2023ರ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ BJP ಸರ್ಕಾರ, ಡಬಲ್ ಇಂಜಿನ್ ಸರ್ಕಾರ ಕೊಟ್ಟಿರುವ ಭರವಸೆಗಳು ಏನೇನು ಗೊತ್ತಾ.?

 

ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರಜಾಪ್ರಭುತ್ವದ ಹಬ್ಬದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯವಾಗಿ ನಡೆಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿಕೊಳ್ಳುತ್ತಿದೆ,ಹಾಗೆಯೇ ತಪ್ಪದೇ ಈ ಬಾರಿ ಮತದಾನ ಮಾಡುವಂತೆ ಜನರ ಮನವೊಲಿಸುತ್ತಿದೆ. ಇದರೊಂದಿಗೆ ರಾಜಕೀಯ ಪಕ್ಷಗಳಿಂದಲೂ ಕೂಡ ಜನರ ಮತಭೇಟೆಯ ಭರಾಟೆ ಭರ್ಜರಿಯಾಗಿ ಸಾಗುತ್ತಿದ್ದು, ದಿನ ಸಮೀಪವಾಗುತ್ತಿದ್ದಂತೆ ಎಲ್ಲೆಡೆ ರೋಡ್ ಶೋ ಸಮಾವೇಶಗಳ ಮೂಲಕ ಮತಯಾಚನೆ ಕಾರ್ಯಕ್ರಮಗಳು ನಡೆಯುತ್ತಿವೆ.

ಇದರೊಂದಿಗೆ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರೆಲ್ಲಾ ನಾಯಕರ ಜೊತೆ ಗಲ್ಲಿ ಗಲ್ಲಿ ಸುತ್ತಿ ಮನೆಮನೆಗೂ ಹೋಗಿ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮತಯಾಚನೆ ಮಾಡುತ್ತಿದ್ದಾರೆ. ಇದರೊಂದಿಗೆ ಮ್ಯಾಜಿಕಲ್ ನಂಬರ್ ಗಿಟ್ಟಿಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಪ್ರಣಾಳಿಕೆಯಿಂದ ಭರವಸೆಯ ಅಸ್ತ್ರ ಪ್ರಯೋಗವಾಗುತ್ತಿದೆ.

ಡಬಲ್ ಎಂಜಿನ್ ಸರ್ಕಾರ ಎಂದು ಕರೆಸಿಕೊಂಡಿರುವ BJP ಸರ್ಕಾರ ಕೂಡ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮತದಾರರನ್ನು ಒಲೈಸುತ್ತಿದೆ. ಇದಕ್ಕಾಗಿ ಅಮಿತ್ ಶಾ ಅಂತಹ ರಾಜಕೀಯ ಚಾಣಕ್ಯ ಮತ್ತು ಗೇಮ್ ಚೇಂಜರ್ ಎಂದು ಕರೆಸಿಕೊಂಡಿರುವ ನರೇಂದ್ರ ಮೋದಿ ಅವರು ಸಹ ಕರ್ನಾಟಕದ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. BJP ಸರ್ಕಾರ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದೆ ದಿನದಿಂದಲೂ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅನೇಕ ಅಭಿವೃದ್ಧಿ ಯೋಜನೆಗಳಿಗೆ ನರೇಂದ್ರ ಮೋದಿ ಅವರನ್ನೇ ಆಹ್ವಾನಿಸಿ ಕಾರ್ಯಕ್ರಮ ನಡೆಸಲಾಗಿದೆ.

ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಮತ್ತು ಅವಕಾಶ ಒದಗಿಸುವ ಆಶಯ ತಮ್ಮದು ಎಂದು ಹೇಳಿಕೊಂಡು ಬರುವುದರ ಜೊತೆಗೆ ಅದೇ ರೀತಿ ನಡೆದುಕೊಂಡಿದೆ ಕೂಡ. ಇದುವರೆಗೂ ನೀಡಿದ್ದ ವಚನಗಳೆಲ್ಲವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗದಿದ್ದರೂ ಸಾಕಷ್ಟು ಜನಪ್ರಿಯ ಯೋಜನೆಗಳಿಂದ BJP ಜನಪ್ರಿಯತೆ ಗಿಟ್ಟಿಸಿಕೊಂಡಿರುವುದು ಸುಳ್ಳಲ್ಲ.

ಅದರ ಪ್ರತಿ ಬಾರಿ ಎಲೆಕ್ಷನ್ ಬಂದಾಗ ಹೊಸ ಯೋಜನೆಗಳನ್ನು ಜಾರಿಗೆ ತರುವಂತಹ ಭರವಸೆಯಂತೂ ಇದ್ದೇ ಇರುತ್ತದೆ. ಜನ ಮತ ಕೇಳಲು ಹೋದಾಗ ಈ ಬಾರಿ ನಮಗಾಗಿ ಏನು ಮಾಡುತ್ತೀರಾ ಎಂದು ಪ್ರಶ್ನೆ ಕೇಳುತ್ತಾರೆ. ಕಾಂಗ್ರೆಸ್ ಮತ್ತು JDS ಪಕ್ಷಗಳು ಸಹ ಈಗಾಗಲೇ ಜನರಿಗೆ ಪ್ರಣಾಳಿಕೆ ಹೆಸರಿನಲ್ಲಿ ಸಾಕಷ್ಟು ಭರವಸೆಯನ್ನು ನೀಡುತ್ತಿರುವುದರಿಂದ BJP ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಕೆಲ ಅಂಶವನ್ನು ಸೇರಿಸಿ ಪ್ರಚಾರ ಮಾಡುತ್ತಿದೆ.

* ಪ್ರತಿ BPL ಕುಟುಂಬಕ್ಕೆ ಮೂರು ಸಿಲಿಂಡರ್ ಫ್ರೀ ಆಗಿ ಕೊಡುವುದು,
* ನಿವೇಶನ ಇಲ್ಲದವರಿಗೆ 10 ಲಕ್ಷ ಮನೆ ನಿರ್ಮಾಣ ಮಾಡಿ ಹಂಚುವುದು
* ಪ್ರತಿ BPL ಕುಟುಂಬಕ್ಕೂ 5kg ಅಕ್ಕಿ ಹಾಗೂ 5kg ಸಿರಿಧಾನ್ಯವನ್ನು ಉಚಿತವಾಗಿ ನೀಡುವುದು
* ಹಾಗೆ BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲನ್ನು ಉಚಿತವಾಗಿ ನೀಡುವುದು
* ಹಿರಿಯ ನಾಗರಿಕರಿಗೆ ಉಚಿತವಾಗಿ ಮಾಸ್ಟರ್ ಹೆಲ್ತ್ ಚೆಕ್ ಅಪ್
* ಬೆಂಗಳೂರಿನ ಹೊಲ ವಲಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದೆ.

ಇದರ ನಡುವೆ ಪ್ರತಿಪಕ್ಷಗಳಿಂದ ಪ್ರಣಾಳಿಕೆಯ ವಿರುದ್ಧ ಟೀಕೆ ಟಿಪ್ಪಣಿ ಇದ್ದೆ ಇರುತ್ತದೆ. ಇನ್ನು ಕೆಲವರು ಕಳೆದ ಬಾರಿ ಹೇಳಿದ್ದ ಹಲವು ಯೋಜನೆಗಳನ್ನೇ ಇನ್ನು ಜಾರಿಗೆ ಬಂದಿಲ್ಲ ಎಂದು ಸಹ ಕುಹಕವಾಡುತ್ತಿದ್ದಾರೆ. BJP ಸರ್ಕಾರಕ್ಕೆ ಪೈಪೋಟಿಯಾಗಿರುವ ಕಾಂಗ್ರೆಸ್ ಮತ್ತು JDS ಪಕ್ಷಗಳಿಂದ ಉಚಿತ ಸಹಾಯಧನಗಳು, ನಿರುದ್ಯೋಗ ಭತ್ಯೆ, ಗೃಹಿಣಿಯರಿಗೆ ಸಹಾಯಧನ ವಿದ್ಯುತ್ ಉಚಿತ, ರೇಶನ್ ಉಚಿತ ಮುಂತಾದ ಬಲವಾದ ಅಸ್ತ್ರಗಳೇ ಪ್ರಯೋಗವಾಗುತ್ತಿದೆ.

ಆದರೆ ಕಾಯಕವೇ ಕೈಲಾಸ ಎಂದು ನಂಬಿರುವ ಬಸವಣ್ಣನ ನಾಡಿನವರು ಉದ್ಯೋಗ ಸೃಷ್ಟಿ ಮಾಡುವ ಸರ್ಕಾರವನ್ನು ನಂಬುತ್ತಾರೋ ಅಥವಾ ಎಲ್ಲವನ್ನು ಉಚಿತವಾಗಿ ಕೊಟ್ಟು ಸಹಾಯಧನವನ್ನು ನೀಡುವ ಸರ್ಕಾರಗಳಿಗೆ ಮನಸೊಲುತ್ತಾರೋ ಉತ್ತರ ಚುನಾವಣೆ ಫಲಿತಾಂಶದ ದಿನದಂದು ಸಿಗಲಿದೆ.

Leave a Comment