ನಾವೀಗ ಹೊಸ ವರ್ಷದ ಹೊಸ್ತಿಲಲ್ಲಿ ಬಂದು ನಿಂತಿದ್ದೇವೆ. 2024ರ ನೂತನ ವರ್ಷಕ್ಕೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದೆ. ಅಪಾರ ನಿರೀಕ್ಷೆಯೊಂದಿಗೆ ಹಾಗೂ 2023ರ ಕುರಿತ ಕೆಲವು ನಿರಾಸೆಯೊಂದಿಗೆ ನಾವು ಮತ್ತೊಂದು ಹೊಸ ಆರಂಭವನ್ನು ಕಾಣುತ್ತಿದ್ದೇವೆ ಪ್ರತಿ ವರ್ಷದ ಆರಂಭದಲ್ಲೂ ಕೂಡ ಈ ವರ್ಷ ಆದರೂ ಚೆನ್ನಾಗಿರುತ್ತದೆಯಾ ಎನ್ನುವ ಕುತೂಹಲ ಇದ್ದೇ ಇರುತ್ತದೆ.
ಕೆಲವರು ಹಠ ಮಾಡಿ ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಪ್ಲಾನಿಂಗ್ ಕೂಡ ಮಾಡಿಕೊಂಡಿರುತ್ತಾರೆ. ಅದೇನೇ ಇದ್ದರೂ ನಮ್ಮ ರಾಶಿ ನಕ್ಷತ್ರ ಮೀರಿ ಕೆಲವು ಸಂಗತಿಗಳು ನಡೆಯುವುದು ಅಸಾಧ್ಯ. ಹಾಗಾಗಿ ರಾಶಿ ಪ್ರಕಾರವಾಗಿ ಕನ್ಯಾ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಮತ್ತು ಅವರು ಎಚ್ಚರಿಕೆಯಿಂದ ಇರಬೇಕಾದ ಐದು ವಿಷಯಗಳ ಬಗ್ಗೆ ತಿಳಿಸುತ್ತಿದ್ದೇವೆ.
1. ಕನ್ಯಾ ರಾಶಿಯವರು ಈ ಹೊಸ ವರ್ಷದ ಆರಂಭದಿಂದಲೇ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು, ಕುಜ ಗ್ರಹವು ಅಷ್ಟಮದಲ್ಲಿರುವುದರಿಂದ ಚತುರ್ಥಾಧಿಪತಿ ಅಷ್ಟಮದಲ್ಲಿ, ಅಷ್ಟಮಧಿಪತಿಯು ಚತುರ್ಥದಲ್ಲಿ ಇರುವುದರಿಂದ ತಾಯಿಯ ಆರೋಗ್ಯ ಅಷ್ಟಕಷ್ಟೇ.
ಯಾವುದೇ ಕಾರಣಕ್ಕೂ ತಾಯಿಯ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ ಮಾಡಬೇಡಿ. ಸಾಮಾನ್ಯವಾಗಿ ವಯಸ್ಸಾದವರಿಗೆ ಪ್ರತಿನಿತ್ಯ ಒಂದಲ್ಲ ಒಂದು ಆರೋಗ್ಯ ವ್ಯತ್ಯಾಸಗಳು ಆಗುತ್ತದೆ. ಆದರೆ ಜನವರಿ ತಿಂಗಳಲ್ಲಿ ಸ್ವಲ್ಪ ಹೆಚ್ಚಿಗೆ ಕಾಳಜಿ ಮಾಡಿ ಸ್ವಲ್ಪ ಆರೋಗ್ಯ ಕೆಟ್ಟರೂ ತಡ ಮಾಡದೆ ಆಸ್ಪತ್ರೆಗೆ ಕಳೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ.
2. ಇದ್ದಕ್ಕಿದ್ದಂತೆ ಕನ್ಯಾ ರಾಶಿಯವರಿಗೆ ಯಾವುದಾದರೂ ಬಿಸಿನೆಸ್ ಐಡಿಯಾ ಬರುತ್ತದೆ. ಆದರೆ ಜನರೇ ತಿಂಗಳಲ್ಲಿ ಮಾತ್ರ ಇಂತಹ ವ್ಯವಹಾರಗಳಿಗೆ ಕೈ ಹಾಕಬೇಡಿ. ಅದರಲ್ಲೂ ಮುಖ್ಯವಾಗಿ ಸಾಲ ಮಾಡಿಕೊಂಡು ಹೂಡಿಕೆ ಮಾಡುವಂತಹ ವಿಷಯಗಳ ಕಡೆಗೆ ನೀವು ಹೋಗಲೇಬೇಡಿ.
ಯಾಕೆಂದರೆ ಜನವರಿ ತಿಂಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರುವುದಿಲ್ಲ, ಹೀಗಾಗಿ ನಿಮಗೆ ಅಂತಹ ಅನಿವಾರ್ಯ ಪರಿಸ್ಥಿತಿ ಇದ್ದರೆ ವೈಯಕ್ತಿಕ ಜಾತಕ ಪರಿಶೀಲನೆ ಮಾಡಿಸಿ ನಂತರ ಮುಂದುವರೆಯಿರಿ. ಭೂಮಿ ಬಿಟ್ಟು ಬೇರೆ ಯಾವ ವಿಷಯ ಕೂಡ ಸಾಲ ಮಾಡಿ ಹೂಡಿಕೆ ಮಾಡಬೇಡಿ.
3. ಕನ್ಯಾ ರಾಶಿಯವರು ಜನವರಿ 14ರಂದು ಮಕರ ಸಂಕ್ರಾಂತಿ ಮುಗಿಯುವವರೆಗೂ ಕೂಡ ಒಂದಲ್ಲ ಒಂದನ್ನು ಕಳೆದುಕೊಳ್ಳುತ್ತಲೇ ಇರುತ್ತಾರೆ. ಮನೆಯಲ್ಲಿ ಯಾವುದಾದರೂ ವಸ್ತುಗಳನ್ನು ಇಟ್ಟು ಮರೆಯುವುದು ಅಥವಾ ಮೊಬೈಲ್ ಬೀಳಿಸಿಕೊಳ್ಳುವುದು, ಬೈಕ್ ಕಳ್ಳತನವಾಗುವುದು ಭೂಮಿ ಕಳೆದುಕೊಳ್ಳುವುದು ಅಥವಾ ಹಣ ಕಳೆದುಕೊಳ್ಳುವುದು ಈ ರೀತಿ ಕಳೆದುಕೊಳ್ಳುವಿಕೆ ಹೆಚ್ಚಾಗಿರುತ್ತದೆ. ಆದರೆ ಜನವರಿ 14ರ ನಂತರ ಶುಭ ಫಲಗಳಿದ್ದು ನೀವು ಕಳೆದುಕೊಂಡಿದ್ದನ್ನೆಲ್ಲಾ ಮರಳಿ ಮಾಡಿ ಪಡೆದುಕೊಳ್ಳಲು ಅದೃಷ್ಟ ಇರುತ್ತದೆ.
4. ಕನ್ಯಾ ರಾಶಿಯವರಿಗೆ ಜನವರಿ ತಿಂಗಳಲ್ಲಿ ಕಾಲಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳು ಹೆಚ್ಚಿಗೆ ಇರುತ್ತವೆ. ಕಾಲು ಊದಿಕೊಳ್ಳುವುದು ಅಥವಾ ಕಾಲು ವಿಪರೀತ ನೋವು ಬರುವುದು ಅಥವಾ ಕಾಲು ಉಳುಕುವುದು ಅಥವಾ ಸಣ್ಣ ಪಟ್ಟ ಅ’ಪ’ಘಾ’ತಗಳಾಗಿ ಕಾಲಿಗೆ ನೋವಾಗುವುದು ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಆಹಾರ ಪದ್ಧತಿ ಅಥವಾ ಜೀವನಶೈಲಿ ಕಾರಣದಿಂದಾಗಿ ಈ ಆರೋಗ್ಯ ಸಮಸ್ಯೆ ಬಂದಿದ್ದರೆ ಸರಿಪಡಿಸಿಕೊಳ್ಳುವತ್ತ ಗಮನ ಕೊಡಿ ಮತ್ತು ಸಂಚಾರ ಮಾಡುವಾಗ ಎಚ್ಚರಿಕೆಯಿಂದ ಇರಿ.
5. ನಿಮ್ಮ ರಾಶಿಯಲ್ಲಿರುವ ಕೇತು ಮತ್ತು ಚತುರ್ಥದಲ್ಲಿರುವ ಕುಜನು ನಿಮಗೆ ಯಾವುದೇ ವಿಷಯದಲ್ಲಿ ಸಮಾಧಾನ ಇಲ್ಲದಂತೆ ಮಾಡುತ್ತಾನೆ. ಹಾಗಾಗಿ ನೀವು ಎಲ್ಲದರಲ್ಲೂ ಕಿರಿಕಿರಿ ಮಾಡುತ್ತೀರಿ. ನಿಮಗೆ ಯಾರ ಮೇಲು, ಯಾರ ಕೆಲಸದ ಮೇಲೆ ಸಮಾಧಾನ ಇರುವುದಿಲ್ಲ. ಎಲ್ಲವೂ ಸರಿ ಇಲ್ಲ ಎಂದುಕೊಂಡು ಮನಸ್ಸಿಗೆ ಒತ್ತಡ ತಂದುಕೊಳ್ಳುತ್ತೀರಿ. ಇದರಿಂದ ಮನಸ್ಸಿನ ಆರೋಗ್ಯ ಹದ ಗೆಡುತ್ತದೆ, ಹಾಗಾಗಿ ಮುನ್ನೆಚ್ಚರಿಕೆಯಾಗಿ ಹೇಳುತ್ತಿದ್ದೇವೆ. ಜನವರಿ ತಿಂಗಳಲ್ಲಿ ನೀವು ಆದಷ್ಟು ತಾಳ್ಮೆಯಿಂದ ಇರಬೇಕು.