200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಲು ಈ ಅನ್ನು ಡೌನ್ಲೋಡ್ ಮಾಡಿಕೊಳ್ಳಿ…

 

ಕಾಂಗ್ರೆಸ್ ಪಕ್ಷವು 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಮುಖ್ಯವಾಗಿ 5 ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿಗೆ ತರುತ್ತೇವೆ ಎಂದು ಹೇಳಿ ಮತಯಾಚನೆ ಮಾಡಿದ್ದರು. ಅಂತಿಮವಾಗಿ ಕಾಂಗ್ರೆಸ್ ಪಕ್ಷವೇ ಗೆದ್ದು ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ಸ್ಥಾಪಿಸಿದೆ. ಈಗ ಜನತೆಗೆ ಕೊಟ್ಟಿದ್ದ ವಚನದಂತೆ ನುಡಿದಂತೆ ನಡೆದು ಆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಕ್ಯಾಬಿನೆಟ್ ಜೊತೆ ಪ್ರತಿಬಾರಿ ಈ ವಿಚಾರಗಳಾಗಿ ಚರ್ಚಿಸಿ ಇದಕ್ಕೆ ಸಂಬಂಧಿಸಿದಂತೆ ಆದೇಶ ಪತ್ರಗಳನ್ನು ಕೂಡ ಹೊರಡಿಸುತ್ತಿದ್ದಾರೆ. ಜೊತೆಗೆ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳು ಕೂಡ ಈ ಯೋಜನೆಗಳಿಗೆ ಸಂಬಂಧಪಟ್ಟ ಹಾಗೆ ಮೂಲಗಳನ್ನು ಹುಡುಕಿ ಮಾಹಿತಿಯನ್ನು ಹಂಚುತ್ತಿವೆ. ಅದೇ ರೀತಿ ಗೃಹಜ್ಯೋತಿ ಯೋಜನೆ ಕುರಿತು ಸಾಕಷ್ಟು ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿವೆ.

ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರಂಟಿಯೇ ಗೃಹಜ್ಯೋತಿ ಯೋಜನೆ ಆಗಿತ್ತು. ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶವನ್ನು ಹೊಂದಿದ್ದ ಈ ಗೃಹ ಜ್ಯೋತಿ ಯೋಜನೆಯ ಮೂಲಕ ಕರ್ನಾಟಕದ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಕಾಂಗ್ರೆಸ್ ಪಕ್ಷವು ಮಾತು ಕೊಟ್ಟಿತ್ತು. ಈಗ ಇದರಲ್ಲಿ ಕೆಲವು ಮಾರ್ಪಾಡುಗಳನ್ನು ಮತ್ತು ಕಂಡಿಶನ್ ಗಳನ್ನು ಹಾಕಿ ಈ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ.

ಜೊತೆಗೆ ಇಂಧನ ಇಲಾಖೆ ಜೊತೆ ಚರ್ಚೆ ಮಾಡಿ ಇಂಧನ ಸಚಿವರಾದ ಜಾರ್ಜ್ ಅವರು ಕೂಡ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಆಗಬಹುದಾದ ಸಾಧಕ ಬಾಧಕಗಳು ಏನು ಎನ್ನುವುದರ ವರದಿಯನ್ನು ಒಪ್ಪಿಸಿದ್ದಾರೆ. ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಯೋಜನೆ ಅನಿಷ್ಠಾನಕ್ಕೆ ಬೇಕಾದ ಮಾರ್ಗಸೂಚಿ ಸಿದ್ಧವಾಗುತ್ತಿದೆ.

ಮುಖ್ಯವಾಗಿ ಈಗ ಸರ್ಕಾರದ ಹೊರಡಿರುವ ಆದೇಶದ ಪ್ರಕಾರ ವಿದ್ಯುತ್ ಖಾತೆ ಸಂಖ್ಯೆಗೆ ಅಥವಾ ಕಸ್ಟಮರ್ ಐಡಿ ಸಂಖ್ಯೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಕಡ್ಡಾಯ. ಪ್ರತಿ ಕುಟುಂಬದ ಮಾಲೀಕನು ಕೂಡ ಆತನ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಇವುಗಳಿಗೆ ಲಿಂಕ್ ಮಾಡಬೇಕು ಎನ್ನುವುದನ್ನು ಹೇಳಲಾಗುತ್ತಿದೆ ಜೊತೆಗೆ ಬಾಡಿಗೆ ಮನೆಯಲ್ಲಿ ಇರುವವರೆಗೂ ಕೂಡ ಗೃಹಜ್ಯೋತಿ ಯೋಜನೆಯನ್ನು ನೀಡುವ ಉದ್ದೇಶದಿಂದ ಅವುಗಳಿಗೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಚರ್ಚೆಯು ನಡೆಯುತ್ತಿದೆ.

ಹಾಗೆಯೇ ಈ ಯೋಜನೆಯ ಫಲಾನುಭವಿಗಳಾಗಲು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ಸರ್ಕಾರವೇ ಸ್ಪಷ್ಟವಾಗಿ ತಿಳಿಸಿದೆ ಇದರ ಜೊತೆ ಇಂಧನ ಇಲಾಖೆಯ ಮೂಲದಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅದೇನೆಂದರೆ ಇಂಧನ ಇಲಾಖೆ ವತಿಯಿಂದ ಆಪ್ ಒಂದು ಬಿಡುಗಡೆ ಆಗುತ್ತಿದ್ದು, ಆಂಡ್ರಾಯ್ಡ್ ಫೋನ್ ಹಾಗೂ ಸ್ಮಾರ್ಟ್ಫೋನ್ ಹೊಂದಿರುವವರು ಪ್ಲೇ ಸ್ಟೋರ್ ಗಳ ಮೂಲಕ ಅವುಗಳನ್ನು ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಈ ಯೋಜನೆಗೆ ರಿಜಿಸ್ಟರ್ ಆಗಬಹುದು ಎನ್ನುವುದನ್ನು ಹೇಳಲಾಗುತ್ತಿದೆ.

ಇದಕ್ಕೆ ಸಂಬಂಧಪಟ್ಟ ತಾಂತ್ರಿಕ ಕೆಲಸಗಳಿಗೆ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ ಜೂನ್ 15ರಿಂದ ಇದನ್ನು ಬಿಡುಗಡೆ ಮಾಡಿ ಅವಕಾಶ ನೀಡಲಾಗುತ್ತದೆ ಎನ್ನುವ ಮಾಹಿತಿ ಇದೆ. ಹಾಗಾಗಿ CSC ಕೇಂದ್ರಗಳು ಮಾತ್ರವಲ್ಲದೆ ಮೊಬೈಲ್ ಗಳ ಮೂಲಕವೂ ಕೂಡ ಈ ರೀತಿ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಪಡೆದುಕೊಳ್ಳಲು ಅರ್ಜಿ ಹಾಕಬಹುದು. ಸರ್ಕಾರದಿಂದಲೇ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಆಗಲಿದೆ.

Leave a Comment