● ಯಾವಾಗಲೂ ಮೂಗಿನಿಂದ ಉಸಿರಾಡಿ ಬಾಯಿಯ ಮೂಲಕ ಉಸಿರಾಡುವುದು ಹಲವಾರು ರೋಗಗಳನ್ನು ಆಹ್ವಾನಿಸುತ್ತದೆ.
● ಔಷಧಿಗಳನ್ನು ತೆಗೆದುಕೊಳ್ಳುವಾಗ ಬಿಸಿ ನೀರು ಅಥವಾ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ, ತಣ್ಣೀರಿನಲ್ಲಿ ಎಂದಿಗೂ ಔಷಧಿಗಳನ್ನು ತೆಗೆದುಕೊಳ್ಳಬೇಡಿ.
● ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಸಾಯಂಕಾಲ ಪಪ್ಪಾಯಿ ಹಣ್ಣು ತಿನ್ನಬೇಕು.
● ಸಂಜೆ 6ರ ನಂತರ ಸೇವಿಸುವ ಆಹಾರವು ಬಹಳ ಲೈಟ್ ಆಗಿ ಇರಬೇಕು, ಭಾರವಾದ ಆಹಾರಗಳನ್ನು ಸೇವಿಸಬೇಡಿ, ಇದು ಜೀರ್ಣಾಂಗವ್ಯೂಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
● ನಿಮಗೆ ಬರುವ ಫೋನ್ ಕರೆಗಳನ್ನು ಸ್ವೀಕರಿಸುವ ಅಥವಾ ನೀವು ಕರೆ ಮಾಡಿ ಮಾತನಾಡುವಾಗ ಎಡ ಕಿವಿಯಲ್ಲಿ ಫೋನ್ ಇಟ್ಟು ಮಾತನಾಡುವುದು ಒಳ್ಳೆಯದು.
● ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಎರಡು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಿರಿ ದೇಹದಲ್ಲಿರುವ ಎಲ್ಲಾ ಟಾಕ್ಸಿನ್ ಅಂಶಗಳನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ.
● ಪ್ರತಿದಿನ ಕೂಡ ಕನಿಷ್ಠ 8-12 ಗ್ಲಾಸ್ ನೀರನ್ನು ಕುಡಿಯಿರಿ, ಒಂದೇ ಬಾರಿಗೆ ಕುಡಿಯುವುದು ತಪ್ಪು. ಸ್ವಲ್ಪ ಸಮಯ ಬಿಟ್ಟು ಬಿಟ್ಟು ಈ ರೀತಿ ನೀರನ್ನು ಕುಡಿಯುವ ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳಿ.
● ಊಟನಾದ ನಂತರ ಸೋಂಪು ಅಥವಾ ಬಡೆ ಸೋಪು ಅಥವಾ ಬೆಲ್ಲವನ್ನು ಸೇವಿಸುವುದು ಒಳ್ಳೆಯದು.
● ರಾತ್ರಿ ಹೊತ್ತು ಅನ್ನ ಸೇವನೆ ಮಾಡದೇ ಇರುವುದೇ ಒಳ್ಳೆಯದು, ಅದರಲ್ಲೂ ತೂಕ ಇಳಿಸಿಕೊಳ್ಳಬೇಕು ಎಂದು ಇಚ್ಛೆ ಇರುವವರು ಅನ್ನ ಸೇವನೆ ಬದಲು ತರಕಾರಿ ಹಾಗೂ ಸೊಪ್ಪು ಅಥವಾ ಧಾನ್ಯಗಳಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ. ಒಂದು ವೇಳೆ ಅನ್ನ ತಿನ್ನದೆ ನಿಮ್ಮ ಊಟ ಪೂರ್ತಿ ಆಗಲ್ಲ ಎನ್ನುವ ಅಭ್ಯಾಸವಿದ್ದರೆ ಲಿಮಿಟ್ ಅಲ್ಲಿ ಮಾತ್ರ ಸೇವಿಸಿ.
● ತಣ್ಣೀರನ್ನು ಕುಡಿಯುವ ಅಭ್ಯಾಸ ಕಡಿಮೆ ಮಾಡಿಕೊಳ್ಳಿ, ನೀರನ್ನು ಯಾವ ಪ್ಲಾಸ್ಟಿಕ್ ನ ಬದಲು ತಾಮ್ರ, ಸ್ಟೀಲ್ ಅಥವಾ ಮಣ್ಣಿನ ಮಡಿಕೆಗಳಲ್ಲಿ ಸಂಗ್ರಹಿಸಿ.
● ಮಲಗುವ ಉತ್ತಮವಾದ ಸಮಯವೆಂದರೆ ರಾತ್ರಿ 10 ರಿಂದ ಬೆಳಗ್ಗೆ 5
● ರಾತ್ರಿ ಹೊತ್ತು ಮೊಬೈಲ್ ಅನ್ನು ತಲೆದಿಂಬಿನ ಕೆಳಗೆ ಅಥವಾ ನಿಮ್ಮ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸ ಇದ್ದರೆ ಅದನ್ನು ತಪ್ಪಿಸಿ
● ಊಟ ಮಾಡಿದ ತಕ್ಷಣ ಮಲಗುವುದು ದುರಭ್ಯಾಸ ಆ ಅಭ್ಯಾಸ ಬಿಟ್ಟುಬಿಡಿ.
● ಮೊಬೈಲ್ ಚಾರ್ಜ್ ಗೆ ಹಾಕಿದಾಗ ರೇಡಿಯೇಶನ್ ಹೆಚ್ಚಿಗೆ ಇರುತ್ತದೆ. ಆ ಸಮಯದಲ್ಲಿ ಚಾರ್ಜ್ ಗೆ ಹಾಕಿಕೊಂಡು ಫೋನ್ ಮಾಡುವುದು ಅಥವಾ ಫೋನ್ ಕರೆಗಳನ್ನು ಮಾಡುವುದು ಅಪಾಯ ತರುತ್ತದೆ.
● ತುಂಬಾ ಕೆಳಗೆ ಬಾಗಿ ಪುಸ್ತಕಗಳನ್ನು ಓದುವುದರಿಂದ ಶ್ವಾಸಕೋಶಕ್ಕೆ ಹಾನಿ ಆಗುತ್ತದೆ, ಟಿಬಿ ಕಾಯಿಲೆ ಬರುವ ಸಾಧ್ಯತೆಗಳು ಕೂಡ ಇರುತ್ತದೆ.
● ಸ್ನಾನ ಮಾಡಿದ ನಂತರ ಆಹಾರವನ್ನು ಸೇರಿಸಿ ಊಟ ಆದ ತಕ್ಷಣ ಸ್ಥಾನಕ್ಕೆ ಹೋಗಬೇಡಿ.
● ಹಣ್ಣುಗಳ ಹಾಗೂ ಸಲಾಡ್‌ಗಳನ್ನು ಊಟದ ನಂತರ ಸೇವಿಸಬಾರದು ಊಟಕ್ಕೂ ಮೊದಲೇ ಅವುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
● ಹುಳಿ ಇರುವ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸಬಾರದು
● ಬಿಳಿ ಬಣ್ಣ ಇರುವ ಮೈದಾ, ಸಕ್ಕರೆ, ಉಪ್ಪು ಈ ಮೂರು ಕೂಡ ದೇಹಕ್ಕೆ ಹಾನಿ ತರುತ್ತದೆ.
ಗೃಹಿಣಿಯರೇ ನೀವು ದಪ್ಪ ಆಗಲು ನೈಟಿ ಕಾರಣ ಎಚ್ಚರ.!
● ಬಿಳಿ ಉಪ್ಪಿನ ಬಳಕೆ ಸಾಧ್ಯವಾದರೆ ನಿಲ್ಲಿಸಿ ಕಲ್ಲುಪ್ಪನ್ನು ಬಳಸಲು ಶುರು ಮಾಡಿ.
● ನಿಮ್ಮ ದೇಹವನ್ನು ಆಕ್ಟಿವ್ ಆಗಿ ಇಡಲು ದಿನದಲ್ಲಿ ಅರ್ಧ ತಾಸನ್ನಾದರೂ ಯೋಗ ಅಥವಾ ವಾಕಿಂಗ್ ಅಥವಾ ವ್ಯಾಯಾಮಕ್ಕೆ ನೀಡಿ.
● ನಿದ್ರಾಹೀನತೆ ಸಮಸ್ಯೆ ಇರುವವರು ಯಾವಾಗಲೂ ನಗು ನಗುತ್ತಾ ಇದ್ದರೆ ಪರಿಹಾರ ಸಿಗುತ್ತದೆ.
● ಯಾವಾಗಲೂ ಪಾಸಿಟಿವ್ ಆಗಿರುವ ಮನಸ್ಥಿತಿಯಲ್ಲಿರಿ, ಇದು ನಿಮಗೆ ಲಾಭ ತರುತ್ತದೆ.
● ನೀವು ಮಲಗುವ ಕೋಣೆಯಲ್ಲಿ ಗಾಳಿ ಹಾಗು ತಿಳಿ ಬೆಳಕು ಬರುವಂತೆ ಇರಬೇಕು. ತಿಂಗಳಿಗೆ ಒಮ್ಮೆಯಾದರೂ ನೀವು ನಿಮ್ಮ ಹಾಸಿಗೆಗಳನ್ನು ವಾಶ್ ಮಾಡಬೇಕು ಆಗ ವಿನಾಕಾರಣ ಆರೋಗ್ಯ ಹದಗೆಡುವುದು ತಪ್ಪುತ್ತದೆ.
● ರಾತ್ರಿ ಚೆನ್ನಾಗಿ ನಿದ್ದೆ ಬರಬೇಕೆಂದರೆ ಮಲಗೋ ಮುನ್ನ ಒಂದು ಲೋಟ ಹಾಲು ಕುಡಿಯಿರಿ.
LIC ಜೀವನ್ ಶಾಂತಿ ಪ್ಲಾನ್, 1,50,000 ಡೆಪಾಸಿಡ್ ಮಾಡಿದ್ರೆ ಸಾಕು ಗಂಡ ಹೆಂಡತಿ ಇಬ್ಬರಿಗೂ ಬರಲಿದೆ 13,395 ಪೆನ್ಷನ್.!
● ದಿನದಲ್ಲಿ ಸ್ವಲ್ಪ ಹೊತ್ತಾದರೂ ಬರಿ ಕಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿ ಕೊಳ್ಳಿ ಭೂಮಿಯ ಜೊತೆಗೆ ನೇರ ಸಂಪರ್ಕ ನಿಮ್ಮ ದೇಹದಲ್ಲಿ ಉತ್ತಮ ಬದಲಾವಣೆಗಳನ್ನು ಉಂಟುಮಾಡುತ್ತದೆ.
● ಬೆಳಿಗ್ಗೆ ಸಮಯ ಹೊಟ್ಟೆ ತುಂಬಾ, ಮಧ್ಯಾಹ್ನ ನಾರ್ಮಲ್, ರಾತ್ರಿ ಹೊತ್ತು ಸಿಂಪಲ್ ಆಗಿ ಆಹಾರ ಸೇವಿಸಿ.