ನಿಮಗಿನ್ನೂ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲವೇ ಸರ್ಕಾರದಿಂದ ಗುಡ್ ನ್ಯೂಸ್, ಆಗಸ್ಟ್ ತಿಂಗಳ ಹಣ ಸೇರಿ 4000 ಸೆಪ್ಟೆಂಬರ್ ತಿಂಗಳಿನಲ್ಲಿ ಸಿಗಲಿದೆ.! ಈ ರೀತಿ ಮಾಡಿ ಸಾಕು

ಕರ್ನಾಟಕ ರಾಜ್ಯ ಸರ್ಕಾರದ (Karnataka government) ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಮಹತ್ವಕಾಂಕ್ಷೆ ಯೋಜನೆಯದ ಗೃಹಲಕ್ಷ್ಮಿ ಯೋಜನೆ (Gruhalakshmi Scheme amount) ಆಗಸ್ಟ್ 30ನೇ ತಾರೀಕು ಅದ್ದೂರಿಯಾಗಿ ಲಾಂಚ್ ಆಗಿದೆ. ಅಂದಿನಿಂದ ಯೋಜನೆಗೆ ನೋಂದಾಯಿಸಿಕೊಂಡಿದ್ದ ಲಕ್ಷಾಂತರ ಮಹಿಳೆಯರ ಖಾತೆಗೆ 2000ರೂ. ಸಹಾಯಧನವು DBT ಮೂಲಕ ನೇರವಾಗಿ ವರ್ಗಾವಣೆಯಾಗಿದೆ.

ಸರ್ಕಾರದ ಅಂಕಿ ಅಂಶದ ಪ್ರಕಾರ 1.15 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಆದರೆ ಅದರಲ್ಲಿ ಈವರೆಗೆ 65 ಲಕ್ಷ ಮಹಿಳೆಯರು ಮಾತ್ರ ಹಣ ಪಡೆದಿದ್ದಾರೆ. ಉಳಿದ 45 ಲಕ್ಷ ಮಹಿಳೆಯರಲ್ಲಿ 8;ಲಕ್ಷ ಮಹಿಳೆಯರ ಖಾತೆಗೆ ಹಣ ತುಂಬಿಸಲು ತಾಂತ್ರಿಕ ಸಮಸ್ಯೆ (technical error) ಆಗುತ್ತಿದೆ ಎನ್ನುವ ಮಾಹಿತಿಯನ್ನು ಇಲಾಖೆ ಹಂಚಿಕೊಂಡಿದೆ. ಹಾಗಾದರೆ ಇನ್ನುಳಿದ ಮಹಿಳೆಯರ ಖಾತೆಗೆ ಇನ್ನು ಯಾಕೆ ಹಣ ಬಂದಿಲ್ಲ ಎನ್ನುವ ಗೊಂದಲ ಹಾಗೂ ಆ ಕುರಿತ ಕೆಲವು ಗೊಂದಲಗಳಿಗೆ ಉತ್ತರ ಇಲ್ಲಿದೆ ನೋಡಿ.

ಆರೋಗ್ಯಯುತ ಜೀವನಕ್ಕೆ 30 ಸರಳ ವಿಷಯಗಳು ಹಾಗೂ ಅವುಗಳ ಅದ್ಭುತ ಫಲಿತಾಂಶಗಳು.!

● ಆಗಸ್ಟ್ 30ನೇ ತಾರೀಖಿನಂದೇ ಮೊದಲ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗಿದೆ, ಇನ್ನು ಮುಂದೆ ಸರ್ಕಾರವು ಪ್ರತಿ ತಿಂಗಳ 15ನೇ ತಾರೀಕಿನಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿರುವುದರಿಂದ ಸೆಪ್ಟೆಂಬರ್ 15ಕ್ಕೆ ಎರಡನೇ ಕಂತಿನ ಹಣ ಕೂಡ ವರ್ಗಾವಣೆ ಆಗುವ ಸಾಧ್ಯತೆ ಇದೆ. ಈಗಾಗಲೇ ಯಾರು ಮೊದಲನೇ ಕಂತಿನ ಹಣವನ್ನು ಪಡೆದಿದ್ದಾರೆ ಅವರೆಲ್ಲರೂ ಸಹ ಎರಡನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವನ್ನು ಸೆಪ್ಟೆಂಬರ್ 15 ಕ್ಕೆ ಪಡೆಯಲಿದ್ದಾರೆ.

● ಆದರೆ ಇನ್ನೂ ಸಹ ಅನೇಕರು ಮೊದಲ ಕಂತಿನ ಹಣವನ್ನೇ ಪಡೆದಿಲ್ಲ ಎಂದರೆ ನೀವು ಮೊದಲನೇದಾಗಿ ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಹಾಗೂ ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ಹೊಂದಾಣಿಕೆ ಆಗಿದೆಯೇ ಎನ್ನುವುದನ್ನು ದೃಢಪಡಿಸಿಕೊಂಡು ಇದರಲ್ಲಿ ವ್ಯತ್ಯಾಸಗಳಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಿ ಮತ್ತು ತಪ್ಪದೆ ನಿಮ್ಮ ಬ್ಯಾಂಕ್ ಖಾತೆಗೆ Aadhar card seeding NPCI Mapping ಆಗಿದೆಯೇ ಮತ್ತು ಆ ಖಾತೆ active ಆಗಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಿ.

ಪ್ರತಿ ತಿಂಗಳ ಮುಟ್ಟು ಸರಿಯಾಗಿ ಆಗಲು 6 ಮನೆಮದ್ದುಗಳು, ಅತಿಯಾದ ರಕ್ತಸ್ರಾವ, ಹೊಟ್ಟೆ ನೋವು, ಬಿಳಿ ಮುಟ್ಟು ಈ ಎಲ್ಲ ಸಮಸ್ಯೆಗೂ ಪರಿಹಾರ.!

ನೀವು ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪತ್ರ (Gruhalakshmi acknowledgment letter) ಪಡೆದಿದ್ದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದೀರಿ ಎಂದು ಅರ್ಥ. ಒಂದು ವೇಳೆ ಅರ್ಜಿ ಸಲ್ಲಿಸಿದ ವೇಳೆ ಮಂಜೂರಾತಿ ಪತ್ರ ಸಿಕ್ಕಿಲ್ಲ ಎಂದರೆ 8147500500 ಈ ಸಂಖ್ಯೆಗೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸಿ ತಕ್ಷಣವೇ ಸರ್ಕಾರದ ವತಿಯಿಂದ ನಿಮಗೆ ರಿಪ್ಲೈ ಬರುತ್ತದೆ. ಅರ್ಜಿ ಸಲ್ಲಿಕೆ ಯಶಸ್ವಿ ಆಗಿದೆ ಅಥವಾ ನಿಮ್ಮ ಅರ್ಜಿ ಸಲ್ಲಿಕೆ ಸ್ವೀಕಾರವಾಗಿಲ್ಲ ಕೂಡಲೇ ಹತ್ತಿರದ ಸೇವಾಕೇಂದ್ರಕ್ಕೆ ಭೇಟಿ ಕೊಡಿ ಎನ್ನುವ ಉತ್ತರ ಬರುತ್ತದೆ.

● ಒಂದು ವೇಳೆ ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ಸೆಪ್ಟೆಂಬರ್ 15 ರ ಒಳಗೆ ನಿಮಗೆ ಮೊದಲನೇ ಕಂತಿನ ಹಣ ಬರುತ್ತದೆ ಎನ್ನುವ ಮಾಹಿತಿಯನ್ನು ಸರ್ಕಾರ ಹಂಚಿಕೊಂಡಿದೆ. ಈ ಅವಧಿಯೊಳಗೆ ನೀವು ಹಣ ಪಡೆದರೆ ಖಂಡಿತವಾಗಿಯೂ ನಿಮಗೂ ಕೂಡ ಎರಡನೇ ಕಂತಿನ ಹಣ ಕೂಡ ಸೆಪ್ಟೆಂಬರ್ 15ರ ವೇಳೆಗೆ ಖಂಡಿತ ಸಿಗುತ್ತದೆ. ನೀವು ಒಟ್ಟು ಸೆಪ್ಟೆಂಬರ್ ನಲ್ಲಿ ಎರಡು ಸಲ ಹಣ ಪಡೆಯಲಿದ್ದೀರಿ.

ಸೆಪ್ಟೆಂಬರ್ 14ರ ಒಳಗೆ ಈ ಕೆಲಸ ಮಾಡದೆ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುತ್ತದೆ ಮತ್ತು ದಂಡ ಕಟ್ಟಬೇಕಾಗುತ್ತದೆ. ನಾಳೆಯೇ ಕೊನೆಯ ದಿನಾಂಕ ತಪ್ಪದೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ.!

● ಈ ಮೇಲೆ ತಿಳಿಸಿದ ಯಾವುದೇ ಒಂದು ಸಮಸ್ಯೆಯ ಕಾರಣದಿಂದಾಗಿ ಅಥವಾ ಇನ್ಯಾವುದೇ ತಾಂತ್ರಿಕ ದೋಷದಿಂದಾಗಿ ನೀವು ಮೊದಲನೇ ಕಂತಿನ ಹಣವನ್ನು ಸೆಪ್ಟೆಂಬರ್ 15ರ ಒಳಗೆ ಪಡೆಯದೆ ಹೋದರೆ ನಿಮಗೆ ಯೋಜನೆ ಎರಡನೇ ಹಂತಿನ ಹಣವು ಮಿಸ್ ಆದಂತೆಯೇ ಹಾಗಾಗಿ ಕೂಡಲೇ ಪರಿಶೀಲಿಸಿ ಸರಿಪಡಿಸಿಕೊಳ್ಳಿ.

Leave a Comment