದ ಜಾಗದ ಬಳಿ ಕರೆದುಕೊಂಡು ಹೋಗಿ ಕಣ್ಣೀರು ಹಾಕುತ್ತಾ ಸಹಾಯ ಮಾಡುವಂತೆ ಕೋರುತ್ತದೆ. ಪ್ರಜ್ಞೆ ಇಲ್ಲದೆ ಮಲಗಿದ್ದಂತಹ ಮಹಿಳೆ ಮತ್ತು ಮಗುವನ್ನು ನೋಡಿ ಪೊಲೀಸರು ಶಾ-ಕ್ ಆಗಿ ತಕ್ಷಣ‌ ಆಂಬುಲೆನ್ಸ್ ಕರೆಸಿ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಅಸಲಿಗೆ ಆ ಮಹಿಳೆಗೆ ಸಕ್ಕರೆ ಕಾಯಿಲೆ ಇದ್ದದ್ದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಪೂರ್ತಿಯಾಗಿ ಕಡಿಮೆಯಾಗಿ ಜ್ಞಾನ ತಪ್ಪಿ ಬಿದ್ದಿದ್ದಾರೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಕ್ಕೆ ಏನು ಅಪಾಯ ಇಲ್ಲ ಎಂದು ವೈದ್ಯರು ತಿಳಿಸುತ್ತಾರೆ ಇನ್ನು ಆ ತಾಯಿಗೆ ಪ್ರಜ್ಞೆ ಬಂದಿಲ್ಲದರಿಂದ ಆ ಮಹಿಳೆ ಎಲ್ಲಿಯವರು ಎಂಬ ವಿವರ ತಿಳಿದು ಬಂದಿಲ್ಲ. ಹೀಗೆ ಎರಡು ವರ್ಷದ ಆ ಮಗು ತನ್ನ ತಾಯಿ ಮತ್ತು ತಮ್ಮನನ್ನು ಕಾಪಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.