ಚಪಾತಿ ಈಗ ಎಲ್ಲರ ಫೇವರೆಟ್ ಫುಡ್ ಆಗಿಬಿಟ್ಟಿದೆ. ಡಯಟ್ ಮಾಡುವವರಿಗೆ, ಶುಗರ್ ಇರುವವರಿಗೆ, ಮಕ್ಕಳ ಲಂಚ್ ಬಾಕ್ಸ್ ಗೆ ಹಾಕಲು, ಸಂಜೆ ಸಮಯ ಸಣ್ಣ ಹಸಿವಾದಾಗ ರಾತ್ರಿ ಡಿನ್ನರ್ ಗೂ ಕೂಡ ಹೀಗೆ ಯಾವ ಹೊತ್ತಿನಲ್ಲಿ ಚಪಾತಿ ಬೇಕಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಬೆಳಗ್ಗೆ ಮಧ್ಯಾಹ್ನ ರಾತ್ರಿ ಮೂರು ಹೊತ್ತು ಕೂಡ ತಿನ್ನಬೇಕೆನಿಸುವ ಈ ಚಪಾತಿ ಮಾಡುವುದು ಕೂಡ ಬಹಳ ಸುಲಭ.
ಅದರಲ್ಲೂ ಚಪಾತಿ ಹಿಟ್ಟನ್ನು ಮೊದಲೇ ರೆಡಿ ಮಾಡಿ ಇಟ್ಟಿದ್ದರಂತೂ ಹೊಟ್ಟೆ ಹಸಿದ ತಕ್ಷಣ ತಟ್ಟೆಗೆ ಹಾಕಿ ಕೊಡಬಹುದು. ಹಾಗಾಗಿ ಗೃಹಿಣಿಯರು ಸಾಮಾನ್ಯವಾಗಿ ಚಪಾತಿ ಹಿಟ್ಟನ್ನು ಯಾವಾಗಲು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ರೆಡಿ ಮಾಡಿ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಟ್ಟಿರುತ್ತಾರೆ. ಈ ರೀತಿ ಮಾಡುವವರೆಲ್ಲಾ ತಪ್ಪದೆ ಈ ಅಂಕಣವನ್ನು ಕೊನೆಯವರೆಗೂ ಓದಿ.
ಈ ರೀತಿ ನಾವು ಚಪಾತಿ ಹಿಟ್ಟನ್ನು ರೆಡಿ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿದ್ದರು ಕೆಲವೊಮ್ಮೆ ಅದು ಮೇಲೆಲ್ಲಾ ಕಪ್ಪಾಗಿ ಬಿಟ್ಟಿರುತ್ತದೆ. ಅಥವಾ ಕೆಲವೊಮ್ಮೆ ಬಹಳ ಗಟ್ಟಿಯಾಗಿ ನಾವು ಫ್ರೆಶ್ ಚಪಾತಿಯನ್ನು ತಿಂದಾಗ ಕೊಡುವ ರುಚಿ ಬರುವುದಿಲ್ಲ, ಕೆಲವೊಮ್ಮೆ ಚಪಾತಿ ಹಿಟ್ಟು ಉಳಿದಿದ್ದನ್ನು ಫ್ರಿಡ್ಜ್ ನಲ್ಲಿ ಇಟ್ಟಾಗ ಎರಡು ಮೂರು ದಿನ ಆದರೂ ಬಳಸದೆ ಇದ್ದಾಗ ಅದು ಕೆಟ್ಟು ಹೋಗಿ ವೇಸ್ಟ್ ಆಗಿಬಿಡುತ್ತದೆ.
ಈ ರೀತಿಯೆಲ್ಲಾ ಆಗಬಾರದು ಎಂದರೆ ಚಪಾತಿ ಹಿಟ್ಟು ಕಲಸುವಾಗ ನೀವು ಸಮಯ ಉಳಿತಾಯ ಮಾಡುವ ಕಾರಣಕ್ಕಾಗಿ ಹೆಚ್ಚಿಗೆ ಹಿಟ್ಟು ಕಲಸಿದ್ದರೆ ನಾವು ಹೇಳುವ ಈ ಪದಾರ್ಥಗಳನ್ನು ಅದಕ್ಕೆ ಸೇರಿಸಿ ಈ ವಿಧಾನದಲ್ಲಿ ಕಲಸಿಡಿ ಚಪಾತಿ ಹಿಟ್ಟು ಕೆಡುವುದಿಲ್ಲ ಹಾಗೆ ರುಚಿ ಕಡಿಮೆ ಆಗುವುದಿಲ್ಲ.
ಚಪಾತಿ ಹಿಟ್ಟು ಮೃದುವಾಗಿರಬೇಕು ಎಂದರೆ ನೀವು ಹಿಟ್ಟನ್ನು ಹಾಕಿ ಮಿಕ್ಸ್ ಮಾಡುವಾಗಲೇ ಅದಕ್ಕೆ ಅಡುಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಚಪಾತಿ ಹಿಟ್ಟನ್ನು ರೆಡಿ ಮಾಡಬೇಕು. ಹೀಗೆ ಮಾಡಿದರೆ ಅದು ಮೇಲೆ ಕಪ್ಪು ಬಣ್ಣಕ್ಕೂ ತಿರುಗುವುದಿಲ್ಲ ಮತ್ತು ಸಾಫ್ಟ್ ಆಗಿ ಟೇಸ್ಟಿ ಆಗಿರುತ್ತದೆ. ಚಪಾತಿಗೆ ಮಾತ್ರವಲ್ಲದೆ ಯಾವುದೇ ಹಿಟ್ಟು ಮಿಕ್ಸ್ ಮಾಡುವಾಗಲೂ ಈ ರೀತಿ ಅಡುಗೆ ಎಣ್ಣೆ ಅಥವಾ ತುಪ್ಪ ಹಾಕಿ ಮಿಕ್ಸ್ ಮಾಡಿದರೆ ಅದು ಬೇಗ ಕೆಡುವುದಿಲ್ಲ, ಫ್ರಿಡ್ಜ್ ನಲ್ಲಿ ಇಟ್ಟು ನಿಧಾನಕ್ಕೆ ಬಳಸಬಹುದು.
ಚಪಾತಿಯು ಮೃದುವಾಗಿ ಬರಬೇಕು ಎಂದರೆ ಚಪಾತಿ ಹಿಟ್ಟು ಕಲಸುವಾಗ ಮೊಸರನ್ನು ಹಾಕಿ ಮಿಕ್ಸ್ ಮಾಡಿದರೆ ಚಪಾತಿ ಬಹಳ ಸಾಫ್ಟ್ ಆಗಿ ಬರುತ್ತದೆ. ಚಪಾತಿ ಹಿಟ್ಟನ್ನು ನೀವು ಫ್ರಿಜ್ಜಿನಲ್ಲಿ ಇಡುವುದಾದರೆ ಚಪಾತಿ ಹಿಟ್ಟು ಕಲಸಿದ ತಕ್ಷಣ ಗಾಳಿ ಆಡದ ಯಾವುದಾದರೂ ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಹಾಕಿ ನಂತರ ಫ್ರಿಡ್ಜ್ ನಲ್ಲಿ ಇಡಿ, ಈ ರೀತಿ ಮಾಡುವುದರಿಂದ ಅದು ಒರಟಾಗುವುದಿಲ್ಲ, ಬಹಳ ಸಾಫ್ಟ್ ಆಗಿ ಬರುತ್ತದೆ ಮತ್ತು ಟೆಸ್ಟ್ ಕೂಡ ಹೋಗುವುದಿಲ್ಲ.
ಚಪಾತಿ ಹಿಟ್ಟು ಬೆರೆಸುವಾಗ ತಣ್ಣೀರಿನಿಂದ ಬೆರೆಸುವ ಬದಲು ಅದಕ್ಕೆ ಬೆಚ್ಚಗಿನ ನೀರು ಬಳಸಿದರೆ ಅದರಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ಗಳು ಕೊಲ್ಲಲ್ಪಡುತ್ತವೆ ಮತ್ತು ಹಿಟ್ಟು ದೀರ್ಘ ಕಾಲದವರೆಗೆ ಮೃದುವಾಗಿರುತ್ತದೆ. ಚಪಾತಿ ಹಿಟ್ಟು ಬೆರೆಸುವಾಗ ತಪ್ಪದೆ ಉಪ್ಪನ್ನು ಬಳಸಿ ಈ ರೀತಿ ಮಾಡುವುದರಿಂದ ಉಪ್ಪು ತನ್ನ ಸ್ವಾಭಾವಿಕ ಗುಣದಿಂದ ಹಲವು ದಿನಗಳವರೆಗೆ ಹಿಟ್ಟು ಹಾಳಾಗದಂತೆ ಕಾಪಾಡುತ್ತದೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಗೆಳತಿಯರೊಂದಿಗೂ ಶೇರ್ ಮಾಡಿಕೊಳ್ಳಿ.