ಮನುಷ್ಯನ ದೇಹವು ಪಂಚಭೂತಗಳಿಂದ ಆಗಿದೆ. ಹಾಗಾಗಿ ಮಾನವನ ದೇಹಕ್ಕೂ ವಾಯು ಅಗ್ನಿ ಜಲ ಮತ್ತು ಆಕಾಶಭೂಮಿ ಇವುಗಳಿಗೆ ಅವಿನಾಭಾಭ ಸಂಬಂಧ ಇದೆ. ನಮ್ಮ ದೇಹವು ಈ ಪಂಚಭೂತಗಳ ಶಕ್ತಿಯನ್ನು ಹೊಂದಿದೆ ಮತ್ತು ಇವುಗಳನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯವನ್ನು ಕೂಡ ನಮ್ಮ ದೇಹ ಹೊಂದಿದೆ ಇದು ಆಗಿನ ಕಾಲದಲ್ಲಿ ಯೋಗ, ಆಸನ ಪ್ರಾಣಾಯಾಮ ಮತ್ತು ಮುದ್ರೆಗಳ ಮೂಲಕ ಸಾಬೀತುಪಡಿಸಲಾಗುತ್ತಿದ್ದಾರೂ ಈಗಿನ ದಿನಗಳಲ್ಲಿ ವಿಜ್ಞಾನವೂ ಕೂಡ ಇದನ್ನು ಸತ್ಯ ಎಂದು ಒಪ್ಪಿಕೊಂಡಿದೆ.
ಆಧುನಿಕ ಮೆಡಿಸಿನ್ ನಿಂದ ಗುಣ ಮಾಡಲಾಗದ ಎಷ್ಟೋ ಕಾಯಿಲೆಗಳನ್ನು ಯೋಗ ಪ್ರಾಣಾಯಾಮ ವಾಸಿ ಮಾಡಿದೆ ಮತ್ತು ಯೋಗದ ಆಸನಗಳಿಂದಲೂ ಗುಣವಾಗದ ಕಾಯಿಲೆಗಳು ಮುದ್ರೆಗಳನ್ನು ಮಾಡುವುದರ ಮೂಲಕ ಗುಣವಾಗಿವೆ. ಅಂಥಹ ಒಂದು ವಿಶೇಷವಾದ ಮುದ್ರೆಯನ್ನು ಹಾಕಿ ಗಂಭೀರ ಸಮಸ್ಯೆ ಒಂದನ್ನು ಗುಣ ಮಾಡಿಕೊಳ್ಳಬಹುದಾದ ವಿಷಯದ ಕುರಿತು ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಕೆಲವರಿಗೆ ಪದೇಪದೇ ಮೂತ್ರಕ್ಕೆ ಹೋಗುವ ಅಭ್ಯಾಸ ಇರುತ್ತದೆ ಆದರೆ ಇದು ಅವರಿಗೆ ಕಿರಿಕಿರಿ ಆಗಿರುತ್ತದೆ, ಇದೊಂದು ಕಾಯಿಲೆ ಎಂದು ಹೇಳಬಹುದು. ಇದು ಹೆರಿಡಿಟಿಯಿಂದ ಬಂದಿರುತ್ತದೆ ಅಥವಾ ಅತಿಯಾದ ಸ್ಟ್ರೆಸ್ ನಿಂದಲೂ ಈ ರೀತಿ ಆಗುತ್ತದೆ. ಭ’ಯ ಆದಾಗಲು ಕೂಡ ಈ ರೀತಿ ಪದೇಪದೇ ಮೂತ್ರ ಮಾಡಬೇಕೆನ್ನುವ ರೀತಿ ಆಗುತ್ತದೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗಂತೂ ಇದು ಹಿಂ’ಸೆಯಾಗಿರುತ್ತದೆ ಹಾಗೂ ಚಳಿಗಾಲ, ಮಳೆಗಾಲ ಇಂತಹ ಸಂದರ್ಭಗಳಲ್ಲಿ ಇದು ಹೆಚ್ಚಾಗುತ್ತದೆ.
ಇದು ನಮಗೆ ನೆಮ್ಮದಿಯಾಗಿ ಹೊರಗೆ ಹೋಗಲು ಬಿಡುವುದಿಲ್ಲ ಪ್ರಯಾಣ ಮಾಡಲು ತೊಂದರೆ ಕೊಡುತ್ತದೆ ನೀವು ಕೂಡ ಇಂಥ ಸಮಸ್ಯೆಯಲ್ಲಿ ಸಿಲುಕಿದರೆ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಈ ರೀತಿ ಕಷ್ಟ ಪಡುತ್ತಿದ್ದರೆ ಅವರಿಗೆ ಜಲೋದ್ಧಾರ ನಾಶಕ ಮುದ್ರೆಯ ಬಗ್ಗೆ ತಿಳಿಸಿಕೊಡಿ.
ಈ ಜಲೋದ್ಧಾರ ನಾಶಕ ಮುದ್ರೆ ಮಾಡುವುದು ಹೇಗೆ ಎಂದರೆ ಸುಖಾಸನದಲ್ಲಿ ಕುಳಿತುಕೊಂಡು ನಿಮ್ಮ ತೊಡೆಗಳ ಮೇಲೆ ಎರಡು ಕೈಗಳನ್ನು ಇಟ್ಟುಕೊಳ್ಳಿ. ಮುದ್ರೆ ಹಾಕುವುದು ಹೇಗೆಂದರೆ ನಿಮ್ಮ ಹೆಬ್ಬೆರಳು ನಿಮ್ಮ ಕಿರು ಬೆರಳಿನ ಗಿಣ್ಣುಗಳ ಮಧ್ಯೆ ಟಚ್ ಆಗಬೇಕು ಮತ್ತು ತೋರು ಬೆರಳು, ಮಧ್ಯದ ಬೆರಳು ಹಾಗೂ ಉಂಗುರದ ಬೆರಳು ಈ ಮೂರು ಬೆರಳುಗಳು ಕೂಡ ಸ್ಟ್ರೈಟ್ ಆಗಿರಬೇಕು.
ಎರಡು ಕೈಗಳಿಂದಲೂ ಕೂಡ ಈ ಮುದ್ರೆಯನ್ನು ಮಾಡಿ ದಿನದಲ್ಲಿ 35 ರಿಂದ 40 ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡಿ. ಬೆಳಗ್ಗೆ 20 ನಿಮಿಷ ಹಾಗೂ ಸಂಜೆ 20 ನಿಮಿಷ ಕೂಡ ಮಾಡಬಹುದು, ನೀವು ಮೆಡಿಟೇಶನ್ ಮಾಡಲು ಕುಳಿತುಕೊಳ್ಳುವಾಗಲು ಕೂಡ ಈ ಮುದ್ರೆಯನ್ನು ಹಾಕಿಕೊಂಡು ಕುಳಿತುಕೊಳ್ಳ ಬಹುದು.
ಈ ರೀತಿ ಮಾಡುವುದರಿಂದ ದೇಹದಲ್ಲಿ ವಾಟರ್ ಕಂಟೆಂಟ್ ಬ್ಯಾಲೆನ್ಸ್ ಆಗುತ್ತದೆ ಮತ್ತು ನಿಮಗೆ ಪದೇಪದೇ ಮೂತ್ರಕ್ಕೆ ಹೋಗಬೇಕು ಎನ್ನುವ ಸಮಸ್ಯೆ ಕಂಟ್ರೋಲ್ ಆಗುತ್ತದೆ. ನಿಯಮಿತವಾಗಿ ಇದನ್ನು ಮಾಡಿಕೊಂಡು ಹೋಗಬೇಕು ಒಂದು ದಿನ ಮಾಡಿ ಮತ್ತೊಮ್ಮೆ ದಿನ ಬಿಟ್ಟು ಬಿಡುವುದರಿಂದ ಇದು ರಿಸಲ್ಟ್ ಕೊಡುವುದಿಲ್ಲ, ಈ ಸಮಸ್ಯೆ ಇಲ್ಲದಿದ್ದವರು ಕೂಡ ದಿನದಲ್ಲಿ ಐದು ನಿಮಿಷ ಈ ಮುದ್ರೆಯನ್ನು ಅಭ್ಯಾಸ ಮಾಡಬೇಕು. ಇದರಿಂದ ಮುಂದೆ ಈ ರೀತಿ ಸಮಸ್ಯೆ ಬರುವುದು ತಪ್ಪುತ್ತದೆ ಮತ್ತು ದೇಹದಲ್ಲಿ ವಾಟರ್ ಅಂಶ ಬ್ಯಾಲೆನ್ಸ್ ಆಗಿ ಇರುತ್ತದೆ.