ಬಿಳಿ ಬಟ್ಟೆ ಹಾಕಿಕೊಳ್ಳಲು ಎಲ್ಲರಿಗೂ ಇಷ್ಟ. ಬಿಳಿ ಬಟ್ಟೆಯಲ್ಲಿ ಒಂದು ರೀತಿಯ ಸಕಾರಾತ್ಮಕ ಭಾವನೆ ಇದೆ. ಬಿಳಿ ಪರಿಶುದ್ಧತೆಯ ಸಂಕೇತ ಆಗಿರುವುದರಿಂದ ಬಿಳಿ ಬಟ್ಟೆ ಧರಿಸುವವರಲ್ಲಿ ಸಾತ್ವಿಕ ಗುಣಗಳು ಇರುತ್ತದೆ ಎನ್ನುವುದು ಒಂದು ನಂಬಿಕೆ. ನಾವು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿದರು ಕೂಡ ಹಾಗೊಮ್ಮೆ, ಈಗೊಮ್ಮೆ ಬಿಳಿ ಬಣ್ಣದ ಬಟ್ಟೆ ಹಾಕಿಕೊಳ್ಳಬೇಕು ಎನ್ನುವ ಆಸೆ ಆಗುತ್ತದೆ.
ಪ್ರತಿಯೊಬ್ಬರಿಗೂ ಕೂಡ ಬಿಳಿ ಬಟ್ಟೆ ಹಾಕಿಕೊಂಡಾಗ ಚೆನ್ನಾಗಿ ಕಾಣುತ್ತಾರೆ ಕೆಲವೊಂದು ಕೆಲಸದ ಸ್ಥಳದಲ್ಲಿ ಬಿಳಿ ಬಟ್ಟೆ ಕಡ್ಡಾಯ ಸಮವಸ್ತ್ರವಾದರೆ, ಶಾಲಾ ಮಕ್ಕಳಿಗಂತೂ ವಾರದಲ್ಲಿ ಒಂದುದಿನ ಬಿಳಿ ಬಟ್ಟೆ ಬಿದ್ದೇ ಇರುತ್ತದೆ. ಈ ರೀತಿ ಬಿಡಿ ಬಟ್ಟೆ ಹಾಕುವವರ ಮನೆಯಲ್ಲಿ ಇರುವ ಒಂದು ಸಮಸ್ಯೆಯೇನೆಂದರೆ ಬಿಳಿ ಬಟ್ಟೆಗಳಿಗೆ ಆದ ಕಲೆಗಳು ಬೇಗ ಹೋಗಲ್ಲ ಮತ್ತು ದಿನ ಕಳೆದಂತೆ ಅವು ತಮ್ಮ ಹೊಳಪನ್ನು ಕಳೆದುಕೊಂಡು ಹಳದಿಯಾಗುತ್ತವೆ ಎನ್ನುವುದು ಈ ರೀತಿ ಸಮಸ್ಯೆಗೆ ಸೂಪರ್ ಸೀಕ್ರೆಟ್ ಗಳನ್ನು ತಿಳಿಸಿ ಕೊಡುತ್ತಿದ್ದೇವೆ.
* ಬೇಕಿಂಗ್ ಸೋಡಾ ಬಳಸಿ:- ಹಳದಿ ಬಣ್ಣಕ್ಕೆ ತಿರುಗಿದ ಬಿಳಿ ಬಟ್ಟೆಗಳನ್ನು ಸುಲಭವಾಗಿ ಕ್ಲೀನ್ ಮಾಡಿ ಕಲೆ ಹೋಗಿಸಲು ಒಂದು ವಿಧಾನ ಇದೆ. ನೀವು ಅಡುಗೆ ಮಾಡಲು ಬಳಸುವ ಬೇಕಿಂಗ್ ಸೋಡಾ ವನ್ನು ಬಳಸಿ ಬಿಳಿ ಬಟ್ಟೆ ಫಳಫಳ ಹೊಳೆಯುವಂತೆ ಮಾಡಬಹುದು. ಅರ್ಧ ಬಕೆಟ್ ನೀರಿಗೆ ನಿಮ್ಮ ಬಟ್ಟೆ ಎಷ್ಟಿದೆ ಅದನ್ನು ನೋಡಿಕೊಂಡು ಬೇಕಿಂಗ್ ಸೋಡಾ ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಬಿಳಿ ಬಣ್ಣದ ಬಟ್ಟೆಗಳನ್ನು ಒಂದು ಗಂಟೆಗಳ ಕಾಲ ನೆನೆ ಹಾಕಿ. ಆನಂತರ ನೀರಿನಲ್ಲಿ ಆ ಬಟ್ಟೆಗಳನ್ನು ಸ್ವಚ್ಛ ಮಾಡಿ.
* ನಿಂಬೆಹಣ್ಣಿನ ರಸ ಬಳಸಬಹುದು:- ಒಂದು ವೇಳೆ ನಿಮ್ಮ ಬಿಳಿ ಬಣ್ಣದ ಬಟ್ಟೆಗಳ ಮೇಲೆ ಹಳದಿ ಬಣ್ಣದ ಕಲೆಗಳು, ಹಳೆ ಕೊಳೆಗಳು ಉಳಿದಿದ್ದರೆ ನಿಂಬೆಹಣ್ಣು ಅದಕ್ಕೆ ಪರಿಣಾಮಕಾರಿಯಾದ ರೀತಿಯಲ್ಲಿ ಕೆಲಸ ಮಾಡುತ್ತದೆ. ಅತ್ಯಂತ ಗಾಢವಾದ ಎಷ್ಟೇ ಹಳೆಯ ಕಲೆಗಳನ್ನು ಕೂಡ ನಿಂಬೆಹುಳಿಯಿಂದ ಸ್ವಚ್ಛ ಮಾಡಬಹುದು ನೀವು ಇದಕ್ಕಾಗಿ ಬಹಳ ಕ’ಷ್ಟ ಪಡಬೇಕಾಗಿಲ್ಲ.
ಕೇವಲ ಒಂದು ಬಕೆಟ್ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದರಲ್ಲಿ ನಿಮ್ಮ ಬಟ್ಟೆಗೆ ಎಷ್ಟಿದೆ ಅದರ ಪ್ರಮಾಣಕ್ಕೆ ಎರಡು ಚಮಚ ಅಥವಾ ಅರ್ಥ ಹೋಳು ನಿಂಬೆ ಹುಳಿ ಸೇರಿಸಿ. ಐದು ನಿಮಿಷ ಇದನ್ನು ಚೆನ್ನಾಗಿ ಮಿಕ್ಸ್ ಆಗಲು ಬಿಟ್ಟು, ನಂತರ ಬಿಳಿ ಬಟ್ಟೆಗಳನ್ನು ನೆನೆಹಾಕಬೇಕು. ಒಂದು ಗಂಟೆ ಕಳೆದ ನಂತರದಲ್ಲಿ ಸಾಧಾರಣವಾಗಿ ಬಟ್ಟೆ ಸ್ವಚ್ಛಮಾಡುವ ಹಾಗೆ ಅವುಗಳನ್ನು ಸ್ವಚ್ಛ ಮಾಡಿದರೆ ಕಲೆಗಳು ಮಾಯವಾಗುತ್ತವೆ.
* ಡಿಷ್ ವಾಶಿಂಗ್ ಸೋಪ್ ಬಳಸಿ:– ಪಾತ್ರೆ ತೊಳೆಯುವ ಸೋಪು, ಜೆಲ್ ನಲ್ಲೂ ಕೂಡ ಬಿಳಿ ಬಟ್ಟೆ ಸ್ವಚ್ಛ ಮಾಡುವ ಗುಣ ಇದೆ. ಒಂದು ಬಕೆಟ್ ನೀರಿಗೆ ನಿಮ್ಮ ಬಟ್ಟೆ ಪ್ರಮಾಣ ನೋಡಿಕೊಂಡು ಅದಕ್ಕೆ ಅನುಸಾರವಾಗಿ ಎರಡು ಚಮಚ ಸೋಪ್ ಪೌಡರ್ ಅಥವಾ ಎರಡು ಚಮಚ ಲಿಕ್ವಿಡ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಬಿಳಿ ಬಣ್ಣದ ಬಟ್ಟೆಗಳನ್ನು 30 ನಿಮಿಷಗಳ ಕಾಲ ನೆನೆಹಾಕಿ. ಆನಂತರ ಬ್ರಷ್ ನಲ್ಲಿ ಉಜ್ಜಿ, ನೀರಿನಲ್ಲಿ ಸ್ವಚ್ಛ ಮಾಡಿ.
* ಬ್ಲೀಚ್ ಬಳಸಿ:– ಬೀಚ್ ಕೂಡ ಬಟ್ಟೆಗಳಿಗೆ ಹಳೆ ಕಲೆ ತೆಗೆದು ಬಿಳಿ ಬಣ್ಣ ನೀಡುವ ಶಕ್ತಿ ಹೊಂದಿದೆ. ಅರ್ಧ ಬಕೆಟ್ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಕಾಲು ಕಪ್ ಬ್ಲೀಚ್ ಹಾಕಿ ಮಿಶ್ರಣ ಮಾಡಿ. ನಂತರ ಬಿಳಿ ಬಟ್ಟೆಗಳನ್ನು ಹತ್ತು ನಿಮಿಷಗಳ ಕಾಲ ನೆನೆಹಾಕಿ, ಆ ಬಟ್ಟೆಗಳನ್ನು ಮಾಮೂಲಿಯಂತೆ ಸ್ವಚ್ಛ ಮಾಡಿ, ಕಲೆಗಳು ಹೊರಟುಹೋಗಿ ಬಿಳಿ ಬಣ್ಣ ಮರಳಿ ಬರುತ್ತದೆ. ಒಂದು ವೇಳೆ ಹೋಗದೆ ಇದ್ದರೆ ಮತ್ತೊಮ್ಮೆ ಇದನ್ನು ರಿಪೀಟ್ ಮಾಡಿ, ಆದರೆ ಬ್ಲೀಚ್ ಬಳಸುವಾಗ ಕೈಗಳಿಗೆ ರಬ್ಬರ್ ಗ್ಲೌಸ್ ಹಾಕಿಕೊಂಡೇ ಬಳಸಿ.
ಬಿಸಿಲಿನಲ್ಲಿ ಒಣಹಾಕಿ:–ಸೂರ್ಯನ ಬಿಸಿಲಿನಲ್ಲಿ ಅಪಾರವಾದ ಶಕ್ತಿಯಿದೆ ಅದು ಬೆಳ್ಳಿ ಬಟ್ಟೆಗಳಿಗೆ ತನ್ನ ಹಳೆಯ ಹೊಳಪನ್ನು ವಾಪಸ್ ಕೊಡುತ್ತದೆ. ನೀವು ಈ ಮೇಲಿನ ಯಾವುದೇ ವಿಧಾನಗಳಲ್ಲಿ ಬಟ್ಟೆ ಒಗೆದರೂ ನಂತರ ಅವುಗಳು ತೇವಾಂಶ ಇರುವಾಗಲೇ ಬಿಸಿಲಿನಲ್ಲಿ ಒಣಗಿ ಹಾಕಿ. ಸೂರ್ಯನ ಹಾನಿಕಾರಕ ಕಿರಣಗಳು ನಿಮ್ಮ ಬಿಳಿ ಬಟ್ಟೆಗಳನ್ನು ಒಣಗಿಸುತ್ತದೆ ಮತ್ತು ಮತ್ತೆ ತನ್ನ ಶೈನಿಂಗ್ ಕಂಡುಕೊಳ್ಳುವಂತೆ ಮಾಡುತ್ತದೆ.