* ಹೆಣ್ಣು ಮಕ್ಕಳು ಗಡಿಬಿಡಿಯಲ್ಲಿ ಗ್ಯಾಸ್ ಮೇಲೆ ಪಾತ್ರೆ ಇಟ್ಟು ಮರೆತು ಬೇರೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಆಗ ಪಾತ್ರೆ ಪೂರ್ತಿ ಸೀದು ಕಪ್ಪಗಾಗಿರುತ್ತದೆ. ಈ ರೀತಿ ತಳ ಕಪ್ಪಗಾಗಿರುವ ಪಾತ್ರೆಯನ್ನು ಮತ್ತೆ ಹೊಸ ರೂಪಕ್ಕೆ ತರಬೇಕು ಎಂದರೆ ಬಹಳ ಶ್ರಮ ಹಾಕಬೇಕು. ಈಸಿಯಾಗಿ ಈ ಕೆಲಸ ಮಾಡಲು ಸ್ವಲ್ಪ ಅಡುಗೆ ಸೋಡವನ್ನು ಬಿಸಿನೀರಿನ ಜೊತೆ ಮಿಕ್ಸ್ ಮಾಡಿ ಮತ್ತೆ ಪಾತ್ರೆಯನ್ನು ಬಿಸಿ ಆಗಲು ಇಡಿ, ನೀರು ಸ್ವಲ್ಪ ಕುದಿಯುತ್ತಾ ಬಂದ ಮೇಲೆ ಆಫ್ ಮಾಡಿ ಇಡಿ. ಕೆಲ ಸಮಯ ಬಿಟ್ಟ ನಂತರ ಸೀದಿರುವ ಮಸಿಯು ಬಹಳ ಸುಲಭವಾಗಿ ಬಿಟ್ಟುಕೊಳ್ಳುತ್ತದೆ, ಬೇಗ ಕ್ಲೀನ್ ಮಾಡಬಹುದು.
* ಹೆಣ್ಣು ಮಕ್ಕಳಿಗೆ ಬಟ್ಟೆಗೊಂದು ಹೊಸ ಚಪ್ಪಲಿ ಬೇಕು, ಆದರೆ ಈ ರೀತಿ ಹೊಸ ಚಪ್ಪಲಿಗಳು ಹೊಸದರಲ್ಲಿ ಕಚ್ಚುತ್ತವೆ. ಯಾವುದಾದರೂ ಫಂಕ್ಷನ್ ಅಥವಾ ಮುಖ್ಯ ಕೆಲಸಕ್ಕೆ ಹೋದಾಗ ಈ ರೀತಿ ಆಗಿ ಹಿಂಸೆಯಾಗುತ್ತಿರುತ್ತದೆ. ಇದನ್ನು ತಪ್ಪಿಸಲು ಕಚ್ಚುವ ಜಾಗಕ್ಕೆ ಕೊಬ್ಬರಿ ಎಣ್ಣೆ ಅಥವಾ ವ್ಯಾಸಲಿನ್ ಹಚ್ಚಿ ಚಪ್ಪಲಿ ಹಾಕಿಕೊಳ್ಳಿ.
* ಒಡೆದ ತೆಂಗಿನಕಾಯಿ ಬೇಗ ಹಾಳಾಗುತ್ತದೆ, ಇದು ಬಹಳ ದಿನ ಬಾಳಿಕೆ ಬರಬೇಕು ಅಂದರೆ ಹೊಡೆದ ತಕ್ಷಣ ಅದಕ್ಕೆ ಉಪ್ಪು ಅಥವಾ ನಿಂಬೆ ರಸವನ್ನು ಹಚ್ಚಿ ಹೇಳಿ
* ಬೆಳ್ಳಿಯ ಪಾತ್ರೆಗಳು ಕಪ್ಪಗಾಗಿದ್ದರೆ ಅದನ್ನು ಮತ್ತೆ ಹೊಳೆಯುವಂತೆ ಮಾಡಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಸ್ವಲ್ಪ ಅಡಿಗೆ ಸೋಡಾ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈ ಬೆಳ್ಳಿಯ ಪಾತ್ರೆಗಳನ್ನು ಅದರಲ್ಲಿ ಹಾಕಿ 10 ನಿಮಿಷ ಬಿಡಿ ನಂತರ ಬೆಳ್ಳಿ ಪಾತ್ರೆಗಳನ್ನು ತಿಕ್ಕಿ ತೊಳೆದರೆ ಅವು ಮತ್ತೆ ಹೊಸದರಂತೆ ಕಾಣುತ್ತವೆ
* ಕರ್ಪೂರವನ್ನು ಒಂದು ಪೇಪರ್ ನಲ್ಲಿ ಕಟ್ಟಿ ಹಾಸಿಗೆಯ ನಾಲ್ಕು ಮೂಲೆಗಳಲ್ಲಿ ಇಡಿ. ಈ ರೀತಿ ಮಾಡುವುದರಿಂದ ಕ್ರಿಮಿಕೀಟಗಳು ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ ನಿಮಗೆ ಇನ್ಫೆಕ್ಷನ್ ಗಳಾಗುತ್ತಿದ್ದರೆ ಕಡಿಮೆಯಾಗುತ್ತದೆ
* ನಿಮ್ಮ ಯಾವುದೇ ಬಟ್ಟೆ ಮೇಲೆ ಎಣ್ಣೆ ಬಿದ್ದು ಎಣ್ಣೆಯ ಕಲೆ ಆಗಿದ್ದರೆ ನೀವು ಸ್ನಾನ ಮಾಡುವ ಸೋಪನ್ನು ಎಣ್ಣೆ ಆಗಿರುವ ಜಾಗಕ್ಕೆ ಹಾಕಿ ಚೆನ್ನಾಗಿ ತಿಕ್ಕಿ ಒಗೆಯಿರಿ, ಎಣ್ಣೆ ಬಿಡುತ್ತದೆ ಹಾಗೂ ಎಣ್ಣೆಯ ಕಲೆಯು ಕೂಡ ಹೋಗುತ್ತದೆ
* ಎಣ್ಣೆಯನ್ನು ಬಾಟಲಿಗೆ ತುಂಬಿದ ಮೇಲೆ ಆ ಪೇಪರ್ ಬಿಸಾಕುವ ಮುನ್ನ ಕಿಲಿವು ಹಿಡಿದ ಕತ್ತರಿ ಚಾಕು ಇಂತಹ ಕಬ್ಬಿಣದ ವಸ್ತುಗಳಿಗೆ ಆ ಪೇಪರ್ ನಿಂದ ಸವರಿ
* ಮನೆಯಲ್ಲಿ ಸೊಳ್ಳೆ, ಇರುವೆ, ನೊಣ ಈ ಕೀಟಗಳ ಕಾಟ ಇದ್ದರೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಇಟ್ಟು ಅದು ಕುದಿಯುವಾಗ ಕರ್ಪೂರ ಹಾಕಿ ಕುದಿಸಿ ಈ ಸಮಸ್ಯೆ ಪರಿಹಾರವಾಗುತ್ತದೆ ಹಾಗೂ ಮನೆಯಲ್ಲಿ ಒಳ್ಳೆಯ ಘಮ ಕೂಡ ಇರುತ್ತದೆ
* ಹಾಸಿಗೆಯ ಮೇಲೆ ಅಡುಗೆ ಸೋಡವನ್ನು ಸ್ವಲ್ಪ ಸಿಂಪಡಿಸಿ ಮತ್ತು ಬಟ್ಟೆಯಿಂದ ನೀಟಾಗಿ ಒರೆಸುತ್ತ ಬನ್ನಿ ನಿಮ್ಮ ಹಾಸಿಗೆಗೆ ಹೊಸ ರೂಪ ಬರುತ್ತದೆ
* ಹೊಸ ಬಟ್ಟೆ ಅಥವಾ ಕಾಟನ್ ಅಥವಾ ಗಾಢವಾದ ಬಣ್ಣವಿರುವ ಬಟ್ಟೆಯನ್ನು ಮೊದಲ ಬಾರಿಗೆ ವಾಷಿಂಗ್ ಮಿಷನ್ ಗೆ ಹಾಕಬೇಡಿ. ಒಂದು ಬಕೆಟ್ ನಲ್ಲಿ ನೀರು ತುಂಬಿ ಸ್ವಲ್ಪ ಉಪ್ಪು ಹಾಕಿ ಈ ಬಟ್ಟೆಯನ್ನು ಸ್ವಲ್ಪ ಹೊತ್ತು ನೆನೆಸಿ ಅದು ಬಣ್ಣ ಹೋಗುತ್ತದಾ ಇಲ್ಲವಾ ಎಂದು ಗೊತ್ತಾಗುತ್ತದೆ.