* ಕುಂಬಳಕಾಯಿಯನ್ನು ಉಚಿತವಾಗಿ ತೆಗೆದುಕೊಳ್ಳಬಾರದು.
* ಮನೆಯಲ್ಲಿ ಉಗುರನ್ನು ಕತ್ತರಿಸಬಾರದು
* ಹೆಣ್ಣುಮಕ್ಕಳು ಒಡೆದ ಬಳೆಯನ್ನು ಧರಿಸಬಾರದು.
* ಅಣ್ಣ ತಮ್ಮ ಒಟ್ಟಿಗೆ ಚೌರ ಮಾಡಿಸಬಾರದು ಅಂದರೆ ಒಟ್ಟಿಗೆ ಕಟಿಂಗ್ ಮಾಡಬಾರದು.
* ಶುಕ್ರವಾರ ಸೊಸೆಯನ್ನು ತವರಿಗೆ ಕಳುಹಿಸಬಾರದು.
* ಒಂಟಿ ಬಾಳೆ ಎಲೆ ತರಬಾರದು.
* ಮಂಗಳವಾರ ತವರಿನಿಂದ ಮಗಳನ್ನು ಗಂಡನ ಮನೆಗೆ ಕಳುಹಿಸಬಾರದು.
* ಊಟ ಮಾಡಿದ ಮೇಲೆ ಕೈ ಒಣಗಿಸಬಾರದು ಅಂದರೆ ಆದಷ್ಟು ಬೇಗ ಕೈ ತೊಳೆಯಬೇಕು.
* ಮಧ್ಯಾಹ್ನ ತುಳಸಿ ಗಿಡವನ್ನು ಕುಯ್ಯಬಾರದು.
* ಮನೆಯ ಹೊಸ್ತಿಲನ್ನು ತುಳಿದು ದಾಟಬಾರದು.
* ಉಗುರನ್ನು ಕಚ್ಚಬಾರದು.
* ಹೊತ್ತು ಮುಳುಗಿದ ಮೇಲೆ ಕಸ ಗುಡಿಸಬಾರದು.
* ಯಾವಾಗಲೂ ಏನೋ ಕಳೆದುಕೊಂಡಿರುವವರಂತೆ ತಲೆಯ ಮೇಲೆ ಕೈ ಇಟ್ಟುಕೊಂಡು ಕೂರಬಾರದು.
* ಉಪ್ಪು, ಮೊಸರು ಸಾಲ ಕೊಡಬಾರದು.
ಈ ಸುದ್ದಿ ನೋಡಿ:- ಮಕ್ಕಳಿಗೆ ಹೆಸರಿಡುವಾಗ ತುಂಬಾ ಹುಷಾರಾಗಿರಬೇಕು…
* ಮನೆಯಿಂದ ಹೊರಡುವಾಗ ಕಸ ಗುಡಿಸಬಾರದು.
* ಗೋಡೆ ಮೇಲೆ ಕಾಲಿಟ್ಟು ಮಲಗಬಾರದು.
* ಊಟದ ಮಧ್ಯದಲ್ಲಿ ಎದ್ದೇಳಬಾರದು.
* ರಾತ್ರಿ ಹೊತ್ತಿನಲ್ಲಿ ಬಟ್ಟೆ ಒಗೆಯಬಾರದು.
* ಒಂಟಿ ಕಾಲಲ್ಲಿ ನಿಲ್ಲಬಾರದು.
* ತಲೆಯ ಕೂದಲನ್ನು ಒಲೆಗೆ ಹಾಕಬಾರದು.
* ಮಲಗೆದ್ದ ಚಾಪೆಯನ್ನು ಮಡಿಸದೆ ಬಿಡಬಾರದು.
ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಬಹಳ ಮುಖ್ಯವಾದವು. ಹೌದು ಮನೆಯಲ್ಲಿರುವಂತಹ ಹಿರಿಯರು ಮನೆಯಲ್ಲಿ ನಾವು ಯಾವ ರೀತಿಯಾಗಿ ನಡೆದುಕೊಳ್ಳಬೇಕು. ಯಾವ ವಸ್ತುವನ್ನು ಹೇಗೆ ಇಡಬೇಕು ಹಾಗೂ ನಾವು ಮನೆಯಲ್ಲಿ ಯಾವ ಕೆಲಸ ಮಾಡುವಾಗ ಯಾವ ಕೆಲಸ ಮಾಡಬಾರದು ಮನೆಗೆ ಅತಿಥಿಗಳು ಬಂದರೆ ನಾವು ಅವರನ್ನು ಹೇಗೆ ನೋಡಿಕೊಳ್ಳಬೇಕು.
ಮನೆಯಲ್ಲಿರುವಂತಹ ಪತಿಯ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದರೆ ನಾವು ಯಾವ ರೀತಿಯಾಗಿ ನೋಡಿಕೊಳ್ಳಬೇಕು ಹಾಗೂ ಅವರ ಆಯಸ್ಸು ಹೆಚ್ಚಾಗಬೇಕು ಎಂದರೆ. ಮನೆಯಲ್ಲಿರುವಂತಹ ಮಹಿಳೆ ಅಂದರೆ ಅವನ ಪತ್ನಿ ಯಾವ ರೀತಿಯ ಕೆಲಸಗಳನ್ನು ಮಾಡಬೇಕಾಗುತ್ತದೆ ಹೀಗೆ ಎಲ್ಲಾ ವಿಚಾರವಾಗಿ ಮನೆಯ ಲ್ಲಿರುವಂತಹ ಹಿರಿಯರು ತಿಳಿಸುತ್ತಾರೆ.
ಈ ಸುದ್ದಿ ನೋಡಿ:- ಎಲ್ಲರಿಗೂ ಕಾಡುವ ಈ ಪ್ರಶ್ನೆ ನಾವು ಮಾಡಿದ ತಪ್ಪಿಗೆ ಶಿಕ್ಷೆ ಸಿಗುತ್ತಾ.? ಇಲ್ಲವಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.!
ಹೌದು ಬಹಳ ಹಿಂದಿನ ದಿನಗಳಲ್ಲಿ ಅಂದರೆ ನಮ್ಮ ಅಜ್ಜಿ ಮುತ್ತಜ್ಜಿ ಅವರ ಕಾಲದಲ್ಲಿ ಇಂತಹ ಹಲವಾರು ರೀತಿಯ ಮಾಹಿತಿಗಳನ್ನು ಪ್ರತಿಯೊಬ್ಬರು ಹೇಳಿಕೊಡುತ್ತಿ ದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಮಾತುಗಳನ್ನು ಯಾರೂ ಕೂಡ ಕೇಳುವುದಿಲ್ಲ ಅವರ ಇಚ್ಛೆಯಂತೆ ಅವರು ಇಷ್ಟ ಬಂದ ಹಾಗೆಯೇ ಜೀವನ ಶೈಲಿಯನ್ನು ನಡೆಸುತ್ತಾರೆ.
ಆದರೆ ಅವರು ನಡೆಯುವಂತಹ ಆ ದಾರಿಯಲ್ಲಿ ಹಲವಾರು ರೀತಿಯ ತಪ್ಪು ಮಾರ್ಗಗಳೇ ಇರುವುದರಿಂದ ಅವರು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ತೊಂದರೆಗಳನ್ನು ಅನುಭವಿಸುತ್ತಾರೆ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ನೆನಪಿನಲ್ಲಿಟ್ಟುಕೊಂಡು.
ಇವುಗಳನ್ನು ಅನುಸರಿಸುವುದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮತ್ತು ಏಳಿಗೆ ಉಂಟಾಗುತ್ತದೆ. ಹಾಗೇನಾದರೂ ನೀವು ಇದರಲ್ಲಿ ತಪ್ಪು ಮಾಡಿದರೆ ನಿಮ್ಮ ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ನಿಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯ ಪರಿಣಾಮ ಬೀರುತ್ತದೆ.
ಇವುಗಳನ್ನು ಮೂಟೆ ಕಟ್ಟಿ ಲಕ್ಷ್ಮಿ ಫೋಟೋ ಹಿಂದೆ ಇಟ್ಟರೆ ಕೈತುಂಬ ದುಡ್ಡು ಯಾವಾಗಲೂ ಇರುತ್ತದೆ.! ಮಾರವಾಡಿ ಶ್ರೀಮಂತ ರಹಸ್ಯ.
ಹಾಗೂ ಮನೆಯಲ್ಲಿರುವಂತಹ ಸದಸ್ಯ ರ ನಡುವೆ ಮನಸ್ತಾಪ ಜಗಳ ಕಿರಿಕಿರಿ ಉಂಟಾಗುವುದು ಮನೆಯಲ್ಲಿ ರುವ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ಹೊಂದದೆ ಇರುವುದು, ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಷ್ಟ ಉಂಟಾಗುವುದು, ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಯಾವ ರೀತಿಯಾಗಿ ನಾವು ನಡೆದು ಕೊಳ್ಳಬೇಕು ಯಾವ ರೀತಿಯಾಗಿ ಇರಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಮೇಲೆ ಹೇಳಿದ ಸಮಸ್ಯೆಗಳನ್ನು ನಿಮ್ಮ ಕೈಯಾರೆ ನೀವೇ ತಂದುಕೊಂಡಂತೆ ಆಗುತ್ತದೆ.