ವೃಷಭ ರಾಶಿಯವರಿಗೆ 2024ನೇ ವರ್ಷವೂ ಬಹಳ ಅದೃಷ್ಟ ತರುವ ವರ್ಷವಾಗಿದೆ. ಈ ಹಿಂದೆಂದಿಗಿಂತಲೂ ಅತಿ ಹೆಚ್ಚು ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಎಲ್ಲವನ್ನು ಕೂಡ 2024ರಲ್ಲಿ ಪಡೆಯಲಿದ್ದಾರೆ. ವೃಷಭ ರಾಶಿಯವರಿಗೆ ಬಹಳ ವಿಶೇಷವಾದ ಯೋಗವು ಮುಂದಿನ ವರ್ಷ ಬರಲಿದ್ದು, ಇನ್ನು ಅದಕ್ಕೆ ಬೆರಳೆಣಿಕೆಯಷ್ಟು ದಿನಗಳಷ್ಟೇ ಬಾಕಿ ಇದೆ.
ವೃಷಭ ರಾಶಿಯವರು ಈ ಹೊಸ ವರ್ಷದಲ್ಲಿ ನೂರರಲ್ಲಿ 95% ಎಲ್ಲ ವಿಚಾರದಲ್ಲೂ ಸಕ್ಸಸ್ ಪಡೆಯುತ್ತಾರೆ ಅವರ ಬಹುದಿನಗಳ ಬೇಡಿಕೆಗಳು ನೆರವೇರುತ್ತವೆ. ಒಂದು ಅರ್ಥದಲ್ಲಿ ಅವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಕಾಲ ಎಂದು ಹೇಳಬಹುದು. ನಿಮ್ಮ ಮನೆಯಲ್ಲಿ ಅಥವಾ ಸ್ನೇಹಿತರಲ್ಲಿ ಯಾರಾದರೂ ವೃಷಭ ರಾಶಿಯವರು ಇದ್ದರೆ ತಪ್ಪದೇ ಅವರೊಂದಿಗೆ ಈ ಮಾಹಿತಿ ಹಂಚಿಕೊಳ್ಳಿ.
2024ರಲ್ಲಿ ವೃಷಭ ರಾಶಿಯವರು ವ್ಯಾಪಾರ ವಹಿವಾಟಿನಲ್ಲಿ ಬಹಳ ಯಶಸ್ಸು ಪಡೆಯುತ್ತಾರೆ. ಅವರು ಕುಳಿತಿದ್ದ ಕಡೆಯಲ್ಲಿ ಹಣ ಹುಡುಕಿಕೊಂಡು ಬರುತ್ತದೆ. ಅವರು ಏನು ಕೆಲಸ ಮಾಡದೆ ಇದ್ದರೂ ಹಣಕ್ಕೆ ಕೊರತೆ ಇಲ್ಲ. ಇನ್ನೇನಾದರೂ ಅವರು ಹೊಸ ಪ್ರಯತ್ನಗಳಿಗೆ ಕೈ ಹಾಕಿದರೆ, ಅವರು ಹೊಸ ವ್ಯಾಪಾರ ಶುರು ಮಾಡಿದರೆ ಅಥವಾ ಹೂಡಿಕೆ ಮಾಡಿದರೆ ಬಹಳ ಲಾಭವನ್ನು ಹೊಂದುತ್ತಾರೆ.
ಈ ವರ್ಷವೂ ಹಣಕಾಸಿನ ವಿಷಯದಲ್ಲಿ ವೃಷಭ ರಾಶಿಯವರಿಗೆ ಉಳಿದ ಎಲ್ಲಾ ರಾಶಿಗಳಲ್ಲೂ ಹೆಚ್ಚಿನ ಯೋಗ ಇದೆ. ಉದ್ಯೋಗಸ್ಥರಾಗಿದ್ದರೂ ಕೂಡ ಬಡ್ತಿ ಹೊಂದುವ ಅವರ ಕೆಲಸ ಕಾರ್ಯಗಳಿಗೆ ಹಿರಿಯ ಅಧಿಕಾರಿಗಳಿಂದ ಶ್ಲಾಘನೆ ಸಿಗುವಂತಹ ವರ್ಷವಾಗಿದೆ. ಬಹಳ ಉತ್ತಮ ಸ್ಥಾನವನ್ನು ಈ ವರ್ಷದಲ್ಲಿ ಅವರು ಎಷ್ಟೋ ವರ್ಷಗಳ ಕಠಿಣ ಪರಿಶ್ರಮಕ್ಕೆ ತಕ್ಕ ಫಲದಂತೆ ಅಲಂಕರಿಸಲಿದ್ದಾರೆ.
ಸರ್ಕಾರಿ ಹುದ್ದೆ ಪಡೆಯಬೇಕು ಎನ್ನುವ ಹಂಬಲ ಇದ್ದವರಿಗೂ ಸಹಾ ಕನಸು ನನಸಾಗುವ ಕಾಲ ವೈದ್ಯರು, ವಕೀಲರು, ಇಂಜಿನಿಯರ್ ಗಳು ಈ ರೀತಿ ಯಾವುದೇ ವೃತ್ತಿಯಲ್ಲಿ ಇರುವವರೆಗೂ ಕೂಡ ಬಹಳ ಬ್ಯುಸಿಯಾಗಿರುವ ವರ್ಷವಾಗಿರುತ್ತದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಹಳ ಸಾಧನೆ ಮಾಡಿ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ. ರಿಯಲ್ ಎಸ್ಟೇಟ್ ಮಾಡುವವರಿಗಂತೂ ಗಜಕೇಸರಿ ಯೋಗ ಎಂದೇ ಹೇಳಬಹುದು.
ಮದುವೆ ಮಕ್ಕಳ ವಿಚಾರದಲ್ಲಿ ಕೂಡ ಇದ್ದ ದೋಷಗಳೆಲ್ಲ ಪರಿಹಾರ ಹಾಕಿ ಶುಭವಾರ್ತೆ ಕೇಳುವ ಸಮಯವಾಗಿದೆ ಮತ್ತು ಕಂಕಣ ಭಾಗ್ಯ ಇಲ್ಲದವರಿಗೆ ಕಂಕಣ ಭಾಗ್ಯವನ್ನು ಹಾಗೂ ಮಕ್ಕಳ ಭಾಗ್ಯ ಇಲ್ಲದವರು ಮಕ್ಕಳನ್ನು ಪಡೆಯುವಂತಹ ವರ್ಷವಾಗಿದೆ. ಹೊಸ ಮನೆ ಕಟ್ಟಿಸಬೇಕು ಎನ್ನುವವರು ಅಥವಾ ಈ ಹಿಂದಿನ ವರ್ಷಗಳಲ್ಲಿ ಮನೆ ಕಾರ್ಯಕ್ಕೆ ಕೈ ಹಾಕಿ ಅರ್ಧಕ್ಕೆ ನಿಂತು ಹೋಗಿದ್ದವರು ಅದನ್ನು ಮುಂದುವರಿಸುವ ಭಾಗ್ಯ ಹೊಂದಿದ್ದಾರೆ.
ಇನ್ನು ಮನೆಯ ಮೇಲೆ ಮನೆ ಕಟ್ಟಿಸುವ ಹೊಸ ಮನೆಗಳನ್ನು ಖರೀದಿಸುವ ಭಾಗ್ಯವನ್ನು ಕೂಡ ಹೊಂದಿದ್ದಾರೆ, ವಿದೇಶಿ ಪ್ರಯಾಣದ ಅದೃಷ್ಟವೂ ಕೂಡ ಈ ವರ್ಷ ನಿಮ್ಮ ಪಾಲಿಗೆ ಇದೆ. 2024ರಲ್ಲಿ ವೃಷಭ ರಾಶಿಯವರ ಜಾತಕದಲ್ಲಿ ಬುಧ, ಶುಕ್ರ, ಶನಿ ರಾಹು, ಕೇತು ಎಲ್ಲಾ ಗ್ರಹಗಳು ಕೂಡ ಸೂಕ್ತ ಸ್ಥಳದಲ್ಲಿ ಇರುವುದರಿಂದ ಎಲ್ಲಾ ಒಳಿತಾಗುತ್ತದೆ. ಆದರೆ 5% ನಷ್ಟು ಕೆ’ಡು’ಕಿ’ನ ಭಯ ಇದ್ದೇ ಇರುತ್ತದೆ, ಇದು ಆರೋಗ್ಯ ವಿಚಾರದಲ್ಲಿ ಬರಬಹುದು ಅಷ್ಟೇ. ಹಾಗಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬೇಡಿ ನಿಮ್ಮ ಆರೋಗ್ಯದ ಜೊತೆ ಕುಟುಂಬದ ಆರೋಗ್ಯ ಬಗ್ಗೆಯೂ ಕೂಡ ಕಾಳಜಿ ಮಾಡಿ.